ಆಟೋ ಎಕ್ಸ್‌ಪೋ 2020: ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರು ಪ್ರದರ್ಶಿಸಲಿದೆ ಮಹೀಂದ್ರಾ

ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಿದ ಮೊದಲ ಕಂಪನಿಗಳಲ್ಲಿ ಒಂದಾಗಿದೆ. ಮಹೀಂದ್ರಾ ಕಂಪನಿಯು ಹಲವು ಎಲೆಕ್ಟ್ರಿಕ್ ಕಾರುಗಳನ್ನು ಈ ಸೆಗ್‍‍ಮೆಂಟಿನಲ್ಲಿ ಬಿಡುಗಡೆಗೊಳಿಸುವ ಮೂಲಕ ತನ್ನ ಮಾರುಕಟ್ಟೆಯನ್ನು ಮತ್ತಷ್ಟು ಬಲಪಡಿಸಿಕೊಳ್ಳಲು ಮುಂದಾಗಿದೆ.

ಆಟೋ ಎಕ್ಸ್‌ಪೋ 2020: ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರು ಪ್ರದರ್ಶಿಸಲಿದೆ ಮಹೀಂದ್ರಾ

ಈ ಕಾರಣಕ್ಕೆ ಮಹೀಂದ್ರಾ ಕಂಪನಿಯು ಮುಂದಿನ ತಿಂಗಳು ದೆಹಲಿಯಲ್ಲಿ ನಡೆಯಲಿರುವ 2020ರ ಆಟೋ ಎಕ್ಸ್ ಪೋದಲ್ಲಿ 4 ಹೊಸ ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರುಗಳನ್ನು ಪ್ರದರ್ಶಿಸಲಿದೆ. ಈ ಕಾರುಗಳ ಬಗೆಗಿನ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಆಟೋ ಎಕ್ಸ್‌ಪೋ 2020: ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರು ಪ್ರದರ್ಶಿಸಲಿದೆ ಮಹೀಂದ್ರಾ

ಮಹೀಂದ್ರಾ ಕಂಪನಿಯು ಈ ಆಟೋ ಎಕ್ಸ್ ಪೋದಲ್ಲಿ ಮಹೀಂದ್ರಾ ಕೆಯುವಿ100, ಎಕ್ಸ್ ಯುವಿ 300, ಎಕ್ಸ್ ಯುವಿ 500 ಮಾದರಿಗಳ ಕಾನ್ಸೆಪ್ಟ್ ಎಲೆಕ್ಟ್ರಿಕ್ ಕಾರುಗಳನ್ನು ಹಾಗೂ ಕ್ವಾಡ್ರಿ ಸೈಕಲ್ ಎಲೆಕ್ಟ್ರಿಕ್ ವಾಹನಗಳನ್ನು ಪ್ರದರ್ಶಿಸಲಿದೆ.

ಆಟೋ ಎಕ್ಸ್‌ಪೋ 2020: ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರು ಪ್ರದರ್ಶಿಸಲಿದೆ ಮಹೀಂದ್ರಾ

ಆಟೋಕಾರ್ ಇಂಡಿಯಾ ವರದಿಗಳ ಪ್ರಕಾರ ಮಹೀಂದ್ರಾ ಕಂಪನಿಯು ಮತ್ತೊಂದು ಕಾರ್ ಅನ್ನು ಪ್ರದರ್ಶಿಸಲಿದೆ. ಮಹೀಂದ್ರಾ ಕಂಪನಿಯು ಈ ಆಟೋ ಎಕ್ಸ್ ಪೋದಲ್ಲಿ ಹೆಚ್ಚು ಎಫಿಶಿಯನ್ಸಿ ಹೊಂದಿರುವ ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರ್ ಅನ್ನು ಪ್ರದರ್ಶಿಸಲಿದೆ.

