ಬಿಎಸ್-6 ಇಕೋಸ್ಪೋರ್ಟ್ ಕಂಪ್ಯಾಕ್ಟ್ ಎಸ್‌ಯುವಿ ಬೆಲೆ ಹೆಚ್ಚಿಸಿದ ಫೋರ್ಡ್

ಫೋರ್ಡ್ ಇಂಡಿಯಾ ಕಂಪನಿಯು ತನ್ನ ಜನಪ್ರಿಯ ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಯಾದ ಇಕೋಸ್ಪೋರ್ಟ್‌ನಲ್ಲಿ ಹೊಸ ಫೀಚರ್ಸ್‌ಗಳನ್ನು ಉನ್ನತೀಕರಿಸಿದ್ದು, ಹೊಸ ಫೀಚರ್ಸ್ ಹಿನ್ನಲೆಯಲ್ಲಿ ಕಾರಿನ ಬೆಲೆಯಲ್ಲಿ ತುಸು ಬೆಲೆ ಹೆಚ್ಚಳವಾಗಿದೆ.

ಇಕೋಸ್ಪೋರ್ಟ್ ಕಂಪ್ಯಾಕ್ಟ್ ಎಸ್‌ಯುವಿ ಬೆಲೆ ಹೆಚ್ಚಿಸಿದ ಫೋರ್ಡ್

ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಬಿಎಸ್-6 ಇಕೋಸ್ಪೋರ್ಟ್ ಮಾದರಿಯಲ್ಲಿ ಕೆಲವು ಹೊಸ ಬದಲಾವಣೆಗಳನ್ನು ಪರಿಚಯಿಸಿದ್ದು, ಶೀಘ್ರದಲ್ಲೇ ಹೊಸ ಕಾರು ಹೊಸ ಇನ್ಪೋಟೈನ್‌ಮೆಂಟ್ ಸಿಸ್ಟಂ ಸಹ ಪಡೆದುಕೊಳ್ಳಲಿದೆ. ಇದಕ್ಕೂ ಮುನ್ನ ಹೊಸ ಕಾರಿನ ಬೆಲೆಯಲ್ಲಿ ವಿವಿಧ ವೆರಿಯೆಂಟ್‌ಗಳ ಬೆಲೆಯನ್ನು ರೂ. 1,500 ಬೆಲೆ ಹೆಚ್ಚಳ ಮಾಡಲಾಗಿದ್ದು, ಕಳೆದ ಜುಲೈನಲ್ಲಿ ಹೊಸ ಕಾರು ರೂ. 13,500 ಬೆಲೆ ಹೆಚ್ಚಳ ಪಡೆದುಕೊಂಡಿತ್ತು.

ಇಕೋಸ್ಪೋರ್ಟ್ ಕಂಪ್ಯಾಕ್ಟ್ ಎಸ್‌ಯುವಿ ಬೆಲೆ ಹೆಚ್ಚಿಸಿದ ಫೋರ್ಡ್

ಬೆಲೆ ಹೆಚ್ಚಳ ನಂತರ ಹೊಸ ಇಕೋಸ್ಪೋರ್ಟ್ ಕಾರಿನ ಬೆಲೆಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.8.19 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು ರೂ.11.73 ಲಕ್ಷ ಮಾರಾಟಗೊಳ್ಳುತ್ತಿದ್ದು, ಹೊಸ ಕಾರು ಬಿಎಸ್-6 ಎಂಜಿನ್ ಜೋಡಣೆ ನಂತರ ಸಾಕಷ್ಟು ಬದಲಾವಣೆ ಪಡೆದುಕೊಂಡಿದೆ.

ಇಕೋಸ್ಪೋರ್ಟ್ ಕಂಪ್ಯಾಕ್ಟ್ ಎಸ್‌ಯುವಿ ಬೆಲೆ ಹೆಚ್ಚಿಸಿದ ಫೋರ್ಡ್

ಫೋರ್ಡ್ ಇಕೋಸ್ಪೋರ್ಟ್ ಕಾರು ಮಾದರಿಯು ಬಿಎಸ್-6 ಎಂಜಿನ್ ಜೋಡಣೆ ನಂತರ ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಹೊಸ ಕಾರಿನಲ್ಲಿ 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ನೀಡಲಾಗಿದೆ.

ಇಕೋಸ್ಪೋರ್ಟ್ ಕಂಪ್ಯಾಕ್ಟ್ ಎಸ್‌ಯುವಿ ಬೆಲೆ ಹೆಚ್ಚಿಸಿದ ಫೋರ್ಡ್

ಪ್ರತಿ ಮಾದರಿಯಲ್ಲೂ 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದ್ದು, ಈ ಮೂಲಕ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಲ್ಲೇ ಅತ್ಯುತ್ತಮ ಎಂಜಿನ್ ಆಯ್ಕೆಯೊಂದಿಗೆ ಆಕರ್ಷಕ ಪ್ರೀಮಿಯಂ ಫೀಚರ್ಸ್ ಮತ್ತು ಸುರಕ್ಷಾ ಸೌಲಭ್ಯಗಳನ್ನು ಒಳಗೊಂಡಿದೆ. ಹೊಸ ಕಾರಿನಲ್ಲಿ ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಕೆಲವು ಹೊಸ ಬದಲಾವಣೆಗಳನ್ನು ಪರಿಚಯಿಸುತ್ತಿದ್ದು, ಶೀಘ್ರದಲ್ಲೇ ಹೊಸ ಕಾರು ಹೊಸ ಇನ್ಪೋಟೈನ್‌ಮೆಂಟ್ ಸಿಸ್ಟಂ ಪಡೆದುಕೊಳ್ಳಲಿದೆ.

