ವಿಳಂಬವಾದ ಥಾರ್ ಎಸ್‌ಯುವಿ ವಿತರಣೆ, ವಿನೂತನ ಕ್ರಮಕ್ಕೆ ಮುಂದಾದ ಮಹೀಂದ್ರಾ

ಮಹೀಂದ್ರಾ ಥಾರ್ ಎಸ್‌ಯುವಿಯು ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಿದೆ. ಮಹೀಂದ್ರಾ ಕಂಪನಿಯು ಈ ಎಸ್‌ಯುವಿಯನ್ನು ಅಕ್ಟೋಬರ್ 2ರಂದು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು.

ವಿಳಂಬವಾದ ಥಾರ್ ಎಸ್‌ಯುವಿ ವಿತರಣೆ, ವಿನೂತನ ಕ್ರಮಕ್ಕೆ ಮುಂದಾದ ಮಹೀಂದ್ರಾ

ಹೊಸ ತಲೆಮಾರಿನ ಥಾರ್ ಎಸ್‌ಯುವಿಯು ಹಳೆ ತಲೆಮಾರಿನ ಥಾರ್ ಎಸ್‌ಯುವಿಗಿಂತಲೂ ಹೆಚ್ಚು ಐಷಾರಾಮಿ ಫೀಚರ್ ಗಳನ್ನು ಹೊಂದಿದೆ. ಹೊಸ ತಲೆಮಾರಿನ ಥಾರ್ ದೊಡ್ಡ ಗಾತ್ರವನ್ನು ಸಹ ಹೊಂದಿದೆ. ಈ ಕಾರಣಗಳಿಗಾಗಿ ಹೊಸ ಥಾರ್ ಎಸ್‌ಯುವಿಯು ಅಲ್ಪ ಅವಧಿಯಲ್ಲಿಯೇ ಹೆಚ್ಚಿನ ಜನಪ್ರಿಯತೆಯನ್ನು ಪಡೆದಿದೆ.

ವಿಳಂಬವಾದ ಥಾರ್ ಎಸ್‌ಯುವಿ ವಿತರಣೆ, ವಿನೂತನ ಕ್ರಮಕ್ಕೆ ಮುಂದಾದ ಮಹೀಂದ್ರಾ

ಸ್ಪರ್ಧಾತ್ಮಕ ಬೆಲೆಯನ್ನು ಹೊಂದಿರುವುದು ಸಹ ಈ ಎಸ್‌ಯುವಿಯ ಜನಪ್ರಿಯತೆಗೆ ಕಾರಣವಾಗಿದೆ. ಹೆಚ್ಚಿನ ಸಂಖ್ಯೆಯ ಗ್ರಾಹಕರು ಈ ಎಸ್‌ಯುವಿಯನ್ನು ಖರೀದಿಸಲು ಮುಗಿಬಿದ್ದಿರುವ ಕಾರಣಕ್ಕೆ ಈ ಎಸ್‌ಯುವಿಯ ವಿತರಣೆಯನ್ನು ಪಡೆಯಲು ಹೆಚ್ಚು ಸಮಯ ಕಾಯಬೇಕಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ವಿಳಂಬವಾದ ಥಾರ್ ಎಸ್‌ಯುವಿ ವಿತರಣೆ, ವಿನೂತನ ಕ್ರಮಕ್ಕೆ ಮುಂದಾದ ಮಹೀಂದ್ರಾ

ಮಿತಿ ಮೀರಿದ ಬುಕ್ಕಿಂಗ್ ನಿಂದಾಗಿ ಥಾರ್ ಎಸ್‌ಯುವಿಯ ಹಲವು ಮಾದರಿಗಳ ವಿತರಣೆಯ ವೇಟಿಂಗ್ ಅವಧಿಯನ್ನು 7 ತಿಂಗಳುಗಳಿಗೆ ಹೆಚ್ಚಿಸಲಾಗಿದೆ. ಈಗ ಮಹೀಂದ್ರಾ ಕಂಪನಿಯು ಥಾರ್ ಎಸ್‌ಯುವಿಯನ್ನು ಬುಕ್ಕಿಂಗ್ ಮಾಡಿರುವ ಗ್ರಾಹಕರಿಗೆ ಫೆರೆರೊ ರೋಚರ್ ಚಾಕೊಲೇಟ್‌ಗಳನ್ನು ಕಳುಹಿಸುತ್ತಿದೆ ಎಂದು ವರದಿಯಾಗಿದೆ.

ವಿಳಂಬವಾದ ಥಾರ್ ಎಸ್‌ಯುವಿ ವಿತರಣೆ, ವಿನೂತನ ಕ್ರಮಕ್ಕೆ ಮುಂದಾದ ಮಹೀಂದ್ರಾ

ಈ ಚಾಕಲೇಟ್‌ಗಳ ಜೊತೆಗೆ ಮಹೀಂದ್ರಾ ಕಂಪನಿಯು ಪತ್ರವನ್ನು ಕೂಡ ಕಳುಹಿಸುತ್ತಿದೆ. ಥಾರ್ ಎಸ್‌ಯುವಿಯನ್ನು ಬುಕ್ಕಿಂಗ್ ಮಾಡಿದ್ದ ಸತೀಶ್ ಬೋಜನ್ ಎಂಬುವವರಿಗೆ ಚಾಕೊಲೇಟ್ ಜೊತೆಗೆ ಪತ್ರವನ್ನು ಕಳುಹಿಸಲಾಗಿದೆ. ಈ ಪತ್ರದಲ್ಲಿ ಥಾರ್ ಎಸ್‌ಯುವಿಯ ವಿತರಣಾ ಅವಧಿಯನ್ನು ಹೆಚ್ಚಿಸಿರುವ ಬಗ್ಗೆ ತಿಳಿಸಲಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ವಿಳಂಬವಾದ ಥಾರ್ ಎಸ್‌ಯುವಿ ವಿತರಣೆ, ವಿನೂತನ ಕ್ರಮಕ್ಕೆ ಮುಂದಾದ ಮಹೀಂದ್ರಾ

