ಕರೋನಾ ಎಫೆಕ್ಟ್- ಇನ್ನಷ್ಟು ವಿಳಂಬವಾಗಲಿದೆ ಹವಾಲ್ ಹೊಸ ಕಾರು ಬಿಡುಗಡೆ

ಚೀನಿ ಜನಪ್ರಿಯ ಕಾರು ಉತ್ಪಾದನಾ ಕಂಪನಿ ಗ್ರೇಟ್ ವಾಲ್ ಮೋಟಾರ್ಸ್ ತನ್ನ ಅಂಗಸಂಸ್ಥೆಯಾದ ಹವಾಲ್ ಕಾರುಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಅಂತಿಮ ಹಂತದ ಸಿದ್ದತೆಯಲ್ಲಿರುವಾಗ ಕರೋನಾ ವೈರಸ್ ಭಾರೀ ಹೊಡೆತ ನೀಡಿದ್ದು, ಹೊಸ ಕಾರುಗಳ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗೆ ಬ್ರೇಕ್ ಹಾಕಲಾಗಿದೆ.

ಇನ್ನಷ್ಟು ವಿಳಂಬವಾಗಲಿದೆ ಹವಾಲ್ ಹೊಸ ಕಾರು ಬಿಡುಗಡೆ

ವಿಶ್ವಾದ್ಯಂತ ಆತಂಕ ಸೃಷ್ಠಿಸಿರುವ ಕರೋನಾ ವೈರಸ್ ಹಾವಳಿಯಿಂದಾಗಿ ಆಟೋ ಉದ್ಯಮ ಮೇಲೆ ಭಾರೀ ಪರಿಣಾಮ ಬೀರುವ ಸಾಧ್ಯತೆಗಳಿದ್ದು, ಹೊಸ ಕಾರುಗಳ ಬಿಡುಗಡೆಯು ಸದ್ಯಕ್ಕೆ ಮುಂದೂಡಿಕೆಯಾಗುತ್ತಿವೆ. ಇದರಲ್ಲಿ ಹೊಸದಾಗಿ ಉದ್ಯಮ ಚಟುವಟಿಕೆಗಳಿಗೆ ಚಾಲನೆ ನೀಡಬೇಕಿದ್ದ ಗ್ರೇಟ್ ವಾಲ್ ಮೋಟಾರ್ಸ್ ಕೂಡಾ ಸದ್ಯಕ್ಕೆ ಹೊಸ ಯೋಜನೆಯಿಂದ ಹಿಂದೆ ಸರಿದಿದ್ದು, ಪರಿಸ್ಥಿತಿ ಸುಧಾರಿಸಿದ ನಂತರವಷ್ಟೇ ಹೊಸ ಕಾರುಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ.

ಇನ್ನಷ್ಟು ವಿಳಂಬವಾಗಲಿದೆ ಹವಾಲ್ ಹೊಸ ಕಾರು ಬಿಡುಗಡೆ

ಮಧ್ಯಮ ಗಾತ್ರದ ಐಷಾರಾಮಿ ಎಸ್‌ಯುವಿ ಆವೃತ್ತಿಯಾಗಿರುವ ಹವಾಲ್ ಹೊಸ ಕಾರುಗಳು ಭಾರೀ ನೀರಿಕ್ಷೆಯೊಂದಿಗೆ ದೇಶಿಯ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾದರಿಯ ಎಸ್‌ಯುವಿ, ಸೆಡಾನ್, ಎಂಪಿವಿ ಮತ್ತು ಎಲೆಕ್ಟ್ರಿಕ್ ಕಾರುಗಳನ್ನು ಅನಾವರಣಗೊಳಿಸಿ ಬಿಡುಗಡೆ ಮಾಡುತ್ತಿದೆ.

ಇನ್ನಷ್ಟು ವಿಳಂಬವಾಗಲಿದೆ ಹವಾಲ್ ಹೊಸ ಕಾರು ಬಿಡುಗಡೆ

ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಲಾಗಿದ್ದ ಎಫ್5, ಎಫ್7,ಎಫ್7 ಎಕ್ಸ್ ಮತ್ತು ಹೆಚ್9 ಎಸ್‌ಯುವಿ ಕಾರುಗಳಲ್ಲಿ ಎಫ್5 ಮತ್ತು ಎಫ್7 ಕಾರುಗಳು ಮೊದಲ ಹಂತದಲ್ಲಿ ಬಿಡುಗಡೆಯಾಗಲಿವೆಯೆಂತೆ.

