ನೂತನ ಫೀಚರ್‌ಗಳೊಂದಿಗೆ ಬಿಡುಗಡೆಯಾಗಲಿದೆ 2021ರ ಎಂಜಿ ಹೆಕ್ಟರ್ ಪ್ಲಸ್

ಎಂಜಿ ಮೋಟಾರ್ ಕಂಪನಿಯು ತನ್ನ ಹೆಕ್ಟರ್ ಎಸ್‍ಯುವಿಯನ್ನು ಕಳೆದ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಎಂಜಿ ಹೆಕ್ಟರ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಹೂಸ ಸಂಚಲನವನ್ನು ಮೂಡಿಸಿತ್ತು.

ನೂತನ ಫೀಚರ್‌ಗಳೊಂದಿಗೆ ಬಿಡುಗಡೆಯಾಗಲಿದೆ 2021ರ ಎಂಜಿ ಹೆಕ್ಟರ್ ಪ್ಲಸ್

ಇದೀಗ ಎಂಜಿ ಮೋಟಾರ್ ತನ್ನ ಜನಪ್ರಿಯ ಹೆಕ್ಟರ್ ಎಸ್‍ಯುವಿಯನ್ನು ನವೀಕರಿಸಿದ ಫೇಸ್ ಲಿಫ್ಟ್ ಅವೃತ್ತಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇದರೊಂದಿಗೆ ಎಂಜಿ ಹೆಕ್ಟರ್ ಪ್ಲಸ್ ಎಂಬ 7-ಸೀಟರ್ ವರ್ಷನ್ ಭಾರತದಲ್ಲಿ ಬಿಡುಗಡೆಗೆಗೊಳಿಸಲು ಸಜ್ಜಾಗುತ್ತಿದೆ. ವರದಿಗಳ ಪ್ರಕಾರ ಬ್ರಿಟಿಷ್ ಬ್ರ್ಯಾಂಡ್ ಎಂಜಿ ಹೆಕ್ಲಟರ್ ಪ್ಲಸ್ 6 ಸೀಟರ್ ಸ್ಯಾವಿ ವೆರಿಯೆಂಟ್ ಅನ್ನು ಕೂಡ ಪರಿಚಯಿಸಲಿದೆ. ಇದು ಟಾಪ್ ಎಂಡ್ ವೆರಿಯೆಂಟ್ ಗಿಂತ ಮೇಲಿರುತ್ತದೆ.

ನೂತನ ಫೀಚರ್‌ಗಳೊಂದಿಗೆ ಬಿಡುಗಡೆಯಾಗಲಿದೆ 2021ರ ಎಂಜಿ ಹೆಕ್ಟರ್ ಪ್ಲಸ್

ಹೊಸ ಎಂಜಿ ಹೆಕ್ಟರ್ ಪ್ಲಸ್ ಸ್ಯಾವಿ ವೆರಿಯೆಂಟ್ ಗ್ಲೋಸ್ಟರ್ ಎಸ್‍ಯುವಿಯಂತೆಯೇ ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಅನ್ನು ಪಡೆಯಲಿದೆ. ಇದು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಅಟೋನೊಮಸ್ ಎಮರ್ಜನ್ಸಿ ಬ್ರೇಕಿಂಗ್, ಲೇನ್ ಡಿಪರ್ಚರ್ ಅಲರ್ಟ್, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ಮತ್ತು ಹ್ಯಾಂಡ್ಸ್ ಫ್ರೀ ಆಟೋ ಪಾರ್ಕಿಂಗ್ ಅನ್ನು ಒಳಗೊಂಡಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ನೂತನ ಫೀಚರ್‌ಗಳೊಂದಿಗೆ ಬಿಡುಗಡೆಯಾಗಲಿದೆ 2021ರ ಎಂಜಿ ಹೆಕ್ಟರ್ ಪ್ಲಸ್

ಇನ್ನು ಈ ಹೊಸ ಎಸ್‍ಯುವಿಯಲ್ಲಿ 4ಡಬ್ಲ್ಯುಡಿ(ಫ್ಹೋರ್ ವ್ಹೀಲ್ ಡ್ರೈವ್) ಸಿಸ್ಟಂ ಅನ್ನು ಹೊಂದಿರಲಿದೆ. ಹೊಸ ಎಂಜಿ ಹೆಕ್ಟರ್ ಪ್ಲಸ್ ಸ್ಯಾವಿ ವೆರಿಯೆಂಟ್ 360 ಡಿಗ್ರಿ ಕ್ಯಾಮೆರಾ, ಇನ್ಸ್ ಟ್ರೂಮೆಂಟ್ ಕ್ಲಸ್ಟರ್‌ಗಾಗಿ 7.0-ಇಂಚಿನ ಡಿಸ್ ಪ್ಲೇ ಮತ್ತು ಆಂಬಿಯೆಂಟ್ ಲೈಟಿಂಗ್ ಅನ್ನು ಹೊಂದಿದೆ.

