Just In
Don't Miss!
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- News
ಕೇಂದ್ರ ಸರ್ಕಾರ ಎನ್ಐಎ ನೋಟಿಸ್ ಮೂಲಕ ಕಿರುಕುಳ ನೀಡುತ್ತಿದೆ:ರೈತರ ಆರೋಪ
- Finance
ಸಿಲಿಂಡರ್ ಬುಕ್ ಮಾಡಿದ ಎರಡು ಗಂಟೆಯೊಳಗೆ ಮನೆ ಬಾಗಿಲಿಗೆ ಡೆಲಿವರಿ
- Sports
ಆಸಿಸ್ ಬೌಲರ್ಗಳಿಗೆ ಪಾಂಟಿಂಗ್ ಚಾಟಿ: ಶಾರ್ದೂಲ್- ಸುಂದರ್ ಆಟಕ್ಕೆ ಮೆಚ್ಚುಗೆ
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಗ್ರಾಹಕನ ಅವಾಂತರಕ್ಕೆ ಹೊಚ್ಚ ಹೊಸ ಕಾರ್ನಿವಾಲ್ ಎಂಪಿವಿ ಕಾರು ಫುಲ್ ಡ್ಯಾಮೇಜ್
ಸಂಕಷ್ಟಕರ ಆರ್ಥಿಕ ಪರಿಸ್ಥಿತಿಯಲ್ಲಿ ಒಂದು ಹೊಸ ಕಾರು ಖರೀದಿ ಮಾಡಿ ಅದನ್ನು ನಿರ್ವಹಣೆ ಮಾಡುವುದು ಅಂದ್ರೆ ಅಷ್ಟು ಸುಲಭದ ಮಾತಲ್ಲ. ಒಂದು ಕಾರು ಖರೀದಿಗೂ ಮುನ್ನ ಅದರ ಹಿಂದೆ ಸಾಕಷ್ಟು ಪರಿಶ್ರಮವಿರುತ್ತದೆ. ಆದರೆ ಯೋಜನೆಯಿಲ್ಲದೆ ಅಥವಾ ಖರೀದಿಸುವ ವಾಹನ ಕುರಿತಾಗಿ ತುಸು ಮುಂದಾಲೋಚನೆಯಿಲ್ಲದೆ ಖರೀದಿಸುವ ವಾಹನದಿಂದಾಗುವ ಲಾಭಕ್ಕಿಂತ ನಷ್ಟವೇ ಹೆಚ್ಚು.

ಹೌದು, ಯಾವುದೋ ಒಂದು ವಾಹನ ಖರೀದಿಸುವ ಮುನ್ನ ಆ ವಾಹನ ಬಗೆಗೆ ಅರಿತುಕೊಳ್ಳುವುದು ತುಂಬಾ ಮುಖ್ಯ. ಇಲ್ಲಾವಾದ್ರೆ ಹೊಸ ವಾಹನ ಖರೀದಿಯು ಲಾಭಕ್ಕಿಂತ ನಷ್ಟವೇ ಹೆಚ್ಚುವುದಲ್ಲದೇ ಪ್ರಾಣಹಾನಿಗೂ ಕಾರಣವಾಗಬಹುದು ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಹೊಸ ಕಾರು ಖರೀದಿ ಮಾಡಿದ ಗ್ರಾಹಕರನೊಬ್ಬ ಕಾರಿನ ಚಾಲನೆ ಬಗೆಗೆ ಸರಿಯಾದ ಮಾಹಿತಿಯಿಲ್ಲದ ಪರಿಣಾಮ ಅಪಘಾತಕ್ಕೆ ಕಾರಣವಾಗಿದ್ದು, ಅದೃಷ್ಟವಶಾತ್ ಕಾರಿನಲ್ಲಿ ಸುರಕ್ಷಾ ಕ್ರಮಗಳು ಗ್ರಾಹಕನ ಜೀವ ಉಳಿಸಿವೆ.

ಇತ್ತೀಚೆಗೆ ನಾವು ನಿಮಗೊಂದು ಫೋಕ್ಸ್‌ವ್ಯಾಗನ್ ಪೊಲೊ ಕಾರಿನ ವಿತರಣೆ ವೇಳೆ ಆದ ಅಪಘಾತದ ವಿಡಿಯೋ ಬಗೆಗೆ ಮಾಹಿತಿ ಹಂಚಿಕೊಂಡಿದ್ದೇವು. ಇದೀಗ ಅಂತದ್ದೆ ಮತ್ತೊಂದು ಘಟನೆ ನಡೆದಿದೆ.

