ಅತಿ ಕಡಿಮೆ ಬೆಲೆಯ ವೆಂಟಿಲೆಟರ್‌ಗಳ ಉತ್ಪಾದನೆಗೆ ಚಾಲನೆ ನೀಡಿದ ಮಹೀಂದ್ರಾ

ಕರೋನಾ ವೈರಸ್ ತೀವ್ರತೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿದ್ದು, ಈ ವೇಳೆ ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಿರುವ ಆಟೋ ಉತ್ಪಾದನಾ ಕಂಪನಿಗಳು ವೈದ್ಯಕೀಯ ಉಪಕರಣ ಉತ್ಪಾದನೆನೊಂದಿಗೆ ವೈರಸ್ ವಿರುದ್ಧದ ಹೋರಾಟಕ್ಕೆ ಸರ್ಕಾರದ ಜೊತೆ ಕೈಜೋಡಿಸಿವೆ.

ಅತಿ ಕಡಿಮೆ ಬೆಲೆಯ ವೆಂಟಿಲೆಟರ್‌ಗಳ ಉತ್ಪಾದನೆಗೆ ಚಾಲನೆ ನೀಡಿದ ಮಹೀಂದ್ರಾ

ದೇಶದ ಪ್ರಮುಖ ಕಾರು ಉತ್ಪಾದನಾ ಕಂಪನಿಗಳಲ್ಲಿ ಒಂದಾಗಿರುವ ಮಹೀಂದ್ರಾ ಕೂಡಾ ಇದೀಗ ಕಾರು ಉತ್ಪಾದನೆ ಸ್ಥಗಿತಗೊಂಡಿರುವ ಹಿನ್ನಲೆಯಲ್ಲಿ ವೆಂಟಿಲೆಟರ್‌ಗಳ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದ್ದು, ಆಧುನಿಕ ತಂತ್ರಜ್ಞಾನ ಪ್ರೇರಣೆಯ ಮೂರು ವೆಂಟಿಲೆಟರ್ ಮಾದರಿಗಳ ಪೋಟೋಟೈಪ್ ಮಾದರಿಗಳನ್ನು ಕೇವಲ 48 ಗಂಟೆಗಳಲ್ಲಿ ಅಭಿವೃದ್ದಿಗೊಳಿಸಿ ಬಹಿರಂಗಪಡಿಸಿದೆ. ಅತ್ಯುತ್ತಮ ಗುಣಮಟ್ಟದೊಂದಿಗೆ ಬೆಲೆಯಲ್ಲೂ ಗಮನಸೆಳೆಯಲಿದ್ದು, ಬೆಲೆ ಮಾಹಿತಿಯನ್ನು ಕೂಡಾ ಹಂಚಿಕೊಳ್ಳಲಾಗಿದೆ.

ಅತಿ ಕಡಿಮೆ ಬೆಲೆಯ ವೆಂಟಿಲೆಟರ್‌ಗಳ ಉತ್ಪಾದನೆಗೆ ಚಾಲನೆ ನೀಡಿದ ಮಹೀಂದ್ರಾ

ಸಾಮಾನ್ಯವಾಗಿ ಒಂದು ವೆಂಟಿಲೆಟರ್ ಬೆಲೆಯು ಪ್ರಸ್ತುತ ಮಾರುಕಟ್ಟೆಯಲ್ಲಿ ರೂ.5 ಲಕ್ಷದಿಂದ ರೂ.7 ಲಕ್ಷ ಬೆಲೆ ಹೊಂದಿದ್ದು, ದೇಶದ ಬಹುತೇಕ ಆಸ್ಪತ್ರೆಗಳಲ್ಲಿ ವೆಂಟಿಲೆಟರ್ ಸೌಲಭ್ಯವು ಸೀಮಿತ ಸಂಖ್ಯೆಯಲ್ಲಿದೆ.

