ಕರೋನಾ ಎಫೆಕ್ಟ್- ಕಾರುಗಳ ವಾರಂಟಿ ಅವಧಿಯನ್ನು ವಿಸ್ತರಿಸಿದ ಜೆಎಲ್ಆರ್

ಕರೋನಾ ವೈರಸ್‌ನಿಂದಾಗಿ ಜಗತ್ತಿನಾದ್ಯಂತ ಎಲ್ಲಾ ವಾಣಿಜ್ಯಗಳು ಸ್ಥಗಿತಗೊಂಡಿದ್ದು, ಆಟೋ ಉತ್ಪಾದನಾ ಕಂಪನಿಗಳು ಸಹ ಭಾರೀ ಪ್ರಮಾಣದ ನಷ್ಟು ಅನುಭವಿಸುತ್ತಿವೆ. ಹೀಗಿದ್ದರೂ ಕೂಡಾ ತಮ್ಮ ನೆಚ್ಚಿನ ಗ್ರಾಹಕರಿಗೆ ಹೆಚ್ಚುವರಿ ಖಾತರಿ ಘೋಷಣೆ ಮಾಡುತ್ತಿದ್ದು, ವಾರಂಟಿ ಅವಧಿಯನ್ನು ಮುಂದಿನ ಎರಡು ತಿಂಗಳಿಗೆ ವಿಸ್ತರಣೆ ಮಾಡುತ್ತಿವೆ.

ಕರೋನಾ ಎಫೆಕ್ಟ್- ಕಾರುಗಳ ವಾರಂಟಿ ಅವಧಿಯನ್ನು ವಿಸ್ತರಿಸಿದ ಜೆಎಲ್ಆರ್

ಜೆಎಲ್ಆರ್(ಜಾಗ್ವಾರ್, ಲ್ಯಾಂಡ್ ರೋವರ್ ಮತ್ತು ರೇಂಜ್ ರೋವರ್) ಕಂಪನಿಯು ಕೂಡಾ ತನ್ನ ಗ್ರಾಹಕರಿಗೆ ವಾರಂಟಿ ಅವಧಿಯನ್ನು ಹೆಚ್ಚಿಸಿ ಧೈರ್ಯ ತುಂಬಿದ್ದು, ಮಾರ್ಚ್, ಎಪ್ರಿಲ್ ಅವಧಿಯಲ್ಲಿ ವಾರಂಟಿ ಮುಕ್ತಾಯಗೊಳ್ಳಬೇಕಿದ್ದ ಕಾರುಗಳಿಗೆ ಎರಡು ತಿಂಗಳ ಹೆಚ್ಚುವರಿ ವಾರಂಟಿ ಘೋಷಿಸಿದೆ. ಇಲ್ಲದೆ ಗ್ರಾಹಕರು ತಮ್ಮ ಆಯ್ಕೆಗೆ ಅನುಗುಣವಾಗಿ 2 ತಿಂಗಳು ಅಥವಾ 3,200 ಕಿ.ಮೀ ರನ್ನಿಂಗ್ ಮೇಲೆ ವಾರಂಟಿ ಪಡೆದುಕೊಳ್ಳಬಹುದಾಗಿದ್ದು, ತುರ್ತು ಸಹಾಯವಾಣಿ ಸೌಲಭ್ಯವನ್ನು ತೆರೆದಿದೆ.

ಕರೋನಾ ಎಫೆಕ್ಟ್- ಕಾರುಗಳ ವಾರಂಟಿ ಅವಧಿಯನ್ನು ವಿಸ್ತರಿಸಿದ ಜೆಎಲ್ಆರ್

ವಾರಂಟಿ ಕುರಿತಾಗಿ ಹೆಚ್ಚಿನ ಮಾಹಿತಿಗಾಗಿ ಜಾಗ್ವಾರ್ ಗ್ರಾಹಕರು 1800 258 6655 ಮತ್ತು ಲ್ಯಾಂಡ್‌ ರೋವರ್ ಗ್ರಾಹಕರು 1800 258 6644 ನಂಬರ್‌ ಮೂಲಕ ತುರ್ತು ಸಹಾಯ ಪಡೆಯಬಹುದಾಗಿದ್ದು, ಭಾರತೀಯ ಗ್ರಾಹಕರಿಗೆ ಸಾಂತ್ವನದ ಸಂದೇಶವನ್ನು ನೀಡಿದೆ.

MOST READ: ಲಾಕ್‌ಡೌನ್ ಸಂಕಷ್ಟ- ಆಟೋ ಚಾಲಕರ ಬ್ಯಾಂಕ್ ಖಾತೆ ಸೇರಿದ ರೂ.5 ಸಾವಿರ ಪರಿಹಾರ..