ನೂತನ ಫೀಚರ್‌ಗಳೊಂದಿಗೆ ಬಿಡುಗಡೆಯಾಗಲಿದೆ 2021ರ ಎಂಜಿ ಹೆಕ್ಟರ್ ಪ್ಲಸ್

ಇದರೊಂದಿಗೆ ಪನೋರಮಿಕ್ ಸನ್‌ರೂಫ್, ಆಟೋ ಕ್ಲೈಮೇಟ್ ಕಂಟ್ರೋಲ್, ಟೈರ್ ಪ್ರೆಶರ್ ಮಾನಿಟರ್, ಕರ್ಟನ್ ಏರ್‌ಬ್ಯಾಗ್, ಹೀಟೆಡ್ ವೀಂಗ್ ಮೀರರ್, ಆಟೋ ಹೆಡ್‌ಲ್ಯಾಂಪ್‌ಗಳು, ವೈಪರ್‌ಗಳು ಮತ್ತು ಹ್ಯಾಂಡ್ಸ್-ಫ್ರೀ ಓಪನಿಂಗ್ ಟೈಲ್‌ಗೇಟ್ ಅನ್ನು ಹೊಂದಿದೆ.

MOST READ: ನವೆಂಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಕಾರುಗಳಿವು

ನೂತನ ಫೀಚರ್‌ಗಳೊಂದಿಗೆ ಬಿಡುಗಡೆಯಾಗಲಿದೆ 2021ರ ಎಂಜಿ ಹೆಕ್ಟರ್ ಪ್ಲಸ್

ಹೊಸ ಎಂಜಿ ಹೆಕ್ಟರ್ ಪ್ಲಸ್ ಎಸ್‍ಯುವಿಯಲ್ಲಿ 2.0 ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 170 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಜೋಡಿಸಲಾಗುತ್ತದೆ.

ನೂತನ ಫೀಚರ್‌ಗಳೊಂದಿಗೆ ಬಿಡುಗಡೆಯಾಗಲಿದೆ 2021ರ ಎಂಜಿ ಹೆಕ್ಟರ್ ಪ್ಲಸ್

ಇದರೊಂಡಿಗೆ 1.5 ಲೀಟರ್ ಟರ್ಬೊ-ಪೆಟ್ರೋಲ್ ಯುನಿಟ್ ಅನ್ನು ನೀಡಬಹುದು. ಇದರೊಂದಿಗೆ ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಡಿಸಿಟಿ ಗೇರ್ ಬಾಕ್ಸ್ ಸಿಸ್ಟಂ ಅನ್ನು ಜೋಡಿಸಬಹುದು. ಇನ್ನು 48ವಿ ಮೈಲ್ಡ್-ಹೈಬ್ರಿಡ್ ಸಿಸ್ಟಂ ಅನ್ನು ಜೋಡಿಸಲಾಗಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ನೂತನ ಫೀಚರ್‌ಗಳೊಂದಿಗೆ ಬಿಡುಗಡೆಯಾಗಲಿದೆ 2021ರ ಎಂಜಿ ಹೆಕ್ಟರ್ ಪ್ಲಸ್

ಇನ್ನು ಎಂಜಿ ಮೋಟಾರ್ ಕಂಪನಿಯುತನ್ನ ಗ್ಲೋಸ್ಟರ್ ಎಸ್‍ಯುವಿಯನ್ನು ಹೊರತುಪಡಿಸಿ ಉಳಿದ ಮೂರು ಮಾದರಿಗಳ ಮೇಲೆ ಭರ್ಜರಿ ಆಫರ್ ಅನ್ನು ಘೋಷಿಸಿದೆ. ಎಂಜಿ ಕಾರುಗಳ ಮೇಲಿನ ಆಫರ್ ಈ ತಿಂಗಳ ಅಂತ್ಯದವರೆಗೂ ಲಭ್ಯವಿರುತ್ತದೆ.

