'ಮೇಡ್ ಇನ್ ಇಂಡಿಯಾ' ಖ್ಯಾತಿಯ ಮರ್ಸಿಡಿಸ್-ಎಎಂಜಿ ಜಿಎಲ್‌ಸಿ 43 ಕೂಪೆ ಕಾರು ಬಿಡುಗಡೆ

ಮರ್ಸಿಡಿಸ್ ಬೆಂಝ್ ಇಂಡಿಯಾ ಕಂಪನಿಯು ಭಾರತದಲ್ಲೇ ಪೂರ್ಣ ಪ್ರಮಾಣದ ಕಾರು ಅಭಿವೃದ್ದಿಗಾಗಿ ಹಂತ-ಹಂತವಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಇದೀಗ ಹೊಸ ಯೋಜನೆ ಅಡಿ ನಿರ್ಮಾಣವಾದ ಮೊದಲ ಹೈ ಪರ್ಫಾಮೆನ್ಸ್ ಕಾರು ಆವೃತ್ತಿಯಾದ ಮರ್ಸಿಡಿಸ್-ಎಎಂಜಿ ಜಿಎಲ್‌ಸಿ 43 ಕೂಪೆ ಕಾರು ಮಾದರಿಯನ್ನು ಬಿಡುಗಡೆ ಮಾಡಿದೆ.

ಮೇಡ್ ಇನ್ ಇಂಡಿಯಾ ಖ್ಯಾತಿಯ ಮರ್ಸಿಡಿಸ್-ಎಎಂಜಿ ಜಿಎಲ್‌ಸಿ 43 ಕೂಪೆ ಕಾರು ಬಿಡುಗಡೆ

ಪುಣೆಯಲ್ಲಿರುವ ಚಾಕನ್ ಕಾರು ಉತ್ಪಾದನಾ ಘಟಕದಲ್ಲಿ ಮರ್ಸಿಡಿಸ್-ಎಎಂಜಿ ಜಿಎಲ್‌ಸಿ 43 ಕೂಪೆ ಮಾದರಿಯನ್ನು ಅಭಿವೃದ್ದಿಗೊಳಿಸಿರುವ ಮರ್ಸಿಡಿಸ್ ಬೆಂಝ್ ಕಂಪನಿಯು ಹೊಸ ಕಾರಿನ ಬೆಲೆಯನ್ನು ಎಕ್ಸ್‌ಶೋರೂಂ ದರದಂತೆ ರೂ.76.70 ಲಕ್ಷಕ್ಕೆ ನಿಗದಿಪಡಿಸಿದ್ದು, ಪರ್ಫಾಮೆನ್ಸ್ ಆವೃತ್ತಿಯಾಗಿರುವ ಮರ್ಸಿಡಿಸ್-ಎಎಂಜಿ ಜಿಎಲ್‌ಸಿ 43 ಕೂಪೆ ಕಾರಿನ ವಿತರಣೆಯನ್ನು ಶೀಘ್ರದಲ್ಲೇ ಆರಂಭಿಸುವುದಾಗಿ ಕಂಪನಿಯು ಹೇಳಿಕೊಂಡಿದೆ.

ಮೇಡ್ ಇನ್ ಇಂಡಿಯಾ ಖ್ಯಾತಿಯ ಮರ್ಸಿಡಿಸ್-ಎಎಂಜಿ ಜಿಎಲ್‌ಸಿ 43 ಕೂಪೆ ಕಾರು ಬಿಡುಗಡೆ

ಸದ್ಯ ಹೊಸ ಕಾರಿನ ಉತ್ಪಾದನೆಯು ಭಾರತದಲ್ಲೇ ಆರಂಭವಾಗಿದ್ದರೂ ಸಿಕೆಡಿ ಆಮದು ನೀತಿ ಅಡಿ ಮಾರಾಟಗೊಳ್ಳಲಿರುವ ಮರ್ಸಿಡಿಸ್-ಎಎಂಜಿ ಜಿಎಲ್‌ಸಿ 43 ಕೂಪೆ ಕಾರು ಭಾರತದಲ್ಲೇ ಅಭಿವೃದ್ದಿಯಾದ ಎಂಜಿನ್ ಪಡೆದುಕೊಂಡಿದ್ದು, ಬಿಡಿಭಾಗಗಳು ಮಾತ್ರ ವಿದೇಶಿ ಮಾರುಕಟ್ಟೆಯಿಂದ ಆಮದು ಮಾಡಿಕೊಳ್ಳುವ ಮೂಲಕ ಅಸೆಂಬಲ್ ಮಾಡಲಾಗುತ್ತದೆ.