ಇಕೋಸ್ಪೋರ್ಟ್ ಕಂಪ್ಯಾಕ್ಟ್ ಎಸ್‌ಯುವಿ ಬೆಲೆ ಹೆಚ್ಚಿಸಿದ ಫೋರ್ಡ್

ಬಿಎಸ್-6 ಇಕೋಸ್ಪೋರ್ಟ್ ಮಾದರಿಯಲ್ಲಿ ಸದ್ಯ ವಿಂಡೋಸ್ ಆಧರಿತ ಫ್ಲೈ ಆಡಿಯೋ ಸಿಸ್ಟಂ ಜೋಡಣೆ ಹೊಂದಿದ್ದು, ಹೊಸದಾಗಿ ಪರಿಚಯಿಸಲಾಗುತ್ತಿರುವ ಆಡಿಯೋ ಸಿಸ್ಟಂ ಮಾದರಿಯು ಅಂಡ್ರಾಯಿಡ್ ಒಎಸ್ ಆಧರಿಸಿ ಕಾರ್ಯನಿರ್ವಹಿಸಲಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಇಕೋಸ್ಪೋರ್ಟ್ ಕಂಪ್ಯಾಕ್ಟ್ ಎಸ್‌ಯುವಿ ಬೆಲೆ ಹೆಚ್ಚಿಸಿದ ಫೋರ್ಡ್

ಇದು ಗ್ರಾಹಕರಿಗೆ ಹೊಸ ಅನುಭವ ನೀಡಲಿದ್ದು, ಹೊಸ ಆಡಿಯೋ ಸಿಸ್ಟಂ ಹೊಂದಿರುವ ಮಾದರಿಯು ದೀಪಾವಳಿ ಸಂಭ್ರಮಕ್ಕಾಗಿ ಬಿಡುಗಡೆ ಮಾಡಲಾಗುತ್ತಿದೆ. ಹೊಸ ಅಂಡ್ರಾಯಿಡ್ ಒಎಸ್ ಆಧರಿತ ಆಡಿಯೋ ಇನ್ಪೋಟೈನ್‌ಮೆಂಟ್ ಸಿಸ್ಟಂನಲ್ಲಿ ವೈಫೈ ಕನೆಕ್ವಿಟಿ, ಏರ್ ಅಪ್ಡೆಟ್, ಕಾನ್ಫೆರೆನ್ಸ್ ಕಾಲ್ ಸೌಲಭ್ಯ, ಲೈವ್ ಟ್ರಾಫಿಕ್ ಅಪ್ಡೆಟ್, ಬ್ಲ್ಯೂಟೂತ್ ಕಸ್ಟೈಜೈಡ್ ಫೀಚರ್ಸ್ ಹೊಂದಿದೆ.

ಇಕೋಸ್ಪೋರ್ಟ್ ಕಂಪ್ಯಾಕ್ಟ್ ಎಸ್‌ಯುವಿ ಬೆಲೆ ಹೆಚ್ಚಿಸಿದ ಫೋರ್ಡ್

ಹಾಗೆಯೇ ಹೊಸ ಆಡಿಯೋ ಸಿಸ್ಟಂನಲ್ಲಿ ನ್ಯಾವಿಗೇಷನ್‌ಗಾಗಿ ಪ್ರತ್ಯೇಕವಾದ ಎಸ್‌ಡಿ ಕಾರ್ಡ್ ಬಳಕೆ ಮಾಡುವ ಅವಶ್ಯಕತೆಯಿಲ್ಲದಿರುವುದು ಪ್ರಮುಖ ಫೀಚರ್ಸ್‌ಗಳಾಗಿದ್ದು, ಚಾಲನೆ ವೇಳೆ ಆಡಿಯೋ ಸಿಸ್ಟಂ ಬಳಕೆಯನ್ನು ಸುಲಭಗೊಳಿಸಿದೆ.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ಇಕೋಸ್ಪೋರ್ಟ್ ಕಂಪ್ಯಾಕ್ಟ್ ಎಸ್‌ಯುವಿ ಬೆಲೆ ಹೆಚ್ಚಿಸಿದ ಫೋರ್ಡ್

ಹೊಸ ಕಾರು ಮಾದರಿಯು ಇದೇ ತಿಂಗಳ ಕೊನೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ಹೊಸ ಸೌಲಭ್ಯಕ್ಕಾಗಿ ಯಾವುದೇ ಹೆಚ್ಚುವರಿ ದರ ನಿಗದಿ ಮಾಡುವ ಸಾಧ್ಯತೆಗಳಿಲ್ಲ. ಇದಕ್ಕೆ ಕಾರಣ, ಇಕೋಸ್ಪೋರ್ಟ್ ಪ್ರತಿಸ್ಪರ್ಧಿ ಕಾರು ಮಾದರಿಗಳಲ್ಲಿ ಈಗಾಗಲೇ ಈ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ನೀಡಲಾಗುತ್ತಿದ್ದು, ದೀಪಾವಳಿ ಸಂಭ್ರಮ ವೇಳೆ ಕಾರು ಖರೀದಿದಾರರನ್ನು ಸೆಳೆಯಲು ಈ ಫೀಚರ್ಸ್ ನೀಡಲಾಗುತ್ತಿದೆ.

Most Read Articles

Kannada
Read more on ಫೋರ್ಡ್ ford
English summary
Ford EcoSport Gets A Price Hike. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X