ಆದಿತ್ಯೇಂದ್ರ ಸೋಲನ್ ಎಂಬುವವರಿಗೂ ಸಹ ಮಹೀಂದ್ರಾ ಕಂಪನಿಯು ಪತ್ರದೊಂದಿಗೆ ಚಾಕೊಲೇಟ್ ಕಳುಹಿಸಿದೆ. ಆ ಪತ್ರದಲ್ಲಿ ಥಾರ್ ಎಸ್‌ಯುವಿಗೆ ಕಾಯುವ ಅವಧಿ ಹೆಚ್ಚಾಗಲು ಕಾರಣ ಹಾಗೂ ಥಾರ್‌ ಎಸ್‌ಯುವಿಗೆ ಇದುವರೆಗೆ ಎಷ್ಟು ಬುಕಿಂಗ್‌ಗಳು ಬಂದಿವೆ ಎಂಬುದನ್ನು ತಿಳಿಸಲಾಗಿದೆ.

ವಿಳಂಬವಾದ ಥಾರ್ ಎಸ್‌ಯುವಿ ವಿತರಣೆ, ವಿನೂತನ ಕ್ರಮಕ್ಕೆ ಮುಂದಾದ ಮಹೀಂದ್ರಾ

ಮಹೀಂದ್ರಾ ಕಂಪನಿಯು ಪತ್ರದಲ್ಲಿ ಹಬ್ಬದ ಶುಭಾಶಯಗಳನ್ನು ಸಹ ಕೋರಿದೆ. ಆ ಪತ್ರದ ಪ್ರಕಾರ ಮಹೀಂದ್ರಾ ಕಂಪನಿಯು ಇದುವರೆಗೂ ಥಾರ್ ಎಸ್‌ಯುವಿಯಗಾಗಿ ಅಧಿಕೃತವಾಗಿ ಸುಮಾರು 21,000 ಬುಕ್ಕಿಂಗ್ ಗಳನ್ನು ಪಡೆದಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ವಿಳಂಬವಾದ ಥಾರ್ ಎಸ್‌ಯುವಿ ವಿತರಣೆ, ವಿನೂತನ ಕ್ರಮಕ್ಕೆ ಮುಂದಾದ ಮಹೀಂದ್ರಾ

ಮಹೀಂದ್ರಾ ಕಂಪನಿಯು ಈ ಎಸ್‌ಯುವಿಯ ವಿತರಣಾ ಪ್ರಕ್ರಿಯೆಯನ್ನು ಸಹ ಆರಂಭಿಸಿದೆ. ಮಹೀಂದ್ರಾ ಕಂಪನಿಯು ಕಳೆದ ವಾರ ಮೊದಲ 500 ಯೂನಿಟ್ ಗಳನ್ನು ವಿತರಿಸಿತು. ಈ ಎಸ್‌ಯುವಿಯನ್ನು ಇನ್ನೂ ಹಲವರು ಜನ ಬುಕ್ಕಿಂಗ್ ಮಾಡಿದ್ದಾರೆ.

ವಿಳಂಬವಾದ ಥಾರ್ ಎಸ್‌ಯುವಿ ವಿತರಣೆ, ವಿನೂತನ ಕ್ರಮಕ್ಕೆ ಮುಂದಾದ ಮಹೀಂದ್ರಾ

ಮಹೀಂದ್ರಾ ಕಂಪನಿಯು ಬುಕ್ಕಿಂಗ್ ಮಾಡಿರುವ ಎಲ್ಲರಿಗೂ ಪತ್ರದ ಜೊತೆಗೆ ಸ್ವೀಟ್ ಬಾಕ್ಸ್ ಗಳನ್ನು ಕಳುಹಿಸುತ್ತಿದೆ. ಮಹೀಂದ್ರಾ ಕಂಪನಿಯು ಥಾರ್ ಎಸ್‌ಯುವಿಯನ್ನು ಬುಕ್ಕಿಂಗ್ ಮಾಡಿರುವ ಎಲ್ಲಾ ಗ್ರಾಹಕರಿಗೂ ತ್ವರಿತವಾಗಿ ವಿತರಿಸುವುದಕ್ಕಾಗಿ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಮುಂದಾಗಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ವಿಳಂಬವಾದ ಥಾರ್ ಎಸ್‌ಯುವಿ ವಿತರಣೆ, ವಿನೂತನ ಕ್ರಮಕ್ಕೆ ಮುಂದಾದ ಮಹೀಂದ್ರಾ

ಸದ್ಯಕ್ಕೆ ಮಹೀಂದ್ರಾ ಕಂಪನಿಯು ತಿಂಗಳಿಗೆ 2,000 ಯೂನಿಟ್ ಥಾರ್ ಎಸ್‌ಯುವಿಯನ್ನು ಉತ್ಪಾದಿಸುತ್ತಿದೆ. ಈಗ ಅದರ ಸಾಮರ್ಥ್ಯವನ್ನು 3,000 ಯೂನಿಟ್ ಗಳಿಗೆ ಹೆಚ್ಚಿಸಲು ಮಹೀಂದ್ರಾ ಕಂಪನಿಯು ಮುಂದಾಗಿದೆ.

Most Read Articles

Kannada
English summary
Mahindra company sending letter with chocolate box to new Thar customers. Read in Kannada.
Story first published: Wednesday, November 11, 2020, 13:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X