ಮೊದಲ ಬ್ಯಾಚ್‌ನಲ್ಲಿ 500 ಯುನಿಟ್ ಥಾರ್ ಎಸ್‌ಯುವಿ ವಿತರಣೆ ಮಾಡಿದ ಮಹೀಂದ್ರಾ

ಮಹೀಂದ್ರಾ ಕಂಪನಿಯು ನ್ಯೂ ಜನರೇಷನ್ ಥಾರ್ ಮಾದರಿ ಮಾರಾಟದಲ್ಲಿ ಹೊಸ ದಾಖಲೆಗೆ ಕಾರಣವಾಗಿದ್ದು, ಹೊಸ ಕಾರು ಖರೀದಿಗೆ ಈಗಾಗಲೇ 20 ಸಾವಿರಕ್ಕೂ ಅಧಿಕ ಬುಕ್ಕಿಂಗ್ ಸಲ್ಲಿಕೆಯಾಗಿದೆ. ಬಿಡುಗಡೆಯ ನಂತರ ಕಳೆದ ವಾರವಷ್ಟೇ ಹೊಸ ಕಾರಿನ ವಿತರಣೆಯನ್ನು ಆರಂಭಿಸಲಾಗಿದ್ದು, ಮೊದಲ ಬ್ಯಾಚ್‌ನಲ್ಲಿ ಒಟ್ಟು 500 ಯುನಿಟ್ ವಿತರಣೆ ಮಾಡಲಾಗಿದೆ.

ಮೊದಲ ಬ್ಯಾಚ್‌ನಲ್ಲಿ 500 ಯುನಿಟ್ ಥಾರ್ ಎಸ್‌ಯುವಿ ವಿತರಣೆ

ಕಾರು ಉತ್ಪಾದನಾ ಸಾಮಾರ್ಥ್ಯದ ಆಧಾರದ ಮೇಲೆ ವಿತರಣೆ ಪ್ರಕ್ರಿಯೆ ಕೈಗೊಳ್ಳುವ ಆಟೋ ಕಂಪನಿಗಳು ಹೈ ಎಂಡ್ ಮಾದರಿಗಳಿಗೆ ಹೆಚ್ಚಿನ ಒತ್ತು ನೀಡಲಿದ್ದು, ಮಹೀಂದ್ರಾ ಕೂಡಾ ಮೊದಲ ಬ್ಯಾಚ್‌ನಲ್ಲಿ ಸಾಧ್ಯವಷ್ಟು ಹೈ ಎಂಡ್ ಮಾದರಿಗಳ ವಿತರಣೆಗೆ ಒತ್ತು ನೀಡಿದೆ. ಮುಂಬರುವ ದಿನಗಳಲ್ಲಿ ಹೊಸ ಕಾರಿನ ಉತ್ಪಾದನೆ ತೀವ್ರಗೊಳಿಸುವುದಾಗಿ ಹೇಳಿಕೊಂಡಿರುವ ಮಹೀಂದ್ರಾ ಕಂಪನಿಯು ಬುಕ್ಕಿಂಗ್ ನಂತರ ಕಾಯುವಿಕೆ ಅವಧಿಯನ್ನು ತಗ್ಗಿಸಲು ಯತ್ನಿಸುತ್ತಿದೆ.

ಮೊದಲ ಬ್ಯಾಚ್‌ನಲ್ಲಿ 500 ಯುನಿಟ್ ಥಾರ್ ಎಸ್‌ಯುವಿ ವಿತರಣೆ

ಸದ್ಯ ಮಹೀಂದ್ರಾ ನ್ಯೂ ಜನರೇಷನ್ ಕಾರು ಖರೀದಿಗೆ ಬುಕ್ಕಿಂಗ್ ನಂತರ ಕನಿಷ್ಠ 6 ವಾರಗಳಿಂದ ಗರಿಷ್ಠ 24 ವಾರಗಳ ಕಾಯಬೇಕಿದ್ದು, ಕಾಯುವಿಕೆಯ ಅವಧಿಯು ವೆರಿಯೆಂಟ್‌ಗಳಿಗೆ ಅನುಗುಣವಾಗಿ ನಿರ್ಧಾರವಾಗುತ್ತದೆ.

ಮೊದಲ ಬ್ಯಾಚ್‌ನಲ್ಲಿ 500 ಯುನಿಟ್ ಥಾರ್ ಎಸ್‌ಯುವಿ ವಿತರಣೆ

ಇದೇ ಕಾರಣಕ್ಕೆ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮಹೀಂದ್ರಾ ಕಂಪನಿಯು ಥಾರ್ ಕಾರಿನ ಆರಂಭಿಕ ಆವೃತ್ತಿಗಳ ಬುಕ್ಕಿಂಗ್ ಪ್ರಕ್ರಿಯೆಯನ್ನು ಕೆಲ ದಿನಗಳ ತನಕ ತಡೆಹಿಡಿಯಲಾಗಿದ್ದು, ಹೈ ಎಂಡ್ ಮಾದರಿಗಳಿಗೆ ಮಾತ್ರವೇ ಬುಕ್ಕಿಂಗ್ ಪಡೆದುಕೊಳ್ಳಲಾಗುತ್ತಿದೆ.

