Just In
- 27 min ago
ರೋಡ್ ಟೆಸ್ಟಿಂಗ್ನಲ್ಲಿ ಕಂಡುಬಂದ ಹ್ಯುಂಡೈ ಕ್ರೆಟಾ 7 ಸೀಟರ್ ವರ್ಷನ್
- 12 hrs ago
ಬಿಡುಗಡೆಗೆ ಸಜ್ಜಾದ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕುಗಳು
- 12 hrs ago
ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಫೋರ್ಸ್ ನ್ಯೂ ಜನರೇಷನ್ ಗೂರ್ಖಾ
- 12 hrs ago
ಸೀಮನ್ಸ್ ಕಂಪನಿಯ ಜೊತೆಗೂಡಿ ಆಧುನಿಕ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಘಟಕವನ್ನು ಅಭಿವೃದ್ದಿಪಡಿಸಲಿದೆ ಓಲಾ
Don't Miss!
- News
ಚಿನ್ನ ಕಳ್ಳಸಾಗಣೆ: 28 ಕೋಟಿ ರೂಪಾಯಿ ಮೌಲ್ಯದ 55.61 ಕೆಜಿ ಚಿನ್ನ ವಶಪಡಿಸಿಕೊಂಡ DRI
- Movies
ಸ್ಯಾಂಡಲ್ ವುಡ್ ಸುಂದರಿಯರು; ಅಪರೂಪದ ಫೋಟೋ ಹಂಚಿಕೊಂಡ ಮಾಲಾಶ್ರೀ, ಶ್ರುತಿ
- Lifestyle
ಶುಕ್ರವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್
- Sports
ಐಎಸ್ಎಲ್: ಈಸ್ಟ್ ಬೆಂಗಾಲ್ ಅಜೇಯ ನಡೆಗೆ ಬೆಸ್ಟ್ ಮುಂಬೈ ಸವಾಲು
- Finance
ಬಜೆಟ್ 2021: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಜನವರಿ 30ರಂದು ಸರ್ವ ಪಕ್ಷಗಳ ಸಭೆ
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಹುನೀರಿಕ್ಷಿತ ಆಡಿ ಕ್ಯೂ2 ಎಂಟ್ರಿ ಲೆವಲ್ ಎಸ್‌ಯುವಿ ಭಾರತದಲ್ಲಿ ಬಿಡುಗಡೆ
ಆಡಿ ಇಂಡಿಯಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ತನ್ನ ಬಹುನೀರಿಕ್ಷಿತ ಕ್ಯೂ2 ಎಂಟ್ರಿ ಲೆವಲ್ ಐಷಾರಾಮಿ ಎಸ್‌ಯುವಿ ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಕಾರು ಗ್ರಾಹಕರ ಬೇಡಿಕೆಯೆಂತೆ ಒಟ್ಟು ಐದು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

ಕ್ಯೂ2 ಮಾದರಿಯು ಫೋಕ್ಸ್‌ವ್ಯಾಗನ್ ಗ್ರೂಪ್‌ನ ಎಂಕ್ಯೂಬಿ ಪ್ಲ್ಯಾಟ್‌ಫ್ಲಾಮ್ ಅಡಿ ಅಭಿವೃದ್ದಿಗೊಂಡಿದ್ದು, ಕ್ಯೂ ಸರಣಿಯ ಆರನೇ ಕಾರು ಮಾದರಿ ಇದಾಗಿದೆ. ಗ್ರಾಹಕರು ಹೊಸ ಕಾರನ್ನು ಸ್ಟ್ಯಾಂಡರ್ಡ್, ಪ್ರೀಮಿಯಂ, ಪ್ರೀಮಿಯಂ ಪ್ಲಸ್ 1, ಪ್ರೀಮಿಯಂ ಪ್ಲಸ್ 2 ಮತ್ತು ಟೆಕ್ನಾಲಜಿ ಎನ್ನುವ ಐದು ವೆರಿಯೆಂಟ್‌ಗಳಲ್ಲಿ ಖರೀದಿಸಬಹುದಾಗಿದ್ದು, ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ಹೊಸ ಕಾರು ಆರಂಭಿಕವಾಗಿ ರೂ. 34.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.48.89 ಲಕ್ಷ ಬೆಲೆ ಹೊಂದಿದೆ.

