ಅದ್ಭುತವೆನಿಸುವ ರೀತಿಯಲ್ಲಿ ಮಾಡಿಫೈಗೊಂಡ ಮಹೀಂದ್ರಾ ಇನ್ವೆಡರ್

ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ಈ ಹಿಂದೆ ಹಲವಾರು ಜನಪ್ರಿಯ ಎಸ್‌ಯುವಿಗಳನ್ನು ಬಿಡುಗಡೆಗೊಳಿಸಿತ್ತು. ಅವುಗಳಲ್ಲಿ ಮಹೀಂದ್ರಾ ಇನ್ವೆಡರ್ ಸಹ ಒಂದು. ಬೇಡಿಕೆ ಕುಸಿದ ಕಾರಣಕ್ಕೆ ಮೂರು ಡೋರುಗಳ ಇನ್ವೆಡರ್ ಎಸ್‌ಯುವಿಯ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ.

ಅದ್ಭುತವೆನಿಸುವ ರೀತಿಯಲ್ಲಿ ಮಾಡಿಫೈಗೊಂಡ ಮಹೀಂದ್ರಾ ಇನ್ವೆಡರ್

ಆದರೆ ಈಗಾಗಲೇ ಇನ್ವೆಡರ್ ಎಸ್‌ಯುವಿಯನ್ನು ಖರೀದಿಸಿರುವರೊಬ್ಬರು ಅದನ್ನು ಅದ್ಭುತವೆನಿಸುವ ರೀತಿಯಲ್ಲಿ ಮಾಡಿಫೈಗೊಳಿಸಿದ್ದಾರೆ. ಇತ್ತೀಚೆಗೆ ಮಾಡಿಫೈಗೊಂಡಿರುವ ಇನ್ವೆಡರ್ ಎಸ್‌ಯುವಿಯ ವೀಡಿಯೊ ಬಿಡುಗಡೆಯಾಗಿದೆ. ಈ ಎಸ್‌ಯುವಿಯನ್ನು ಆಫ್ ರೋಡ್ ಗೆ ತಕ್ಕಂತೆ ಮಾಡಿಫೈ ಮಾಡಲಾಗಿದೆ. ಈ ಎಸ್‌ಯುವಿಯ ಹೊರಭಾಗವು ಮಸ್ಟರ್ಡ್ ಯೆಲ್ಲೊ ಬಣ್ಣವನ್ನು ಹೊಂದಿದ್ದು, ಆಕರ್ಷಕವಾಗಿ ಕಾಣುತ್ತದೆ.

ಅದ್ಭುತವೆನಿಸುವ ರೀತಿಯಲ್ಲಿ ಮಾಡಿಫೈಗೊಂಡ ಮಹೀಂದ್ರಾ ಇನ್ವೆಡರ್

ಈ ಎಸ್‌ಯುವಿಯ ಮುಂಭಾಗದಲ್ಲಿ ಕಸ್ಟಮ್ ಆಫ್-ರೋಡ್ ಬಂಪರ್ ಅನ್ನು ಅಳವಡಿಸಲಾಗಿದೆ. ಇದರ ಜೊತೆಗೆ ಮಧ್ಯದಲ್ಲಿ ಎರಡು ಹೆಚ್ಚುವರಿ ಲ್ಯಾಂಪ್ ಹಾಗೂ ಎಲ್‌ಇಡಿ ಫಾಗ್ ಲ್ಯಾಂಪ್ ಗಳನ್ನು ಅಳವಡಿಸಲಾಗಿದ್ದು, ಹಳೆಯ ಬಂಪರ್ ಅನ್ನು ತೆಗೆದುಹಾಕಲಾಗಿದೆ. ಈ ಎಸ್‌ಯುವಿಯನ್ನು 8-9 ಇಂಚುಗಳಷ್ಟು ಮೇಲಕ್ಕೆ ಎತ್ತರಿಸಲಾಗಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಅದ್ಭುತವೆನಿಸುವ ರೀತಿಯಲ್ಲಿ ಮಾಡಿಫೈಗೊಂಡ ಮಹೀಂದ್ರಾ ಇನ್ವೆಡರ್

ಇದರ ಜೊತೆಗೆ ಮಹೀಂದ್ರಾ ಇನ್ವೆಡರ್‌ನಲ್ಲಿ 35 ಇಂಚಿನ ಟಯರ್‌ಗಳನ್ನು ಅಳವಡಿಸಲಾಗಿದೆ. ಈ ಎಸ್‌ಯುವಿ ಐರನ್ ಮನ್ ಸಸ್ಪೆಂಷನ್ ಗಳನ್ನು ಹೊಂದಿದೆ. ಇದರ ರೂಫ್ ಮೇಲೆ ಎಲ್ಇಡಿ ಬಾರ್ ಅಳವಡಿಸಲಾಗಿದೆ. ವ್ಹೀಲ್ ಆರ್ಕ್ ಗಳನ್ನು ಸಹ ಮಾಡಿಫೈ ಮಾಡಲಾಗಿದೆ.