ಮೊದಲ ಬ್ಯಾಚ್‌ನಲ್ಲಿ 500 ಯುನಿಟ್ ಥಾರ್ ಎಸ್‌ಯುವಿ ವಿತರಣೆ

ಥಾರ್ ಆರಂಭಿಕ ಆವೃತ್ತಿಗಳಾದ ಎಎಕ್ಸ್ ಪೆಟ್ರೋಲ್ ಸ್ಟ್ಯಾಂಡರ್ಡ್ ಸಿಕ್ಸ್ ಸೀಟರ್, ಎಎಕ್ಸ್ ಸಿಕ್ಸ್ ಸೀಟರ್ ಸಾಫ್ಟ್ ಟಾಪ್ ಮತ್ತು ಎಎಕ್ಸ್ ಸಿಕ್ಸ್ ಸೀಟರ್ ಡೀಸೆಲ್ ಸಾಫ್ಟ್ ಟಾಪ್ ಮಾದರಿಗಳಿಗೆ ಹೆಚ್ಚು ಬೇಡಿಕೆಯಿದ್ದು, ಕೆಲ ದಿನಗಳ ತನಕ ಆಯ್ದ ಮಾದರಿಗಳ ಬುಕ್ಕಿಂಗ್ ಸ್ವಿಕಾರವನ್ನು ತಡೆಹಿಡಿಯಲಾಗಿದೆ. ಕಾರು ವಿತರಣೆಯು ಸುಧಾರಿಸಿದ ನಂತರ ಮತ್ತೆ ಬುಕ್ಕಿಂಗ್ ಆರಂಭವಾಗಲಿದ್ದು, ಟಾಪ್ ಎಂಡ್ ಮಾದರಿಗಳ ಮಾರಾಟಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ.

ಮೊದಲ ಬ್ಯಾಚ್‌ನಲ್ಲಿ 500 ಯುನಿಟ್ ಥಾರ್ ಎಸ್‌ಯುವಿ ವಿತರಣೆ

ಥಾರ್ ಕಾರು ಆರಂಭಿಕ ಆವೃತ್ತಿಯು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ. 9.80 ಲಕ್ಷದಿಂದ ಟಾಪ್ ಮಾದರಿಯು ರೂ. 12.95 ಲಕ್ಷ ಬೆಲೆ ಪಡೆದುಕೊಂಡಿದ್ದು, ಅತ್ಯುತ್ತಮ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆದುಕೊಂಡಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಮೊದಲ ಬ್ಯಾಚ್‌ನಲ್ಲಿ 500 ಯುನಿಟ್ ಥಾರ್ ಎಸ್‌ಯುವಿ ವಿತರಣೆ

ಥಾರ್ ಕಾರು ಮಾದರಿಯಲ್ಲಿ ಮೊದಲ ಬಾರಿಗೆ ಡೀಸೆಲ್ ಎಂಜಿನ್ ಜೊತೆಗೆ ಪೆಟ್ರೋಲ್ ಕಾರಿನ ಆಯ್ಕೆಯನ್ನು ಸಹ ನೀಡಿರುವುದು ಆಫ್-ರೋಡ್ ಕಾರು ಮಾದರಿಯ ಮಾರಾಟದಲ್ಲಿ ಮತ್ತೊಂದು ಹಂತದ ಬದಲಾವಣೆಗೆ ಕಾರಣವಾಗಿದ್ದು, ಹೊಸ ಕಾರಿನ ಹೊರಭಾಗದ ವಿನ್ಯಾಸದಲ್ಲೂ ಸಾಕಷ್ಟು ಬದಲಾವಣೆಗಳನ್ನು ಪರಿಚಯಿಸಲಾಗಿದೆ.

ಮೊದಲ ಬ್ಯಾಚ್‌ನಲ್ಲಿ 500 ಯುನಿಟ್ ಥಾರ್ ಎಸ್‌ಯುವಿ ವಿತರಣೆ

ಹೊಸ ಥಾರ್ ಕಾರು ಮಾದರಿಯಲ್ಲಿ ಬಿಎಸ್-6 ಎಂಜಿನ್ ಪ್ರೇರಿತ 2.2-ಲೀಟರ್ ಡೀಸೆಲ್ ಎಂಜಿನ್ ಮತ್ತು ಹೊಸದಾಗಿ ಅಭಿವೃದ್ದಿಗೊಳಿಸಲಾದ 2.-ಲೀಟರ್ ಎಂ-ಸ್ಟಾಲಿನ್ ಪೆಟ್ರೋಲ್ ಎಂಜಿನ್ ನೀಡಲಾಗಿದ್ದು, ಎರಡು ಎಂಜಿನ್ ಮಾದರಿಗಳಲ್ಲೂ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ನೀಡಲಾಗಿದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಮೊದಲ ಬ್ಯಾಚ್‌ನಲ್ಲಿ 500 ಯುನಿಟ್ ಥಾರ್ ಎಸ್‌ಯುವಿ ವಿತರಣೆ

ಥಾರ್ ಡೀಸೆಲ್ ಮಾದರಿಯು 132-ಬಿಎಚ್‌ಪಿ, 300-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ ಪೆಟ್ರೋಲ್ ಮಾದರಿಯು 152-ಬಿಎಚ್‌ಪಿ, 320-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು. ಈ ಮೂಲಕ ಪ್ರಯಾಣಿಕರ ಸುರಕ್ಷತೆಯಲ್ಲೂ ಗಮನಸೆಳೆಯಲಿದೆ.

Most Read Articles

Kannada
English summary
Mahindra Conducts Mega Delivery Of The All-New Thar. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X