Just In
Don't Miss!
- News
ಹುಣಸೋಡು ಜಿಲೆಟಿನ್ ಸ್ಪೋಟ: ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ
- Sports
ಯುವರಾಜ್ ಸಿಂಗ್ ಕೋಚಿಂಗ್ ಬಹಳ ಉಪಯೋಗಕ್ಕೆ ಬಂತು: ಗಿಲ್
- Lifestyle
ಕೊಲೆಸ್ಟ್ರಾಲ್ ಹೆಚ್ಚಾಗಿದೆಯೇ? ಈ ಆಹಾರ ಸೇವಿಸಿ
- Education
RITES Limited Recruitment 2021: ವಿವಿಧ 9 ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ದುಬಾರಿ ವಿವಾಹ; ವರುಣ್ ಧವನ್ ಮದುವೆ ನಡೆಯುತ್ತಿರುವ ಐಷಾರಾಮಿ ಹೋಟೆಲ್ ಗೆ ಇಷ್ಟೊಂದು ಖರ್ಚು ಮಾಡುತ್ತಿದ್ದಾರಾ?
- Finance
ಬಜೆಟ್ 2021: ಜ. 23ರಂದು ಹಲ್ವಾ ಕಾರ್ಯಕ್ರಮ- ಇದೇನು, ಎತ್ತ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ರಾಷ್ಟ್ರ ರಾಜಧಾನಿಯಲ್ಲಿ ಹೊಸ ಶೋರೂಂ ತೆರೆಯಲು ಮುಂದಾದ ಸಿಟ್ರನ್
ಸಿಟ್ರನ್ ಕಂಪನಿಯು ಮುಂದಿನ ವರ್ಷ ಭಾರತದಲ್ಲಿ ತನ್ನ ಕಾರುಗಳನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಕಂಪನಿಯು ಶೋರೂಂಗಳನ್ನು ತೆರೆಯಲು ಮುಂದಾಗಿದೆ. ಕೆಲ ದಿನಗಳ ಹಿಂದಷ್ಟೇ ಸಿಟ್ರನ್ ಕಂಪನಿಯು ಅಹಮದಾಬಾದ್‌ನ ಎಸ್‌ಜಿ ಹೈ-ವೇನಲ್ಲಿ ಹೊಸ ಶೋರೂಂ ಅನ್ನು ತೆರೆದಿತ್ತು.

ಈಗ ಕಂಪನಿಯು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶೋರೂಂ ತೆರೆಯಲು ಮುಂದಾಗಿದೆ. ಈ ಹೊಸ ಶೋರೂಂ ಅನ್ನು ದೆಹಲಿಯ ನಾರೈನಾ ಪ್ರದೇಶದಲ್ಲಿ ತೆರೆಯಲಾಗುತ್ತದೆ. ಸಿಟ್ರನ್ ತನ್ನ ಮೊದಲ ಕಾರನ್ನು ಮುಂದಿನ ವರ್ಷ ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ಇದಕ್ಕಾಗಿ ಕಂಪನಿಯು ತನ್ನ ಡೀಲರ್ ನೆಟ್ ವರ್ಕ್ ಅನ್ನು ವಿಸ್ತರಿಸುತ್ತಿದೆ.

ಈಗ ಆರಂಭವಾಗುವ ಶೋರೂಂ ದೆಹಲಿಯ ಪ್ಯಾರಿಸ್ ಮೊಟೊಕಾರ್ಪ್ ನಾರೈನಾ ಇಂಡಸ್ಟ್ರಿಯಲ್ ಏರಿಯಾ ಹಂತ 1ರಲ್ಲಿರಲಿದೆ. ಈ ಶೋರೂಂ ಇನ್ನೂ ನಿರ್ಮಾಣ ಹಂತದಲ್ಲಿದೆ. ಈ ಶೋರೂಂನ ಹೊರಗೆ ಕಂಪನಿಯ ಮಂಡಳಿಯು, ಸಿಟ್ರನ್ ಕಾರು ಶೀಘ್ರದಲ್ಲೇ ನಿಮ್ಮ ನಗರಕ್ಕೆ ಬರಲಿದೆ ಎಂಬ ಬೋರ್ಡ್ ಹಾಕಿದೆ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಸಿಟ್ರನ್ ಕಂಪನಿಯು ಸಿ 5 ಏರ್‌ಕ್ರಾಸ್ ಮೂಲಕ ಭಾರತಕ್ಕೆ ಪ್ರವೇಶಿಸಲಿದೆ. ಕಂಪನಿಯು 2021 - 2023ರ ನಡುವೆ ನಾಲ್ಕು ಮಾದರಿಗಳನ್ನು ಬಿಡುಗಡೆಗೊಳಿಸಲಿದೆ. ಕಂಪನಿಯ ಮೊದಲ ಕಾರಿನ ಹೊರತಾಗಿ ಇತರ ಕಾರುಗಳನ್ನು ಪೆಟ್ರೋಲ್ ಎಂಜಿನ್‌ಗಳಲ್ಲಿ ಬಿಡುಗಡೆಗೊಳಿಸಲಾಗುವುದು.

