ಹೊಸ ಹೈಬ್ರಿಡ್ ಸೂಪರ್ ಕಾರನ್ನು ಅನಾವರಣಗೊಳಿಸಿದ ಫೆರಾರಿ

ಫೆರಾರಿ ಕಂಪನಿಯು ತನ್ನ ವಿನ್ಯಾಸ, ಕಾರ್ಯಕ್ಷಮತೆ ಹಾಗೂ ತಂತ್ರಜ್ಞಾನಕ್ಕಾಗಿ ವಿಶ್ವಾದ್ಯಂತ ಅಪಾರ ಅಭಿಮಾನಿ ಬಳಗವನ್ನು ಹೊಂದಿದೆ. ಫೆರಾರಿ ಸೂಪರ್ ಕಾರುಗಳು ವಿಶ್ವದ ಮಿಲಿಯನೇರ್‌ಗಳ ನೆಚ್ಚಿನ ಕಾರುಗಳಾಗಿವೆ.

ಹೊಸ ಹೈಬ್ರಿಡ್ ಸೂಪರ್ ಕಾರನ್ನು ಅನಾವರಣಗೊಳಿಸಿದ ಫೆರಾರಿ

ಫೆರಾರಿ ಕಂಪನಿಯು ತನ್ನ ಕಾರು ಪ್ರಿಯರಿಗಾಗಿ ಓಪನ್ ಹಾಗೂ ಕ್ಲೋಸ್ ರೂಫ್ ಗಳನ್ನು ಹೊಂದಿರುವ ಹೊಸ ಹೈ-ಪರ್ಫಾಮೆನ್ಸ್ ಕನ್ವರ್ಟಿಬಲ್ ಕಾರು ಮಾದರಿಯನ್ನು ಅನಾವರಣಗೊಳಿಸಿದೆ. ಫೆರಾರಿ ಎಸ್‌ಎಫ್ -90 ಸ್ಪೈಡರ್ ಎಂಬ ಹೆಸರಿನ ಈ ಕಾರಿನಲ್ಲಿರುವ ಎಂಜಿನ್ 1,000 ಬಿಹೆಚ್‌ಪಿ ಪವರ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಹೊಸ ಹೈಬ್ರಿಡ್ ಸೂಪರ್ ಕಾರನ್ನು ಅನಾವರಣಗೊಳಿಸಿದ ಫೆರಾರಿ

ಈ ಕಾರನ್ನು ಫೆರಾರಿ ಕಂಪನಿಯ ಕನ್ವರ್ಟಿಬಲ್ ಕಾರುಗಳಲ್ಲಿ ಹೆಚ್ಚು ಎಫಿಶಿಯಂಟ್ ಕಾರು ಎಂದು ಹೇಳಲಾಗಿದೆ. ಫೆರಾರಿ ಕಾರ್ ರೇಸಿಂಗ್ ತಂಡದ 90ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಫೆರಾರಿ ಎಸ್‌ಎಫ್ -90 ಸ್ಪೈಡರ್ ಕಾರನ್ನು ಅನಾವರಣಗೊಳಿಸಲಾಗಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಹೊಸ ಹೈಬ್ರಿಡ್ ಸೂಪರ್ ಕಾರನ್ನು ಅನಾವರಣಗೊಳಿಸಿದ ಫೆರಾರಿ

ಈ ಕಾರು ಪೆಟ್ರೋಲ್ ಎಂಜಿನ್ ಹಾಗೂ ಎಲೆಕ್ಟ್ರಿಕ್ ಮೋಟರ್‌ಗಳೊಂದಿಗೆ ಕಾರ್ಯನಿರ್ವಹಿಸುವ ಹೈಬ್ರಿಡ್ ಟೆಕ್ನಾಲಜಿಯನ್ನು ಹೊಂದಿದೆ. ಈ ಕಾರಿನಲ್ಲಿ ಫೆರಾರಿ ಕಂಪನಿಯ ವಿ 8 ಸಿಲಿಂಡರ್ ಸಿಸ್ಟಂ ಹೊಂದಿರುವ 4.0 ಲೀಟರಿನ ಟ್ವಿನ್ ಟರ್ಬೊ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ.

