ಬಿಡುಗಡೆಯಾಗಲಿದೆ ಬಿಎಂಡಬ್ಲ್ಯೂ ಎಂ8 ಮತ್ತು 840ಐ ಕಾರುಗಳು

ಕರೋನಾ ವೈರಸ್ ನಿಂದಾಗಿ ಆಟೋಮೊಬೈಲ್ ಕ್ಷೇತ್ರಕ್ಕೆ ದೊಡ್ಡ ಮಟ್ಟದ ಪರಿಣಾಮವನ್ನು ಬೀರಿದೆ. ವೈರಸ್ ಭೀತಿಯಿಂದ ಹಲವಾರು ಜನಪ್ರಿಯ ಕಾರು ಉತ್ಪಾದನಾ ಕಂಪನಿಗಳು ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ.

ಬಿಡುಗಡೆಯಾಗಲಿದೆ ಬಿಎಂಡಬ್ಲ್ಯೂ ಎಂ8 ಮತ್ತು 840ಐ ಕಾರುಗಳು

ಹಲವಾರು ಕಂಪನಿಗಳು ತಮ್ಮ ಸರಣಿಯಲ್ಲಿರುವ ಜನಪ್ರಿಯ ಮಾದರಿಗಳ ಬಿಡುಗಡೆಯನ್ನು ಮುಂದೂಡಲಾಗಿದೆ, ಇದಕ್ಕೆ ಒಂದು ಉತ್ತಮ ಉದಾಹರಣೆ ಅಂದರೆ ಹೋಂಡಾ ಕಂಪನಿಯು ತಮ್ಮ ಸಿಟಿ ಕಾರಿನ ಬಿಡುಗಡೆಯನ್ನು ಮುಂದೂಡಲಾಗಿದೆ. ಇದೇ ಮಾದರಿಯಲ್ಲಿ ಹೊಸ ಬಿಎಂಡಬ್ಲ್ಯೂ 8-ಸೀರಿಸ್ ಕಾರಿನ ಬಿಡುಗಡೆಯು ಕೂಡ ತಡವಾಗಿದೆ.

ಬಿಡುಗಡೆಯಾಗಲಿದೆ ಬಿಎಂಡಬ್ಲ್ಯೂ ಎಂ8 ಮತ್ತು 840ಐ ಕಾರುಗಳು

ಆದರೂ 8-ಸೀರಿಸ್ ಕಾರನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವ ಕೆಲವು ಸೂಚನೆಗಳು ನೀಡಿದೆ. ಆದರೆ 8-ಸೀರಿಸ್ ಬಿಡುಗಡೆಯ ದಿನಾಂಕವನ್ನು ಬಿಎಂಡಬ್ಲ್ಯು ಕಂಪನಿಯು ಬಹಿರಂಗಪಡಿಸಿಲ್ಲ. ಇದೀಗ ಬಿಎಂಡಬ್ಲ್ಯೂ ತನ್ನ ಎಂ8 ಮತ್ತು 840ಐ ಕಾರುಗಳನ್ನು ಆಮದು ಮಾಡಿಕೊಳ್ಳಲು ಪ್ರಾರಂಭಿಸಿದೆ. ಈ ಎರಡು ಕಾರುಗಳ ಚಿತ್ರಗಳು ಆನ್‍ಲೈನ್ ನಲ್ಲಿ ಬಹಿರಂಗವಾಗಿದೆ.

ಬಿಡುಗಡೆಯಾಗಲಿದೆ ಬಿಎಂಡಬ್ಲ್ಯೂ ಎಂ8 ಮತ್ತು 840ಐ ಕಾರುಗಳು

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು 8-ಸೀರಿಸ್ ನಾಲ್ಕು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಭಾರತದಲ್ಲಿ ಬಿಡುಗಡೆಯಾಗಲಿರುವ ಈ ಎರಡು ಮಾದರಿಗಳನ್ನು ಹೊರತುಪಡಿಸಿ ಕನ್ವರ್ಟಿಬಲ್ (ಜಿ 14) ಮತ್ತು ಎರಡು-ಡೋರಿನ ಕೂಪ್(ಜಿ 15) ಅನ್ನು ಸಹ ಹೊಂದಿದೆ.