ಸ್ಟ್ಯಾಂಡರ್ಡ್, ಪ್ರೀಮಿಯಂ, ಪ್ರೀಮಿಯಂ ಪ್ಲಸ್ 1, ಪ್ರೀಮಿಯಂ ಪ್ಲಸ್ 2 ಮತ್ತು ಟೆಕ್ನಾಲಜಿ ವೆರಿಯೆಂಟ್‌ಗಳು ಬೆಲೆ ಆಧಾರದ ಮೇಲೆ ಕನೆಕ್ಟೆಡ್ ಫೀಚರ್ಸ್‌ಗಳನ್ನು ಹೊಂದಿದ್ದು, ಹೊಸ ಕಾರು ಸ್ಪೋರ್ಟಿ ಲುಕ್‌ನೊಂದಿಗೆ ಐಷಾರಾಮಿ ಕಾರು ಖರೀದಿದಾರರನ್ನು ಸೆಳೆಯಲಿದೆ.

ಕ್ಯೂ2 ಕಾರು ಮಾದರಿಯು ಸಂಪೂರ್ಣವಾಗಿ ಸಿಬಿಯು ಆಮದು ನೀತಿ ಅಡಿ ಭಾರತದಲ್ಲಿ ಮಾರಾಟಗೊಳ್ಳಲಿದ್ದು, ಅಡ್ವಾನ್ಸ್ ಲೈನ್ ಮತ್ತು ಡಿಸೈನ್ ಲೈನ್ ಎರಡು ಮಾದರಿಗಳಲ್ಲಿ ಹೊಸ ಕಾರನ್ನು ಅಭಿವೃದ್ದಿಗೊಳಿಸಲಾಗಿದೆ.

ಅಡ್ವಾನ್ಸ್ ಲೈನ್‌ನಲ್ಲಿ ಸ್ಟ್ಯಾಂಡರ್ಡ್, ಪ್ರೀಮಿಯಂ, ಪ್ರೀಮಿಯಂ ಪ್ಲಸ್ 1 ಮಾದರಿಗಳನ್ನು ಮಾರಾಟಗೊಳ್ಳಲಿದ್ದರೆ, ಡಿಸೈನ್ ಲೈನ್‌ನಲ್ಲಿ ಪ್ರೀಮಿಯಂ ಪ್ಲಸ್ 2 ಮತ್ತು ಟೆಕ್ನಾಲಜಿ ವೆರಿಯೆಂಟ್‌ಗಳು ಮಾರಾಟಗೊಳ್ಳಲಿವೆ.
ಹೊಸ ಕಾರಿನ ವೆರಿಯೆಂಟ್ ಮತ್ತು ಬೆಲೆ(ಎಕ್ಸ್‌ಶೋರೂಂ ಪ್ರಕಾರ)
ಆಡಿ ಕ್ಯೂ2 | ಬೆಲೆ |
ಸ್ಟ್ಯಾಂಡರ್ಡ್ | ರೂ. 34,99,000 |
ಪ್ರೀಮಿಯಂ | ರೂ. 40,89,000 |
ಪ್ರೀಮಿಯಂ ಪ್ಲಸ್ 1 | ರೂ. 44,64,000 |
ಪ್ರೀಮಿಯಂ ಪ್ಲಸ್ 2 | ರೂ. 45,14,000 |
ಟೆಕ್ನಾಲಜಿ | ರೂ. 48,89,000 |

