ಭಾರತದಲ್ಲಿ ಪರ್ಫಾಮೆನ್ಸ್ ಪಿಕ್ಅಪ್ ಟ್ರಕ್ ಬಿಡುಗಡೆ ಮಾಡಲಿದೆ ಫೋರ್ಡ್

ಫೋರ್ಡ್ ಇಂಡಿಯಾ ಕಂಪನಿಯು ಮುಂಬರುವ ಕೆಲವೇ ದಿನಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಮತ್ತಷ್ಟು ಹೊಸ ಕಾರು ಮಾದರಿಗಳನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದ್ದು, ಹೊಸ ಕಾರುಗಳನ್ನು ಹೊಸ ಆಮದು ನೀತಿ ಅಡಿ ಮಾರಾಟಗೊಳಿಸಲಿದೆ.

ಭಾರತದಲ್ಲಿ ಪರ್ಫಾಮೆನ್ಸ್ ಪಿಕ್ಅಪ್ ಟ್ರಕ್ ಬಿಡುಗಡೆ ಮಾಡಲಿದೆ ಫೋರ್ಡ್

ಕೇಂದ್ರ ಸರ್ಕಾರವು ವಿದೇಶಿ ಕಾರು ಉತ್ಪಾದನಾ ಕಂಪನಿಗಳಿಗೆ 2500 ವಾಹನಗಳನ್ನು ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ಆಮದು ಮಾಡಿಕೊಳ್ಳುವ ಅವಕಾಶ ನೀಡಿದ್ದು, ಈ ಹಿನ್ನಲೆಯಲ್ಲಿ ಪ್ರಮುಖ ಕಾರು ಕಂಪನಿಗಳು ತಮ್ಮ ಮೂಲ ಕಾರು ಉತ್ಪಾದನಾ ಘಟಕಗಳಿಂದ ಕೆಲವು ಜನಪ್ರಿಯ ಕಾರು ಮಾದರಿಗಳನ್ನು ನಿಗದಿತ ಪ್ರಮಾಣದಲ್ಲಿ ಭಾರತಕ್ಕೆ ಆಮದು ಮಾಡಿಕೊಂಡು ಮಾರಾಟ ಆರಂಭಿಸುತ್ತಿವೆ. ಇದೀಗ ಅಮೆರಿಕದ ಫೋರ್ಡ್ ಕಂಪನಿಯು ಕೂಡಾ ಹೊಸ ಆಮದು ನೀತಿ ಅಡಿ ವಿವಿಧ ಕಾರುಗಳನ್ನು ಆಮದು ಮಾಡಿಕೊಳ್ಳಲು ನಿರ್ಧರಿಸಿದ್ದು, ಹೊಸ ಕಾರುಗಳು ಶೀಘ್ರದಲ್ಲೇ ಮಾರುಕಟ್ಟೆ ಪ್ರವೇಶಿಸಲಿವೆ.

ಭಾರತದಲ್ಲಿ ಪರ್ಫಾಮೆನ್ಸ್ ಪಿಕ್ಅಪ್ ಟ್ರಕ್ ಬಿಡುಗಡೆ ಮಾಡಲಿದೆ ಫೋರ್ಡ್

ಫೋರ್ಡ್ ಕಂಪನಿಯು ಹೊಸ ಆಮದು ನೀತಿ ಅಡಿ ಪ್ರಮುಖ ಎರಡು ಐಷಾರಾಮಿ ಕಾರು ಮಾದರಿಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದು, ರೇಂಜರ್ ರಾಫ್ಟರ್ ಪರ್ಫಾಮೆನ್ಸ್ ಪಿಕ್ಅಪ್ ಮತ್ತು ಫೋಕಸ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ.

ಭಾರತದಲ್ಲಿ ಪರ್ಫಾಮೆನ್ಸ್ ಪಿಕ್ಅಪ್ ಟ್ರಕ್ ಬಿಡುಗಡೆ ಮಾಡಲಿದೆ ಫೋರ್ಡ್

ರೇಂಜರ್ ರಾಪ್ಟರ್ ಪಿಕ್ ಅಪ್‌ ಮುಂದಿನ ವರ್ಷದ ದ್ವಿತೀಯಾರ್ಧದಲ್ಲಿ ಭಾರತದಲ್ಲಿ ಬಿಡುಗೆಯಾಗಲಿದ್ದು, ಅದಕ್ಕೂ ಮುನ್ನ ಭಾರತದಲ್ಲಿ ಹೊಸ ಕಾರಿನ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಾಗಿ ಸಿದ್ದಗೊಳಿಸುತ್ತಿದೆ.

