ಜನಪ್ರಿಯ ಮಹೀಂದ್ರಾ ಕಾರುಗಳ ಮೇಲೆ ರೂ.3.06 ಲಕ್ಷದವರೆಗೆ ಭರ್ಜರಿ ಇಯರ್ ಎಂಡ್ ರಿಯಾಯಿತಿ

ಮಹೀಂದ್ರಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಥಾರ್ ಅನ್ನು ಹೊರತುಪಡಿಸಿ ತನ್ನ ಇತರ ಎಲ್ಲಾ ಮಾದರಿಗಳಿಗೆ ಭರ್ಜರಿ ರಿಯಾಯಿತಿಗಳನ್ನು ಘೋಷಿಸಿದ್ದಾರೆ. ಮಹೀಂದ್ರಾ ಕಂಪನಿಯು ತನ್ನ ಕಾರುಗಳ ಮೇಲೆ ರೂ.20,000 ದಿಂದ ರೂ.3.06 ಲಕ್ಷ ಗಳವರೆಗೆ ಭರ್ಜರಿ ಇಯರ್ ಎಂಡ್ ರಿಯಾಯಿತಿಯನ್ನು ಘೋಷಿಸಿದೆ.

ಜನಪ್ರಿಯ ಮಹೀಂದ್ರಾ ಕಾರುಗಳ ಮೇಲೆ ರೂ.3.06 ಲಕ್ಷದವರೆಗೆ ಭರ್ಜರಿ ಇಯರ್ ಎಂಡ್ ರಿಯಾಯಿತಿ

ಮಹೀಂದ್ರಾ ಕಂಪನಿಯು ವರ್ಷಾಂತ್ಯದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಜನಪ್ರಿಯ ಮಹೀಂದ್ರಾ ಕಾರುಗಳ ಮೇಲೆ ಭರ್ಜರಿ ಎಯರ್ ಎಂಡ್ ರಿಯಾಯಿತಿ ಘೋಷಿಸಿದೆ. ಮಹೀಂದ್ರಾ ಕಂಪನಿಯು ಇತ್ತೀಚೆಗೆ ಬಿಡುಗಡೆಗೊಳಿಸಿದ ಥಾರ್ ಎಸ್‍ಯುವಿಯನ್ನು ಹೊರತುಪಡಿಸಿ ಇತರ ಎಲ್ಲಾ ಮಾದರಿಗಳಿಗೂ ರಿಯಾಯಿತಿ ಘೋಷಿಸಿದೆ. ಈ ತಿಂಗಳ ಅಂತ್ಯದವರೆಗೂ ಮಹೀಂದ್ರಾ ಕಾರುಗಳ ಮೇಲೆ ರಿಯಾಯಿತಿಗಳು ಲಭ್ಯವಿರುತ್ತದೆ.

ಜನಪ್ರಿಯ ಮಹೀಂದ್ರಾ ಕಾರುಗಳ ಮೇಲೆ ರೂ.3.06 ಲಕ್ಷದವರೆಗೆ ಭರ್ಜರಿ ಇಯರ್ ಎಂಡ್ ರಿಯಾಯಿತಿ

ಮಹೀಂದ್ರಾ ಬೊಲೆರೊ

ಮಹೀಂದ್ರಾ ಬೊಲೆರೊ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಎಂಯುವಿಯಾಗಿದೆ. ಈ ಮಹೀಂದ್ರಾ ಬೊಲೆರೊ ಮೇಲೆ ಒಟ್ಟು ರೂ.20,550 ಗಳವರೆಗೆ ರಿಯಾಯಿತಿಯನ್ನು ಘೋಷಿಸಿದೆ. ಇದರಲ್ಲಿ ರೂ.6,250 ದವರೆಗೆ ನಗದು ರಿಯಾಯಿತಿ, ರೂ.10,000 ಗಳವರೆಗೆ ಎಕ್ಸ್‌ಚೆಂಜ್ ಬೋನಸ್ ಮತ್ತು ರೂ.4000 ಗಳವರೆಗೆ ಕಾರ್ಪೊರೇಟ್ ರಿಯಾಯಿತಿಯನ್ನು ಒಳಗೊಂಡಿದೆ.

MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್​ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ಜನಪ್ರಿಯ ಮಹೀಂದ್ರಾ ಕಾರುಗಳ ಮೇಲೆ ರೂ.3.06 ಲಕ್ಷದವರೆಗೆ ಭರ್ಜರಿ ಇಯರ್ ಎಂಡ್ ರಿಯಾಯಿತಿ

ಮಹೀಂದ್ರಾ ಸ್ಕಾರ್ಪಿಯೋ

ಜನಪ್ರಿಯ ಮಹೀಂದ್ರಾ ಸ್ಕಾರ್ಪಿಯೋ ಎಸ್‍ಯುವಿಯ ಮೇಲೆ ಒಟ್ಟು ರೂ.60,000 ಗಳವರೆಗೆ ಹೆಚ್ಚಿಸಲಾಗಿದೆ. ಇದರಲ್ಲಿ ರೂ.20,000 ದವರೆಗೆ ನಗದು ರಿಯಾಯಿತಿ, ರೂ.25 ಸಾವಿರ ದವರೆಗೆ ಎಕ್ಸ್‌ಚೆಂಜ್ ಬೋನಸ್ ಮತ್ತು ರೂ.5000 ಗಳವರೆಗೆ ಕಾರ್ಪೊರೇಟ್ ರಿಯಾಯಿತಿಯನ್ನು ಒಳಗೊಂಡಿದೆ. ಇದರೊಂದಿಗೆ ರೂ.10,000 ಮೌಲ್ಯದ ಇತರ ಸೌಲಭ್ಯಗಳನ್ನು ನೀಡಲಾಗುತ್ತದೆ.

ಜನಪ್ರಿಯ ಮಹೀಂದ್ರಾ ಕಾರುಗಳ ಮೇಲೆ ರೂ.3.06 ಲಕ್ಷದವರೆಗೆ ಭರ್ಜರಿ ಇಯರ್ ಎಂಡ್ ರಿಯಾಯಿತಿ

ಮಹೀಂದ್ರಾ ಎಕ್ಸ್‌ಯುವಿ500

ಈ ಮಹೀಂದ್ರಾ ಎಕ್ಸ್‌ಯುವಿ500 ಎಸ್‍ಯುವಿಯ ಮೇಲೆ ಒಟ್ಟು ರೂ.56,760 ದವರೆಗೆ ರಿಯಾಯಿತಿಯನ್ನು ಘೋಷಿಸಿದೆ. ಇದರಲ್ಲಿ ರೂ.12,760 ನಗದು ರಿಯಾಯಿತಿ, ರೂ.30,000 ಎಕ್ಸ್‌ಚೆಂಜ್ ಬೋನಸ್ ಮತ್ತು ರೂ.5000 ಮೌಲ್ಯದ ಇತರ ಪ್ರಯೋಜನಗಳನ್ನು ಸಹ ನೀಡುತ್ತದೆ.

MOST READ: ನವೆಂಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಕಾರುಗಳಿವು

ಜನಪ್ರಿಯ ಮಹೀಂದ್ರಾ ಕಾರುಗಳ ಮೇಲೆ ರೂ.3.06 ಲಕ್ಷದವರೆಗೆ ಭರ್ಜರಿ ಇಯರ್ ಎಂಡ್ ರಿಯಾಯಿತಿ

ಮಹೀಂದ್ರಾ ಕೆಯುವಿ100

ಮಹೀಂದ್ರಾ ಕಂಪನಿಯು ತನ್ನ ಕೆಯುವಿ100 ಮಾದರಿಯ ಮೇಲೆ ಒಟ್ಟು ರೂ.62,055 ಗಳವರೆ ರಿಯಾಯಿತಿಯನ್ನು ಘೋಷಿಸಿದೆ. ಇದರಲ್ಲಿ ರೂ.33,055 ಗಳವರೆಗೆ ನಗದು ರಿಯಾಯಿತಿ, ರೂ.4,500 ಗಳವರೆಗೆ ಎಕ್ಸ್‌ಚೆಂಜ್ ಬೋನಸ್ ಮತ್ತು ರೂ.5,000 ಮೌಲ್ಯದ ಇತರ ಸೌಲಭ್ಯಗಳು ಸಹ ಲಭ್ಯವಿದೆ.

