Just In
Don't Miss!
- News
ಹುಣಸೋಡು ಜಿಲೆಟಿನ್ ಸ್ಪೋಟ: ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ
- Sports
ಯುವರಾಜ್ ಸಿಂಗ್ ಕೋಚಿಂಗ್ ಬಹಳ ಉಪಯೋಗಕ್ಕೆ ಬಂತು: ಗಿಲ್
- Lifestyle
ಕೊಲೆಸ್ಟ್ರಾಲ್ ಹೆಚ್ಚಾಗಿದೆಯೇ? ಈ ಆಹಾರ ಸೇವಿಸಿ
- Education
RITES Limited Recruitment 2021: ವಿವಿಧ 9 ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ದುಬಾರಿ ವಿವಾಹ; ವರುಣ್ ಧವನ್ ಮದುವೆ ನಡೆಯುತ್ತಿರುವ ಐಷಾರಾಮಿ ಹೋಟೆಲ್ ಗೆ ಇಷ್ಟೊಂದು ಖರ್ಚು ಮಾಡುತ್ತಿದ್ದಾರಾ?
- Finance
ಬಜೆಟ್ 2021: ಜ. 23ರಂದು ಹಲ್ವಾ ಕಾರ್ಯಕ್ರಮ- ಇದೇನು, ಎತ್ತ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಜೀಪ್ ಕಂಪಾಸ್ ಎಸ್‍ಯುವಿಯ ಮೇಲೆ ರೂ.3 ಲಕ್ಷದವರೆಗೆ ಭರ್ಜರಿ ರಿಯಾಯಿತಿ
ಜೀಪ್ ಇಂಡಿಯಾ ಕಂಪನಿಯು ವರ್ಷಾಂತ್ಯದಲ್ಲಿ ತನ್ನ ಬಿಎಸ್-6 ಕಂಪಾಸ್ ಎಸ್‍ಯುವಿಯ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ಜೀಪ್ ಕಂಪನಿಯು ಮಾರಾಟವನ್ನು ಹೆಚ್ಚಿಸಲು ತನ್ನ ಕಂಪಾಸ್ ಎಸ್‍ಯುವಿಯ ಮೇಲೆ ರೂ.3 ಲಕ್ಷ ಗಳವರೆಗೆ ರಿಯಾಯಿತಿಯನ್ನು ನೀಡಿದೆ.

ವರದಿ ಪ್ರಕಾರ, ಜೀಪ್ ಕಂಪಾಸ್ ಎಸ್‍ಯುವಿಯ ಮೇಲೆ ಒಟ್ಟು ರೂ.3 ಲಕ್ಷ ಗಳವರೆಗೆ ರಿಯಾಯಿತಿಯನ್ನು ನೀಡಲಾಗುತ್ತಿದೆ. ಇದರಲ್ಲಿ ರೂ.1.80 ಲಕ್ಷಗಳವರೆಗೆ ನಗದು ರಿಯಾಯಿತಿ, ರೂ.50,000 ಗಳವರೆಗಿನ ಎಕ್ಸ್‌ಚೆಂಜ್ ಬೋನಸ್, ರೂ.50,000 ಗಳವರೆಗಿನ ಮೌಲ್ಯದ ಅಕ್ಸೆಸರೀಸ್ ಮತ್ತು ರೂ.20,000 ಗಳವರೆಗಿನ ಲಾಯಲ್ಟಿ ಬೋನಸ್ ಅನ್ನು ಒಳಗೊಂಡಿದೆ.

ಎಫ್‌ಸಿಎ ಇಂಡಿಯಾ ಕಂಪನಿಯು 2016ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಜೀಪ್ ಬ್ರ್ಯಾಂಡ್ ಅನ್ನು ಪರಿಚಯಿಸಿತು. ಜೀಪ್ ಬ್ರ್ಯಾಂಡ್ ಭಾರತದಲ್ಲಿ ಆರಂಭದಲ್ಲಿ ರ‍್ಯಾಂಗ್ಲರ್ ಮತ್ತು ಗ್ರ್ಯಾಂಡ್ ಚೆರೋಕೀ ಮಾದರಿಗಳನ್ನು ಬಿಡುಗಡೆಗೊಳಿಸಿದರು.
MOST READ: ನವೆಂಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಕಾರುಗಳಿವು

ಜೀಪ್ ರ‍್ಯಾಂಗ್ಲರ್ ಮತ್ತು ಗ್ರ್ಯಾಂಡ್ ಚೆರೋಕೀ ಪ್ರೀಮಿಯಂ ಎಸ್‍ಯುವಿಗಳು ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹರನ್ನು ಸೆಳೆಯುವಲ್ಲಿ ಯಶ್ವಸಿಯಾಗಿಲ್ಲ. ನಂತರ 2017ರ ಜುಲೈನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಜೀಪ್ ಬ್ರ್ಯಾಂಡ್ ಕಂಪಾಸ್ ಎಸ್‍ಯುವಿಯನ್ನು ಪರಿಚಯಿಸಿದ್ದರು. ಜೀಪ್ ಕಂಪಾಸ್ ಎಸ್‍ಯುವಿ ಭಾರತೀಯ ಗ್ರಾಹಕರನ್ನು ಸೆಳೆಯುವಲ್ಲಿ ಯಶ್ವಸಿಯಾಗಿತ್ತು.

ಆದರೆ ಇತ್ತೀಚೆಗೆ ಜೀಪ್ ಕಂಪಾಸ್ ಎಸ್‍ಯುವಿಯ ಮಾರಾಟದಲ್ಲಿ ಕುಸಿತವನ್ನು ಕಂಡಿದೆ. ಜೀಪ್ ಕಂಪಾಸ್ ಪೆಟ್ರೋಲ್ ಆವೃತ್ತಿಯು1.4 ಲೀಟರ್ ಟರ್ಬೊ ಎಂಜಿನ್ ಅನ್ನು ಹೊಂದಿದೆ. ಈ ಪೆಟ್ರೋಲ್ ಎಂಜಿನ್ 161 ಬಿಹೆಚ್‍ಪಿ ಪವರ್ ಮತ್ತು 250 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 6 ಸ್ಪೀಡ್ ಮ್ಯಾನುವಲ್ ಮತ್ತು 9 ಸ್ಪೀಡ್ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಅನ್ನು ಅಳವಡಿಸಲಾಗಿದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಜೀಪ್ ಕಂಪಾಸ್‍ನ ಲಾಂಗಿಟ್ಯೂಡ್ ಮತ್ತು ಲಿಮಿಟೆಡ್ ಪ್ಲಸ್ ರೂಪಾಂತದಲ್ಲಿ 2.0 ಲೀಟರ್ ಡೀಸೆಲ್ ಎಂಜಿನ್ ಹೊಂದಿದೆ. ಈ ಎಂಜಿನ್ 173 ಬಿಹೆಚ್‍ಪಿ ಪವರ್ ಮತ್ತು 350 ಎನ್‍ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಎಂಜಿನ್‍ನೊಂದಿಗೆ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಆಲ್-ವ್ಹೀಲ್-ಡ್ರೈವ್ ಸಿಸ್ಟಂ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ. ಹೊಸ ಎಂಜಿನ್ ಆಯ್ಕೆಯ ಹೊರತಾಗಿ ಜೀಪ್ ಕಂಪಾಸ್‍ನ ಲಾಂಗಿಟ್ಯೂಡ್ ಮತ್ತು ಲಿಮಿಟೆಡ್ ಪ್ಲಸ್ ಎರಡೂ ರೂಪಾಂತರಗಳು ಬಹುತೇಕ ಒಂದೇ ರೀತಿಯಲ್ಲಿವೆ.
MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಬಿಎಸ್-6 ಜೀಪ್ ಕಂಪಾಸ್ ಭಾರತದಲ್ಲಿ ಕಿಯಾ ಸೆಲ್ಟೋಸ್, ಎಂಜಿ ಹೆಕ್ಟರ್, ಟಾಟಾ ಹ್ಯಾರಿಯರ್ ಮತ್ತು ಮಹೀಂದ್ರಾ ಎಕ್ಸ್‌ಯುವಿ 500 ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

ಜೀಪ್ ಕಂಪನಿಯು ಹೊಸ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಹೊಸ ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯು ಹಲವಾರು ಹೊಸ ಅಪ್ದೇಟ್ ಗಳೊಂದಿಗೆ ಭಾರತದಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಹಲವು ಬಾರಿ ಭಾರತದಲ್ಲಿ ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯು ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ.