Just In
Don't Miss!
- Sports
ಭಾರತ vs ಆಸ್ಟ್ರೇಲಿಯಾ 4ನೇ ಟೆಸ್ಟ್ ಸಿಡ್ನಿ, ದಿನ 4, Live ಸ್ಕೋರ್
- News
ಬೆಂಗಳೂರಿನ ವಿವಿಧೆಡೆ ಜನವರಿ 18 ರಿಂದ 22ರವರೆಗೆ ವಿದ್ಯುತ್ ವ್ಯತ್ಯಯ
- Lifestyle
"ಸೋಮವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ"
- Finance
Flipkart Big Saving Days: ಆಪಲ್, ಸ್ಯಾಮ್ಸಂಗ್ ಸೇರಿ ಹಲವು ಬ್ರ್ಯಾಂಡ್ ಗಳ ಆಫರ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಸ ವರ್ಷದಿಂದ ದುಬಾರಿಯಾಗಲಿವೆ ಇಸುಝು ಮಾದರಿಗಳು
ಜಪಾನ್ ಮೂಲದ ವಾಹನ ತಯಾರಕ ಕಂಪನಿಯಾದ ಇಸುಝು ಮೋಟಾರ್ಸ್ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಕಮರ್ಷಿಯಲ್ ವಾಹನಗಳ ಬೆಲೆ ಹೆಚ್ಚಳವನ್ನು ಘೋಷಿಸಿದೆ. ಇದು ಇತ್ತೀಚೆಗೆ ದೇಶದಲ್ಲಿ ಬಿಡುಗಡೆಯಾದ ಡಿ-ಮ್ಯಾಕ್ಸ್ ಮತ್ತು ಡಿ-ಮ್ಯಾಕ್ಸ್ ಎಸ್-ಕ್ಯಾಬ್ ಮಾದರಿಗಳನ್ನು ಒಳಗೊಂಡಿದೆ.

ಇಸುಝು ಮೋಟಾರ್ಸ್ ಕಂಪನಿಯು ತನ್ನ ಡಿ-ಮ್ಯಾಕ್ಸ್ ಮತ್ತು ಡಿ-ಮ್ಯಾಕ್ಸ್ ಎಸ್-ಕ್ಯಾಬ್ ಮಾದರಿಗಳ ಬೆಲೆಯನ್ನು ರೂ.10,000 ಗಳವರೆಗೆ ಹೆಚ್ಚಿಸಲಾಗುತ್ತದೆ. ಇಸುಝು ಈ ಮಾದರಿಗಳ ಬೆಲೆ ಏರಿಕೆಯು 2021ರ ಜನವರಿ 1 ರಿಂದ ಜಾರಿಯಾಗುತ್ತದೆ. ದೇಶದಲ್ಲಿ ಉತ್ಪಾದನೆ ಮತ್ತು ಲಾಜಿಸ್ಟಿಕ್ಸ್ ವೆಚ್ಚವನ್ನು ಸರಿದೂಗಿಸಲು ಇಸುಝು ತನ್ನ ಮಾದರಿಗಳ ಬೆಲೆಯನ್ನು ಹೆಚ್ಚಿಸಲಾಗಿದೆ.

ಇತ್ತೀಚೆಗೆ ಇಸುಝು ಕಂಪನಿಯು ಬಿಎಸ್ 6 ಪ್ರೇರಿತ ಕಮರ್ಷಿಯಲ್ ವಾಹನಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಡಿ-ಮ್ಯಾಕ್ಸ್ ಸಾಮಾನ್ಯ ಕ್ಯಾಬ್ ಮೂರು ರೂಪಾಂತರಗಳಲ್ಲಿ ಲಭ್ಯವಿದೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಇದು ಡಿ-ಮ್ಯಾಕ್ಸ್ ಕ್ಯಾಬ್ ಚಾಸಿಸ್, ಡಿ-ಮ್ಯಾಕ್ಸ್ ಮತ್ತು ಡಿ-ಮ್ಯಾಕ್ಸ್ ಸೂಪರ್ ಸ್ಟ್ರಾಂಗ್. ಬೇಸ್-ಸ್ಪೆಕ್ ಡಿ-ಮ್ಯಾಕ್ಸ್ ರೂಪಾಂತರಗಳಾಗಿದೆ. ಇದರ ಆರಂಭಿಕ ಬೆಲೆಯು ರೂ.7.84 ಲಕ್ಷಗಳಾದರೆ ಟಾಪ್ ಟಾಪ್-ಸ್ಪೆಕ್ ಮಾದರಿಗೆ ರೂ.8.38 ಲಕ್ಷಗಳಾಗಿದೆ.

ಹೊಸ ಇಸುಝು ಡಿ-ಮ್ಯಾಕ್ಸ್ ಮತ್ತು ಡಿ-ಮ್ಯಾಕ್ಸ್ ಎಸ್-ಕ್ಯಾಬ್ ಮಾದರಿಗಳಲ್ಲಿ ಒಂದೇ ರೀತಿಯ ಎಂಜಿನ್ ಗಳನ್ನು ಅಳವಡಿಸಲಾಗಿದೆ. ಇದು 2.5-ಲೀಟರ್ ಕಾಮನ್-ರೈಲ್, ಇಂಟರ್-ಕೂಲ್ಡ್, ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್ ಆಗಿದೆ.
MOST READ: ನವೆಂಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಕಾರುಗಳಿವು

ಈ ಎಂಜಿನ್ 78 ಬಿಹೆಚ್‍ಪಿ ಪವರ್ ಮತ್ತು 176 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು ಐದು-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗಿದೆ.