ಕಿಯಾ ಮೋಟಾರ್ಸ್ ಕಂಪನಿಯು ಕಳೆದ ಕೆಲ ದಿನಗಳ ಹಿಂದೆ ಬಿಡುಗಡೆ ಮಾಡಲಾದ ಕಾರ್ನಿವಾಲ್ ಎಂಪಿವಿ ಕಾರು ಸದ್ಯ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಎಂಪಿವಿ ಕಾರು ಖರೀದಿದಾರರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿದೆ.

ಲಾಕ್‌ಡೌನ್ ತೆರವುಗೊಂಡ ಬಳಿಕ ಹೊಸ ಕಾರಿನ ವಿತರಣೆ ಆರಂಭಿಸಿರುವ ಕಿಯಾ ಮೋಟಾರ್ಸ್ ಕಂಪನಿಯು ಹೊಸ ಸುರಕ್ಷಾ ಮಾರ್ಗಸೂಚಿಯೆಂತೆ ಕಾರು ವಿತರಣೆ ಮಾಡುತ್ತಿದ್ದು, ಎಂಪಿವಿ ಮಾದರಿಯಾದ ಕಾರ್ನಿವಾಲ್ ವಿತರಣೆ ನಂತರ ಕಾರು ಚಾಲನೆ ಮಾಡುತ್ತಿದ್ದ ಗ್ರಾಹಕರೊಬ್ಬರ ಯಡವಟ್ಟು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹೊಸ ಕಾರನ್ನು ವಿತರಣೆ ಮಾಡಿದ ನಂತರ ಚಾಲನೆ ಮುಂದಾದ ಗ್ರಾಹಕರನು ಶೋರೂಂ ಮುಂಭಾಗದ ಗೊಡೆಗೆ ಡಿಕ್ಕಿ ಹೊಡೆದಿದ್ದು, ಹೊಸ ಎಂಪಿವಿ ಕಾರಿನ ಮುಂಭಾವು ಸಂಪೂರ್ಣವಾಗಿ ಜಖಂಗೊಂಡಿದೆ.

ಅದೃಷ್ಟವಶಾತ್ ಕಾರಿನಲ್ಲಿ ಸುರಕ್ಷಾ ಸೌಲಭ್ಯಗಳು ಸರಿಯಾದ ಸಮಯಕ್ಕೆ ಕಾರ್ಯನಿರ್ವಹಿಸಿದ ಪರಿಣಾಮ ಗ್ರಾಹಕನು ಪ್ರಾಣಾಪಾಯದಿಂದ ಪಾರಾಗಿದ್ದು, ಗೋಡೆಗೆ ಡಿಕ್ಕಿ ಹೊಡೆದ ಕೆಲವೇ ಕ್ಷಣಗಳಲ್ಲಿ ಹೊಸ ಕಾರಿನ ಏರ್‌ಬ್ಯಾಗ್‌ಗಳು ತೆರೆದುಕೊಂಡಿವೆ.
MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಗ್ರಾಹಕನಿಗೆ ಕಾರು ಚಾಲನೆಯ ಅನುಭವ ಇದ್ದರೂ ಕೂಡಾ ಹೊಸ ಕಾರು ಆಟೋಮ್ಯಾಟಿಕ್ ಆವೃತ್ತಿಯಾಗಿರುವುದಲ್ಲದೆ ಶೋರೂಂನಿಂದ ಕಾರು ಹೊರತೆಗೆಯುವಾಗ ಮುಂಭಾಗದಲ್ಲಿದ್ದ ಕಡಿದಾದ ತಿರುವು ಕಾರು ನಿಯಂತ್ರಣಕ್ಕೆ ಸಿಕ್ಕಿಲ್ಲ.

