2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಕಿಯಾ ಮೋಟಾರ್ಸ್ ಹೊಸ ಕಾರುಗಳಿವು..

ಭಾರತದಲ್ಲಿ ಭಾರೀ ಪ್ರಮಾಣ ಹೂಡಿಕೆಯೊಂದಿಗೆ ಕಾರು ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಕಿಯಾ ಮೋಟಾರ್ಸ್ ಸಂಸ್ಥೆಯು 2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಹಲವು ಹೊಸ ಕಾರು ಮಾದರಿಗಳನ್ನು ಪ್ರದರ್ಶನಗೊಳಿಸಿದೆ.

2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಕಿಯಾ ಮೋಟಾರ್ಸ್ ಹೊಸ ಕಾರುಗಳಿವು..

ಪ್ರದರ್ಶನಗೊಂಡ ಕಾರುಗಳಲ್ಲಿ ಸಾಮಾನ್ಯ ಆವೃತ್ತಿಗಳು ಸೇರಿದಂತೆ ಎಲೆಕ್ಟ್ರಿಕ್ ಕಾರುಗಳು ಸಹ ಅನಾವರಣಗೊಂಡಿದ್ದು, ಬಹುತೇಕ ಕಾರು ಮಾದರಿಗಳು ಭಾರತದಲ್ಲಿ ಬಿಡುಗಡೆಯಾಗುವ ಸುಳಿವು ನೀಡಿವೆ. ಹಾಗಾದ್ರೆ ಅನಾವರಣಗೊಂಡ ಕಾರುಗಳಲ್ಲಿ ಯಾವೆಲ್ಲಾ ವಿಶೇಷತೆಗಳಿವೆ ಮತ್ತು ಬಿಡುಗಡೆಯಾಗಲಿರುವ ಹೊಸ ಬೆಲೆ, ಬಿಡುಗಡೆಯ ಅವಧಿ ಕುರಿತು ಇಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.

2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಕಿಯಾ ಮೋಟಾರ್ಸ್ ಹೊಸ ಕಾರುಗಳಿವು..

ಕಾರ್ನಿವಾಲ್ ಎಂಪಿವಿ

ಕಿಯಾ ಮೋಟಾರ್ಸ್ ನಿರ್ಮಾಣದ ಬಹುನೀರಿಕ್ಷಿತ ಐಷಾರಾಮಿ ಎಂಪಿವಿ ಆವೃತ್ತಿಯನ್ನು ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸುವ ಮೂಲಕ ಅಧಿಕೃತವಾಗಿ ಖರೀದಿಗೆ ಚಾಲನೆ ನೀಡಲಾಗಿದ್ದು, ಹೊಸ ಕಾರಿನ ಬೆಲೆಯನ್ನು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 24.95 ಲಕ್ಷಕ್ಕೆ ಮತ್ತು ಹೈ ಎಂಡ್ ಆವೃತ್ತಿಯ ಬೆಲೆಯನ್ನು ರೂ.33.95 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಕಿಯಾ ಮೋಟಾರ್ಸ್ ಹೊಸ ಕಾರುಗಳಿವು..

ಗ್ರಾಹಕರು ತಮ್ಮ ಆದ್ಯತೆ ಮೇರೆಗೆ ಹೊಸ ಕಾರನ್ನು 7 ಸೀಟರ್, 8 ಸೀಟರ್ ಮತ್ತು 9 ಸೀಟರ್ ಆವೃತ್ತಿಯಲ್ಲಿ ಖರೀದಿ ಮಾಡಬಹುದಾಗಿದ್ದು, ಪ್ರೀಮಿಯಂ, ಪ್ರೆಸ್ಟಿಜ್ ಮತ್ತು ಲಿಮೊಸಿನ್ ವೆರಿಯೆಂಟ್‌ಗಳನ್ನು ಹೊಂದಿರುವ ಕಾರ್ನಿವಾಲ್ ಕಾರು 2.2-ಲೀಟರ್ ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್ ಜೋಡಣೆ ಹೊಂದಿದೆ.

2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಕಿಯಾ ಮೋಟಾರ್ಸ್ ಹೊಸ ಕಾರುಗಳಿವು..

ಸೊನೆಟ್ ಕಾನ್ಸೆಪ್ಟ್

ಸ್ಪೋಟಿ ಲುಕ್ ಜೊತೆಗೆ ಹಲವು ಪ್ರೀಮಿಯಂ ಫೀಚರ್ಸ್‌ಗಳನ್ನು ಹೊಂದಿರುವ ಸೊನೆಟ್ ಕಾರು ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಬದಲಾವಣೆಯ ನೀರಿಕ್ಷೆಯಲ್ಲಿದ್ದು, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಸ್ಟೊನಿಕ್ ಮಾದರಿಯಲ್ಲೇ ಅಭಿವೃದ್ದಿಗೊಂಡಿದೆ. ಸದ್ಯ ಕ್ಯೂವೈಎ ಕೊಡ್ ನೆಮ್ ಆಧಾರದ ಮೇಲೆ ರೋಡ್ ಟೆಸ್ಟಿಂಗ್ ನಡೆಸುತ್ತಿರುವ ಸೊನೆಟ್ ಕಾರು ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಟಾಟಾ ನೆಕ್ಸಾನ್, ಹ್ಯುಂಡೈ ವೆನ್ಯೂ, ಮಹೀಂದ್ರಾ ಎಕ್ಸ್‌ಯುವಿ300, ಫೋರ್ಡ್ ಇಕೋಸ್ಪೋರ್ಟ್ ಕಾರುಗಳಿಗೆ ಪ್ರಬಲ ಪೈಪೋಟಿಯಾಗಲಿದೆ.

2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಕಿಯಾ ಮೋಟಾರ್ಸ್ ಹೊಸ ಕಾರುಗಳಿವು..

ಹೊಸ ಕಾರು 1.2-ಲೀಟರ್ ನ್ಯಾಚುರಲಿ ಆಸ್ಪೆರೆಟೆಡ್ ಫೋರ್ ಸಿಲಿಂಡರ್ ಪೆಟ್ರೋಲ್, 1.6-ಲೀಟರ್ ನ್ಯಾಚುರಲಿ ಆಸ್ಪೆರೆಟೆಡ್ ಫೋರ್ ಸಿಲಿಂಡರ್ ಪೆಟ್ರೋಲ್ ಮತ್ತು 1.4-ಲೀಟರ್ ಟರ್ಬೋಚಾರ್ಜ್ಡ್ ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್ ಆಯ್ಕೆ ಪಡೆಯುವ ಸಾಧ್ಯತೆಗಳಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.6.50 ಲಕ್ಷದಿಂದ ರೂ.8 ಲಕ್ಷ ಬೆಲೆ ಅಂತರ ಬಿಡುಗಡೆಯಾಗುವ ನೀರಿಕ್ಷೆಗಳಿದ್ದು, ಮುಂದಿನ ಎರಡರಿಂದ ಮೂರು ತಿಂಗಳ ಅವಧಿಯೊಳಗೆ ಬಿಡುಗಡೆಯಾಗಲಿದೆ.

2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಕಿಯಾ ಮೋಟಾರ್ಸ್ ಹೊಸ ಕಾರುಗಳಿವು..

ಸೊಲ್ ಎಲೆಕ್ಟ್ರಿಕ್

ಕಿಯಾ ಮೋಟಾರ್ಸ್ ಸಂಸ್ಥೆಯು ಭಾರತದಲ್ಲಿ ಹಲವಾರು ಹೊಸ ಕಾರು ಮಾದರಿಗಳನ್ನು ಬಿಡುಗಡೆ ಮಾಡುತ್ತಿದ್ದು, ಸಾಮಾನ್ಯ ಕಾರು ಮಾದರಿಗಳಲ್ಲದೇ ವಿವಿಧ ಮಾದರಿಯ ಎಲೆಕ್ಟ್ರಿಕ್ ಕಾರು ಆವೃತ್ತಿಗಳನ್ನು ಸಹ ಬಿಡುಗಡೆಗೊಳಿಸಲು ಭರ್ಜರಿ ಸಿದ್ದತೆ ನಡೆಸಿದೆ.

2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಕಿಯಾ ಮೋಟಾರ್ಸ್ ಹೊಸ ಕಾರುಗಳಿವು..

ಪ್ರತಿ ಚಾರ್ಜ್‌ಗೆ 400ಕಿ.ಮೀ ನಿಂದ 450 ಕಿ.ಮೀ ಮೈಲೇಜ್ ಹೊಂದಿರುವ ಸೊಲ್ ಕಾರು ಭಾರತದಲ್ಲಿ ರೂ. 10 ಲಕ್ಷದಿಂದ ರೂ. 12 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಲಿದ್ದು, ಹೊಸ ಕಾರು ಮುಂದಿನ ಜೂನ್ ಅಥವಾ ಜುಲೈ ಕೊನೆಯಲ್ಲಿ ಬಿಡುಗಡೆಯಾಗುವ ನೀರಿಕ್ಷೆಯಿದೆ.

2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಕಿಯಾ ಮೋಟಾರ್ಸ್ ಹೊಸ ಕಾರುಗಳಿವು..

