ಟ್ರಕ್ ಮಾಲೀಕರಿಗೆ ಸಿಹಿ ಸುದ್ದಿ, ಟ್ರಕ್ ಎಕ್ಸ್‌ಚೇಂಜ್ ಯೋಜನೆ ಆರಂಭಿಸಿದ ಭಾರತ್‌ಬೆಂಝ್

ಡೈಮ್ಲರ್ ಇಂಡಿಯಾ ಕಮರ್ಷಿಯಲ್ ವೆಹಿಕಲ್ಸ್ ಕಂಪನಿಯು ಭಾರತದಲ್ಲಿ ಭಾರತ್‌ಬೆಂಝ್ ಎಕ್ಸ್‌ಚೇಂಜ್ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯಡಿಯಲ್ಲಿ ಕಂಪನಿಯು ಹಳೆಯ ಗ್ರಾಹಕರಿಂದ ಟ್ರಕ್‌ಗಳನ್ನು ಖರೀದಿಸಿ ಹೊಸ ಭಾರತ್‌ಬೆಂಝ್ ಟ್ರಕ್‌ಗಳ ಖರೀದಿಯ ಮೇಲೆ ರಿಯಾಯಿತಿ ನೀಡಲಿದೆ.

ಟ್ರಕ್ ಮಾಲೀಕರಿಗೆ ಸಿಹಿ ಸುದ್ದಿ, ಟ್ರಕ್ ಎಕ್ಸ್‌ಚೇಂಜ್ ಯೋಜನೆ ಆರಂಭಿಸಿದ ಭಾರತ್‌ಬೆಂಝ್

ಬಹುತೇಕ ಎಲ್ಲಾ ಕಂಪನಿಗಳ ಟ್ರಕ್‌ಗಳನ್ನು ಭಾರತ್‌ಬೆಂಝ್ ಎಕ್ಸ್‌ಚೇಂಜ್ ಯೋಜನೆಯಡಿ ಖರೀದಿಸಲಾಗುವುದು. ಟ್ರಕ್‌ಗಳ ಖರೀದಿ ಹಾಗೂ ಮಾರಾಟದ ಮೇರೆಗೆ ಮಾತ್ರ ಈ ಯೋಜನೆಯನ್ನು ಆರಂಭಿಸಲಾಗಿದೆ ಎಂದು ಡೈಮ್ಲರ್ ಇಂಡಿಯಾ ಹೇಳಿದೆ. ಈ ಯೋಜನೆಯನ್ನು ಮುಂಬರುವ ದಿನಗಳಲ್ಲಿ ಬಸ್‌ಗಳಿಗೂ ಆರಂಭಿಸಲಾಗುವುದು. ದೇಶದಲ್ಲಿ ಟ್ರಕ್‌ಗಳ ಮಾರಾಟವು ಹೆಚ್ಚುತ್ತಿದೆ ಎಂದು ಡೈಮ್ಲರ್ ಇಂಡಿಯಾ ವರದಿ ಮಾಡಿದೆ.

ಟ್ರಕ್ ಮಾಲೀಕರಿಗೆ ಸಿಹಿ ಸುದ್ದಿ, ಟ್ರಕ್ ಎಕ್ಸ್‌ಚೇಂಜ್ ಯೋಜನೆ ಆರಂಭಿಸಿದ ಭಾರತ್‌ಬೆಂಝ್

ಬಳಸಿದ ಕಮರ್ಷಿಯಲ್ ವಾಹನಗಳ ಸೆಗ್ ಮೆಂಟಿನಲ್ಲಿಯೂ ವ್ಯವಹಾರವನ್ನು ಅಭಿವೃದ್ಧಿಪಡಿಸುವ ಸಾಧ್ಯತೆಗಳಿವೆ. ನಾವು ಭಾರತೀಯ ಗ್ರಾಹಕರಿಗೆ ಗುಣಮಟ್ಟದ ಭಾರತ್‌ಬೆಂಝ್ ಟ್ರಕ್‌ಗಳನ್ನು ಒದಗಿಸಲಿದ್ದೇವೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಟ್ರಕ್ ಮಾಲೀಕರಿಗೆ ಸಿಹಿ ಸುದ್ದಿ, ಟ್ರಕ್ ಎಕ್ಸ್‌ಚೇಂಜ್ ಯೋಜನೆ ಆರಂಭಿಸಿದ ಭಾರತ್‌ಬೆಂಝ್