ಇನ್ನಷ್ಟು ವಿಳಂಬವಾಗಲಿದೆ ಹವಾಲ್ ಹೊಸ ಕಾರು ಬಿಡುಗಡೆ

ಭಾರತದಲ್ಲಿ 2021ಕ್ಕೆ ಅಧಿಕೃತವಾಗಿ ಕಾರು ಉತ್ಪಾದನೆಯನ್ನು ಆರಂಭಿಸಬೇಕಿದ್ದ ಗ್ರೇಟ್ ವಾಲ್ ಮೋಟಾರ್ಸ್ ಕಂಪನಿಯು ಇನ್ನಷ್ಟು ತಡವಾಗಿ ಉದ್ಯಮ ವ್ಯವಹಾರಕ್ಕೆ ಚಾಲನೆ ನೀಡಲಿದ್ದು, ಹವಾಲ್ ಎಫ್5 ಮತ್ತು ಎಫ್7 ಮಾದರಿಯನ್ನು ಮಧ್ಯಮ ಶ್ರೇಣಿಯ ಎಸ್‌ಯುವಿ ಆವೃತ್ತಿಯಾಗಿ ಮತ್ತು ಎಫ್7 ಎಕ್ಸ್ ಕೂಪೆ ಆವೃತ್ತಿಯನ್ನು ಮಧ್ಯಮ ಕ್ರಮಾಂಕದ ಐಷಾರಾಮಿ ಕಾರು ಮಾದರಿಯಾಗಿ ಬಿಡುಗಡೆಗೊಳಿಸಲಿದೆ.

ಇನ್ನಷ್ಟು ವಿಳಂಬವಾಗಲಿದೆ ಹವಾಲ್ ಹೊಸ ಕಾರು ಬಿಡುಗಡೆ

ಎಫ್5 ಮಾದರಿಯು ಮಧ್ಯಮ ಕ್ರಮಾಂಕರ ಕಂಪ್ಯಾಕ್ಟ್ ಎಸ್‌ಯುವಿ ಆವೃತ್ತಿಗಳಾದ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೊಸ್, ಟಾಟಾ ಹ್ಯಾರಿಯರ್, ಎಂಜಿ ಹೆಕ್ಟರ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿದ್ದು, ಜೀಪ್ ಕಂಪಾಸ್ ಕಾರಿಗಿಂತಲೂ ಹೆಚ್ಚು ವೀಲ್ಹ್‌ಬೆಸ್ ಪಡೆದುಕೊಂಡಿದೆ.

ಇನ್ನಷ್ಟು ವಿಳಂಬವಾಗಲಿದೆ ಹವಾಲ್ ಹೊಸ ಕಾರು ಬಿಡುಗಡೆ

ಹವಾಲ್ ಎಫ್5 ಕಾರು 4,470-ಎಂಎಂ ಉದ್ದ, 1,857-ಎಂಎಂ ಅಗಲ, 1,638-ಎಂಎಂ ಎತ್ತರ ಮತ್ತು 2,680-ಎಂಎಂ ವೀಲ್ಹ್‌ಬೆಸ್ ಹೊಂದಿದ್ದು, ಜೀಪ್ ಕಂಪಾಸ್ ಕಾರಿಗಿಂತಲೂ 75-ಎಂಎಂ ಉದ್ದ ಮತ್ತು 44-ಎಂಎಂ ನಷ್ಟು ಹೆಚ್ಚುವರಿ ಅಗಲ ಹೊಂದಿದೆ. ಜೊತೆಗೆ ಹವಾಲ್ ನಿರ್ಮಾಣದ ಮತ್ತೊಂದು ಎಸ್‌ಯುವಿ ಆವೃತ್ತಿಯಾದ ಹೆಚ್6 ಕಾರಿನಿಂದಲೂ ಕೆಲವು ಫೀಚರ್ಸ್‌ಗಳನ್ನು ಈ ಕಾರಿನಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ.

MOST READ: ಲಾಕ್‌ಡೌನ್‌ನಿಂದ ತತ್ತರಿಸಿರುವ ಆಟೋ ಕಂಪನಿಗಳಿಗೆ ಇದೀಗ ಮತ್ತೊಂದು ಸಂಕಷ್ಟ

ಇನ್ನಷ್ಟು ವಿಳಂಬವಾಗಲಿದೆ ಹವಾಲ್ ಹೊಸ ಕಾರು ಬಿಡುಗಡೆ

ಸ್ಪೋರ್ಟಿ ವಿನ್ಯಾಸದ ಐಷಾರಾಮಿ ಫೀಚರ್ಸ್‌ಗಳನ್ನು ಕೂಡಾ ಹೊಂದಿರುವ ಹವಾಲ್ ಎಫ್5 ಕಾರು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 7-ಸ್ಪೀಡ್ ಡಿಸಿಟಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿರುವ 1.5-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರಲಿದೆ. ಆದರೆ ಡೀಸೆಲ್ ಎಂಜಿನ್ ಮಾದರಿಯ ಕುರಿತಾ ಯಾವುದೇ ಮಾಹಿತಿಗಳಿಲ್ಲ.

