ಬಿಡುಗಡೆಯಾಯ್ತು ಬಿಎಸ್-6 ಮಹೀಂದ್ರಾ ಸ್ಕಾರ್ಪಿಯೋ ಎಸ್‍‍‍ಯುವಿ

ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ತನ್ನ ಹೊಸ ತಲೆಮಾರಿನ ಸ್ಕಾರ್ಪಿಯೋ ಎಸ್‍ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಹೊಸ ಮಹೀಂದ್ರಾ ಸ್ಕಾರ್ಪಿಯೋ ಎಸ್‍ಯುವಿಯ ಪ್ರಾರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.12.40 ಲಕ್ಷಗಳಾಗಿದೆ.

ಬಿಡುಗಡೆಯಾಯ್ತು ಬಿಎಸ್-6 ಮಹೀಂದ್ರಾ ಸ್ಕಾರ್ಪಿಯೋ ಎಸ್‍‍‍ಯುವಿ

ಬಿಎಸ್-6 ಸ್ಕಾರ್ಪಿಯೋ ಎಸ್‍ಯುವಿಗಾಗಿ ಆನ್‌ಲೈನ್ ನಲ್ಲಿ ಬುಕ್ಕಿಂಗ್ ಸ್ವೀಕರಿಸಲು ಪ್ರಾರಂಭಿಸಿದೆ. ಬಿಎಸ್-6 ಸ್ಕಾರ್ಪಿಯೋ ಎಸ್‍ಯುವಿಗಾಗಿ ಟೋಕನ್ ಮೊತ್ತ ಮೊತ್ತ ರೂ.5 ಸಾವಿರ ಪಾವತಿಸಿ ಬುಕ್ಕಿಂಗ್ ಮಾಡಬಹುದಾಗಿದೆ. ಗ್ರಾಹಕರು ಈ ಎಸ್‍ಯುವಿಯ ಬಾಡಿ ಹಗ್ಗಿಂಗ್ ಬಂಪರ್, ಫಾಗ್ ಲ್ಯಾಂಪ್ ಅಲಂಕರಿಸುವ ಸೆಟ್, ಡೆಕಲ್ಸ್, ಪಾರ್ಕಿಂಗ್ ಕವರ್, ಅಲಾಯ್ ವೀಲ್, ಹೆಡ್‌ರೆಸ್ಟ್ ಮೌಂಟೆಡ್ ಡಿವಿಡಿ ಟಚ್‌ಸ್ಕ್ರೀನ್, ಸ್ಕಫ್ ಪ್ಲೇಟ್‌ಗಳು, ಕಾರ್ಪೆಟ್ ಮ್ಯಾಟ್ ಸೆಟ್ ಮತ್ತು ಇತರ ಉಪಕರಣಗಳನ್ನು ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ಬಿಡುಗಡೆಯಾಯ್ತು ಬಿಎಸ್-6 ಮಹೀಂದ್ರಾ ಸ್ಕಾರ್ಪಿಯೋ ಎಸ್‍‍‍ಯುವಿ

ಮಹೀಂದ್ರಾ ಕಂಪನಿಯ ಸರಣಿಯ ಕಾರು ಮಾರಾಟದಲ್ಲಿ ಸ್ಕಾರ್ಪಿಯೋ ಎಸ್‍‍ಯುವಿಯ ಕೊಡುಗೆಯು ದೊಡ್ಡದು. 2002ರಲ್ಲಿ ಮಹೀಂದ್ರಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಸ್ಕಾರ್ಪಿಯೋ ಬಿಡುಗಡೆಗೊಳಿಸಿದ ನಂತರ ಎರಡು ಬಾರಿ ನವೀಕರಣಗೊಳಿಸಿದೆ. ಕಂಪನಿಯು ಸ್ಕಾರ್ಪಿಯೋ ಎಸ್‍‍ಯುವಿಯನ್ನು 2006ರಲ್ಲಿ ಮತ್ತು 2014ರಲ್ಲಿ ನವೀಕರಣಗೊಳಿಸಿತ್ತು.

MOST READ: ಬಿಡುಗಡೆಯಾಯ್ತು ಬಿಎಸ್-6 ಮಹೀಂದ್ರಾ ಅಲ್ಟುರಾಸ್ ಜಿ4 ಎಸ್‍ಯುವಿ

ಬಿಡುಗಡೆಯಾಯ್ತು ಬಿಎಸ್-6 ಮಹೀಂದ್ರಾ ಸ್ಕಾರ್ಪಿಯೋ ಎಸ್‍‍‍ಯುವಿ

ಬಿಎಸ್-6 ಸ್ಕಾರ್ಪಿಯೋ ಎಸ್‍ಯುವಿಯು ಎಸ್5, ಎಸ್7, ಎಸ್9 ಮತ್ತು ಎಸ್11 ಎಂಬ ನಾಲ್ಕು ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ.ಇದರಲ್ಲಿ ಎಸ್3 ರೂಪಾಂತರವು ಎಂಟ್ರಿ-ಲೆವೆಲ್ ಆದರೆ ಎಸ್11 ಟಾಪ್-ಎಂಡ್ ಎಡಬ್ಲ್ಯೂಡಿ ರೂಪಾಂತರವಾಗಿದೆ.