ಇನ್ನು ಇಸುಝು ಮೋಟಾರ್ಸ್ ಕಂಪನಿಯು ಭಾರತದಲ್ಲಿ ಹೊಸ ಸೀಮಿತ ಅವಧಿಯ "ವಿಂಟರ್ ಸರ್ವಿಸ್ ಅಭಿಯಾನ" ವನ್ನು ಆರಂಭಿಸಿದೆ. ಈ ಅಭಿಯಾನ ಚಳಿಗಾಲದ ಆವಧಿಯಲ್ಲಿ ತಮ್ಮ ಪಿಕ್ ಅಪ್ ಟ್ರಕ್‌ಗಳನ್ನು ಸರಿಯಾದ ನಿರ್ವಹಣೆಗೆ ಸಹಾಯ ಮಾಡುತ್ತದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಹೊಸ ಸರ್ವಿಸ್ ಮತ್ತು ನಿರ್ವಹಣಾ ಶಿಬಿರವು ವಾಹನಗಳ ಸಂಪೂರ್ಣ ಪರಿಶೀಲನೆ, ಲೇಬರ್ ಜಾರ್ಜ್ ಮತ್ತು ಸ್ಪೇರ್ ಪಾರ್ಟ್ಸ್ ಮೇಲಿನ ರಿಯಾಯಿತಿಗಳು ಮತ್ತು ಇತರ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಚಳಿಗಾಲದ ಸರ್ವಿಸ್ ಶಿಬಿರವು ಇದೇ ತಿಂಗಳ 18 ರಿಂದ ಪ್ರಾರಂಭವಾಗಿ 24 ರವರೆಗೆ ನಡೆಯುತ್ತಿದೆ.

ದೇಶಾದ್ಯಂತ ಇರುವ ಇಸುಝು ಕಂಪನಿಯ ಎಲ್ಲಾ ಡೀಲರ್ ಬಳಿ ಚಳಿಗಾಲದ ಸರ್ವಿಸ್ ಕೇರ್ ಶಿಬಿರದ ಪ್ರಯೋಜವನ್ನು ಪಡೆಯಬಹುದು. ಸರ್ವಿಸ್ ಶಿಬಿರದಲ್ಲಿ ಕಂಪನಿಯು ಇಸುಝು ವಾಹನಗಳ ಮೇಲೆ 50-ಪಾಯಿಂಟ್ ಚೆಕ್-ಅಪ್ ಅನ್ನು ಉಚಿತವಾಗಿ ನೀಡುತ್ತಿದೆ. ಇದರಲ್ಲಿ ಎಂಜಿನ್ ಆಯಿಲ್ ಮತ್ತು ವಾಹನದ ಇತರ ಕಾರ್ಯಾಚರಣೆಯ ಒಳಗೊಂಡಂತಹ ಪರಿಶೀಲನೆಯನ್ನು ನಡೆಸುತ್ತಾರೆ.
MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಸರಿಯಾಗಿ ಕಾರ್ಯನಿರ್ವಹಿಸದ ಯಾವುದೇ ಬಿಡಿಭಾಗವನ್ನು ಸರ್ವಿಸ್ ಸೆಂಟರ್ ನಲ್ಲಿ ತರಬೇತಿ ಹೊಂದಿದ್ದ ತಂತ್ರಜ್ಞರು ಗ್ರಾಹಕರ ಒಪ್ಪಿಗೆಯ ನಂತರ ಬದಲಾಯಿಸಲಾಗುತ್ತದೆ. ಚಳಿಗಾಲದಲ್ಲಿ ನಿಮ್ಮ ವಾಹನವನ್ನು ಸರಿಯಾಗಿ ಮ್ಯಾಟೇನ್ ಮಾಡಲು ಕಂಪನಿಯು ಶಿಬಿರವನ್ನು ಅಯೋಜಿಸಿದ್ದಾರೆ.

ಅಲ್ಲದೇ ಶಿಬಿರದಲ್ಲಿ ಹಲವಾರು ರಿಯಾಯಿತಿಗಳನ್ನು ಪಡೆಯಬಹುದು. ಶೀಭಿರದಲ್ಲಿ ಯಾವುದೇ ಸರ್ವಿಸ್ ಮತ್ತು ನಿರ್ವಹಣಾ ಕಾರ್ಯಗಳಿಗೆ ಕಾರ್ಮಿಕ ವೆಚ್ಚದ ಮೇಲೆ ಶೇ.10 ರಷ್ಟು ರಿಯಾಯಿತಿ ನೀಡುತ್ತಿದೆ. ಹೆಚ್ಚುವರಿಯಾಗಿ ಸರ್ವಿಸ್ ಸಮಯದಲ್ಲಿ ಬದಲಾದ ಯಾವುದೇ ಬಿಡಿಭಾಗಗಳಿಗೆ ಕಂಪನಿಯು ಶೇ.7 ರಷ್ಟು ರಿಯಾಯಿತಿ ನೀಡುತ್ತದೆ.

ಇಸುಝು ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಜನಪ್ರಿಯ ಮಾದರಿಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇನ್ನು ಈಗಾಗಲೇ ಬಿಡುಗಡೆಗೊಂಡಿರುವ ಡಿ-ಮ್ಯಾಕ್ಸ್ ಮತ್ತು ಡಿ-ಮ್ಯಾಕ್ಸ್ ಎಸ್-ಕ್ಯಾಬ್ ಮಾದರಿಗಳು ಹೊಸ ವರ್ಷದಿಂದ ದುಬಾರಿಯಾಗಲಿವೆ.