ಇನ್ನಷ್ಟು ವಿಳಂಬವಾಗಲಿದೆ ಹವಾಲ್ ಹೊಸ ಕಾರು ಬಿಡುಗಡೆ

ಹಾಗೆಯೇ ಹೊಸ ಕಾರಿನಲ್ಲಿ ಬೆಸ್ಟ್ ಇನ್ ಸೆಗ್ಮೆಂಟ್ ಫೀಚರ್ಸ್‌ಗಳನ್ನು ನೀಡಲಾಗಿದ್ದು, ಕ್ರೋಮ್ ಅಸೆಂಟೆಡ್ ಫ್ರಂಟ್ ಗ್ರಿಲ್, ಸ್ಲಿಕ್ ಎಲ್ಇಡಿ ಹೆಡ್‌ಲ್ಯಾಂಪ್, ಸ್ಪೋರ್ಟಿ ಶೋಲ್ಡರ್ ಲೈನ್, ಫ್ಲಕ್ಸ್ ಸ್ಕಿಡ್ ಪ್ಲೇಟ್, ಎಲ್ಇಡಿ ಟೈಲ್‌ಲ್ಯಾಂಪ್ಸ್, ಫ್ಲಕ್ಸ್ ಏರ್ ಡ್ಯಾಮ್ಸ್, ಕ್ರೋಮ್ ಟ್ರಿಪಡ್ ಎಕ್ಸಾಸ್ಟ್ ಮತ್ತು 19-ಇಂಚಿನ ಅಲಾಯ್ ವೀಲ್ಹ್‌ಗಳನ್ನು ಹೊಂದಿದೆ.

MOST READ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ- ಆಟೋ ಉದ್ಯಮದಲ್ಲಿ ಹೊಸ ಸಂಚಲನ..

ಇನ್ನಷ್ಟು ವಿಳಂಬವಾಗಲಿದೆ ಹವಾಲ್ ಹೊಸ ಕಾರು ಬಿಡುಗಡೆ

ಇದಲ್ಲದೆ ಡ್ಯುಯಲ್ ಬಣ್ಣದ ಆಯ್ಕೆಯನ್ನು ಹೊಂದಿರುವ ಎಫ್5 ಕಾರಿನಲ್ಲಿ 9-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಲೆದರ್ ಆಸನಗಳು, 12.3-ಇಂಚಿನ ಫುಲ್-ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಹೊಂದಿದೆ.

ಇನ್ನಷ್ಟು ವಿಳಂಬವಾಗಲಿದೆ ಹವಾಲ್ ಹೊಸ ಕಾರು ಬಿಡುಗಡೆ

ಪ್ರಯಾಣಿಕ ಸುರಕ್ಷತೆಗಾಗಿ ಹೊಸ ಕಾರಿನಲ್ಲಿ ಆರು ಏರ್‌ಬ್ಯಾಗ್, ಲೇನ್ ಡಿಪಾರ್ಚರ್ ವಾರ್ನಿಂಗ್, ಲೇನ್ ಕಿಪ್ ಅಸಿಸ್ಟ್, 360 ಡಿಗ್ರಿ ಕ್ಯಾಮೆರಾ, ಪಾರ್ಕಿಂಗ್ ಕ್ಯಾಮೆರಾ ಜೊತೆಗೆ ಕಾರಿನ ಗುಣಮಟ್ಟದ ಕಾಯ್ದಕೊಳ್ಳಲು ಉತ್ಕೃಷ್ಟ ಸ್ಟೀಲ್ ಬಳಕೆ ಮಾಡಲಾಗಿದೆ.

MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ಇನ್ನಷ್ಟು ವಿಳಂಬವಾಗಲಿದೆ ಹವಾಲ್ ಹೊಸ ಕಾರು ಬಿಡುಗಡೆ

ಈ ಮೂಲಕ ಮಧ್ಯಮ ಕ್ರಮಾಂಕ ಎಸ್‌ಯುವಿ ಆವೃತ್ತಿಗಳಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳಬಹುದಾದ ಎಲ್ಲಾ ಗುಣಮಟ್ಟದ ವೈಶಿಷ್ಟ್ಯತೆಗಳನ್ನು ಹೊಸ ಕಾರು ಮುಂಬರುವ 2021ರ ಕೊನೆಯಲ್ಲಿ ಅಥವಾ 2022ರ ಆರಂಭದಲ್ಲಿ ಅಧಿಕೃತವಾಗಿ ಖರೀದಿಗೆ ಲಭ್ಯವಿರಲಿದ್ದು, ಕಾರಿನ ಬೆಲೆಯು ಆರಂಭಿಕವಾಗಿ ರೂ.14 ಲಕ್ಷದಿಂದ ರೂ.18 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

Most Read Articles

Kannada
English summary
GWM Haval launch could postpone in India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X