ಮೇಡ್ ಇನ್ ಇಂಡಿಯಾ ಖ್ಯಾತಿಯ ಮರ್ಸಿಡಿಸ್-ಎಎಂಜಿ ಜಿಎಲ್‌ಸಿ 43 ಕೂಪೆ ಕಾರು ಬಿಡುಗಡೆ

ಹೊಸ ಕಾರಿನ ಮೂಲಕ ಭಾರತದಲ್ಲಿ ಎಲ್ಲಾ ಮಾದರಿಯಲ್ಲೂ ಭಾರತದಲ್ಲೇ ಉತ್ಪಾದನೆಗೊಳಿಸಲಾದ ಕಾರುಗಳ ಮಾರಾಟ ಹೊಂದಿರುವ ಮರ್ಸಿಡಿಸ್ ಬೆಂಝ್ ಕಂಪನಿಯು ಪರ್ಫಾಮೆನ್ಸ್ ಕೂಪೆ ಕಾರು ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುವ ತವಕದಲ್ಲಿದ್ದು, ಹೊಸ ಕಾರು ಹಲವಾರು ಸುಧಾರಿತ ತಂತ್ರಜ್ಞಾನ ಪ್ರೇರಿತ ಸೌಲಭ್ಯಗಳನ್ನು ಪಡೆದುಕೊಂಡಿದೆ.

ಮೇಡ್ ಇನ್ ಇಂಡಿಯಾ ಖ್ಯಾತಿಯ ಮರ್ಸಿಡಿಸ್-ಎಎಂಜಿ ಜಿಎಲ್‌ಸಿ 43 ಕೂಪೆ ಕಾರು ಬಿಡುಗಡೆ

ಮರ್ಸಿಡಿಸ್-ಎಎಂಜಿ ಜಿಎಲ್‌ಸಿ 43 ಕೂಪೆ ಕಾರಿನಲ್ಲಿ ಬ್ರಾಂಡ್ ಸಿಗ್ನೆಚರ್ ಪಾನ್ ಅಮೆರಿಕನ್ ಗ್ರಿಲ್ ಅಳವಡಿಸಲಾಗಿದ್ದು, ಲಂಬಾಕಾರವಾದ ಸ್ಲಾಟ್ ಜೊತೆ ಮರ್ಸಿಡಿಸ್ ಸ್ಟಾರ್ ಲೊಗೊ, ಆಕರ್ಷಕವಾದ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಇಂಟ್ರಾಗ್ರೆಟೆಡ್ ಎಲ್ಇಡಿ ಡಿಆರ್‌ಎಲ್ಎಸ್, ಬಂಫರ್ ಮೇಲೆ ವಿಸ್ತರಿತ ಏರ್ ವೆಂಟ್ಸ್, ಸ್ಕಫ್ ಪ್ಲೇಟ್ ಆಕರ್ಷಕವಾಗಿವೆ.

ಮೇಡ್ ಇನ್ ಇಂಡಿಯಾ ಖ್ಯಾತಿಯ ಮರ್ಸಿಡಿಸ್-ಎಎಂಜಿ ಜಿಎಲ್‌ಸಿ 43 ಕೂಪೆ ಕಾರು ಬಿಡುಗಡೆ

ಹಾಗೆಯೇ ಕಾರಿನ ಹಿಂಭಾಗದ ವಿನ್ಯಾಸಕ್ಕೆ ಮತ್ತಷ್ಟು ಮೇರಗು ನೀಡಲು ಇಳಿಜಾರಿನ ಶೈಲಿನ ರೂಫ್‌ಲೈನ್, ವ್ಯಾರ್ಪ್ ಒಳಗೊಂಡ ಎಲ್‌ಇಡಿ ಟೈಲ್ ಲೈಟ್, ಬ್ಲ್ಯಾಕ್ ಔಟ್ ರಿಯಲ್ ವ್ಯೂ ಮಿರರ್, ಕ್ವಾಡ್ ಎಕ್ಸಾಸ್ಟ್ ಪೈಪ್ಸ್, ಸ್ಪೋರ್ಟಿ ಸ್ಪಾಯ್ಲರ್, ರಿಯಲ್ ಬಂಪರ್ ರಿಪ್ಲೆಕ್ಟರ್ ಮತ್ತು 20-ಇಂಚಿನ ಎಎಂಜಿ ಅಲಾಯ್ ವೀಲ್ಹ್ ಪಡೆದುಕೊಂಡಿದೆ.

ಮೇಡ್ ಇನ್ ಇಂಡಿಯಾ ಖ್ಯಾತಿಯ ಮರ್ಸಿಡಿಸ್-ಎಎಂಜಿ ಜಿಎಲ್‌ಸಿ 43 ಕೂಪೆ ಕಾರು ಬಿಡುಗಡೆ

ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಹೊಸ ಕಾರಿನಲ್ಲಿ 21-ಇಂಚಿನ ಅಲಾಯ್ ವೀಲ್ಹ್‌ಗಳನ್ನು ಆಯ್ಕೆ ಮಾಡಬಹುದಾಗಿದ್ದು, ಹೊಸ ