ಜನಪ್ರಿಯ ಅವೆಂಟಡಾರ್ ಕಾರು ಉತ್ಪಾದನೆಯಲ್ಲಿ ಹೊಸ ಮೈಲುಗಲ್ಲು ಸಾಧಿಸಿದ ಲ್ಯಾಂಬೊರ್ಗಿನಿ

ಇಟಲಿಯ ಐಷಾರಾಮಿ ಕಾರು ತಯಾರಕ ಕಂಪನಿಯಾದ ಲ್ಯಾಂಬೊರ್ಗಿನಿ ತನ್ನ ಅವೆಂಟಡಾರ್ ಕಾರು ಉತ್ಪಾದನೆಯಲ್ಲಿ ಹೊಸ ಮೈಲುಗಲ್ಲು ಸೃಷ್ಟಿಸಿದೆ. ಲ್ಯಾಂಬೊರ್ಗಿನಿ ಕಂಪನಿಯು ಒಂಬತ್ತು ವರ್ಷಗಳಲ್ಲಿ ಜನಪ್ರಿಯ ಅವೆಂಟಡಾರ್ ಮಾದರಿಯ 10,000 ಯುನಿಟ್‍‍ಗಳನ್ನು ಉತ್ಪಾದಿಸಿದೆ.

ಜನಪ್ರಿಯ ಅವೆಂಟಡಾರ್ ಕಾರು ಉತ್ಪಾದನೆಯಲ್ಲಿ ಹೊಸ ಮೈಲುಗಲ್ಲು ಸಾಧಿಸಿದ ಲ್ಯಾಂಬೊರ್ಗಿನಿ

ಲ್ಯಾಂಬೊರ್ಗಿನಿ ಕಂಪನಿಯು ತನ್ನ ಅವೆಂಟಡಾರ್ ಕಾರನ್ನು 2011ರಲ್ಲಿ ಪರಿಚಯಿಸಿದ್ದರು. ಇತರ ಲ್ಯಾಂಬೊರ್ಗಿನಿ ಮಾದರಿಗಳಂತೆ ಇದು ಕೂಡ ವಿಶ್ವದ ಗಮನವನ್ನು ತನ್ನೆಡೆಗೆ ಸೆಳೆಯುವಂತ ಮಾಡಿದ ಸೂಪರ್ ಕಾರು ಆಗಿದೆ. ಲ್ಯಾಂಬೊರ್ಗಿನಿ ಸ್ಪೋರ್ಟ್ಸ್ ಕಾರುಗಳಿಗೆ ವಿಶ್ವದೆಲ್ಲೆಡೆ ಒಂದು ದೊಡ್ಡ ಅಭಿಮಾನಿ ವರ್ಗವನ್ನು ಹೊಂದಿದೆ. ಲ್ಯಾಂಬೊರ್ಗಿನಿ ಅವೆಂಟಡಾರ್ ಕೇವಲ 2.9 ಸೆಕೆಂಡುಗಳಲ್ಲಿ ಗಂಟೆಗೆ 0-100 ಕಿಮೀ ವೇಗವನ್ನು ಕ್ರಮಿಸುತ್ತದೆ.

ಜನಪ್ರಿಯ ಅವೆಂಟಡಾರ್ ಕಾರು ಉತ್ಪಾದನೆಯಲ್ಲಿ ಹೊಸ ಮೈಲುಗಲ್ಲು ಸಾಧಿಸಿದ ಲ್ಯಾಂಬೊರ್ಗಿನಿ

9 ವರ್ಷಗಳ ಅವಧಿಯಲ್ಲಿ ಲ್ಯಾಂಬೊರ್ಗಿನಿ ಅವೆಂಟಡಾರ್‌ನ ಹಲವಾರು ಮಾದರಿಗಳನ್ನು ಬಿಡುಗಡೆ ಮಾಡಿತು. 2012ರಲ್ಲಿ ಅವೆಂಟಡಾರ್ ರೋಡ್ಸ್ಟರ್ ಅನ್ನು ಮಾರುಕಟ್ಟೆಯಲ್ಲಿ ಪರಿಚಯಿಸಲಾಯಿತು.