ಇವುಗಳಲ್ಲಿ ಸಿ 3 ಸ್ಪೋರ್ಟಿ ಕ್ರಾಸ್‌ಒವರ್ ಪ್ರಮುಖ ಮಾದರಿಯಾಗಿರಲಿದೆ. ಸಿಟ್ರನ್ ಕಂಪನಿಯು ದೇಶಿಯ ಮಾರುಕಟ್ಟೆಗಾಗಿ 7 ಸೀಟುಗಳ ಬರ್ಲಿಂಗೊ ಎಂಪಿವಿ ಮಾದರಿಯನ್ನು ನಿರಂತರವಾಗಿ ಪರೀಕ್ಷಿಸುತ್ತಿದೆ. ಇದರ ಜೊತೆಗೆ ಡಿ 7 ಕಾರನ್ನು ಸಹ ಪರೀಕ್ಷಿಸುತ್ತಿದೆ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಕಂಪನಿಯು ಈ ವರ್ಷದ ಆರಂಭದಲ್ಲಿ ನಡೆದ 2020ರ ಆಟೋ ಎಕ್ಸ್‌ಪೋದಲ್ಲಿ ಹಲವಾರು ಕಾರುಗಳನ್ನು ಪರಿಚಯಿಸಿತ್ತು. ಸಿ 5 ಏರ್‌ಕ್ರಾಸ್ ಪ್ರೀಮಿಯಂ ಎಸ್'ಯುವಿಯನ್ನು ಡೀಸೆಲ್ ಎಂಜಿನ್ ನೊಂದಿಗೆ ಬಿಡುಗಡೆಗೊಳಿಸಲಾಗುವುದು.

ಆದರೆ ಭವಿಷ್ಯದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಮಾದರಿಗಳನ್ನು ಪೆಟ್ರೋಲ್ ಎಂಜಿನ್‌ಗಳಲ್ಲಿ ಮಾತ್ರ ಬಿಡುಗಡೆಗೊಳಿಸಲಾಗುವುದು. ಸದ್ಯಕ್ಕೆ ಸಿಟ್ರನ್ ಕಂಪನಿಯು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ವಾಹನಗಳನ್ನು ಮಾರಾಟ ಮಾಡುತ್ತಿದೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಒಂದೇ ಆಗಿರುವ ಕಾರಣಕ್ಕೆ ಪೆಟ್ರೋಲ್ ಮಾದರಿಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಕಂಪನಿಯ ಅಧಿಕಾರಿಯೊಬ್ಬರು, ದೇಶದಲ್ಲಿ ಡೀಸೆಲ್ ವಾಹನಗಳಿಗೆ ಬೇಡಿಕೆಯು ಕಡಿಮೆಯಾಗುತ್ತಿದೆ. ಹತ್ತು ವರ್ಷಗಳ ಹಿಂದೆ ಪೆಟ್ರೋಲ್ - ಡೀಸೆಲ್ ವಾಹನಗಳ ಮಾರಾಟ ಅನುಪಾತವು 55:45 ಆಗಿತ್ತು ಎಂದು ಹೇಳಿದರು.

ಸಿ 5 ಏರ್ ಕ್ರಾಸ್ ಕಾರನ್ನು ಕಂಪನಿಯು ಭಾರತದಲ್ಲಿ ಸಿಕೆಡಿ ರೂಪದಲ್ಲಿ ಮಾರಾಟ ಮಾಡಲಿದೆ. ಈ ಕಾರಿನಲ್ಲಿ ಅಳವಡಿಸಿರುವ 2.0-ಲೀಟರಿನ ಡೀಸೆಲ್ ಎಂಜಿನ್ 180 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ. ಈ ಎಂಜಿನ್'ನೊಂದಿಗೆ 8-ಸ್ಪೀಡಿನ ಟಾರ್ಕ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಜೋಡಿಸಲಾಗಿದೆ. ಈ ಬಗ್ಗೆ ಟೀಮ್ ಬಿಹೆಚ್‌ಪಿ ವರದಿ ಮಾಡಿದೆ.