ನಂಬರ್‌ ಪ್ಲೇಟ್‌ ಗೊಂದಲಕ್ಕೆ ತೆರೆ ಎಳೆದ ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರವು ಗುರುವಾರದಂದು ವಾಹನಗಳ ನಂಬರ್‌ ಪ್ಲೇಟ್‌ಗಳ ಬಗೆಗಿನ ಗೊಂದಲವನ್ನು ಹೋಗಲಾಡಿಸಲು ವಿವಿಧ ಬಣ್ಣದ ನಂಬರ್‌ ಪ್ಲೇಟ್‌ಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಬಿಡುಗಡೆಗೊಳಿಸಿದೆ.

ನಂಬರ್‌ ಪ್ಲೇಟ್‌ ಗೊಂದಲಕ್ಕೆ ತೆರೆ ಎಳೆದ ಕೇಂದ್ರ ಸರ್ಕಾರ

ಬ್ಯಾಟರಿಯಿಂದ ಚಾಲನೆಗೊಳ್ಳುವ ಎಲೆಕ್ಟ್ರಿಕ್ ವಾಹನಗಳು ಹಸಿರು ಬಣ್ಣದ ನಂಬರ್ ಪ್ಲೇಟ್ ಗಳನ್ನು ಹೊಂದಿರಲಿವೆ ಎಂದು ಕೇಂದ್ರ ಸರ್ಕಾರವು ಹೇಳಿದೆ. ಹಸಿರು ಬಣ್ಣದ ನಂಬರ್ ಪ್ಲೇಟ್ ಮೇಲೆ ಹಳದಿ ಬಣ್ಣದ ಸಂಖ್ಯೆಗಳಿರಲಿವೆ. ತಾತ್ಕಾಲಿಕವಾಗಿ ನೋಂದಣಿಯಾಗುವ ವಾಹನಗಳು ಹಳದಿ ಬಣ್ಣದ ನಂಬರ್ ಪ್ಲೇಟ್‌ಗಳನ್ನು ಹೊಂದಿರಲಿವೆ. ಈ ನಂಬರ್ ಪ್ಲೇಟ್ ಗಳ ಮೇಲೆ ಕೆಂಪು ಬಣ್ಣದ ಸಂಖ್ಯೆಗಳಿರಲಿವೆ.

ನಂಬರ್‌ ಪ್ಲೇಟ್‌ ಗೊಂದಲಕ್ಕೆ ತೆರೆ ಎಳೆದ ಕೇಂದ್ರ ಸರ್ಕಾರ

ಡೀಲರ್ ಗಳ ಬಳಿಯಿರುವ ವಾಹನಗಳು ಕೆಂಪು ಬಣ್ಣದ ನಂಬರ್ ಪ್ಲೇಟ್‌ಗಳನ್ನು ಹೊಂದುವುದು ಕಡ್ಡಾಯವಾಗಿರಲಿದೆ. ಈ ಕೆಂಪು ಬಣ್ಣದ ನಂಬರ್ ಪ್ಲೇಟ್ ಗಳ ಮೇಲೆ ಬಿಳಿ ಬಣ್ಣದ ಸಂಖ್ಯೆಗಳಿರಲಿವೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ನಂಬರ್‌ ಪ್ಲೇಟ್‌ ಗೊಂದಲಕ್ಕೆ ತೆರೆ ಎಳೆದ ಕೇಂದ್ರ ಸರ್ಕಾರ

ದೇಶದ ಹಲವು ರಾಜ್ಯಗಳಲ್ಲಿ ವಿವಿಧ ವಾಹನಗಳಲ್ಲಿ ಬಳಸುವ ನಂಬರ್‌ ಪ್ಲೇಟ್‌ಗಳ ಬಗ್ಗೆ ಗೊಂದಲ ಉಂಟಾಗಿತ್ತು. ಇದನ್ನು ಗಮನಿಸಿದ ಕೇಂದ್ರ ಸರ್ಕಾರವು ಈ ನಿಯಮವನ್ನು ಅನುಸರಿಸುವಂತೆ ಎಲ್ಲಾ ರಾಜ್ಯಗಳ ಸಾರಿಗೆ ಇಲಾಖೆಗಳಿಗೆ ನಿರ್ದೇಶನ ನೀಡಿದೆ.