MOST READ: ಅನಾವರಣವಾಯ್ತು ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಎಸ್‍ಯುವಿ

ಜನಪ್ರಿಯ ಅವೆಂಟಡಾರ್ ಕಾರು ಉತ್ಪಾದನೆಯಲ್ಲಿ ಹೊಸ ಮೈಲುಗಲ್ಲು ಸಾಧಿಸಿದ ಲ್ಯಾಂಬೊರ್ಗಿನಿ

ಇನ್ನು 2012ರ ಜಿನೀವಾ ಮೋಟಾರು ಶೋನಲ್ಲಿ ಅವೆಂಟಡಾರ್ ಜೆ ಅನಾವರಣಗೊಂಡಿತು. ಇದು 700 ಹೆಚ್‌ಪಿ ಯಲ್ಲಿ "ಓಪನ್" ಸೂಪರ್ ಸ್ಪೋರ್ಟ್ಸ್ ಕಾರ್ ಪ್ಯಾಕಿಂಗ್ ಆಗಿದೆ. ನಂತರ ಅವೆಂಟಡಾರ್ ಮಿಯುರಾ ಹೋಮೇಜ್ ಮಾದರಿಯನ್ನು 2016ರಲ್ಲಿ ಬಿಡುಗಡೆಗೊಳಿಸಿದ್ದರು. ಅವೆಂಟಡಾರ್ ಮಿಯುರಾ ಹೋಮೇಜ್‌ನ 50 ಯುನಿಟ್‍‍ಗಳನ್ನು ಮಾತ್ರ ಬಿಡುಗಡೆಗೊಳಿಸಿದ್ದರು.

ಜನಪ್ರಿಯ ಅವೆಂಟಡಾರ್ ಕಾರು ಉತ್ಪಾದನೆಯಲ್ಲಿ ಹೊಸ ಮೈಲುಗಲ್ಲು ಸಾಧಿಸಿದ ಲ್ಯಾಂಬೊರ್ಗಿನಿ

ಲ್ಯಾಂಬೊರ್ಗಿನಿ ಕಂಪನಿಯು 2016ರಲ್ಲಿ ಅವೆಂಟಡಾರ್ ಎಸ್ ಅನ್ನು ಪರಿಚಯಿಸಲಾಯಿತು. ಈ ಸ್ಪೋರ್ಟ್ಸ್ ಕಾರಿನಲ್ಲಿ ಡ್ರೈವಿಂಗ್ ಡೈನಾಮಿಕ್ಸ್ ಅನ್ನು ಒಳಗೊಂಡಿತ್ತು. ‘ಎಸ್' ಮೊದಲೇ ಅಸ್ತಿತ್ವದಲ್ಲಿರುವ ಲ್ಯಾಂಬೊರ್ಗಿನಿ ಮಾದರಿಗಳ ವರ್ಧಿತ ಆವೃತ್ತಿಗಳನ್ನು ಸೂಚಿಸುತ್ತದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಜನಪ್ರಿಯ ಅವೆಂಟಡಾರ್ ಕಾರು ಉತ್ಪಾದನೆಯಲ್ಲಿ ಹೊಸ ಮೈಲುಗಲ್ಲು ಸಾಧಿಸಿದ ಲ್ಯಾಂಬೊರ್ಗಿನಿ

ಲ್ಯಾಂಬೊರ್ಗಿನಿ ಅವೆಂಟಡಾರ್ ಎಸ್ ಸ್ಪೋರ್ಟ್ಸ್ ಕಾರಿನಲ್ಲಿ 6.5-ಲೀಟರ್ ವಿ -12 ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 740 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ.