ಭಾರತದಲ್ಲಿ ಪರ್ಫಾಮೆನ್ಸ್ ಪಿಕ್ಅಪ್ ಟ್ರಕ್ ಬಿಡುಗಡೆ ಮಾಡಲಿದೆ ಫೋರ್ಡ್

ಹೊಸ ಆಮದು ನೀತಿ 2500 ಕಾರುಗಳನ್ನು ಭಾರತದಲ್ಲಿ ಬಿಡುಗಡೆ ಮಾಡುತ್ತಿರುವ ಬಗ್ಗೆ ಖಚಿತಪಡಿಸಿರುವ ಫೋರ್ಡ್ ಕಂಪನಿಯು ಹೊಸ ಕಾರುಗಳನ್ನು ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಮಾದರಿಯಲ್ಲೇ ಭಾರತದಲ್ಲೂ ಬಿಡುಗಡೆಗೆ ನಿರ್ಧರಿಸಿದೆ. ಆಮದು ನೀತಿ ಅಡಿ ಬಿಡುಗಡೆಯಾಗಲಿರುವ ಫೋರ್ಡ ಹೊಸ ಕಾರು ಮಾದರಿಗಳು ಸದ್ಯ ತನ್ನ ಮಾರಾಟ ಸರಣಿಯಲ್ಲಿರುವ ಎಂಡೀವರ್ ಎಸ್‌ಯುವಿ ಮಾದರಿಗಿಂತಲೂ ಹೆಚ್ಚಿನ ಮಟ್ಟದ ವೈಶಿಷ್ಟ್ಯತೆಗಳೊಂದಿಗೆ ದುಬಾರಿ ಬೆಲೆಯಲ್ಲಿ ಮಾರಾಟಗೊಳ್ಳಲಿವೆ.

ಭಾರತದಲ್ಲಿ ಪರ್ಫಾಮೆನ್ಸ್ ಪಿಕ್ಅಪ್ ಟ್ರಕ್ ಬಿಡುಗಡೆ ಮಾಡಲಿದೆ ಫೋರ್ಡ್

ಸಂಪೂರ್ಣವಾಗಿ ವಿದೇಶಿ ಮಾರುಕಟ್ಟೆಯಿಂದಲೇ ಆಮದುಗೊಂಡಿರುವ ಮಾದರಿಗಳಾಗಿರುವುದರಿಂದ ಹೊಸ ಕಾರುಗಳಲ್ಲಿ ಅಂತರ್‌ರಾಷ್ಟ್ರೀಯ ಗುಣಮಟ್ಟದ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿರುತ್ತದೆ.

ಭಾರತದಲ್ಲಿ ಪರ್ಫಾಮೆನ್ಸ್ ಪಿಕ್ಅಪ್ ಟ್ರಕ್ ಬಿಡುಗಡೆ ಮಾಡಲಿದೆ ಫೋರ್ಡ್

ಫೋರ್ಡ್ ಹೊಸ ರೇಂಜರ್ ರಾಪ್ಟರ್ ಪಿಕ್ಅಪ್ ಮಾದರಿಯು ಅಮೆರಿಕದಲ್ಲಿ ಮಾರಾಟವಾಗುವ ಜನಪ್ರಿಯ ಕಾರುಗಳಲ್ಲಿ ಒಂದಾಗಿದ್ದು, ಪರ್ಫಾಮೆನ್ಸ್ ಜೊತೆಗೆ ಐಷಾರಾಮಿ ವೈಶಿಷ್ಟ್ಯತೆಯೊಂದಿಗೆ ಮಾರಾಟಗೊಳ್ಳುತ್ತಿವೆ.

