ಆಟೋ ಎಕ್ಸ್‌‌ಪೋ 2020: ಚೀನಾ ಮೂಲದ ಹೈಮಾ 8ಎಸ್ ಎಸ್‍‍‍ಯುವಿ ಅನಾವರಣ

2020ರ ಆಟೋ ಎಕ್ಸ್ ಪೋದಲ್ಲಿ ಭಾಗವಾಹಿಸಿದ ಪ್ರಮುಖ ಚೀನಾ ಮೂಲದ ಕಂಪನಿಗಳಲ್ಲಿ ಹೈಮಾ ಕೂಡ ಒಂದಾಗಿದೆ. ಹೈಮಾ ಕಂಪನಿಯು ತನ್ನ ಸರಣಿಯಲ್ಲಿರುವ ಪ್ರಮುಖ ಎಸ್‍‍ಯುವಿಗಳನ್ನು ಮತ್ತು ಎಲೆಕ್ಟ್ರಿಕ್ ಕಾರುಗಳನ್ನು ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಪಡಿಸಿದೆ.

ಆಟೋ ಎಕ್ಸ್‌‌ಪೋ 2020: ಚೀನಾ ಮೂಲದ ಹೈಮಾ 8ಎಸ್ ಎಸ್‍‍‍ಯುವಿ ಅನಾವರಣ

ಇದರೊಂದಿಗೆ ಹೈಮಾ ಕಂಪನಿಯು ತನ್ನ 8ಎಸ್ ಮಿಡ್ ಎಸ್‍‍ಯುವಿಯನ್ನು ಕೂಡ 2020ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿದೆ. ಈ ಕಂಪನಿಯು ತಮ್ಮದೆ ಹೈಮಾ ಗ್ಲೋಬಲ್ ಆರ್ಕಿಟೆಕ್ಚರ್(ಎಚ್‌ಎಂಜಿಎ) ಪ್ಲಾಟ್‍‍ಫಾರ್ಮ್‍ನಡಿಯಲ್ಲಿ ಎಸ್‍‍ಯುವಿ, ಎಂಪಿವಿ ಮತ್ತು ಎಲೆಕ್ಟ್ರಿಕ್ ಕಾರುಗಳನ್ನು ಅಭಿವೃದ್ದಿಪಡಿಸುತ್ತಿದ್ದಾರೆ. ಚೀನಾ ಮಾರುಕಟ್ಟೆಯಲ್ಲಿ ಹೈಮಾ ಜನಪ್ರಿಯ ಕಾರು ತಯಾರಕ ಕಂಪನಿಯಾಗಿದೆ.

ಆಟೋ ಎಕ್ಸ್‌‌ಪೋ 2020: ಚೀನಾ ಮೂಲದ ಹೈಮಾ 8ಎಸ್ ಎಸ್‍‍‍ಯುವಿ ಅನಾವರಣ

ಹೈಮಾ 8ಎಸ್ ಮಿಡ್ ಎಸ್‍‍ಯುವಿಯು ಕಿಯಾ ಸೆಲ್ಟೋಸ್ ಮತ್ತು ಎಂಜಿ ಹೆಕ್ಟರ್ ಎಸ್‍‍ಯುವಿಗಳಂತೆ ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಇದು ಭಾರತೀಯ ಮಾರಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಕಿಯಾ ಸೆಲ್ಟೋಸ್ ಮತ್ತು ಎಂಜಿ ಹೆಕ್ಟರ್ ಎಸ್‍‍ಯುವಿಗಳಿಗೆ ನೇರ ಪೈಪೋಟಿಯನ್ನು ನೀಡುತ್ತದೆ.

ಆಟೋ ಎಕ್ಸ್‌‌ಪೋ 2020: ಚೀನಾ ಮೂಲದ ಹೈಮಾ 8ಎಸ್ ಎಸ್‍‍‍ಯುವಿ ಅನಾವರಣ

ಹೈಮಾ 8ಎಸ್ ಮಿಡ್‍ ಎಸ್‍ಯುವಿಯು ಆಕರ್ಷಕ ಹೆಡ್‍‍ಲೈಟ್, ಮಲ್ಟಿ-ಸ್ಪೋಕ್ ಅಲಾಯ್ ವ್ಹೀಲ್ ಮತ್ತು ಆಲ್ ಎಲ್‍ಇಡಿ ಟೇಲ್ ಲೈಟ್‍, ಎಲ್ಇಡಿ ಡಿಆರ್‍ಎಲ್‍ಗಳೊಂದಿಗೆ ಸ್ಪ್ಲಿಟ್ ಹೆಡ್‍‍ಲೈಟ್‍‍ಗಳನ್ನು ಹೊಂದಿದೆ.