ಆಟೋ ಎಕ್ಸ್‌ಪೋ 2020: ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರು ಪ್ರದರ್ಶಿಸಲಿದೆ ಮಹೀಂದ್ರಾ

ಈ ಹೊಸ ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರಿಗೆ ಮಹೀಂದ್ರಾ ಫನ್‍‍ಸ್ಟರ್ ಎಂಬ ಹೆಸರಿಡಲಾಗಿದೆ. ಈ ಎಲೆಕ್ಟ್ರಿಕ್ ಕಾರಿನಲ್ಲಿ 60 ಕಿ.ವ್ಯಾನ ಬ್ಯಾಟರಿಯನ್ನು ಅಳವಡಿಸಲಾಗುವುದು ಎಂದು ತಿಳಿದು ಬಂದಿದೆ. 308 ಬಿ‍‍ಹೆಚ್‍‍ಪಿ ಪವರ್ ಉತ್ಪಾದಿಸುವ ಈ ಕಾರು 0 - 100 ಕಿ.ಮೀ ವೇಗವನ್ನು 5 ಸೆಕೆಂಡುಗಳಲ್ಲಿ ಕ್ರಮಿಸಲಿದೆ.

ಆಟೋ ಎಕ್ಸ್‌ಪೋ 2020: ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರು ಪ್ರದರ್ಶಿಸಲಿದೆ ಮಹೀಂದ್ರಾ

ಈ ಕಾನ್ಸೆಪ್ಟ್ ಕಾರ್ ಅನ್ನು ಹೊಸ ಪ್ಲಾಟ್‍‍ಫಾರಂನಡಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಇದರಿಂದಾಗಿ ಭವಿಷ್ಯದಲ್ಲಿ ಈ ರೀತಿಯ ಕಾರುಗಳನ್ನು ಅಭಿವೃದ್ಧಿಪಡಿಸಲು ಅನುಕೂಲವಾಗಲಿದೆ. ಈ ಕಾನ್ಸೆಪ್ಟ್ ಕಾರು ತಯಾರಾಗಿ ಬಿಡುಗಡೆಯಾದ ನಂತರ ದೇಶಿಯ ಮಾರುಕಟ್ಟೆಯಲ್ಲಿರುವ ಬಲಿಷ್ಟ ಎಲೆಕ್ಟ್ರಿಕ್ ಕಾರ್ ಆಗಿರಲಿದೆ.

ಆಟೋ ಎಕ್ಸ್‌ಪೋ 2020: ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರು ಪ್ರದರ್ಶಿಸಲಿದೆ ಮಹೀಂದ್ರಾ

ಈ ಎಲೆಕ್ಟ್ರಿಕ್ ಕಾರು ಸ್ಪರ್ಧಾತ್ಮಕ ಬೆಲೆಯನ್ನು ಹೊಂದಿರಲಿದೆ ಎಂದು ಹೇಳಲಾಗುತ್ತಿದೆ. ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನಗೊಳ್ಳಲಿರುವ ಈ ಕಾರು ಹೆಚ್ಚಿನ ಸಂಖ್ಯೆಯ ಜನರನ್ನು ತನ್ನತ್ತ ಸೆಳೆಯುವ ಸಾಧ್ಯತೆಗಳಿವೆ.

ಆಟೋ ಎಕ್ಸ್‌ಪೋ 2020: ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರು ಪ್ರದರ್ಶಿಸಲಿದೆ ಮಹೀಂದ್ರಾ

ಮಹೀಂದ್ರಾ ಕೆಯುವಿ 100 ಎಲೆಕ್ಟ್ರಿಕ್ ಎಸ್‍‍ಯುವಿ ಈ ಕಾನ್ಸೆಪ್ಟ್ ಕಾರಿಗೆ ಮಾದರಿಯಾಗಿರಲಿದೆ. ಮಹೀಂದ್ರಾ ಕಂಪನಿಯು ಮೊದಲು ಈ ಕಾರ್ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ನಂತರ ಎಕ್ಸ್ ಯುವಿ 300 ಎಲೆಕ್ಟ್ರಿಕ್ ಕಾರು ಅದಾದ ನಂತರ ಎಕ್ಸ್ ಯುವಿ 500 ಎಲೆಕ್ಟ್ರಿಕ್ ಕಾರ್ ಅನ್ನು ಬಿಡುಗಡೆಗೊಳಿಸಲಿದೆ.

Most Read Articles

Kannada
English summary
Mahindra Funster EV concept to be showcased at 2020 Auto Expo. Read in Kannada.
Story first published: Thursday, January 30, 2020, 13:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X