ಬಿಡುಗಡೆಯಾಯ್ತು ಬಿಎಸ್-6 ಮಹೀಂದ್ರಾ ಸ್ಕಾರ್ಪಿಯೋ ಎಸ್‍‍‍ಯುವಿ

ಹೊಸ ಸ್ಕಾರ್ಪಿಯೋ 2.2 ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 140 ಬಿಹೆಚ್‍ಪಿ ಪವರ್ ಮತ್ತು 320 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ದಟ್ಸನ್ ರೆಡಿ ಗೋ ಫೇಸ್‍‍ಲಿಫ್ಟ್ ಕಾರಿನ ಟೀಸರ್ ಬಿಡುಗಡೆ

ಬಿಡುಗಡೆಯಾಯ್ತು ಬಿಎಸ್-6 ಮಹೀಂದ್ರಾ ಸ್ಕಾರ್ಪಿಯೋ ಎಸ್‍‍‍ಯುವಿ

ಹೊಸ ಸ್ಕಾರ್ಪಿಯೋ ಎಸ್5 ರೂಪಾಂತರದ ಬೆಲೆಯು ರೂ.12.40 ಲಕ್ಷ, ಸ್ಕಾರ್ಪಿಯೋ ಎಸ್7 ರೂಪಾಂತರದ ಬೆಲೆಯು ರೂ.14.21 ಲಕ್ಷ ಮತ್ತು ಸ್ಕಾರ್ಪಿಯೋ ಎಸ್9 ರೂಪಾಂತರದ ಬೆಲೆಯು ರೂ.14.84 ಲಕ್ಷಗಳಾಗಿದ್ದರೆ ಟಾಪ್ ಸ್ಪೆಕ್ ಎಸ್11 ರೂಪಾಂತರದ ಬೆಲೆಯು ರೂ.16.00 ಲಕ್ಷಗಳಾಗಿದೆ. ಈ ಎಲ್ಲಾ ಬೆಲೆಗಳು ಭಾರತದ ಎಕ್ಸ್ ಶೋರೂಂ ಪ್ರಕಾರವಾಗಿದೆ.

ಬಿಡುಗಡೆಯಾಯ್ತು ಬಿಎಸ್-6 ಮಹೀಂದ್ರಾ ಸ್ಕಾರ್ಪಿಯೋ ಎಸ್‍‍‍ಯುವಿ

ಹೊಸ ಸ್ಕಾರ್ಪಿಯೊ ಇಂಟಿರಿಯರ್‍‍ನಲ್ಲಿ ಸೆಂಟರ್ ಕನ್ಸೋಲ್ ಮತ್ತು ಕಂಟ್ರೋಲ್ ಡಯಲ್ ಸದ್ಯ ಮಾರುಕಟ್ಟೆಯಲ್ಲಿರುವ ಮಾದರಿಯಲ್ಲಿದೆ. ಮೌಂಟಡ್ ಕಂಟ್ರೋಲ್‍‍ನೊಂದಿಗೆ ಸ್ಟೀಯರಿಂಗ್ ವ್ಹೀಲ್ ಅನ್ನು ಹೊಂದಿದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಬಿಡುಗಡೆಯಾಯ್ತು ಬಿಎಸ್-6 ಮಹೀಂದ್ರಾ ಸ್ಕಾರ್ಪಿಯೋ ಎಸ್‍‍‍ಯುವಿ

ಇದರೊಂದಿಗೆ 6 ಏರ್‌ಬ್ಯಾಗ್‌ಗಳು, ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ರೇರ್ ಪಾರ್ಕಿಂಗ್ ಕ್ಯಾಮೆರಾ, ರೂಫ್ ರೈಲ್ಸ್, ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್‌ಇಡಿ ಫಾಗ್ ಲ್ಯಾಂಪ್, ಟರ್ನ್ ಇಂಡಿಕೇಟರ್ ಲೈಟ್, ಸಿಲ್ವರ್ ಸ್ಕೀಡ್ ಪ್ಲೇಟ್, ರೇರ್ ಎಸಿ ವೆಂಟ್ಸ್ ಗಳನ್ನು ಹೊಂದಿದೆ.

ಬಿಡುಗಡೆಯಾಯ್ತು ಬಿಎಸ್-6 ಮಹೀಂದ್ರಾ ಸ್ಕಾರ್ಪಿಯೋ ಎಸ್‍‍‍ಯುವಿ

ಹೊಸ ಸ್ಕಾರ್ಪಿಯೋದ ಇಂಟಿರಿಯರ್‍‍ನಲ್ಲಿ ಹೆಚ್ಚಿನ ಸ್ಪೇಸ್ ಅನ್ನು ನೀಡಲಾಗಿದೆ. ಇದರಿಂದಾಗಿ ಪ್ರಯಾಣಿಕರಿಕೆ ಆರಾಮದಾಯಕವಾಗಿ ಪ್ರಯಾಣಿಸಬಹುದು. ಬಿಎಸ್-6 ಮಹೀಂದ್ರಾ ಸ್ಕಾರ್ಪಿಯೋ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಎಸ್‍ಯುವಿಗಳಲ್ಲಿ ಒಂದಾಗಿದೆ.

Most Read Articles

Kannada
English summary
BS6 Mahindra Scorpio Launched In India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X