ಸ್ಟೊನಿಕ್ ಕಂಪ್ಯಾಕ್ಟ್ ಎಸ್‌ಯುವಿ

ಸೊನೆಟ್ ಮತ್ತು ಸೆಲ್ಟೊಸ್ ಮಧ್ಯದ ಸ್ಥಾನದಲ್ಲಿ ಬಿಡುಗಡೆಯಾಗಲಿರುವ ಸ್ಟೊನಿಕ್ ಕಾರು ಭಾರತದಲ್ಲಿ ಈಗಾಗಲೇ ಹಲವಾರು ಬಾರಿ ಅನಾವರಣಗೊಂಡಿದ್ದು, ಇದೀಗ ಮತ್ತೆ ದೆಹಲಿ ಆಟೋ ಎಕ್ಸ್‌ಪೋ ಪ್ರದರ್ಶನಗೊಳ್ಳುವ ಮೂಲಕ ಬಿಡುಗಡೆಯ ಸುಳಿವು ನೀಡಿದೆ.

2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಕಿಯಾ ಮೋಟಾರ್ಸ್ ಹೊಸ ಕಾರುಗಳಿವು..

ಸ್ಟೊನಿಕ್ ಕಾರು 1.2-ಲೀಟರ್ ಪೆಟ್ರೋಲ್ ಮತ್ತು 1.4-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ರೂ.8 ಲಕ್ಷದಿಂದ ರೂ.12 ಲಕ್ಷದೊಳಗಿನ ಕಂಪ್ಯಾಕ್ಟ್ ಎಸ್‌ಯುವಿ ಖರೀದಿದಾರರನ್ನು ಇದು ಸೆಳೆಯಲಿದೆ.

2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಕಿಯಾ ಮೋಟಾರ್ಸ್ ಹೊಸ ಕಾರುಗಳಿವು..

ಸೆಲ್ಟೊಸ್ ಎಕ್ಸ್-ಲೈನ್ ಕಾನ್ಸೆಪ್ಟ್

ಸದ್ಯ ಮಾರುಕಟ್ಟೆಯಲ್ಲಿ ಸೆಲ್ಟೊಸ್ ಕಾರು ದಾಖಲೆ ಪ್ರಮಾಣದಲ್ಲಿ ಮಾರಾಟಗೊಳ್ಳುತ್ತಿದ್ದು, ಇದೀಗ 2020ರ ಆಟೋ ಎಕ್ಸ್ ಪೋದಲ್ಲಿ ಪರ್ಫಾಮೆನ್ಸ್ ಪ್ರಿಯರಿಗಾಗಿ ಸೆಲ್ಟೊಸ್ ಎಕ್ಸ್-ಲೈನ್ ಕಾನ್ಸೆಪ್ಟ್ ಅನ್ನು ಅನಾವರಣಗೊಳಿಸಿದೆ.

2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಕಿಯಾ ಮೋಟಾರ್ಸ್ ಹೊಸ ಕಾರುಗಳಿವು..

ಆಫ್-ರೋಡ್ ಎಸ್‍‍ಯುವಿ ಖರೀದಿದಾರರಿಗಾಗಿಯೇ ವಿಶೇಷವಾಗಿ ಅಭಿವೃದ್ದಿಗೊಂಡಿರುವ ಸೆಲ್ಟೊಸ್ ಎಕ್ಸ್-ಲೈನ್ ಕಾನ್ಸೆಪ್ಟ್ ಮಾದರಿಯು ಕಸ್ಟಮ್ ಕಿಟ್ ಅನ್ನು ಹೊಂದಿದ್ದು, 1.6 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಸಾಮಾನ್ಯ ಆವೃತ್ತಿಗಿಂತಲೂ ವಿಭಿನ್ನವಾದ ತಾಂತ್ರಿಕ ಸೌಲಭ್ಯಗಳನ್ನು ಹೊಸ ಕಾರು ಮುಂದಿನ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದ್ದು, ಸಾಮಾನ್ಯ ಆವೃತ್ತಿಗಿಂತ ರೂ. 2 ಲಕ್ಷದಿಂದ ರೂ.3 ಲಕ್ಷ ಹೆಚ್ಚುವರಿ ಬೆಲೆ ಪಡೆದುಕೊಂಡಿರಲಿದೆ.

2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಕಿಯಾ ಮೋಟಾರ್ಸ್ ಹೊಸ ಕಾರುಗಳಿವು..

ನಿರೋ ಎಲೆಕ್ಟ್ರಿಕ್ ಎಸ್‌ಯುವಿ

ನಿರೋ ಎಲೆಕ್ಟ್ರಿಕ್ ಮತ್ತು ಸೊಲ್ ಎಲೆಕ್ಟ್ರಿಕ್ ಈಗಾಗಲೇ ಚೀನಾ ಮತ್ತು ಕೊರಿಯಾದಲ್ಲಿ ಮಾರಾಟಗೊಳಿಸುತ್ತಿರುವ ಕಿಯಾ ಸಂಸ್ಥೆಯು ಇದೀಗ ಮೊದಲ ಬಾರಿಗೆ ಭಾರತದಲ್ಲೂ ಬಿಡುಗಡೆಯಾಗುತ್ತಿರುವುದು ಭಾರೀ ನೀರಿಕ್ಷೆ ಹುಟ್ಟುಹಾಕಿವೆ.