ಕರೋನಾ ಎಫೆಕ್ಟ್- ಕಾರುಗಳ ವಾರಂಟಿ ಅವಧಿಯನ್ನು ವಿಸ್ತರಿಸಿದ ಜೆಎಲ್ಆರ್

ಲಾಕ್‌ಡೌನ್ ಸಂದರ್ಭದಲ್ಲಿ ಬಹುತೇಕ ಕಾರು ಮಾದರಿಗಳು ಕಳೆದ ಒಂದೂವರೆ ತಿಂಗಳಿನಿಂದ ನಿಂತಲ್ಲೆ ನಿಂತಿದ್ದು, ಲಾಕ್ ಡೌನ್ ತೆರವುಗೊಂಡ ನಂತರ ಸರ್ವೀಸ್ ಮತ್ತು ರಿಪೇರಿ ಕಾರ್ಯಗಳು ಹೆಚ್ಚಲಿವೆ. ಹೀಗಾಗಿ ಆತಂಕದಲ್ಲಿದ್ದ ಗ್ರಾಹಕರಿಗೆ ಬಹುತೇಕ ಆಟೋ ಕಂಪನಿಗಳು ವಾರಂಟಿ ಅವಧಿ ಹೆಚ್ಚಿಸಿ ಆದೇಶ ಹೊರಡಿಸಿವೆ.

ಕರೋನಾ ಎಫೆಕ್ಟ್- ಕಾರುಗಳ ವಾರಂಟಿ ಅವಧಿಯನ್ನು ವಿಸ್ತರಿಸಿದ ಜೆಎಲ್ಆರ್

ಇನ್ನು ಇಡೀ ಜಗತ್ತನ್ನೇ ಆತಂಕಕ್ಕೆ ದೂಡಿರುವ ಮಹಾಮಾರಿ ಕರೋನಾ ವಿರುದ್ದ ಹೋರಾಟಕ್ಕೆ ವಿಶ್ವದ ಪ್ರಮುಖ ರಾಷ್ಟ್ರಗಳು ಒಂದಾಗಿ ಕಾರ್ಯನಿರ್ವಹಿಸುತ್ತಿದ್ದು, ಸರ್ಕಾರದ ಪ್ರಯತ್ನಗಳಿಗೆ ಆಟೋ ಉತ್ಪಾದನಾ ಕಂಪನಿಗಳು ಸಹ ಅತಿ ಹೆಚ್ಚು ದೇಣಿಗೆ ನೀಡುವ ಮೂಲಕ ಕಾರ್ಪೋರೆಟ್ ಸಾಮಾಜಿಕ ಜವಾಬ್ದಾರಿಯನ್ನು ಮೇರೆದಿವೆ.

MOST READ: ಲಾಕ್‌ಡೌನ್ ಎಫೆಕ್ಟ್- ವಿನಾಯ್ತಿ ಸಿಕ್ಕರೂ ವಾಹನ ಉತ್ಪಾದನೆಗೆ ಮುಂದಾಗದ ಆಟೋ ಕಂಪನಿಗಳು

ಕರೋನಾ ಎಫೆಕ್ಟ್- ಕಾರುಗಳ ವಾರಂಟಿ ಅವಧಿಯನ್ನು ವಿಸ್ತರಿಸಿದ ಜೆಎಲ್ಆರ್

ಕರೋನಾ ವೈರಸ್ ವಿರುದ್ಧದ ಹೋರಾಟಕ್ಕಾಗಿ ಈಗಾಗಲೇ ಹಲವು ಆಟೋ ಉತ್ಪಾದನಾ ಕಂಪನಿಗಳು ಭಾರೀ ಪ್ರಮಾಣದ ಹಣಕಾಸಿನ ನೆರವು ಘೋಷಣೆ ಮಾಡಿರುವುದಲ್ಲದೇ ಅಗತ್ಯ ವೈದ್ಯಕೀಯ ಉಪಕರಣಗಳನ್ನು ಅಭಿವೃದ್ದಿಪಡಿಸುತ್ತಿವೆ.

ಕರೋನಾ ಎಫೆಕ್ಟ್- ಕಾರುಗಳ ವಾರಂಟಿ ಅವಧಿಯನ್ನು ವಿಸ್ತರಿಸಿದ ಜೆಎಲ್ಆರ್

ಜೊತೆಗೆ ಆರೋಗ್ಯ ಕೇಂದ್ರಗಳಿಗೆ ಅಗತ್ಯವಿರುವ ಟೆಸ್ಟಿಂಗ್ ಕಿಟ್, ವೆಂಟಿಲೆಟರ್ ಮತ್ತು ಐಸಿಯು ಯುನಿಟ್‌ಗೆ ಅಗತ್ಯವಿರುವ ಸೌಲಭ್ಯಗಳನ್ನು ನೀಡುವುದಾಗಿ ಘೋಷಣೆ ಮಾಡಿದ್ದು, ಆರೋಗ್ಯ ಇಲಾಖೆಯ ಬೇಡಿಕೆಗಳನ್ನು ಪೂರೈಸುತ್ತಿವೆ.

