ಉತ್ಪಾದನಾ ಘಟಕವನ್ನು ಮುಚ್ಚಿದ ಹೋಂಡಾ ಕಾರ್ಸ್ ಕಂಪನಿ

ಕಳೆದ ವರ್ಷ ಹೋಂಡಾ ಕಾರ್ಸ್ ಕಂಪನಿಯು ತನ್ನ ಉತ್ಪಾದನಾ ಘಟಕಗಳಲ್ಲಿ ಒಂದು ಘಟಕವನ್ನು ಸ್ಥಗಿತಗೊಳಿಸಲಿದೆ ಎಂದು ವರದಿಗಳಾಗಿದ್ದವು. ನೋಯ್ಡಾ ಘಟಕವನ್ನು ಮುಚ್ಚಿ ಎಲ್ಲಾ ಕೆಲಸಗಳನ್ನು ತಪುಕರ ಘಟಕಕ್ಕೆ ಸ್ಥಳಾಂತರಿಸಲಾಗುವುದು ಎಂದು ವರದಿಗಳಾಗಿದ್ದವು.

ಉತ್ಪಾದನಾ ಘಟಕವನ್ನು ಮುಚ್ಚಿದ ಹೋಂಡಾ ಕಾರ್ಸ್ ಕಂಪನಿ

ಘಟಕಗಳನ್ನು ಪುನರ್ ರಚಿಸಲು ಹೋಂಡಾ ಕಂಪನಿಯು ಈ ಕ್ರಮ ಕೈಗೊಂಡಿದೆ. ಕಳೆದ ಎರಡು ದಶಕಗಳಿಂದ ಹೋಂಡಾ ಕಂಪನಿಯ ನೋಯ್ಡಾ ಘಟಕದಲ್ಲಿ ಹೋಂಡಾ ಕಂಪನಿಯ ಕಾರುಗಳನ್ನು ಉತ್ಪಾದಿಸಲಾಗುತ್ತಿತ್ತು. ಆದರೆ ಕಳೆದ ತಿಂಗಳಿನಿಂದ ಈ ಘಟಕದಲ್ಲಿನ ಉತ್ಪಾದನೆಯನ್ನು ನಿಲ್ಲಿಸಲಾಗಿದೆ. ಈ ಘಟಕದಲ್ಲಿ ಸಿಟಿ, ಸಿಆರ್-ವಿ ಹಾಗೂ ಸಿವಿಕ್ ಕಾರುಗಳನ್ನು ಉತ್ಪಾದಿಸಲಾಗುತ್ತಿತ್ತು.

ಉತ್ಪಾದನಾ ಘಟಕವನ್ನು ಮುಚ್ಚಿದ ಹೋಂಡಾ ಕಾರ್ಸ್ ಕಂಪನಿ

ಈ ಘಟಕದಲ್ಲಿ ಡಿಸೆಂಬರ್‌ ತಿಂಗಳಿನಲ್ಲಿ ಒಂದೇ ಒಂದು ಘಟಕವನ್ನು ಉತ್ಪಾದಿಸಿಲ್ಲ ಎಂದು ಹೇಳಲಾಗಿದೆ. ಆದರೆ ಕಂಪನಿಯ ಕಾರ್ಪೊರೇಟ್ ಕಚೇರಿ ಹಾಗೂ ಆರ್ ಅಂಡ್ ಡಿ ಘಟಕಗಳು ಇಲ್ಲಿಯೇ ಮುಂದುವರೆಯಲಿವೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಉತ್ಪಾದನಾ ಘಟಕವನ್ನು ಮುಚ್ಚಿದ ಹೋಂಡಾ ಕಾರ್ಸ್ ಕಂಪನಿ

ಕಂಪನಿಯ ಇನ್ನಿತರ ಘಟಕಗಳಲ್ಲಿ ಪ್ರತಿವರ್ಷ 1,80,000 ಯೂನಿಟ್ ಗಳನ್ನು ಉತ್ಪಾದಿಸಬಹುದು. ಹೋಂಡಾ ಕಾರ್ಸ್ ಕಂಪನಿಯು ಇತ್ತೀಚಿಗೆ ನೋಯ್ಡಾ ಘಟಕದಲ್ಲಿ ಕೆಲಸ ಮಾಡುವ ಖಾಯಂ ಉದ್ಯೋಗಿಗಳಿಗಾಗಿ ವಿಆರ್'ಎಸ್ ಅನ್ನು ಘೋಷಿಸಿತು.

ಉತ್ಪಾದನಾ ಘಟಕವನ್ನು ಮುಚ್ಚಿದ ಹೋಂಡಾ ಕಾರ್ಸ್ ಕಂಪನಿ

ಈ ಯೋಜನೆ ಜನವರಿ 28ರಿಂದ ಜಾರಿಗೆ ಬರಲಿದೆ. ಕಂಪನಿಯು ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡದಿದ್ದರೂ ಇದು ಕಂಪನಿಯು ತನ್ನ ನೋಯ್ಡಾ ಘಟಕವನ್ನು ಮುಚ್ಚುವುದರ ಸಂಕೇತವಾಗಿದೆ. ಇದರಿಂದ ಎಲ್ಲಾ ಉದ್ಯೋಗಿಗಳು ಉತ್ಪಾದನಾ ಘಟಕ ಮುಚ್ಚುವ ಮೊದಲು ಕೆಲಸ ಬಿಡಬಹುದು.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಉತ್ಪಾದನಾ ಘಟಕವನ್ನು ಮುಚ್ಚಿದ ಹೋಂಡಾ ಕಾರ್ಸ್ ಕಂಪನಿ

ನೋಯ್ಡಾ ಘಟಕವನ್ನು ಮೊದಲು 30,000 ಯೂನಿಟ್ ಗಳ ಉತ್ಪಾದನಾ ಸಾಮರ್ಥ್ಯದೊಂದಿಗೆ ಆರಂಭಿಸಲಾಯಿತು. ನಂತರ ಈ ಸಾಮರ್ಥ್ಯವನ್ನು 1,00,000 ಯೂನಿಟ್ ಗಳಿಗೆ ಹೆಚ್ಚಿಸಲಾಯಿತು. ಈ ಉತ್ಪಾದನಾ ಘಟಕದಲ್ಲಿ ಸುಮಾರು 2000 ಉದ್ಯೋಗಿಗಳು ಕೆಲಸ ಮಾಡುತ್ತಿದ್ದರು.

ಉತ್ಪಾದನಾ ಘಟಕವನ್ನು ಮುಚ್ಚಿದ ಹೋಂಡಾ ಕಾರ್ಸ್ ಕಂಪನಿ

ಈಗ ಸುಮಾರು 1000 ಕಾರ್ಮಿಕರು ವಿಆರ್'ಎಸ್ ತೆಗೆದುಕೊಳ್ಳುತ್ತಿದ್ದಾರೆ. ಉಳಿದ ನೌಕರರನ್ನು ಬೇರೆ ಘಟಕಕ್ಕೆ ವರ್ಗಾಯಿಸಲಾಗುತ್ತದೆ. ಇನ್ನು ಕಂಪನಿಯ ಮಾರಾಟದ ಬಗ್ಗೆ ಹೇಳುವುದಾದರೆ ಹೋಂಡಾ ಕಾರ್ಸ್ ಇಂಡಿಯಾ 2020ರ ನವೆಂಬರ್‌ ತಿಂಗಳಿನ ಮಾರಾಟದ ಅಂಕಿಅಂಶಗಳನ್ನು ಬಿಡುಗಡೆಗೊಳಿಸಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಉತ್ಪಾದನಾ ಘಟಕವನ್ನು ಮುಚ್ಚಿದ ಹೋಂಡಾ ಕಾರ್ಸ್ ಕಂಪನಿ

ಈ ಅಂಕಿಅಂಶಗಳ ಪ್ರಕಾರ ಹೋಂಡಾ ಕಾರ್ಸ್ ಕಳೆದ ತಿಂಗಳು 9,990 ಯುನಿಟ್ ಕಾರುಗಳನ್ನು ಮಾರಾಟ ಮಾಡಿದೆ. ಕಂಪನಿಯು ಬಿಡುಗಡೆಗೊಳಿಸಿರುವ ಮಾಹಿತಿಯ ಪ್ರಕಾರ 2019ರ ನವೆಂಬರ್‌ ತಿಂಗಳಿಗೆ ಹೋಲಿಸಿದರೆ ಈ ವರ್ಷದ ನವೆಂಬರ್ ತಿಂಗಳಿನಲ್ಲಿ ಕಂಪನಿಯ ಮಾರಾಟವು 54.7%ನಷ್ಟು ಹೆಚ್ಚಾಗಿದೆ.

ಉತ್ಪಾದನಾ ಘಟಕವನ್ನು ಮುಚ್ಚಿದ ಹೋಂಡಾ ಕಾರ್ಸ್ ಕಂಪನಿ

ನವೆಂಬರ್‌ನಲ್ಲಿ ಹೋಂಡಾ ಕಾರ್ಸ್ ಇಂಡಿಯಾ 6,459 ಯುನಿಟ್‌ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದೆ. ದೇಶಿಯ ಮಾರುಕಟ್ಟೆಯ ಮಾರಾಟದ ವಿಷಯದಲ್ಲಿ ಹೋಂಡಾ ಕಾರ್ಸ್ ಇಂಡಿಯಾ 7ನೇ ಸ್ಥಾನವನ್ನು ಪಡೆದಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಉತ್ಪಾದನಾ ಘಟಕವನ್ನು ಮುಚ್ಚಿದ ಹೋಂಡಾ ಕಾರ್ಸ್ ಕಂಪನಿ

ಕಂಪನಿಯು 3.5%ನಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. ಅಂಕಿಅಂಶಗಳ ಪ್ರಕಾರ ಈ ಪ್ರಮಾಣವು ವರ್ಷದಿಂದ ವರ್ಷಕ್ಕೆ 1%ನಷ್ಟು ಹೆಚ್ಚಾಗುತ್ತಿದೆ. ಅಮೇಜ್ ಹಾಗೂ ಹೋಂಡಾ ಸಿಟಿ ಕಾರುಗಳು ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯ ಜನಪ್ರಿಯ ಮಾದರಿಗಳಾಗಿವೆ.

ಉತ್ಪಾದನಾ ಘಟಕವನ್ನು ಮುಚ್ಚಿದ ಹೋಂಡಾ ಕಾರ್ಸ್ ಕಂಪನಿ

ಈ ಎರಡೂ ಮಾದರಿಗಳು ಕಳೆದ ತಿಂಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿವೆ. ಹೋಂಡಾ ಅಮೇಜ್ ಕಾಂಪ್ಯಾಕ್ಟ್ ಸೆಡಾನ್ ನವೆಂಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಕಾರುಗಳಲ್ಲಿ ಒಂದಾಗಿದೆ.

Most Read Articles

Kannada
Read more on ಹೋಂಡಾ honda
English summary
Honda cars India closes Noida production plant. Read in Kannada.
Story first published: Saturday, December 19, 2020, 10:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X