ನಂಬರ್‌ ಪ್ಲೇಟ್‌ ಗೊಂದಲಕ್ಕೆ ತೆರೆ ಎಳೆದ ಕೇಂದ್ರ ಸರ್ಕಾರ

ನಂಬರ್‌ ಪ್ಲೇಟ್‌ಗಳಿಗೆ ಸಂಬಂಧಿಸಿದ ಈ ನಿಯಮಗಳನ್ನು ಹೊಸದಾಗಿ ರೂಪಿಸಿಲ್ಲ. ಬದಲಿಗೆ ಇರುವ ನಿಯಮಗಳನ್ನೇ ಪುನರುಚ್ಚರಿಸಲಾಗಿದೆ. ಇದರಿಂದಾಗಿ ಈ ನಿಯಮಗಳ ಬಗ್ಗೆ ಉಂಟಾಗಿದ್ದ ಗೊಂದಲ ನಿವಾರಣೆಯಾಗಲಿದೆ ಎಂದು ಕೇಂದ್ರ ಸರ್ಕಾರವು ಹೇಳಿದೆ.

MOST READ:ಒಂದೇ ದಿನದಲ್ಲಿ ಸಾವಿರಕ್ಕೂ ಹೆಚ್ಚು ಆಂಬ್ಯುಲೆನ್ಸ್ ಪಡೆದ ಜಗನ್ ಸರ್ಕಾರ

ನಂಬರ್‌ ಪ್ಲೇಟ್‌ ಗೊಂದಲಕ್ಕೆ ತೆರೆ ಎಳೆದ ಕೇಂದ್ರ ಸರ್ಕಾರ

ಇದರ ಜೊತೆಗೆ ಕೇಂದ್ರ ಸರ್ಕಾರವು ಹೊಸದಾಗಿ ರಿಜಿಸ್ಟ್ರೇಷನ್ ಮಾಡಲಾಗುವ ವಾಹನಗಳಲ್ಲಿ ಫಾಸ್ಟ್ ಟ್ಯಾಗ್ ಗಳನ್ನು ಅಳವಡಿಸುವುದನ್ನು ಕಡ್ಡಾಯಗೊಳಿಸಿದೆ. ಈಗ ಹೊಸದಾಗಿ ಖರೀದಿಸಲಾಗುವ ವಾಹನಗಳ ರಿಜಿಸ್ಟ್ರೇಷನ್ ನಂಬರ್ ನೊಂದಿಗೆ ಫಾಸ್ಟ್ ಟ್ಯಾಗ್ ಗಳನ್ನು ನೀಡಲಾಗುವುದು.

ನಂಬರ್‌ ಪ್ಲೇಟ್‌ ಗೊಂದಲಕ್ಕೆ ತೆರೆ ಎಳೆದ ಕೇಂದ್ರ ಸರ್ಕಾರ

ಹೊಸ ವಾಹನಗಳಲ್ಲಿ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಗಳನ್ನು ಅಳವಡಿಸುವುದನ್ನು ಕೇಂದ್ರ ಸರ್ಕಾರವು ಕಡ್ಡಾಯಗೊಳಿಸಿದೆ. ಎಲ್ಲಾ ರೀತಿಯ ಹೊಸ ವಾಹನಗಳಲ್ಲಿ ಕ್ರೋಮ್ ಸ್ಟಿಕ್ಕರ್‌ ಹೊಂದಿರುವ ನಂಬರ್ ಪ್ಲೇಟ್ ಗಳನ್ನು ಅಳವಡಿಸಲಾಗುತ್ತಿದೆ. ವಾಹನಗಳನ್ನು ಕದ್ದವರು ಈ ನಂಬರ್ ಪ್ಲೇಟ್ ಗಳನ್ನು ಬದಲಿಸಲು ಸಾಧ್ಯವಿಲ್ಲ.

Most Read Articles

Kannada
English summary
Central Government clarifies about color of number plates for different vehicles. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X