ಅತಿ ಕಡಿಮೆ ಬೆಲೆಯ ವೆಂಟಿಲೆಟರ್‌ಗಳ ಉತ್ಪಾದನೆಗೆ ಚಾಲನೆ ನೀಡಿದ ಮಹೀಂದ್ರಾ

ಆದರೆ ಮಹೀಂದ್ರಾ ಆ್ಯಂಡ್ ಮಹೀಂದ್ರಾ ಕಂಪನಿಯ ಅಧ್ಯಕ್ಷರಾಗಿರುವ ಆನಂದ್ ಮಹೀಂದ್ರಾ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಕೇವಲ 48 ಗಂಟೆಗಳಲ್ಲಿ ಸಿದ್ದಗೊಂಡಿರುವ ಈ ಹೊಸ ವೆಂಟಿಲೆಟರ್‌ಗಳ ಬೆಲೆಯು ಕೇವಲ ರೂ.7,500ಕ್ಕಿಂತಲೂ ಕಡಿಮೆ ಬೆಲೆ ಪಡೆದುಕೊಂಡಿವೆ ಎಂದಿದ್ದಾರೆ.

ಅತಿ ಕಡಿಮೆ ಬೆಲೆಯ ವೆಂಟಿಲೆಟರ್‌ಗಳ ಉತ್ಪಾದನೆಗೆ ಚಾಲನೆ ನೀಡಿದ ಮಹೀಂದ್ರಾ

ಮಹೀಂದ್ರಾ ಉತ್ಪಾದನೆ ಮಾಡುತ್ತಿರುವ ವೆಂಟಿಲೆಟರ್‌ಗಳು ಗಾತ್ರದಲ್ಲಿ ದೀರ್ಘ ಬಾಳಕೆಯ ವೆಂಟಿಲೆಟರ್‌ಗಳಿಂತಲೂ ತುಸು ಕಡಿಮೆ ಸಾಮಾರ್ಥ್ಯವನ್ನು ಹೊಂದಿರಲಿದ್ದು, ತುರ್ತು ಸಂದರ್ಭದಲ್ಲಿ ಇವುಗಳು ಸಾಕಷ್ಟು ಅನುಕೂಲಕರವಾಗಲಿವೆ. ಜೊತೆಗೆ ಕೈಗೆಟುಕುವ ಬೆಲೆಗೆ ಲಭ್ಯವಾಗಲಿರುವ ಈ ವೆಂಟಿಲೆಟರ್‌ಗಳನ್ನು ಮನೆಗಳಲ್ಲಿರುವ ದೀರ್ಘ ಕಾಲದ ರೋಗಿಗಳ ಆರೈಕೆಗೂ ಕೂಡಾ ಬಳಕೆ ಮಾಡಬಹುದಾಗಿದ್ದು, ಕೇವಲ 5ರಿಂದ 7 ಕೆ.ಜಿ ತೂಕವನ್ನು ಹೊಂದಿರಲಿವೆ.

ಅತಿ ಕಡಿಮೆ ಬೆಲೆಯ ವೆಂಟಿಲೆಟರ್‌ಗಳ ಉತ್ಪಾದನೆಗೆ ಚಾಲನೆ ನೀಡಿದ ಮಹೀಂದ್ರಾ

ಪೋಟೋಟೈಪ್ ಮಾದರಿಗಳನ್ನು ಸದ್ಯ ಅನಾವರಣಗೊಳಿಸಿರುವ ಮಹೀಂದ್ರಾ ಕಂಪನಿಯು ಶೀಘ್ರದಲ್ಲೇ ಸರ್ಕಾರದಿಂದ ಅನುಮೊದನೆ ತೆಗೆದುಕೊಳ್ಳಲಿದ್ದು, ಅಗತ್ಯವಿರುವ ರಾಜ್ಯಗಳಿಗೆ ಪೂರೈಕೆಯನ್ನು ಆರಂಭಿಸಲಿದೆ.

