ಮೂರು ಎಸ್‌ಯುವಿ ಬಿಡಿಭಾಗಗಳಿಂದ ರೆಡಿಯಾದ ವಿಶಿಷ್ಟ ಎಸ್‌ಯುವಿಯಿದು

ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಕಾರುಗಳ ಮಾಡಿಫಿಕೇಷನ್ ಹೆಚ್ಚು ಜನಪ್ರಿಯವಾಗಿದೆ. ಆದರೆ ಭಾರತದಲ್ಲಿ ವಾಹನಗಳನ್ನು ಮಾಡಿಫೈ ಮಾಡುವುದರ ಮೇಲೆ ನಿಯಂತ್ರಣ ಹೇರಲಾಗಿದೆ. ಆದರೂ ಭಾರತೀಯರು ತಮ್ಮ ಕಲ್ಪನೆಗೆ ತಕ್ಕಂತೆ ಕಾರುಗಳನ್ನು ಮಾಡಿಫೈ ಮಾಡಿಸಿಕೊಳ್ಳುತ್ತಾರೆ.

ಮೂರು ಎಸ್‌ಯುವಿ ಬಿಡಿಭಾಗಗಳಿಂದ ರೆಡಿಯಾದ ವಿಶಿಷ್ಟ ಎಸ್‌ಯುವಿಯಿದು

ತಮ್ಮ ನೆಚ್ಚಿನ ಕಾರುಗಳನ್ನು ಸಂಪೂರ್ಣವಾಗಿ ಮಾಡಿಫೈ ಮಾಡಿ ಅವುಗಳಿಗೆ ಹೊಸ ರೂಪವನ್ನು ನೀಡಲಾಗುತ್ತದೆ. ಕೆಲವು ಕಾರು ಮಾಡಿಫೈ ಕಂಪನಿಗಳು ಹೊಸ ರೀತಿಯಲ್ಲಿ ಕಾರುಗಳನ್ನು ಮಾಡಿಫೈ ಮಾಡಿ ತಮ್ಮ ಕ್ರಿಯೆಟಿವಿಟಿಯನ್ನು ತೋರಿಸುತ್ತವೆ. ಇದೇ ರೀತಿ ಕೇರಳ ಮೂಲದ ಕಾರು ಮಾಡಿಫೈ ಕಂಪನಿಯು ಮೂರು ಎಸ್‌ಯುವಿಗಳನ್ನು ಒಂದೇ ಎಸ್‌ಯುವಿಯಾಗಿ ಮಾಡಿಫೈಗೊಳಿಸಿದೆ. ಈ ಕಾರನ್ನು ಸೂಕ್ಷ್ಮವಾಗಿ ಗಮನಿಸಿದರೆ ಮೂರು ಎಸ್‌ಯುವಿಗಳಿರುವುದನ್ನು ಗಮನಿಸಬಹುದು.

ಮೂರು ಎಸ್‌ಯುವಿ ಬಿಡಿಭಾಗಗಳಿಂದ ರೆಡಿಯಾದ ವಿಶಿಷ್ಟ ಎಸ್‌ಯುವಿಯಿದು

ಮಹೀಂದ್ರಾ ಸ್ಕಾರ್ಪಿಯೋ, ಮಿತ್ಸುಬಿಷಿ ಪಜೆರೊ ಹಾಗೂ ಟಾಟಾ ಸಿಯೆರಾದ ಕೆಲವು ಭಾಗಗಳನ್ನು ಈ ಕಾರಿನಲ್ಲಿ ಅಳವಡಿಸಲಾಗಿದೆ. ಈ ಮಾಡಿಫೈ ಎಷ್ಟು ಪರಿಪೂರ್ಣವಾಗಿದೆಯೆಂದರೆ ಇದರಲ್ಲಿ ಮೂರು ಕಾರುಗಳಿವೆ ಎಂಬುದನ್ನು ಒಂದೇ ನೋಟದಲ್ಲಿ ತಿಳಿಯಲು ಸಾಧ್ಯವಿಲ್ಲ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಮೂರು ಎಸ್‌ಯುವಿ ಬಿಡಿಭಾಗಗಳಿಂದ ರೆಡಿಯಾದ ವಿಶಿಷ್ಟ ಎಸ್‌ಯುವಿಯಿದು