ಎಂಜಿನ್ ಮತ್ತು ಪರ್ಫಾಮೆನ್ಸ್
ಆಡಿ ಕಂಪನಿಯು ಕ್ಯೂ2 ಕಾರು ಮಾದರಿಯಲ್ಲಿ 2.0-ಲೀಟರ್ ಟಿಎಫ್ಎಸ್ಐ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಿದ್ದು, 7-ಸ್ಪೀಡ್ ಟ್ರಾನಿಕ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ 190-ಬಿಎಚ್‌ಪಿ ಮತ್ತು 320-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಕ್ಯೂ2 ಎಸ್‌ಯುವಿ ಮಾದರಿಯಲ್ಲಿ ನಾಲ್ಕು ಚಕ್ರಗಳಿಗೂ ಶಕ್ತಿ ಪೂರೈಸುವ ಕ್ವಾಟ್ರೊ ಫೋರ್ ವೀಲ್ಹ್ ಡ್ರೈವ್ ಸಿಸ್ಟಂ ಜೋಡಣೆ ಮಾಡಲಾಗಿದ್ದು, ಕೇವಲ 6.5-ಸೆಕೆಂಡ್‌ಗಳಲ್ಲಿ ಸೊನ್ನೆಯಿಂದ 100ಕಿ.ಮೀ ವೇಗ ಪಡೆದುಕೊಳ್ಳುವುದರ ಜೊತೆಗ ಪ್ರತಿ ಗಂಟೆಗೆ ಗರಿಷ್ಠ 228ಕಿ.ಮೀ ಟಾಪ್ ಸ್ಪೀಡ್‌ನಲ್ಲಿ ಚಲಿಸಬಲ್ಲದು.

ಸ್ಟ್ಯಾಂಡರ್ಡ್ ಮಾದರಿಗಿಂತಲೂ ಟೆಕ್ನಾಲಜಿ ವೆರಿಯೆಂಟ್‌ನಲ್ಲಿ ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್‌ಗಳಲಿದ್ದು, ಎಲ್ಇಡಿ ಹೆಡ್‌ಲ್ಯಾಂಪ್, ಇಂಟ್ರಾಗ್ರೆಟೆಡ್ ಡೈನಾಮಿಕ್ ಟರ್ನ್ ಇಂಡಿಕೇಟರ್, 17-ಇಂಚಿನ ಅಲಾಯ್ ವೀಲ್ಹ್, ವರ್ಚುವಲ್ ಕುಕ್‌ಪಿಟ್, ಅಗಲವಾದ ಟಚ್‌ಸ್ಕ್ರೀನ್, 'ಮೈಆಡಿ ಕನೆಕ್ಟ್' ಒಳಗೊಂಡ ಇನ್ಪೋಟೈನ್‌ಮೆಂಟ್ ಸಿಸ್ಟಂ, ಆ್ಯಪಲ್ ಕಾರ್ ಪ್ಲೇ ಮತ್ತು ಅಂಡ್ರಾಯಿಡ್ ಆಟೋ ಸೌಲಭ್ಯಗಳಿವೆ.

ಹಾಗೆಯೇ ಹೊಸ ಕಾರಿನಲ್ಲಿ ವೈರ್‌ಲೆಸ್ ಚಾರ್ಜಿಂಗ್, ಆ್ಯಂಬಿಯೆಂಟ್ ಲೈಟಿಂಗ್, ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲ್, ಸ್ಪೋರ್ಟಿ ಫ್ಲ್ಯಾಟ್-ಬಾಟಮ್ ಸ್ಟ್ರೀರಿಂಗ್ ವೀಲ್ಹ್ ಸೇರಿದಂತೆ ಹಲವಾರು ಫೀಚರ್ಸ್‌ಗಳಿವೆ.

ಇದರೊಂದಿಗೆ ಆಕರ್ಷಕ ವಿನ್ಯಾಸ ಹೊಂದಿರುವ ಹೊಸ ಕ್ಯೂ2 ಕಾರು ಮಾದರಿಯು 4,191ಎಂಎಂ ಉದ್ದ, 1,794ಎಂಎಂ ಅಗಲ, 1,508ಎಂಎಂ ಎತ್ತರ, 2,601ಎಂಎಂ ವೀಲ್ಹ್‌ಬೆಸ್ ಹೊಂದಿದ್ದು, ಬೆಲೆ ಆಧಾರದ ಮೇಲೆ ಹೊಸ ಕಾರು ವೊಲ್ವೊ ಎಕ್ಸ್‌ಸಿ40, ಮರ್ಸಿಡಿಸ್ ಬೆಂಝ್ ಜಿಎಲ್ಎ ಮತ್ತು ಬಿಎಂಡಬ್ಲ್ಯು ಎಕ್ಸ್1 ಮಾದರಿಗಳಿಗೆ ಪೈಪೋಟಿ ನೀಡಲಿದೆ.