ಸದ್ಯದಲ್ಲೇ ಸೇವೆ ಆರಂಭಿಸಲಿವೆ ಹಾರುವ ಕಾರುಗಳು

ಭಾರತದ ರಸ್ತೆಗಳಲ್ಲಿ ಸಾರ್ವಜನಿಕ ಸಾರಿಗೆಗಳಿಗಿಂತ ಖಾಸಗಿ ವಾಹನಗಳೇ ಹೆಚ್ಚಿನ ಸಂಖ್ಯೆಯಲ್ಲಿವೆ. ಮುಂಬರುವ ದಿನಗಳಲ್ಲಿ ಖಾಸಗಿ ವಾಹನಗಳಿಗಿಂತ ಬಾಡಿಗೆ ಕಾರುಗಳ ಸೇವೆಯನ್ನು ನೀಡುವ ಕಂಪನಿಗಳ ಸಂಖ್ಯೆ ಹೆಚ್ಚಾಗಲಿದೆ ಎಂದು ವರದಿಗಳಾಗಿವೆ.

ಸದ್ಯದಲ್ಲೇ ಸೇವೆ ಆರಂಭಿಸಲಿವೆ ಹಾರುವ ಕಾರುಗಳು

ವರದಿಗಳ ಪ್ರಕಾರ, ಡಚ್ ಮೂಲದ ಪಾಲ್ ವಿ ಕಂಪನಿಯು ಹಾರಾಡುವ ಕಾರುಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿದೆ. ಪಾಲ್ ವಿ ಕಂಪನಿಯು ಹಾರಾಡುವ ಕಾರುಗಳನ್ನು ಅಭಿವೃದ್ಧಿಪಡಿಸುತ್ತಿದೆ.

ಸದ್ಯದಲ್ಲೇ ಸೇವೆ ಆರಂಭಿಸಲಿವೆ ಹಾರುವ ಕಾರುಗಳು

ಪಾಲ್ ವಿ ಪ್ರಪಂಚದಲ್ಲಿಯೇ ಮೊದಲ ಬಾರಿಗೆ ಹಾರಾಡುವ ಕಾರುಗಳನ್ನು ಅಭಿವೃದ್ಧಿಪಡಿಸುತ್ತಿದೆ. ಶೀಘ್ರದಲ್ಲಿಯೇ ಪಾಲ್ ವಿ ಕಂಪನಿಯ ಕಾರುಗಳು ಪ್ರಪಂಚದ ಬಹುತೇಕ ಎಲ್ಲಾ ದೇಶಗಳ ಆಗಸದಲ್ಲಿ ಹಾರಾಡಲಿವೆ. ಇದಕ್ಕಾಗಿ ಹಲವಾರು ದೇಶಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ.

ಸದ್ಯದಲ್ಲೇ ಸೇವೆ ಆರಂಭಿಸಲಿವೆ ಹಾರುವ ಕಾರುಗಳು

ಇತ್ತೀಚಿಗೆ ಪಾಲ್ ವಿ ಕಂಪನಿಯು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೊಂದಿಗೆ ಹಾರಾಡುವ ಕಾರುಗಳನ್ನು ಬಿಡುಗಡೆಗೊಳಿಸುವ ಕುರಿತು ಮಾತುಕತೆ ನಡೆಸಿತ್ತು. ಈ ಮಾತುಕತೆಯು ಯಶಸ್ವಿಯಾದರೆ ಶೀಘ್ರದಲ್ಲಿಯೇ ಹಾರಾಡುವ ಕಾರುಗಳನ್ನು ಬಾಡಿಗೆಗೆ ನೀಡಲಾಗುವುದು.

ಸದ್ಯದಲ್ಲೇ ಸೇವೆ ಆರಂಭಿಸಲಿವೆ ಹಾರುವ ಕಾರುಗಳು

ಮೊದಲಿಗೆ ಈ ಸೇವೆಯನ್ನು ಭಾರತದ ಪ್ರಮುಖ ನಗರಗಳಲ್ಲಿ ನೀಡಲಾಗುವುದು. ನಂತರದ ದಿನಗಳಲ್ಲಿ ಹಂತ ಹಂತವಾಗಿ ಈ ಸೇವೆಯನ್ನು ಇತರ ನಗರಗಳಿಗೆ ವಿಸ್ತರಿಸಲಾಗುವುದು. 2012ರಲ್ಲಿ ಪಾಲ್ ವಿ ಈ ಹಾರಾಡುವ ಕಾರುಗಳನ್ನು ಕಾನ್ಸೆಪ್ಟ್ ಮಾದರಿಯಾಗಿ ಪ್ರದರ್ಶಿಸಿತ್ತು.

ಸದ್ಯದಲ್ಲೇ ಸೇವೆ ಆರಂಭಿಸಲಿವೆ ಹಾರುವ ಕಾರುಗಳು

ಪಾಲ್ ವಿ ಕಂಪನಿಯು ಈ ಕಾರುಗಳನ್ನು ಬಹುವಿಧದ ಬಳಕೆಗಾಗಿ ಅಭಿವೃದ್ಧಿಪಡಿಸುತ್ತಿದೆ. ಇದರ ಜೊತೆಗೆ ಈ ಕಾರ್ ಅನ್ನು ಖರೀದಿಸ ಬಯಸುವ ಖಾಸಗಿ ವ್ಯಕ್ತಿಗಳಿಗೆ ಈ ಕಾರ್ ಅನ್ನು ಮಾರಾಟ ಮಾಡಲಿದೆ. ಈ ಹಾರಾಡುವ ಕಾರುಗಳು ಚಾಲ್ತಿಯಲ್ಲಿರುವ ಅಂತರ್‍‍ರಾಷ್ಟ್ರೀಯ ನಿಯಮಗಳಿಗೆ ಅನುಸಾರವಾಗಿ ಕಾರ್ಯಾಚರಿಸಬೇಕಾಗುತ್ತದೆ.

ಸದ್ಯದಲ್ಲೇ ಸೇವೆ ಆರಂಭಿಸಲಿವೆ ಹಾರುವ ಕಾರುಗಳು

ಈ ಹಾರಾಡುವ ಕಾರುಗಳಿಗಾಗಿ ಪಾಲ್ ವಿ ಕಂಪನಿಯು ಪ್ರತ್ಯೇಕವಾದ ತರಬೇತಿಯನ್ನು ನೀಡಲಿದೆ. ಈ ತರಬೇತಿಯು 35ರಿಂದ 40 ಗಂಟೆಗಳವರೆಗೆ ಇರಲಿದೆ. ಈ ಹಾರಾಡುವ ಕಾರುಗಳು ಹಾರಾಡುವ ವೇಳೆಯಲ್ಲಿ ಹಲವು ಕಠಿಣ ಪರಿಸ್ಥಿತಿಗಳು ಎದುರಾಗಲಿವೆ.

ಸದ್ಯದಲ್ಲೇ ಸೇವೆ ಆರಂಭಿಸಲಿವೆ ಹಾರುವ ಕಾರುಗಳು

ಈ ಹಾರಾಡುವ ಕಾರುಗಳಿಂದ ವಿಮಾನಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕಾಗುತ್ತದೆ. ಒಂದು ವೇಳೆ ಅನಾಹುತ ಸಂಭವಿಸಿದರೆ ಭಾರೀ ಪ್ರಮಾಣದ ಸಾವು - ನೋವು ಎದುರಾಗಲಿದೆ.

ಸದ್ಯದಲ್ಲೇ ಸೇವೆ ಆರಂಭಿಸಲಿವೆ ಹಾರುವ ಕಾರುಗಳು

ಈ ಕಾರಣಕ್ಕೆ ಹಾರಾಡುವ ಕಾರುಗಳಿಗಾಗಿಯೇ ಪ್ರತ್ಯೇಕವಾದ ನಿಯಮಗಳ ಅಗತ್ಯವಿದೆ. ಇದನ್ನು ಪರಿಶೀಲಿಸುತ್ತಿರುವುದಾಗಿ ಪಾಲ್ ವಿ ಕಂಪನಿಯ ಅಧಿಕಾರಿ ಜೆನ್ನಿಫರ್ ಕಾರ್ನಿಂಗ್‍‍ರವರು ತಿಳಿಸಿದ್ದಾರೆ. ಈ ಹಾರಾಡುವ ಕಾರುಗಳು ಎಲೆಕ್ಟ್ರಿಕ್ ವಾಹನಗಳಾಗಿರಲಿವೆ.

ಸದ್ಯದಲ್ಲೇ ಸೇವೆ ಆರಂಭಿಸಲಿವೆ ಹಾರುವ ಕಾರುಗಳು

ಈ ಎಲೆಕ್ಟ್ರಿಕ್ ಕಾರುಗಳು ಪೂರ್ತಿಯಾಗಿ ಚಾರ್ಜ್ ಆದ ನಂತರ ಎಷ್ಟು ದೂರದವರೆಗೆ ಚಲಿಸುತ್ತವೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಈ ಮಾಹಿತಿಗಳು ಶೀಘ್ರದಲ್ಲಿಯೇ ಲಭ್ಯವಾಗುವ ಸಾಧ್ಯತೆಗಳಿವೆ. ಈ ಹಾರಾಡುವ ಕಾರುಗಳ ಮತ್ತಷ್ಟು ಪರೀಕ್ಷೆಗಳು ಭಾರತದ ಆಗಸದಲ್ಲಿ ಶೀಘ್ರದಲ್ಲಿಯೇ ಆರಂಭವಾಗಲಿವೆ.

Most Read Articles

Kannada
English summary
Flying cars may soon become a reality in India with Pal V. Read in Kannada.
Story first published: Monday, March 9, 2020, 14:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X