ಇದಕ್ಕಾಗಿ ಕಂಪನಿಯು ಆನ್‌ಲೈನ್ ವ್ಯವಹಾರವನ್ನು ಆರಂಭಿಸಲಾಗುವುದು ಎಂದು ಭಾರತ್‌ಬೆಂಝ್ ಹೇಳಿದೆ. ಡೈಮ್ಲರ್ ಇಂಡಿಯಾ ಭಾರತದಲ್ಲಿ ರೂ.2,277 ಕೋಟಿ ಬಂಡವಾಳ ಹೂಡಲಿದೆ. ಇದರಡಿಯಲ್ಲಿ ಕಂಪನಿಯು ಭಾರತದಲ್ಲಿ ಹೊಸ ಘಟಕಗಳನ್ನು ಸ್ಥಾಪಿಸಿ ತಂತ್ರಜ್ಞಾನ ಹಾಗೂ ನವೀಕರಣಕ್ಕೆ ಆದ್ಯತೆ ನೀಡಲಿದೆ.

ಟ್ರಕ್ ಮಾಲೀಕರಿಗೆ ಸಿಹಿ ಸುದ್ದಿ, ಟ್ರಕ್ ಎಕ್ಸ್‌ಚೇಂಜ್ ಯೋಜನೆ ಆರಂಭಿಸಿದ ಭಾರತ್‌ಬೆಂಝ್

ಭಾರತ್‌ಬೆಂಝ್, ಚೆನ್ನೈನ ಒರ್ಗಡಮ್ ಉತ್ಪಾದನಾ ಘಟಕದಲ್ಲಿ 1000 ಹೆವಿ ಡ್ಯೂಟಿ ಬಿಎಸ್ 6 ಟ್ರಕ್‌ಗಳನ್ನು ಉತ್ಪಾದಿಸುತ್ತದೆ. ಈ ಸಂದರ್ಭದಲ್ಲಿ ಕಂಪನಿಯು ಈ ಘಟಕದಲ್ಲಿ ಉತ್ಪಾದನೆಯಾದ 1000ನೇ ಟ್ರಕ್ ಅನ್ನು ಪ್ರದರ್ಶಿಸಿದೆ. ಈ ಟ್ರಕ್ ಭಾರತ್‌ಬೆಂಝ್ 3523 ಆರ್ ಹೆವಿ ಡ್ಯೂಟಿ ಟ್ರಕ್ ಎಂಬುದು ವಿಶೇಷ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಟ್ರಕ್ ಮಾಲೀಕರಿಗೆ ಸಿಹಿ ಸುದ್ದಿ, ಟ್ರಕ್ ಎಕ್ಸ್‌ಚೇಂಜ್ ಯೋಜನೆ ಆರಂಭಿಸಿದ ಭಾರತ್‌ಬೆಂಝ್

ಇದರ ಜೊತೆಗೆ ಕಂಪನಿಯು 4228 ಆರ್ ಟ್ರಕ್‌ನ ಹೊಸ ಬಿಎಸ್ 6 ಮಾದರಿಯನ್ನು ಸಹ ಉತ್ಪಾದಿಸುತ್ತದೆ. ಈ ಟ್ರಕ್ ಕಂಪನಿಯ ಹೆಚ್ಚು ಮಾರಾಟವಾಗುವ ಟ್ರಕ್‌ಗಳಲ್ಲಿ ಒಂದಾಗಿದೆ. ಕಂಪನಿಯು ತನ್ನ ಹೊಸ ಟ್ರಕ್‌ ಹಾಗೂ ಬಸ್‌ಗಳನ್ನು ಬಿಎಸ್ 6 ಎಂಜಿನ್ ನೊಂದಿಗೆ ಅಪ್​ಡೇಟ್​ಗೊಳಿಸುತ್ತಿದೆ.