ಅದ್ಭುತವೆನಿಸುವ ರೀತಿಯಲ್ಲಿ ಮಾಡಿಫೈಗೊಂಡ ಮಹೀಂದ್ರಾ ಇನ್ವೆಡರ್

ಈ ಕಾರಿನ ಹಿಂಭಾಗದಲ್ಲಿ ಆಫ್ ರೋಡ್ ಬಂಪರ್, ಆಫ್ಟರ್ ಮಾರ್ಕೆಟ್ ಎಲ್ಇಡಿ ಟೇಲ್ ಲೈಟ್ ಹಾಗೂ ಟೇಲ್ ಗೇಟ್ ನಲ್ಲಿ ಹೆಚ್ಚುವರಿ ವ್ಹೀಲ್ ಅಳವಡಿಸಲಾಗಿದೆ. ಈ ಎಸ್‌ಯುವಿಯಲ್ಲಿ ಡೋರು ತೆರೆದಾಗ ಮಾತ್ರ ತೆರೆದುಕೊಳ್ಳುವ ಪವರ್ ಸೈಡ್ ಸ್ಟೆಪ್ ನೀಡಲಾಗಿದೆ. ಈ ಎಸ್‌ಯುವಿಯ ಇಂಟಿರಿಯರ್ ನಲ್ಲಿಯೂ ಅನೇಕ ಬದಲಾವಣೆಗಳನ್ನು ಮಾಡಲಾಗಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಅದ್ಭುತವೆನಿಸುವ ರೀತಿಯಲ್ಲಿ ಮಾಡಿಫೈಗೊಂಡ ಮಹೀಂದ್ರಾ ಇನ್ವೆಡರ್

ಮಹೀಂದ್ರಾ ಇನ್ವೆಡರ್‌ ನ ಇಂಟಿರಿಯರ್ ಕಪ್ಪು ಬಣ್ಣವನ್ನು ಹೊಂದಿದೆ. ಅದರ ಡ್ಯಾಶ್‌ಬೋರ್ಡ್ ಅನ್ನು ಸಾಮಾನ್ಯ ರೀತಿಯಲ್ಲಿರಿಸಲಾಗಿದೆ. ಈ ಎಸ್‌ಯುವಿಯಲ್ಲಿ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ, ಹಿಂಭಾಗದಲ್ಲಿ ಸ್ಪೀಕರ್ ಹಾಗೂ ವೂಫರ್, ಹಿಂಭಾಗದ ಪ್ರಯಾಣಿಕರಿಗಾಗಿ ಫ್ರಂಟ್ ಫೇಸಿಂಗ್ ಸೀಟುಗಳನ್ನು ನೀಡಲಾಗಿದೆ.

ಈ ಮಹೀಂದ್ರಾ ಇನ್ವೆಡರ್‌ ಈ ಎಸ್‌ಯುವಿಯಲ್ಲಿ ಸ್ಕಾರ್ಪಿಯೋ ಡಿಐ ಟರ್ಬೊ ಡೀಸೆಲ್ ಎಂಜಿನ್‌ ಅಳವಡಿಸಲಾಗಿದೆ. ಏರ್ ಫಿಲ್ಟರ್ ಅನ್ನು ಸಹ ಬದಲಿಸಲಾಗಿದೆ. ಒಟ್ಟಾರೆಯಾಗಿ ಮಹೀಂದ್ರಾ ಇನ್ವೆಡರ್‌ ಎಸ್‌ಯುವಿಯನ್ನು ಸರಳವಾಗಿ ಆದರೆ ಅದ್ಭುತವಾಗಿ ಮಾಡಿಫೈಗೊಂಡಿರುವುದನ್ನು ವೀಕೆಂಡ್ ಆನ್ ವೀಲ್ಸ್ # ವಾಹ್ ಚಿತ್ರಗಳಲ್ಲಿ ಕಾಣಬಹುದು.

ಅದ್ಭುತವೆನಿಸುವ ರೀತಿಯಲ್ಲಿ ಮಾಡಿಫೈಗೊಂಡ ಮಹೀಂದ್ರಾ ಇನ್ವೆಡರ್

ಈ ಮಹೀಂದ್ರಾ ಇನ್ವೆಡರ್‌ ಎಸ್‌ಯುವಿಯನ್ನು ಮಾಡಿಫೈಗೊಳಿಸಲು ಎಷ್ಟು ಖರ್ಚು ಮಾಡಲಾಗಿದೆ ಎಂಬುದನ್ನು ಬಹಿರಂಗಪಡಿಸಿಲ್ಲ. ಮಹೀಂದ್ರಾ ಕಂಪನಿಯು ತನ್ನ ಜನಪ್ರಿಯ ಎಸ್‌ಯುವಿಯಾದ ಥಾರ್ ಅನ್ನು ಶೀಘ್ರದಲ್ಲೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.

Most Read Articles

Kannada
English summary
Mahindra Invader modified in a fantastic way. Read in Kannada.
Story first published: Tuesday, September 1, 2020, 19:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X