ಬಿಡುಗಡೆಯಾದ ಫೋಕ್ಸ್‌ವ್ಯಾಗನ್ ಕಾರ್ಪೊರೇಟ್ ಎಡಿಷನ್ ಕಾರುಗಳು

ಫೋಕ್ಸ್‌ವ್ಯಾಗನ್ ಇಂಡಿಯಾ ಪೊಲೊ, ವೆಂಟೊ, ಆಮಿಯೊ ಹಾಗೂ ಟಿಗ್ವಾನ್ ಮಾದರಿಯ ಕಾರುಗಳನ್ನು ಕಾರ್ಪೋರೆಟ್ ಎಡಿಷನ್‍‍ನಲ್ಲಿ ಬಿಡುಗಡೆಗೊಳಿಸಿದೆ. ಈ ಕಾರ್ಪೋರೆಟ್ ಎಡಿಷನ್ ಕಾರುಗಳು ಸ್ಟಾಂಡರ್ಡ್ ಮಾದರಿಯ ಕಾರುಗಳಿಗೆ ಹೊಲಿಸಿದರೆ ಕಾಸ್ಮೆಟಿಕ್ ಬದಲಾವಣೆಗಳನ್ನು ಹೊಂದಿರಲಿವೆ.

ಬಿಡುಗಡೆಯಾದ ಫೋಕ್ಸ್‌ವ್ಯಾಗನ್ ಕಾರ್ಪೊರೇಟ್ ಎಡಿಷನ್ ಕಾರುಗಳು

ಈ ನಾಲ್ಕು ಮಾದರಿಯ ಕಾರ್ಪೋರೆಟ್ ಎಡಿಷನ್ ಕಾರುಗಳನ್ನು ಡೀಸೆಲ್ ಎಂಜಿನ್‍‍ನಲ್ಲಿ ಮಾರಾಟ ಮಾಡಲಾಗುವುದು. ಕೇಂದ್ರ ಸರ್ಕಾರವು ಇತ್ತೀಚಿಗೆ ಕಾರ್ಪೋರೆಟ್ ತೆರಿಗೆಗಳನ್ನು ಕಡಿತಗೊಳಿಸಿತ್ತು. ಆದ ಕಾರಣ ಈ ಸೌಲಭ್ಯವನ್ನು ಗ್ರಾಹಕರಿಗೆ ನೀಡುವ ಕಾರಣಕ್ಕಾಗಿ ಫೋಕ್ಸ್‌ವ್ಯಾಗನ್ ಕಾರ್ಪೋರೆಟ್ ಎಡಿಷನ್ ಕಾರುಗಳನ್ನು ಬಿಡುಗಡೆಗೊಳಿಸಿದೆ.

ಬಿಡುಗಡೆಯಾದ ಫೋಕ್ಸ್‌ವ್ಯಾಗನ್ ಕಾರ್ಪೊರೇಟ್ ಎಡಿಷನ್ ಕಾರುಗಳು

ಅಂದಹಾಗೆ ಎಲ್ಲರಿಗೂ ಫೋಕ್ಸ್‌ವ್ಯಾಗನ್ ಕಾರ್ಪೋರೆಟ್ ಕಾರುಗಳನ್ನು ಮಾರಾಟ ಮಾಡಲಾಗುವುದಿಲ್ಲ. ಜರ್ಮನ್ ಮೂಲದ ಕಾರು ತಯಾರಕ ಕಂಪನಿಯು ಈ ಹೊಸ ಎಡಿಷನ್ ಕಾರುಗಳನ್ನು ತನ್ನ ಕಾರ್ಪೋರೆಟ್ ಗ್ರಾಹಕರಿಗೆ ಮಾತ್ರವೇ ಮಾರಾಟ ಮಾಡಲಿದೆ.