2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಕಿಯಾ ಮೋಟಾರ್ಸ್ ಹೊಸ ಕಾರುಗಳಿವು..

ಸೊಲ್ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಆವೃತ್ತಿಗಿಂತಲೂ ಹೆಚ್ಚು ಮೈಲೇಜ್(450) ಮತ್ತು ಐಷಾರಾಮಿ ಫೀಚರ್ಸ್ ಹೊಂದಿರುವ ನಿರೋ ಇವಿ ಎಸ್‌ಯುವಿ ಕಾರು 2021ರ ವೇಳೆಗೆ ಮಾರುಕಟ್ಟೆ ಪ್ರವೇಶಿಸಲಿದ್ದು, ಹೊಸ ಕಾರು ಹ್ಯುಂಡೈ ಕೊನಾ ಕಾರಿಗೆ ಪೈಪೋಟಿಯಾಗಿ ರೂ. 22 ಲಕ್ಷದಿಂದ ರೂ.25 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಲಿದೆ.

2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಕಿಯಾ ಮೋಟಾರ್ಸ್ ಹೊಸ ಕಾರುಗಳಿವು..

ಎಕ್ಸಿಡ್ ಸ್ಪೋರ್ಟಿ ಕಂಪ್ಯಾಕ್ಟ್ ಕ್ರಾಸ್ಓವರ್

ಯುರೋಪ್ ಮಾರುಕಟ್ಟೆಯಲ್ಲಿ ಸದ್ಯ ಭಾರೀ ಬೇಡಿಕೆ ಹೊಂದಿರುವ ಎಕ್ಸಿಡ್ ಸ್ಪೋರ್ಟಿ ಕಂಪ್ಯಾಕ್ಟ್ ಕ್ರಾಸ್ಓವರ್ ಕಾರನ್ನು ಭಾರತದಲ್ಲೂ ಬಿಡುಗಡೆಗೆ ಸಿದ್ದವಾಗಿದ್ದು, ಹೊಸ ಕಾರು ಮೊದಲ ಬಾರಿಗೆ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡಿದೆ.

2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಕಿಯಾ ಮೋಟಾರ್ಸ್ ಹೊಸ ಕಾರುಗಳಿವು..

ಬಿ ಸೆಗ್ಮೆಂಟ್ ಸೆಡಾನ್ ಮತ್ತು ಸಿ ಸೆಗ್ಮೆಂಟ್ ಎಸ್‌ಯುವಿ ನಡುವಿನ ಸ್ಥಾನ ಹೊಂದಿರುವ ಎಕ್ಸಿಡ್ ಕಾರು ವಿನೂತನ ವಿನ್ಯಾಸದೊಂದಿಗೆ ಸ್ಪೋರ್ಟಿ ಕಂಪ್ಯಾಕ್ಟ್ ಕ್ರಾಸ್ಓವರ್ ವೈಶಿಷ್ಟ್ಯತೆ ಪಡೆದುಕೊಂಡಿದ್ದು, ಐಷಾರಾಮಿ ಕಾರು ವಿಭಾಗದಲ್ಲಿ ಈ ಕಾರು ಗುರುತಿಸಿಕೊಂಡಿದೆ. ಎಕ್ಸಿಡ್ ಕಾರು ಸೆಲ್ಟೊಸ್ ಮಾದರಿಯಲ್ಲೇ 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಪಡೆಯುವ ಸಾಧ್ಯತೆಗಳಿದ್ದು, ಬೆಲೆ ತಗ್ಗಿಸುವುದಕ್ಕಾಗಿ ಕೆಲವು ಪ್ರೀಮಿಯಂ ಫೀಚರ್ಸ್‌ಗಳನ್ನು ಕಡಿತಗೊಳಿಸುವ ಸಾಧ್ಯತೆಗಳಿವೆ. ಎಕ್ಸ್‌ಶೋರೂಂ ಪ್ರಕಾರ ರೂ.18 ಲಕ್ಷದಿಂದ ರೂ.22 ಲಕ್ಷ ಬೆಲೆ ನೀರಿಕ್ಷಿಸಲಾಗಿದ್ದು, ಹೋಂಡಾ ಸಿಆರ್‌ವಿ ಮತ್ತು ಹ್ಯುಂಡೈ ಟಕ್ಸನ್ ಕಾರುಗಳಿಗೆ ಇದು ಪೈಪೋಟಿಯಾಗಲಿದೆ.

Most Read Articles

Kannada
English summary
Kia Cars At Auto Expo 2020: Sonet Concept, Seltos X-Line, Carnival, Soul EV & More. Read in Kannada.
Story first published: Saturday, February 8, 2020, 18:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X