ಆಟೋ ಎಕ್ಸ್‌‌ಪೋ 2020: ಚೀನಾ ಮೂಲದ ಹೈಮಾ 8ಎಸ್ ಎಸ್‍‍‍ಯುವಿ ಅನಾವರಣ

ಈ ಎಸ್‍‍ಯುವಿಯ ಇಂಟಿರಿಯರ್‍‍ನಲ್ಲಿ ಫುಲ್ ಡಿ‍ಜಿ‍ಟಲ್ ಎನ್ಸ್ ಟ್ರೂಮೆಂಟ್ ಕ್ಲಸ್ಟರ್, ದೊಡ್ಡ ಟಚ್‍ಸ್ಕ್ರೀನ್ ಇನ್ಫೋಟೇನ್‍‍‍ಮೆಂಟ್ ಸಿಸ್ಟಂ ಅನ್ನು ಹೊಂದಿದೆ. 5 ಎಸಿ ವೆಂಟ್ಸ್ ಗಳನ್ನು ಹೊಂದಿದೆ. ಈ ಎಸ್‍ಯುವಿಯಲ್ಲಿ ದೊಡ್ಡ ಪನೋರಮಿಕ್ ಸನ್‌ರೂಫ್ ಅನ್ನು ಅಳವಡಿಸಲಾಗಿದೆ. ಹೈಮಾ 8ಎಸ್ 5 ಸೀಟಿನ ಮಿಡ್ ಎಸ್‍‍ಯುವಿಯಾಗಿದೆ.

ಆಟೋ ಎಕ್ಸ್‌‌ಪೋ 2020: ಚೀನಾ ಮೂಲದ ಹೈಮಾ 8ಎಸ್ ಎಸ್‍‍‍ಯುವಿ ಅನಾವರಣ

ಈ 8ಎಸ್ ಎಸ್‍‍ಯುವಿಯಲ್ಲಿ 1.6 ಲೀಟರ್ ಟಿ-ಜಿಡಿ‍ಐ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 190 ಬಿ‍‍ಹೆಚ್‍ಪಿ ಪವರ್ ಮತ್ತು 195 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 6 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಈ ಹೈಮಾ 8ಎಸ್ ಎಸ್‍‍ಯುವಿಯು 0-100 ಕಿ.ಮೀ ಅನ್ನು ಕೇವಲ 7.8 ಸೆಕೆಂಡುಗಳಲ್ಲಿ ಕ್ರಮಿಸುತ್ತದೆ. ಈ 8ಎಸ್‍ ಮಿಡ್‍ ಎಸ್‍ಯುವಿಯು ಮೂರು ಡೈವ್ ಮೋಡ್‍‍ಗಳನ್ನು ಹೊಂದಿದೆ.

ಆಟೋ ಎಕ್ಸ್‌‌ಪೋ 2020: ಚೀನಾ ಮೂಲದ ಹೈಮಾ 8ಎಸ್ ಎಸ್‍‍‍ಯುವಿ ಅನಾವರಣ

ಹೈಮಾ ಆಟೋಮೊಬೈಲ್ ಕಂಪನಿಯು ರಾಜ್ಯ ಮತ್ತು ಕೇಂದ್ರ ಸರ್ಕಾರಗಳೊಂದಿಗೆ ಮಾತುಕತೆ ನಡೆಸುತ್ತಿದೆ ಮತ್ತು ಈ ಬಾರಿ ಭಾರತೀಯ ಮಾರುಕಟ್ಟೆಯ ಸಮೀಕ್ಷೆಗಳನ್ನು ಸಹ ನಡೆಸುತ್ತಿದೆ. ಚೀನಾ ಮೂಲದ ಕಾರು ತಯಾರಕ ಕಂಪನಿಯಾದ ಹೈಮಾ ಭಾರತೀಯ ಮಾರುಕಟ್ಟೆಯಲ್ಲಿ ಯಾವ ರೀತಿ ಪ್ರಭಾವವನ್ನು ಬೀರುತ್ತದೆ ಎಂಬುವುದನ್ನು ಕಾದು ನೋಡಬೇಕು.

ಆಟೋ ಎಕ್ಸ್‌‌ಪೋ 2020: ಚೀನಾ ಮೂಲದ ಹೈಮಾ 8ಎಸ್ ಎಸ್‍‍‍ಯುವಿ ಅನಾವರಣ

ಭಾರತೀಯ ಮಾರುಕಟ್ಟೆಯಲ್ಲಿ ಮಿಡ್ ಎಸ್‍ಯುವಿ ಸೆಗ್‍‍ಮೆಂಟ್‍‍ನಲ್ಲಿ ಉತ್ತಮ ಪೈಪೋಟಿಯನ್ನು ಹೊಂದಿದೆ. ಹೈಮಾ 8ಎಸ್ ಬಿಡುಗಡೆಯಾದ ಬಳಿಕ ಮಿಡ್ ಎಸ್‍‍ಯುವಿ ಸೆಗ್‍‍ಮೆಂಟ್‍‍ನಲ್ಲಿ ಪೈಪೋಟಿಯು ಮತ್ತಷ್ಟು ಹೆಚ್ಚಾಗುತ್ತದೆ.

Most Read Articles

Kannada
English summary
China’s Haima 8S wants a slice of India’s midsize SUV pie. Read in Kannada.
Story first published: Friday, February 7, 2020, 11:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X