ಜನಪ್ರಿಯ ಮಹೀಂದ್ರಾ ಕಾರುಗಳ ಮೇಲೆ ರೂ.3.06 ಲಕ್ಷದವರೆಗೆ ಭರ್ಜರಿ ಇಯರ್ ಎಂಡ್ ರಿಯಾಯಿತಿ

ಮಹೀಂದ್ರಾ ಮರಾಜೋ

ಮಹೀಂದ್ರಾ ಕಂಪನಿ ತನ್ನ ಸರಣಿಯಲ್ಲಿರುವ ಜನಪ್ರಿಯ ಎಂಪಿವಿಯಾದ ಮರಾಜೋ ಮಾದರಿಯ ಮೇಲೆ ಒಟ್ಟು ರೂ.41,000 ಗಳವರೆಗಿನ ರಿಯಾಯಿತಿ ಘೋಷಿಸಿದೆ. ಇದರಲ್ಲಿ ರೂ.15 ಸಾವಿರ ನಗದು ರಿಯಾಯಿತಿ, ರೂ.15 ಸಾವಿರ ಎಕ್ಸ್‌ಚೆಂಜ್ ಬೋನಸ್ ಮತ್ತು ರೂ.6,000 ಗಳ ಕಾರ್ಪೊರೇಟ್ ಬೋನೊಸ್ ಮತ್ತು ರೂ.5,000 ಮೌಲ್ಯದ ಇತರ ಸೌಲಭ್ಯಗಳು ಸಹ ಲಭ್ಯವಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಜನಪ್ರಿಯ ಮಹೀಂದ್ರಾ ಕಾರುಗಳ ಮೇಲೆ ರೂ.3.06 ಲಕ್ಷದವರೆಗೆ ಭರ್ಜರಿ ಇಯರ್ ಎಂಡ್ ರಿಯಾಯಿತಿ

ಮಹೀಂದ್ರಾ ಎಕ್ಸ್‌ಯುವಿ300

ಮಹೀಂದ್ರಾ ಕಂಪನಿಯ ಈ ಎಕ್ಸ್‌ಯುವಿ300 ಕಾಂಫ್ಯಾಕ್ಟ್ ಎಸ್‍ಯುವಿಗೆ ಕ್ರ್ಯಾಶ್ ಟೆಸ್ಟ್ ನಲ್ಲಿ 5 ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದೆ. ಈ ಕಾಂಪ್ಯಾಕ್ಟ್ ಎಸ್‍ಯುವಿಯ ಮೇಲೆ ಒಟ್ಟು ರೂ.45,000 ಗಳವರೆಗಿನ ರಿಯಾಯಿತಿಯನ್ನು ಘೋಷಿಸಲಾಗಿದೆ. ಇದರಲ್ಲಿ ರೂ.10,000 ಗಳ ನಗದು ರಿಯಾಯಿತಿ, ರೂ.25 ಸಾವಿರ ದವರೆಗಿನ ಎಕ್ಸ್‌ಚೆಂಜ್ ಬೋನಸ್ ಮತ್ತು ರೂ.5,000 ಗಳ ಕಾರ್ಪೊರೇಟ್ ಬೋನಸ್ ಅನ್ನು ನೀಡಿದೆ. ಇದರೊಂದಿಗೆ ರೂ.5,000 ಮೌಲ್ಯದ ಇತರ ಸೌಲಭ್ಯಗಳು ಸಹ ಲಭ್ಯವಿದೆ.

ಜನಪ್ರಿಯ ಮಹೀಂದ್ರಾ ಕಾರುಗಳ ಮೇಲೆ ರೂ.3.06 ಲಕ್ಷದವರೆಗೆ ಭರ್ಜರಿ ಇಯರ್ ಎಂಡ್ ರಿಯಾಯಿತಿ

ಮಹೀಂದ್ರಾ ಅಲ್ಟುರಾಸ್

ಮಹೀಂದ್ರಾ ಕಂಪನಿಯು ತನ್ನ ಅಲ್ಟುರಾಸ್ ಜಿ4 ಎಸ್‍ಯುವಿಯ ಮೇಲೆ ರೂ.3.06 ಲಕ್ಷ ಗಳವರೆಗೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ಇದರಲ್ಲಿ ರೂ.2.20 ಲಕ್ಷ ದವರೆಗಿನ ನಗದು ರಿಯಾಯಿತಿಯನ್ನು ನೀಡಲಾಗುತ್ತದೆ. ಜೊತೆಗೆ ರೂ.16,000 ಗಳ ಕಾರ್ಪೊರೇಟ್ ಬೋನಸ್ ಮತ್ತು ರೂ.50,000 ಗಳವರೆಗಿನ ಎಕ್ಸ್‌ಚೆಂಜ್ ಬೋನಸ್ ಮತ್ತು ರೂ.20,000 ಮೌಲ್ಯದ ಇತರ ಸೌಲಭ್ಯಗಳು ಸಹ ಲಭ್ಯವಿದೆ.

Most Read Articles

Kannada
English summary
Mahindra Year-End Discounts & December Offers. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X