Just In
Don't Miss!
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 17ರ ಚಿನ್ನ, ಬೆಳ್ಳಿ ದರ
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಸ ಫೀಚರ್‌ಗಳೊಂದಿಗೆ ಬಿಡುಗಡೆಯಾಗಲಿದೆ ಹಮ್ಮರ್ ಎಲೆಕ್ಟ್ರಿಕ್ ಎಸ್‍ಯುವಿ
ಜನರಲ್ ಮೋಟಾರ್ಸ್ ಸಂಸ್ಥೆಯು ತನ್ನ ಐಕಾನಿಕ್ ಹಮ್ಮರ್ ಎಸ್‍ಯುವಿಯನ್ನು ಮತ್ತೊಮ್ಮೆ ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗುತ್ತಿದೆ. ಆದರೆ ಈ ಬಾರಿ ಐಕಾನಿಕ್ ಹಮ್ಮರ್ ಎಸ್‍ಯುವಿಯನ್ನು ಎಲೆಕ್ಟ್ರಿಕ್ ರೂಪದಲ್ಲಿ ಪರಿಚಯಿಸಲಿದೆ.

ಜನರಲ್ ಮೋಟಾರ್ಸ್ ಸಂಸ್ಥೆಯು ಹೊಸ ಹಮ್ಮರ್ ಎಲೆಕ್ಟ್ರಿಕ್ ಎಸ್‍ಯುವಿಯ ಟೀಸರ್ ವೀಡಿಯೋವನ್ನು ಬಿಡುಗಡೆಗೊಳಿಸಿದೆ. ಈ ಹೊಸ ಹಮ್ಮರ್ ಎಲೆಕ್ಟ್ರಿಕ್ ಎಸ್‍ಯುವಿಯು ಅಕ್ಟೋಬರ್ 20ರಂದು ಅನಾವರಣವಾಗಲಿದೆ. ಈ ಹಮ್ಮರ್ ಎಸ್‍ಯುವಿಯನ್ನು ಬಿಟಿ1 ಪ್ಲಾಟ್‌ಫಾರ್ಮ್ ಅಡಿಯಲ್ಲಿ ತಯಾರಿಸಲಾಗುತ್ತದೆ. ಈ ಹೊಸ ಹಮ್ಮರ್ ಎಲೆಕ್ಟ್ರಿಕ್ ಎಸ್‍ಯುವಿಯ ಟಾಪ್-ಆಫ್-ಲೈನ್ ರೂಪಾಂತರವು 1,014 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ.

ಈ ಹಮ್ಮರ್ ಎಲೆಕ್ಟ್ರಿಕ್ ಎಸ್‍ಯುವಿ ಕೇವಲ ಮೂರು ಸೆಕೆಂಡುಗಳಲ್ಲಿ 0 - 96 ಕಿ.ಮೀ ವೇಗವನ್ನು ಕ್ರಮಿಸುತ್ತದೆ. ಈ ಎಸ್‍ಯುವಿಯಲ್ಲಿ ಅಲ್ಟಿಯಮ್ ತಲೆಮಾರಿನ ಲಿಥಿಯಂ ಬ್ಯಾಟರಿಗಳನ್ನು ಬಳಸಲಾಗುತ್ತದೆ.
MOST READ: ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್

ಹಮ್ಮರ್ ಎಲೆಕ್ಟ್ರಿಕ್ ಆವೃತ್ತಿಯ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗವಾಗಿಲ್ಲ. ಆದರೆ ಟೀಸರ್ ವೀಡಿಯೋವನ್ನು ಹಮ್ಮರ್ ಎಲೆಕ್ಟ್ರಿಕ್ ಎಸ್‍ಯುವಿಯ ವಿನ್ಯಾಸವು ಹಿಂದಿನ ಮಾದರಿಗಿಂತ ಆಕರ್ಷಕವಾದೆ.

ಈ ಹೊಸ ಎಸ್‍ಯುವಿಯು ಶಾರ್ಪ್ ಲೈನ್ ವಿನ್ಯಾಸವನ್ನು ಹೊಂದಿದೆ. ಹಳೆಯ ಮಾದರಿಯಿಂದ ಹೊಸ ಮಾದರಿಯು ಪ್ರತ್ಯೇಕಿಸುವ ಅಂಶವೆಂದರೆ ಎಲ್‍ಇಡಿ ಲೈಟಿಂಗ್, ಹೆಡ್‍ಲ್ಯಾಂಪ್, ಗ್ರಿಲ್ ಮತ್ತು ಡೇ ಟೈಮ್ ರನ್ನಿಂಗ್ ಲೈಟ್ ಆಗಿದೆ.
MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಜನರಲ್ ಮೋಟಾರ್ಸ್ ಸಂಸ್ಥೆಯು ಹೊಸ ಹಮ್ಮರ್ ಎಲೆಕ್ಟ್ರಿಕ್ ಎಸ್‍ಯುವಿಯ ಹಿಂದಿನ ಟೀಸರ್ ವೀಡಿಯೋದಲ್ಲಿ ಅಡ್ರಿನಾಲಿನ್ ಮೋಡ್ ಅನ್ನು ಬಹಿರಂಗಪಡಿಸಿದರೆ, ಹೊಸ ಟೀಸರ್ ವೀಡಿಯೋದಲ್ಲಿ ಕ್ರ್ಯಾಬ್ ವಾಕ್ ಮೋಡ್ ಫೀಚರ್ ಅನ್ನು ಬಹಿರಂಗಪಡಿಸಿದೆ.