ಎಂಪಿವಿ ಕಾರುಗಳಲ್ಲೇ ಅತಿ ಉದ್ದದ ವೀಲ್ಹ್‌ಬೆಸ್ ಹೊಂದಿರುವ ಕಾರ್ನಿವಾಲ್ ಕಾರು ಬರೋಬ್ಬರಿ 5 ಮೀಟರ್‌ಗಿಂತಲೂ ಹೆಚ್ಚು ಉದ್ದಳತೆ ಹೊಂದಿದ್ದು, ಕಡಿದಾದ ತಿರುವಿನಲ್ಲಿ ಅವಸರದ ಚಾಲನೆಗೆ ಮುಂದಾದ ಗ್ರಾಹಕನು ಮುಂಭಾದ ಗೋಡೆಗೆ ರಭಸವಾಗಿ ಗುದ್ದಿದ್ದಾನೆ.
MOST READ: ಲಾಕ್‌ಡೌನ್ ಸಂಕಷ್ಟ: ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಉದ್ಯಮ ಆರಂಭಿಸಿದ ಫೋಕ್ಸ್‌ವ್ಯಾಗನ್
ಶೋರೂಂ ಸಿಬ್ಬಂದಿಯ ಮಾರ್ಗದರ್ಶನದ ನಡುವೆಯೂ ಗೋಡೆ ಹೊಡೆದ ಕಾರು ಮುಂಭಾಗದಲ್ಲಿ ಸಂಪೂರ್ಣವಾಗಿ ಜಖಂಗೊಂಡಿದ್ದು, ಕಾರಿನ ಬಂಪರ್, ಗ್ರೀಲ್, ಬ್ಯಾನೆಟ್ ಮತ್ತು ಹೆಡ್‌ಲ್ಯಾಂಪ್ ಕ್ಲಸ್ಟರ್‌ಗೆ ಹೆಚ್ಚು ಹಾನಿಯಾಗಿದೆ.

ಹಾಗೆಯೇ ಕಾರಿನ ಒಳಭಾಗದಲ್ಲಿರುವ ಜೀವರಕ್ಷಕ ಏರ್‌ಬ್ಯಾಗ್ ಸೌಲಭ್ಯವನ್ನು ಸಹ ಇದೀಗ ಸಂಪೂರ್ಣವಾಗಿ ಬದಲಿಸುವ ಅವಶ್ಯಕತೆಯಿದ್ದು, ಹೊಸ ಕಾರನ್ನು ಸದ್ಯ ವರ್ಕ್ ಶಾಪ್‌ನಲ್ಲಿ ಮರು ಜೋಡಣೆ ಮಾಡಲಾಗುತ್ತಿದೆ.
MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ಈ ಘಟನೆ ಎಲ್ಲಿ ನಡೆದಿದೆ ಎನ್ನುವ ನಿಖರ ಮಾಹಿತಿ ಇಲ್ಲವಾದರೂ ವಿಡಿಯೋದಲ್ಲಿನ ಕಾರು ಶೋರೂಂ ಸಿಬ್ಬಂದಿಯು ತಮಿಳಿನಲ್ಲಿ ಮಾತನಾಡುವುದು ಸ್ಪಷ್ಟವಾಗಿದ್ದು, ಚೆನ್ನೈನಲ್ಲಿರುವ ಕಿಯಾ ಶೋರೂಂ ಒಂದರಲ್ಲಿ ನಡೆದಿರಬಹುದು ಎನ್ನಲಾಗಿದೆ.

ಅಪಘಾತಕ್ಕಿಡಾದ ಕಾರ್ನಿವಾಲ್ ಎಂಪಿವಿ ಕಾರು 8 ಸೀಟರ್ ಮಾದರಿಯಾಗಿದ್ದು, ಇದು ಎಕ್ಸ್‌ಶೋರೂಂ ಪ್ರಕಾರ ರೂ.25.15 ಲಕ್ಷ ಬೆಲೆ ಹೊಂದಿದೆ. ಕಾರ್ನಿವಾಲ್ ಕಾರು ಆರಂಭಿಕವಾಗಿ ಎಕ್ಸ್‌ಶೋರೂಂ ಪ್ರಕಾರ ರೂ.24.95 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ.33.95 ಲಕ್ಷ ಬೆಲೆ ಹೊಂದಿದೆ.

ಕಾರ್ನಿವಾಲ್ ಕಾರಿನಲ್ಲಿ ಸದ್ಯಕ್ಕೆ ಕೇವಲ ಒಂದೇ ಎಂಜಿನ್ ಆಯ್ಕೆಯನ್ನು ನೀಡಲಾಗಿದ್ದು, 2.2-ಲೀಟರ್ ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್ ಜೋಡಣೆ ಹೊಂದಿದೆ. ಪ್ರತಿ ವೆರಿಯೆಂಟ್‌ನಲ್ಲೂ 8-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ನೀಡಲಾಗಿದ್ದು, 200-ಬಿಎಚ್‌ಪಿ, 440-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.