ಅತಿ ಕಡಿಮೆ ಬೆಲೆಯ ವೆಂಟಿಲೆಟರ್‌ಗಳ ಉತ್ಪಾದನೆಗೆ ಚಾಲನೆ ನೀಡಿದ ಮಹೀಂದ್ರಾ

ಇನ್ನು ಚೀನಾದಿಂದ ಶುರುವಾದ ಕರೋನಾ ವೈರಸ್ ದಾಳಿಯು ಇದೀಗ ಇಡೀ ವಿಶ್ವವನ್ನೇ ವ್ಯಾಪಿಸಿದ್ದು, ಇದುವರೆಗೆ 5 ಲಕ್ಷ ಜನರಲ್ಲಿ ಸೋಂಕು ಕಾಣಿಸಿಕೊಂಡಿರುವುದಲ್ಲದೆ 21 ಸಾವಿರ ಜನ ಪ್ರಾಣಕಳೆದುಕೊಂಡಿದ್ದಾರೆ. 5 ಲಕ್ಷ ಜನರಲ್ಲಿ ಇದುವರೆಗೆ ಸುಮಾರು 1.17 ಲಕ್ಷದಷ್ಟು ಜನ ಗುಣಮುಖರಾಗಿದ್ದು, ಶೇ.5 ರಷ್ಟು ಸೋಂಕು ಪಿಡಿತರ ಸ್ಥಿತಿ ಶೋಚನೀಯವಾಗಿದೆ.

ಅತಿ ಕಡಿಮೆ ಬೆಲೆಯ ವೆಂಟಿಲೆಟರ್‌ಗಳ ಉತ್ಪಾದನೆಗೆ ಚಾಲನೆ ನೀಡಿದ ಮಹೀಂದ್ರಾ

ವೈರಸ್ ತಡೆಗಾಗಿ ಈಗಾಗಲೇ ವಿಶ್ವದ ಎಲ್ಲಾ ರಾಷ್ಟ್ರಗಳು ಒಗ್ಗಟ್ಟಿನಿಂದ ಹೋರಾಟ ನಡೆಸುತ್ತಿದ್ದು, ವೈದ್ಯಕೀಯ ಉಪಕರಣಗಳ ಕೊರತೆ ಎದ್ದುಕಾಣುತ್ತಿದೆ. ಹೀಗಾಗಿ ಆಟೋ ಉತ್ಪಾದನಾ ಘಟಕಗಳಲ್ಲಿ ಇದೀಗ ವೈದಕೀಯ ಉಪಕರಣಗಳ ಉತ್ಪಾದನೆಗೆ ನಿರ್ಧರಿಸಲಾಗಿದ್ದು, ವೆಂಟಿಲೆಟರ್ ಮತ್ತು ಮಾಸ್ಕ್‌ ಉತ್ಪಾದನೆ ಪ್ರಮುಖ ಕಾರು ಕಂಪನಿಗಳು ಒಪ್ಪಿಗೆ ಸೂಚಿಸಿವೆ.

ಅತಿ ಕಡಿಮೆ ಬೆಲೆಯ ವೆಂಟಿಲೆಟರ್‌ಗಳ ಉತ್ಪಾದನೆಗೆ ಚಾಲನೆ ನೀಡಿದ ಮಹೀಂದ್ರಾ

ದಕ್ಷಿಣ ಕೊರಿಯಾದ ಕಿಯಾ ಮೋಟಾರ್ಸ್ ಕೂಡಾ ಮಹತ್ವದ ನಿರ್ಧಾರವೊಂದರನ್ನು ಪ್ರಕಟಿಸಿದ್ದು, ಶೀಘ್ರದಲ್ಲೇ 1 ಮಿಲಿಯನ್(10 ಲಕ್ಷ) ಫೇಸ್ ಮಾಸ್ಕ್‌ಗಳನ್ನು ಅಭಿವೃದ್ದಿಪಡಿಸಿ ಕೊಡುವುದಾಗಿ ಹೇಳಿಕೊಂಡಿದೆ.

Most Read Articles

Kannada
English summary
Mahindra Produces First Set Of Ventilator Prototypes Within 48 Hours. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X