ಟ್ರಕ್ ಮಾಲೀಕರಿಗೆ ಸಿಹಿ ಸುದ್ದಿ, ಟ್ರಕ್ ಎಕ್ಸ್‌ಚೇಂಜ್ ಯೋಜನೆ ಆರಂಭಿಸಿದ ಭಾರತ್‌ಬೆಂಝ್

ಕೋವಿಡ್ -19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಜಾರಿಗೊಳಿಸಲಾಗಿದ್ದ ಲಾಕ್‌ಡೌನ್ ಅವಧಿಯಲ್ಲಿ ಬಹುತೇಕ ಹೆವಿ ವಾಹನ ಉತ್ಪಾದನಾ ಕಂಪನಿಗಳು ತಮ್ಮ ಉತ್ಪಾದನೆಯನ್ನು ನಿಲ್ಲಿಸಿದ್ದವು. ಆದರೆ ಭಾರತ್‌ಬೆಂಝ್ ಕಂಪನಿಯ ಮೇಲೆ ಲಾಕ್‌ಡೌನ್ ಹೆಚ್ಚಿನ ಪರಿಣಾಮ ಬೀರಲಿಲ್ಲ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಟ್ರಕ್ ಮಾಲೀಕರಿಗೆ ಸಿಹಿ ಸುದ್ದಿ, ಟ್ರಕ್ ಎಕ್ಸ್‌ಚೇಂಜ್ ಯೋಜನೆ ಆರಂಭಿಸಿದ ಭಾರತ್‌ಬೆಂಝ್

ಭಾರತ್‌ಬೆಂಝ್ ಟ್ರಕ್‌ಗಳು ಹಾಗೂ ಬಸ್‌ಗಳಿಗೆ ಬೇಕಾದ 80%ಗಿಂತಲೂ ಹೆಚ್ಚಿನ ಬಿಡಿಭಾಗಗಳನ್ನು ಸ್ಥಳೀಯ ಕಂಪನಿಗಳೇ ಸರಬರಾಜು ಮಾಡುತ್ತವೆ. ಈ ಕಾರಣಕ್ಕೆ ಕಂಪನಿಯ ಉತ್ಪಾದನೆಯ ಮೇಲೆ ಯಾವುದೇ ಪರಿಣಾಮವಾಗಲಿಲ್ಲ.

ಟ್ರಕ್ ಮಾಲೀಕರಿಗೆ ಸಿಹಿ ಸುದ್ದಿ, ಟ್ರಕ್ ಎಕ್ಸ್‌ಚೇಂಜ್ ಯೋಜನೆ ಆರಂಭಿಸಿದ ಭಾರತ್‌ಬೆಂಝ್

ಕರೋನಾದಿಂದ ಉಂಟಾಗಿರುವ ಸಂಕಷ್ಟದ ಸಂದರ್ಭದಲ್ಲಿ ಕಂಪನಿಯು ತನ್ನ ವಿತರಕರು ಹಾಗೂ ಸಿಬ್ಬಂದಿಗಳ ನೆರವಿಗೆ ಧಾವಿಸಿದೆ. ಗ್ರಾಹಕರ ನೆರವಿಗೂ ಸಹ ಧಾವಿಸಿರುವ ಕಂಪನಿಯು ಫ್ರೀ ಸರ್ವೀಸ್ ಹಾಗೂ ವಾರಂಟಿ ಅವಧಿಯನ್ನು ವಿಸ್ತರಿಸಿದೆ. ಇದರಿಂದ ಲಾಕ್‌ಡೌನ್‌ನಲ್ಲಿ ಸರ್ವೀಸ್ ಮಾಡಿಸಲು ಸಾಧ್ಯವಾಗದ ಗ್ರಾಹಕರಿಗೆ ಅನುಕೂಲವಾಗಲಿದೆ.

Most Read Articles

Kannada
English summary
Bharatbenz introduces truck exchange scheme. Read in Kannada.
Story first published: Saturday, August 8, 2020, 18:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X