ಹೊಸ ಹೈಬ್ರಿಡ್ ಸೂಪರ್ ಕಾರನ್ನು ಅನಾವರಣಗೊಳಿಸಿದ ಫೆರಾರಿ

ಈ ಎಂಜಿನ್ 780 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ. ಈ ಕಾರಿನಲ್ಲಿರುವ ಎಲ್ಲಾ ಮೂರು ಎಲೆಕ್ಟ್ರಿಕ್ ಮೋಟರ್‌ಗಳು ಒಟ್ಟಿಗೆ ಕಾರ್ಯನಿರ್ವಹಿಸುತ್ತವೆ. ಈ ಎಲೆಕ್ಟ್ರಿಕ್ ಮೋಟರ್‌ಗಳು ಒಟ್ಟಾಗಿ 220 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತವೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಹೊಸ ಹೈಬ್ರಿಡ್ ಸೂಪರ್ ಕಾರನ್ನು ಅನಾವರಣಗೊಳಿಸಿದ ಫೆರಾರಿ

ಇದರಿಂದಾಗಿ ಪೆಟ್ರೋಲ್ ಎಂಜಿನ್ ಹಾಗೂ ಎಲೆಕ್ಟ್ರಿಕ್ ಮೋಟರ್‌ಗಳು ಒಟ್ಟಾರೆಯಾಗಿ 1,000 ಬಿಹೆಚ್‌ಪಿ ಪವರ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿವೆ. ಈ ಎಂಜಿನ್ ಎಲ್ಲಾ ನಾಲ್ಕು ವ್ಹೀಲ್ ಗಳಿಗೆ 8-ಸ್ಪೀಡಿನ ಡ್ಯುಯಲ್ ಕ್ಲಚ್ ಗೇರ್ ಬಾಕ್ಸ್ ಮೂಲಕ ಪವರ್ ಕಳುಹಿಸುತ್ತದೆ.

ಹೊಸ ಹೈಬ್ರಿಡ್ ಸೂಪರ್ ಕಾರನ್ನು ಅನಾವರಣಗೊಳಿಸಿದ ಫೆರಾರಿ

ಹೊಸ ಫೆರಾರಿ ಎಸ್‌ಎಫ್ -90 ಸ್ಪೈಡರ್ ಕೇವಲ 2.5 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ. ಈ ಕಾರಿನ ಟಾಪ್ ಸ್ಪೀಡ್ ಗಂಟೆಗೆ 340 ಕಿ.ಮೀಗಳಾಗಿದೆ. ಪೆಟ್ರೋಲ್ ಎಂಜಿನ್ ಅನ್ನು ಆಫ್ ಮಾಡಿ, ಕಾರನ್ನು ಎಲೆಕ್ಟ್ರಿಕ್ ಮೋಟರ್'ಗಳ ಸಹಾಯದಿಂದ ಗಂಟೆಗೆ 30 ಕಿ.ಮೀ ವೇಗದಲ್ಲಿ ಚಾಲನೆ ಮಾಡಬಹುದು.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಹೊಸ ಹೈಬ್ರಿಡ್ ಸೂಪರ್ ಕಾರನ್ನು ಅನಾವರಣಗೊಳಿಸಿದ ಫೆರಾರಿ

ಹೊಸ ಫೆರಾರಿ ಎಸ್‌ಎಫ್ -90 ಸ್ಪೈಡರ್ ಕಾರಿನಲ್ಲಿ ಓಪನ್ ಮಾಡುವ ಹಾಗೂ ಕ್ಲೋಸ್ ಮಾಡುವ ಫೀಚರ್ ಹೊಂದಿರುವ ಹಾರ್ಡ್ ಟಾಪ್ ನೀಡಲಾಗಿದೆ.ರೂಫ್ ಸಿಸ್ಟಂ 14 ಸೆಕೆಂಡುಗಳಲ್ಲಿ ಓಪನ್ ಆಗುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಲಾಗಿದೆ.

ಹೊಸ ಹೈಬ್ರಿಡ್ ಸೂಪರ್ ಕಾರನ್ನು ಅನಾವರಣಗೊಳಿಸಿದ ಫೆರಾರಿ

ಈ ಸಿಸ್ಟಂ, ರೂಫ್ ಅನ್ನು ಓಪನ್ ಮಾಡಲು ಹಾಗೂ ಕ್ಲೋಸ್ ಮಾಡಲು ಸಾಧ್ಯವಾಗುವಂತೆ ಹಿಂಭಾಗದ ವಿಂಡೋಗಳನ್ನು ಮೇಲಕ್ಕೆರಿಸುವ ಸೌಲಭ್ಯವನ್ನೂ ಸಹ ಹೊಂದಿದೆ. ಈ ಹೊಸ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗದೇ ಇದ್ದರೂ, ಈ ಕಾರು ಭಾರತಕ್ಕೂ ಕಾಲಿಡುವ ನಿರೀಕ್ಷೆಗಳಿವೆ.

Most Read Articles

Kannada
English summary
Ferrari unveils SF90 spider hybrid super car. Read in Kannada.
Story first published: Saturday, November 14, 2020, 18:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X