ಈ ಮೂರು ಕಾರುಗಳನ್ನು ಮಾಡಿಫೈ ಕಂಪನಿಯು ಮಾರುಕಟ್ಟೆಯಿಂದ ಖರೀದಿಸಿತ್ತು. ಕಾರಿನ ಮುಂಭಾಗವನ್ನು ಮಹೀಂದ್ರಾ ಸ್ಕಾರ್ಪಿಯೋದಿಂದ ತೆಗೆದುಕೊಳ್ಳಲಾಗಿದ್ದರೆ, ಡೋರ್‌ಗಳನ್ನುಪಜೆರೊದಿಂದ ತೆಗೆದುಕೊಳ್ಳಲಾಗಿದೆ. ಕಿಟಕಿ ಹಾಗೂ ರೂಫ್‌ಗಳನ್ನು ಟಾಟಾ ಸಿಯೆರಾದಿಂದ ಅಳವಡಿಸಲಾಗಿದೆ.

ಮೂರು ಎಸ್‌ಯುವಿ ಬಿಡಿಭಾಗಗಳಿಂದ ರೆಡಿಯಾದ ವಿಶಿಷ್ಟ ಎಸ್‌ಯುವಿಯಿದು

ಈ ಮಾಡಿಫೈ ಕಾರಿನಲ್ಲಿ ಯಾವ ಕಾರಿನ ಎಂಜಿನ್ ಅಳವಡಿಸಲಾಗಿದೆ ಎಂಬುದನ್ನು ಕಂಪನಿಯು ಬಹಿರಂಗಪಡಿಸಿಲ್ಲ. ಆದರೆ ಈ ಮೂರು ಕಾರುಗಳ ಪೈಕಿ ಯಾವುದಾದರೂ ಒಂದು ಕಾರಿನ ಎಂಜಿನ್ ಅಳವಡಿಸಿರುವ ಸಾಧ್ಯತೆಗಳಿವೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಮೂರು ಎಸ್‌ಯುವಿ ಬಿಡಿಭಾಗಗಳಿಂದ ರೆಡಿಯಾದ ವಿಶಿಷ್ಟ ಎಸ್‌ಯುವಿಯಿದು

2019ರ ಮೋಟಾರು ವಾಹನ ಕಾಯ್ದೆ ಪ್ರಕಾರ ಮಾಡಿಫೈಗೊಳಿಸಿದ ಕಾರು, ಬೈಕು ಅಥವಾ ಇನ್ನ್ಯಾವುದೇ ವಾಹನವನ್ನು ಚಾಲನೆ ಮಾಡುವುದು ಕಾನೂನುಬಾಹಿರವಾಗಿದೆ. ಮಾಡಿಫೈಗೊಂಡ ವಾಹನಗಳನ್ನು ಚಾಲನೆ ಮಾಡುವಾಗ ಸಿಕ್ಕಿಬಿದ್ದರೆ ದಂಡ ವಿಧಿಸುವುದರ ಜೊತೆಗೆ, ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು.

ಮೂರು ಎಸ್‌ಯುವಿ ಬಿಡಿಭಾಗಗಳಿಂದ ರೆಡಿಯಾದ ವಿಶಿಷ್ಟ ಎಸ್‌ಯುವಿಯಿದು

ಭಾರತೀಯ ಮೋಟಾರು ವಾಹನ ಕಾನೂನು ಮಾಡಿಫೈಗೊಳ್ಳದ ಮೂಲ ವಾಹನಗಳನ್ನು ಮಾತ್ರ ಮಾನ್ಯವೆಂದು ಪರಿಗಣಿಸುತ್ತಿದೆ. ಮಾಡಿಫೈಗೊಂಡ ವಾಹನಗಳಿಗೆ ಯಾವುದೇ ಮಾನ್ಯತೆಯನ್ನು ನೀಡುವುದಿಲ್ಲ.

Most Read Articles

Kannada
English summary
Kerala car modification company modified three SUVs into one SUV. Read in Kannada.
Story first published: Thursday, June 18, 2020, 15:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X