ಭಾರತದಲ್ಲಿ ಪರ್ಫಾಮೆನ್ಸ್ ಪಿಕ್ಅಪ್ ಟ್ರಕ್ ಬಿಡುಗಡೆ ಮಾಡಲಿದೆ ಫೋರ್ಡ್

ರೇಂಜರ್ ರಾಪ್ಟರ್ ಪಿಕ್ ಅಪ್‌ ಟ್ರಕ್ ಲ್ಯಾಡರ್ ಫ್ರೇಮ್ ಚಾಸಿಸ್ ಅನ್ನು ಆಧರಿಸಿದ್ದು, ಹೊಸ ಪಿಕ್ ಅಪ್‌ ಟ್ರಕ್‌ನಲ್ಲಿ ಎಂಡೀವರ್ ಎಸ್‌ಯುವಿ ಕಾರಿನಲ್ಲಿರುವಂತೆ 2.0-ಲೀಟರ್, 4-ಸಿಲಿಂಡರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅನ್ನು ಅಳವಡಿಸುವ ಸಾಧ್ಯತೆಗಳಿವೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಭಾರತದಲ್ಲಿ ಪರ್ಫಾಮೆನ್ಸ್ ಪಿಕ್ಅಪ್ ಟ್ರಕ್ ಬಿಡುಗಡೆ ಮಾಡಲಿದೆ ಫೋರ್ಡ್

ಈ ಎಂಜಿನ್ ವಿವಿಧ ಮಾದರಿಗಳಿಗೆ ಅನುಗುಣವಾಗಿ 165-ಬಿಎಚ್‌ಪಿಯಿಂದ 213 ಬಿಹೆಚ್‍ಪಿ ಉತ್ಪಾದನಾ ಗುಣಹೊಂದಿದ್ದು, ಈ ಎಂಜಿನ್ ಅನ್ನು 10-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲ್ಪಟ್ಟಿದೆ. ಪೋರ್ಡ್ ಸರಣಿಯಲ್ಲಿರುವ ಎಂಡೀವರ್ ಎಸ್‍ಯುವಿ ಕೂಡ 10-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಅನ್ನು ಹೊಂದಿದ್ದು, ಬೆಲೆಯಲ್ಲಿ ಹೆಚ್ಚು ಕಡಿಮೆ ಎರಡು ಮಾದರಿಗಳು ಒಂದೇ ಆಗಿಲಿವೆ.

ಭಾರತದಲ್ಲಿ ಪರ್ಫಾಮೆನ್ಸ್ ಪಿಕ್ಅಪ್ ಟ್ರಕ್ ಬಿಡುಗಡೆ ಮಾಡಲಿದೆ ಫೋರ್ಡ್

ರೇಂಜರ್ ರಾಪ್ಟರ್ ಪರ್ಫಾಮೆನ್ಸ್ ಪಿಕ್ಅಪ್‌ನಲ್ಲಿ 4ಡಬ್ಲ್ಯುಡಿ ಸಿಸ್ಟಂ ಜೋಡಿಸಲಾಗಿದ್ದು, ಈ ಪಿಕ್ ಅಪ್ ನಲ್ಲಿ ರಾಕ್, ಗ್ರ್ಯಾವೆಲ್, ಗ್ರಾಸ್, ಸ್ನೋ, ಕ್ಲೈಂಬಿಂಗ್ ಮತ್ತು ಬಾಜಾ ಎಂಬ ಆರು ಡ್ರೈವ್ ಮೋಡ್‌ಗಳನ್ನು ನೀಡಲಾಗಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಭಾರತದಲ್ಲಿ ಪರ್ಫಾಮೆನ್ಸ್ ಪಿಕ್ಅಪ್ ಟ್ರಕ್ ಬಿಡುಗಡೆ ಮಾಡಲಿದೆ ಫೋರ್ಡ್

ಪರ್ಫಾಮೆನ್ಸ್‌ಗಾಗಿ ವಿಶೇಷವಾಗಿ ಸಿದ್ದವಾಗಿರುವ ರಾಪ್ಟರ್ ಪಿಕ್‌ಅಪ್‌ ಮಾದರಿಯು 283-ಎಂಎಂ ಗ್ರೌಂಡ್ ಕ್ಲಿಯರೆನ್ಸ್, 800-ಎಂಎಂ ವಾಟರ್ ವೇಡಿಂಗ್ ಡೆಪ್ತ್ ಮತ್ತು 285-ಎಂಎಂ ಟೈರ್‌ಗಳೊಂದಿಗೆ ಉತ್ತಮ ಆಫ್-ರೋಡಿಂಗ್ ಕೌಶಲ್ಯತೆ ಹೊಂದಿದೆ.

Source:TeamBHP

Most Read Articles

Kannada
Read more on ಫೋರ್ಡ್ ford
English summary
Ford is expected to launch the Ranger SUV sometime around the mid of 2021. Read in Kannada.
Story first published: Tuesday, December 22, 2020, 19:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X