ಬಿಡುಗಡೆಯಾದ ಫೋಕ್ಸ್‌ವ್ಯಾಗನ್ ಕಾರ್ಪೊರೇಟ್ ಎಡಿಷನ್ ಕಾರುಗಳು

ಫೋಕ್ಸ್‌ವ್ಯಾಗನ್ ಈ ಕಾರುಗಳನ್ನು ಕಾರ್ಪೋರೆಟ್ ಗ್ರಾಹಕರಿಗೆ, ಸರ್ಕಾರಿ ನೌಕರರಿಗೆ, ಇಂಜಿನಿಯರ್‍‍ಗಳಿಗೆ, ಚಾರ್ಟಡ್ ಅಕೌಂಟೆಂಟ್ ಹಾಗೂ ಆಯ್ದ ಕೆಲವರಿಗೆ ಮಾತ್ರ ಮಾರಾಟ ಮಾಡುವುದಾಗಿ ತಿಳಿಸಿದೆ. ಪೊಲೊ, ವೆಂಟೊ, ಆಮಿಯೊ ಹಾಗೂ ಟಿಗ್ವಾನ್ ಮಾದರಿಯ ಕಾರ್ಪೋರೆಟ್ ಎಡಿಷನ್ ಕಾರುಗಳನ್ನು ಆಕರ್ಷಕ ಸೌಲಭ್ಯ, ಸರ್ವಿಸಿಂಗ್ ಪ್ಯಾಕೆಜ್, ಆಕ್ಸೆಸರಿಸ್‍‍ಗಳೊಂದಿಗೆ ಮಾರಾಟ ಮಾಡಲಾಗುತ್ತದೆ.

ಬಿಡುಗಡೆಯಾದ ಫೋಕ್ಸ್‌ವ್ಯಾಗನ್ ಕಾರ್ಪೊರೇಟ್ ಎಡಿಷನ್ ಕಾರುಗಳು

ಫೋಕ್ಸ್‌ವ್ಯಾಗನ್ ಪ್ಯಾಸೆಂಜರ್ ಕಾರ್ಸ್‌ನ ನಿರ್ದೇಶಕ ಸ್ಟೆಫೆನ್ ನ್ಯಾಪ್‍‍ರವರು ಮಾತನಾಡಿ, ಕಾರ್ಪೊರೇಟ್ ತೆರಿಗೆ ದರವನ್ನು ಕಡಿತಗೊಳಿಸುವ ಕುರಿತು ಮಾನ್ಯ ಹಣಕಾಸು ಸಚಿವರು ಮಾಡಿದ ಪ್ರಕಟಣೆಯನ್ನು ಫೋಕ್ಸ್‌ವ್ಯಾಗನ್ ಇಂಡಿಯಾ ಸ್ವಾಗತಿಸುತ್ತದೆ.

ಬಿಡುಗಡೆಯಾದ ಫೋಕ್ಸ್‌ವ್ಯಾಗನ್ ಕಾರ್ಪೊರೇಟ್ ಎಡಿಷನ್ ಕಾರುಗಳು

ಇದಕ್ಕೆ ಬದಲಾಗಿ, ಫೋಕ್ಸ್‌ವ್ಯಾಗನ್ ಕಾರ್ಪೊರೇಟ್ ಆವೃತ್ತಿಯ ಕಾರುಗಳನ್ನು ಬಿಡುಗಡೆಗೊಳಿಸಿ ನಾವು ಈ ಲಾಭವನ್ನು ನಮ್ಮ ಗ್ರಾಹಕರಿಗೆ ನೀಡಲು ಬಯಸುತ್ತೇವೆ. ಈ ಕ್ರಮದಿಂದಾಗಿ ನಾವು ಪ್ರೀಮಿಯಂ ಮೊಬಿಲಿಟಿ ಹುಡುಕಾಟದಲ್ಲಿರುವ ಗ್ರಾಹಕರಿಗೆ ಉಪಯುಕ್ತ ಪ್ಯಾಕೇಜ್‌ ನೀಡುತ್ತೇವೆ ಎಂದು ಹೇಳಿದರು.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಬಿಡುಗಡೆಯಾದ ಫೋಕ್ಸ್‌ವ್ಯಾಗನ್ ಕಾರ್ಪೊರೇಟ್ ಎಡಿಷನ್ ಕಾರುಗಳು

ಫೋಕ್ಸ್‌ವ್ಯಾಗನ್ ಕಂಪನಿಯು ಇತ್ತೀಚಿಗೆ ದೇಶಿಯ ಮಾರುಕಟ್ಟೆಯಲ್ಲಿ ಪೊಲೊ, ವೆಂಟೊ, ಆಮಿಯೊ ಮಾದರಿಗಳಿಗಾಗಿ ಜಿಟಿ ಲೈನ್ ಸರಣಿಯ ಕಾರುಗಳನ್ನು ಬಿಡುಗಡೆಗೊಳಿಸಿತ್ತು. ಹೊಸ ಫೋಕ್ಸ್‌ವ್ಯಾಗನ್ ಪೊಲೊ ಜಿಟಿ ಸರಣಿಯ ಕಾರುಗಳು ಹೊಸ ಗ್ರಿಲ್, ಕಪ್ಪು ಬಣ್ಣದ ಅಸೆಂಟ್ ಸೇರಿದಂತೆ ಹಲವು ಅಪ್‍‍‍ಡೇಟ್‍‍ಗಳನ್ನು ಹೊಂದಿವೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಬಿಡುಗಡೆಯಾದ ಫೋಕ್ಸ್‌ವ್ಯಾಗನ್ ಕಾರ್ಪೊರೇಟ್ ಎಡಿಷನ್ ಕಾರುಗಳು