ಬಿಡುಗಡೆಯಾಗಲಿದೆ ಬಿಎಂಡಬ್ಲ್ಯೂ ಎಂ8 ಮತ್ತು 840ಐ ಕಾರುಗಳು

ಎಂ8 ಸೀರಿಸ್ ಕಾರುಗಳು ಫಾರ್ಪಮೆನ್ಸ್ ಕಾರು ಪ್ರಿಯರಿಗೆ ಉತ್ತಮ ಆಯ್ಕೆಯಾಗಿದೆ. ಬಿಎಂಡಬ್ಲ್ಯೂ ಎಂ8 ಸೀರಿಸ್ ಐಷಾರಾಮಿ ಕಾರು ಆಗಿದೆ. ಹೊಸ ಎಂ8 ಸೀರಿಸ್ ಕಾರುಗಳು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಗ್ರ್ಯಾನ್ ಕೂಪೆ ಹೆಚ್ಚು ಐಷಾರಾಮಿ ಸಲೂನ್ ಕಾರು ಆಗಿದೆ.

ಬಿಡುಗಡೆಯಾಗಲಿದೆ ಬಿಎಂಡಬ್ಲ್ಯೂ ಎಂ8 ಮತ್ತು 840ಐ ಕಾರುಗಳು

ಬಿಎಂಡಬ್ಲ್ಯೂ ಎಂ8 ಸೀರಿಸ್ ಎಲ್ಲಾ ಮಾದರಿಗಳು 6-ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‍ಗಳನ್ನು ಹೊಂದಿದೆ. ಈ ಎಂಜಿನ್‍ಗಳೊಂದಿಗೆ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‍ ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಬಿಡುಗಡೆಯಾಗಲಿದೆ ಬಿಎಂಡಬ್ಲ್ಯೂ ಎಂ8 ಮತ್ತು 840ಐ ಕಾರುಗಳು

ಬಿಎಂಡಬ್ಲ್ಯೂ 840 ಐ 3.0-ಲೀಟರ್ ಐ 6 ಮೋಟರ್ ಅನ್ನು ಹೊಂದಿದೆ. ಈ ಮೋಟಾರ್ 340 ಬಿಹೆಚ್ಪಿ ಪವರ್ ಮತ್ತು 500 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಬಿಎಂಡಬ್ಲ್ಯೂ 840 ಡಿ ಯ 3.0-ಲೀಟರ್ ಡೀಸೆಲ್ ಮೋಟರ್ 315 ಬಿಹೆಚ್‍ಪಿ ಪವರ್ ಮತ್ತು 680 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬಿಡುಗಡೆಯಾಗಲಿದೆ ಬಿಎಂಡಬ್ಲ್ಯೂ ಎಂ8 ಮತ್ತು 840ಐ ಕಾರುಗಳು

ಟಾಪ್ ಸ್ಪೆಕ್ ಟಾಪ್-ಸ್ಪೆಕ್ ಎಂ 8 4.4-ಲೀಟರ್ ವಿ 8 ಟ್ವಿನ್-ಟರ್ಬೊ ಎಸ್ 63 ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 591 ಬಿಹೆಚ್‌ಪಿ ಮತ್ತು 750 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬಿಡುಗಡೆಯಾಗಲಿದೆ ಬಿಎಂಡಬ್ಲ್ಯೂ ಎಂ8 ಮತ್ತು 840ಐ ಕಾರುಗಳು

ಬಿಎಂಡಬ್ಲ್ಯೂ ಎಂ8 ಕೇವಲ ಕೇವಲ 3.3 ಸೆಕೆಂಡುಗಳಲ್ಲಿ 0 ರಿಂದ 100 ಕಿ.ಮೀ ವೇಗವನ್ನು ಕ್ರಮಿಸುತ್ತದೆ. ಎಂ8 ಬಿಎಂಡಬ್ಲ್ಯು 840 ಐ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.5 ಕೋಟಿ ಗಳಾಗಿದೆ. ಇನ್ನು ಎಂ8 ಕಾರುಗಳಿಗೆ ರೂ.2 ಕೋಟಿ ಗಳಾಗಿದೆ.

Most Read Articles

Kannada
English summary
BMW M8 & 840i Spotted In India, Launch Later This Year. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X