ಈ ಫೀಚರ್ ಇನ್ಪುಟ್ ಆಧರಿಸಿ ಟಯರ್ ಗಳು ಒಂದು ದಿಕ್ಕಿನಲ್ಲಿ ಲಾಕ್ ಆಗುತ್ತವೆ. ಇದರಿಂದ ಕಠಿಣ ಹಾದಿಯಲ್ಲಿ ಈ ಎಸ್‍ಯುವಿಯನು ಇಳಿಸಬಹುದಾಗಿದೆ. ಈ ಫೀಚರ್ ಕಠಿಣವಾದ ರಸ್ತೆಗಳಲ್ಲಿ ಹೆಚ್ಚು ಸಹಕಾರಿಯಾಗಿರಲಿದೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ
ಎಲೆಕ್ಟ್ರಿಕ್ ಹಮ್ಮರ್ ಎಸ್‍ಯುವಿಯ ವಿನ್ಯಾಸ ಮತ್ತು ಸ್ಟೈಲಿಂಗ್ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗಪಡಿಸಿಲ್ಲ. ಹೊಸ ಹಮ್ಮರ್ ಆಫ್-ರೋಡ್ ಎಸ್‍ಯುವಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದೆ. ಹಮ್ಮರ್ ಸರಳವಾದ ಆಫ್-ರೋಡ್ ಎಸ್‍ಯುವಿಯಾಗಿದೆ.

ಹಮ್ಮರ್ ಎಸ್‍ಯುವಿಯು ಕಠಿಣವಾದ ಅಡೆತಡೆಗಳಲ್ಲಿ ಸುಲಭವಾಗಿ ಸಾಗುತ್ತದೆ. ಆಫ್-ರೋಡ್ ವಾಹನ ಪ್ರಿಯರ ಮೆಚ್ಚಿನ ಎಸ್‍ಯುವಿಯಾಗಿದೆ. ಅಮೆರಿಕಾದ ಸೈನ್ಯ, ಯುಎಸ್ ಮೆರೈನ್ ಕಾಪ್ಸ್ ಮತ್ತು ಇತರ ಅರೆಸೈನಿಕ ಪಡೆಗಳಿಗೂ ಇದು ಮೆಚ್ಚಿನ ಎಸ್‍ಯುವಿಯಾಗಿದೆ.
MOST READ: ಮಿನಿ ಕ್ಲಬ್‍ಮ್ಯಾನ್ ಸ್ಪೆಷಲ್ ಎಡಿಷನ್ ಕಾರು ಖರೀದಿಸಿದ ಮಲಯಾಳಂ ಚಿತ್ರರಂಗದ ಖ್ಯಾತ ನಟ

ಅಮೆರಿಕಾದ ಪಡೆಗಳು ಕಾರ್ಯಾಚರಣೆಗಾಗಿ ವಿಶೇಷವಾಗಿ ತಯಾರಿಸಿ ಹಮ್ಮರ್ ಅನ್ನು ಬಳಸುತ್ತಿದ್ದರು. ಹಮ್ಮರ್ ಎಸ್‍ಯುವಿಯನ್ನು ಮೊದಲ ಬಾರಿಗೆ 1992ರಲ್ಲಿ ಬಿಡುಗಡೆ ಗೊಳಿಸಿದ್ದರು. ಹಮ್ಮರ್‍ನ ಉತ್ಪಾದನೆಯನ್ನು 2010ರಲ್ಲಿ ಸ್ಥಗಿತಗೊಳಿಸಲಾಗಿತ್ತು.

ಈ ಎಂಜಿನ್ ಅಪಾರ ಪ್ರಮಾಣದ ಮಾಲಿನ್ಯವನ್ನು ಉಂಟುಮಾಡುತ್ತದೆ. ಇದನ್ನು ಪರಿಸರವಾದಿಗಳು ತೀವ್ರವಾಗಿ ಟೀಕಿಸಿದರು. ಈ ಟೀಕೆಗಳಿಂದ ಹೊರಗೆ ಬರಲು ಹಮ್ಮರ್ ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ. ಜಿಎಂಸಿ ಕಂಪನಿಯು ಹಮ್ಮರ್ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಅಭಿವೃದ್ದಿಪಡಿಸಲಾಗಿದೆ.

ಹಮ್ಮರ್ ಎಸ್‍ಯುವಿಯು ಹೆಚ್ಚು ತೂಕ , ಇಂಧನ ದಕ್ಷತೆ ಅಂಕಿ ಅಂಶಗಳು, ಪವರ್ ಮತ್ತು ಟಾರ್ಕ್ ಉತ್ಪಾದನೆಯು ಅಂಕಿ ಅಂಶಗಳು ಹೆಚ್ಚಾಗಿದೆ. ಪವರ್‍ಫುಲ್ ಹಮ್ಮರ್ ಎಸ್‍ಯುವಿ ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ರೂಪದಲ್ಲಿ ಬಿಡುಗಡೆಯಾಗುವ ಮೂಲಕ ಪರಿಸರ ಸ್ನೇಹಿಯಾಗಿರಲಿದೆ.