ಜನಪ್ರಿಯ ಅವೆಂಟಡಾರ್ ಕಾರು ಉತ್ಪಾದನೆಯಲ್ಲಿ ಹೊಸ ಮೈಲುಗಲ್ಲು ಸಾಧಿಸಿದ ಲ್ಯಾಂಬೊರ್ಗಿನಿ

2018ರಲ್ಲಿ ಲ್ಯಾಂಬೊರ್ಗಿನಿ ಅವೆಂಟಡಾರ್ ಎಸ್‌ವಿಜೆ ವೆರಿಯೆಂಟ್ ಅನ್ನು ಬಿಡುಗಡೆಗೊಳಿಸಿದ್ದರು. ‘ಎಸ್‌ವಿ' ಎಂದರೆ ಸೂಪರ್‌ವೆಲೋಸ್ ಮತ್ತು ‘ಜೆ' ಎಂದರೆ "ಜೋಟಾ" ಎಂದು ಆಗಿದೆ. ಲ್ಯಾಂಬೊರ್ಗಿನಿ ಕಂಪನಿಯು ಅವೆಂಟಡಾರ್ ಎಸ್‌ವಿಜೆ ಮಾದರಿಯ 900 ಯುನಿಟ್‍‍ಗಳನ್ನು ವಿಶ್ವಾದ್ಯಂತ ಬಿಡುಗಡೆಗೊಳಿಸಿದ್ದರು.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಜನಪ್ರಿಯ ಅವೆಂಟಡಾರ್ ಕಾರು ಉತ್ಪಾದನೆಯಲ್ಲಿ ಹೊಸ ಮೈಲುಗಲ್ಲು ಸಾಧಿಸಿದ ಲ್ಯಾಂಬೊರ್ಗಿನಿ

ಇನ್ನು ಇತ್ತೀಚೆಗೆ ಲ್ಯಾಂಬೊರ್ಗಿನಿ ಕಂಪನಿಯು ಹೊಸ ಲ್ಯಾಂಬೊರ್ಗಿನಿ ತನ್ನ ಅವೆಂಟಡಾರ್ ಎಸ್‌ವಿಜೆ ರೋಡ್‌ಸ್ಟರ್ ಕ್ಸಾಗೊ ಎಡಿಷನ್ ಮಾದರಿಯನ್ನು ಇತ್ತೀಚೆಗೆ ಅನಾವರಣಗೊಳಿಸಿತು. ವಿಶ್ವಾದ್ಯಂತ ಈ ಸೂಪರ್ ಕಾರಿನ ಕೇವಲ 10 ಯುನಿಟ್‌ಗಳು ಮಾತ್ರ ಲಭ್ಯವಿರಲಿದೆ.

ಜನಪ್ರಿಯ ಅವೆಂಟಡಾರ್ ಕಾರು ಉತ್ಪಾದನೆಯಲ್ಲಿ ಹೊಸ ಮೈಲುಗಲ್ಲು ಸಾಧಿಸಿದ ಲ್ಯಾಂಬೊರ್ಗಿನಿ

ಲ್ಯಾಂಬೊರ್ಗಿನಿ ಅವೆಂಟಡಾರ್ ಎಸ್‌ವಿಜೆ ರೋಡ್‌ಸ್ಟರ್ ಕ್ಸಾಗೊ ಆವೃತ್ತಿಯ ಕೇವಲ 10 ಯುನಿಟ್‌ಗಳು ಮಾತ್ರ ಲಭ್ಯವಿರಲಿದೆ. ಈ ಸೂಪರ್ ಕಾರು ಲಿಮಿಟೆಡ್ ಎಡಿಷನ್ ಆಗಿದೆ. ಅಲ್ಲದೇ ಇತರ ಲ್ಯಾಂಬೊರ್ಗಿನಿ ಕಾರಿನಂತೆ ಇದು ಕೂಡ ಉತ್ತಮ ಪರ್ಫಾಮೆನ್ಸ್ ಮಾದರಿಯಾಗಿದೆ.

Most Read Articles

Kannada
English summary
Lamborghini Manufactures 10,000 Units Of Aventador In 9 Years. Read In Kannada.
Story first published: Friday, September 11, 2020, 17:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X