ನೂತನ ಫೀಚರ್‌ಗಳೊಂದಿಗೆ ಬಿಡುಗಡೆಯಾಗಲಿದೆ 2021ರ ಎಂಜಿ ಹೆಕ್ಟರ್ ಪ್ಲಸ್

ಎಂಜಿ ಹೆಕ್ಟರ್ ಮತ್ತು ಹೆಕ್ಟರ್ ಪ್ಲಸ್‌ ಎಸ್‍ಯುವಿಗಳ ಮೇಲೆ ರೂ. 25 ಸಾವಿರಗಳವರೆಗೆ ಎಕ್ಸ್‌ಚೆಂಜ್ ಬೋನಸ್ ಅನ್ನು ನೀಡಲಾಗುತ್ತಿದೆ. ಇನ್ನು ಈ ಎಸ್‍ಯುವಿಗಳಿಗೆ 3 ವರ್ಷಗಳ ಅನ್ಯೂವಲ್ ಮೈಂಟೇನಸ್ ಪ್ಯಾಕೇಜ್‌ಗಳನ್ನು (ಕ್ಲಾಸಿಕ್, ಕ್ಲಾಸಿಕ್ 360, ಪ್ರೀಮಿಯಂ ಮತ್ತು ಪ್ರೀಮಿಯಂ 360) ಒಳಗೊಂಡಿರುವ ಎಂಜಿ ಶೀಲ್ಡ್ ಯೋಜನೆಯ ಪ್ರಯೋಜನಗಳನ್ನು ಸಹ ಗ್ರಾಹಕರು ಪಡೆಯಬಹುದು.

ನೂತನ ಫೀಚರ್‌ಗಳೊಂದಿಗೆ ಬಿಡುಗಡೆಯಾಗಲಿದೆ 2021ರ ಎಂಜಿ ಹೆಕ್ಟರ್ ಪ್ಲಸ್

ಇನ್ನು ಎಂಜಿ ಝಡ್ಎಸ್ ಎಲೆಕ್ಟ್ರಿಕ್ ಕಾರಿನ ಮೇಲೆ ರೂ.40,000 ರಿಯಾಯಿತಿಯೊಂದಿಗೆ ರೂ.25 ಸಾವಿರಗಳ ಎಕ್ಸ್‌ಚೆಂಜ್ ಬೋನಸ್ ಮತ್ತು 3 ವರ್ಷಗಳ ಅನ್ಯೂವಲ್ ಮೈಂಟೇನಸ್ ಪ್ಯಾಕೇಜ್‌ಗಳನ್ನು ಒಳಗೊಂಡಿರುವ ಎಂಜಿ ಶೀಲ್ಡ್ ಯೋಜನೆಯ ಪ್ರಯೋಜನಗಳನ್ನು ಸಹ ಗ್ರಾಹಕರು ಪಡೆಯಬಹುದು.

ನೂತನ ಫೀಚರ್‌ಗಳೊಂದಿಗೆ ಬಿಡುಗಡೆಯಾಗಲಿದೆ 2021ರ ಎಂಜಿ ಹೆಕ್ಟರ್ ಪ್ಲಸ್

2021ರ ಜನವರಿಯಲ್ಲಿ ಎಂಜಿ ಹೆಕ್ಟರ್ 7 ವರ್ಷನ್ ಬಿಡುಗಡೆ ಮಾಡುವುದಾಗಿ ಕಾರು ತಯಾರಕರು ಖಚಿತಪಡಿಸಿದ್ದಾರೆ. ಈ ಮಾದರಿಯು ಕ್ಯಾಪ್ಟನ್ ಸೀಟುಗಳ ಬದಲು ಎರಡನೇ ಸಾಲಿನಲ್ಲಿ ಬೆಂಚ್ ಮಾದರಿಯ ಆಸನವನ್ನು ಹೊಂದಿರುತ್ತದೆ. 7 ಸಿಟರ್ ಮಾದರಿಯಲ್ಲಿ ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡುವ ಸಾಧ್ಯತೆಯಿದೆ.

Most Read Articles

Kannada
English summary
2021 MG Hector Plus 6-Seater To Get ADAS and 4WD. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X