ಫೋಕ್ಸ್‌ವ್ಯಾಗನ್ ಜಿ‍‍ಟಿ ಸರಣಿಯ ಪೊಲೊ ಕಾರಿನ ಬೆಲೆಯು ರೂ.5.82 ಲಕ್ಷ, ವೆಂಟೊ ಕಾರಿನ ಬೆಲೆಯು ರೂ.8.26 ಲಕ್ಷ ಹಾಗೂ ಆಮಿಯೊ ಕಾರಿನ ಬೆಲೆಯು ರೂ.9.90 ಲಕ್ಷಗಳಾಗಿದೆ. ಈ ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್ ಶೋರೂಂ ದರಗಳಾಗಿವೆ.

MOST READ: ಎ‍‍ಬಿ‍ಎಸ್‍‍ನಿಂದ ಪ್ರಾಣ ಉಳಿಸಿಕೊಂಡ ಬೈಕ್ ಸವಾರರು..!

ಬಿಡುಗಡೆಯಾದ ಫೋಕ್ಸ್‌ವ್ಯಾಗನ್ ಕಾರ್ಪೊರೇಟ್ ಎಡಿಷನ್ ಕಾರುಗಳು

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಕೇಂದ್ರ ಸರ್ಕಾರವು ಇತ್ತೀಚಿಗೆ ವಾಹನ ಉದ್ಯಮಗಳ ಮೇಲಿನ ಕಾರ್ಪೋರೆಟ್ ತೆರಿಗೆಯನ್ನು ಕಡಿಮೆಗೊಳಿಸಿತ್ತು. ಇದರಿಂದಾಗಿ ಈ ತೆರಿಗೆಯ ಲಾಭವನ್ನು ಗ್ರಾಹಕರಿಗೆ ನೀಡಲಿ ಎಂಬುದು ಸರ್ಕಾರದ ಉದ್ದೇಶವಾಗಿತ್ತು. ಮಾರುತಿ ಸುಜುಕಿ ಕಂಪನಿಯ ನಂತರ ಕಾರ್ಪೋರೆಟ್ ತೆರಿಗೆಯ ಲಾಭವನ್ನು ಗ್ರಾಹಕರಿಗೆ ನೀಡುತ್ತಿರುವ ಎರಡನೇ ಕಂಪನಿ ಫೋಕ್ಸ್‌ವ್ಯಾಗನ್ ಆಗಿದೆ.

ಬಿಡುಗಡೆಯಾದ ಫೋಕ್ಸ್‌ವ್ಯಾಗನ್ ಕಾರ್ಪೊರೇಟ್ ಎಡಿಷನ್ ಕಾರುಗಳು

ಫೋಕ್ಸ್‌ವ್ಯಾಗನ್ ಕಂಪನಿಯ ಪೊಲೊ, ವೆಂಟೊ, ಆಮಿಯೊ ಕಾರುಗಳು ದೇಶಿಯ ಮಾರುಕಟ್ಟೆಯಲ್ಲಿ ಸಾಕಷ್ಟು ಜನಪ್ರಿಯವಾಗಿದ್ದು, ಕಂಪನಿಗೆ ಹೆಚ್ಚಿನ ಮಾರಾಟವನ್ನು ತಂದು ಕೊಡುತ್ತಿವೆ. ಟಿಗ್ವಾನ್ ಎಸ್‍‍ಯುವಿ ಫೋಕ್ಸ್‌ವ್ಯಾಗನ್ ಕಂಪನಿಯ ಪ್ರಮುಖ ವಾಹನವಾಗಿದೆ.

Most Read Articles

Kannada
English summary
Volkswagen Corporate Edition Models Launched In India For Ameo, Polo, Vento & Tiguan Offerings - Read in Kannada
Story first published: Friday, September 27, 2019, 10:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X