MOST READ: ಲಾಕ್‌ಡೌನ್ ವೇಳೆ ಕಾರು ಚಾಲನೆ ಮಾಡಿ ಸಿಕ್ಕಿಬಿದ್ದ ಮಹಿಳೆಯಿಂದ ಹೈಡ್ರಾಮಾ..

ಕರೋನಾ ಎಫೆಕ್ಟ್- ಕಾರುಗಳ ವಾರಂಟಿ ಅವಧಿಯನ್ನು ವಿಸ್ತರಿಸಿದ ಜೆಎಲ್ಆರ್

ಭಾರತದಲ್ಲಿ ಮಾತ್ರವಲ್ಲದೇ ಜಗತ್ತಿನ ಎಲ್ಲಾ ರಾಷ್ಟ್ರಗಳಲ್ಲೂ ಆಟೋ ಉತ್ಪಾದನಾ ಕಂಪನಿಗಳು ತಮ್ಮ ಕೈಗಾದಷ್ಟು ದೇಣಿಗೆ ನೀಡುವ ಮೂಲಕ ಕರೋನಾ ವಿರುದ್ಧ ಹೋರಾಟಕ್ಕೆ ತಮ್ಮ ಪಾತ್ರವಹಿಸುತ್ತಿದ್ದು, ಜೆಎಲ್ಆರ್ ಕಂಪನಿಯು ಕೂಡಾ 167 ಐಷಾರಾಮಿ ಕಾರುಗಳನ್ನು ದೇಣಿಗೆ ನೀಡಿದೆ.

ಕರೋನಾ ಎಫೆಕ್ಟ್- ಕಾರುಗಳ ವಾರಂಟಿ ಅವಧಿಯನ್ನು ವಿಸ್ತರಿಸಿದ ಜೆಎಲ್ಆರ್

ಸಾಮಾಜಿಕ ಕಾರ್ಯಗಳಲ್ಲಿ ಮುಂಚೂಣಿಯಲ್ಲಿರುವ ರೆಡ್ ಕ್ರಾಸ್ ಸಂಸ್ಥೆಗೆ 160 ಲ್ಯಾಂಡ್ ರೋವರ್ ರೇಂಜ್ ರೋವರ್ ಮತ್ತು ಡಿಫೆಂಡರ್ ಎಸ್‌ಯುವಿ ಕಾರುಗಳನ್ನು ದೇಣಿಗೆ ನೀಡಿದ್ದು, ಕರೋನಾ ವೈರಸ್ ಪೀಡಿತ ಪ್ರದೇಶಗಳಲ್ಲಿನ ಜನಸಹಾಯಕ್ಕಾಗಿ ಈ ಕಾರುಗಳನ್ನು ಬಳಕೆ ಮಾಡುವಂತೆ ಉಚಿತವಾಗಿ ನೀಡಿದೆ.

MOST READ: ಕರೋನಾ ವೈರಸ್ ವಿರುದ್ದದ ಹೋರಾಟಕ್ಕೆ ಭಾರೀ ಪ್ರಮಾಣದ ದೇಣಿಗೆ ನೀಡಿದ ಟಿವಿಎಸ್ ಮೋಟಾರ್

ಕರೋನಾ ಎಫೆಕ್ಟ್- ಕಾರುಗಳ ವಾರಂಟಿ ಅವಧಿಯನ್ನು ವಿಸ್ತರಿಸಿದ ಜೆಎಲ್ಆರ್

ಇಂಗ್ಲೆಂಡ್‌ ಒಂದರಲ್ಲೇ ಸುಮಾರು 67 ಡಿಫೆಂಡರ್ ಆಫ್ ರೋಡ್ ಕಾರುಗಳನ್ನು ದೇಣಿಗೆ ನೀಡಿರುವ ಜೆಎಲ್ಆರ್(ಜಾಗ್ವಾರ್, ಲ್ಯಾಂಡ್ ರೋವರ್ ಮತ್ತು ರೇಂಜ್ ರೋವರ್) ಕಂಪನಿಯು ಅಗತ್ಯ ವೈದ್ಯಕೀಯ ಉಪಕರಣಗಳನ್ನು ಸಹ ಒದಗಿಸುವುದಾಗಿ ಭರವಸೆ ನೀಡಿದೆ.

Most Read Articles

Kannada
English summary
Jaguar Land Rover has announced an extension to the warranty period and service schedule for all customer cars due to the nationwide lockdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X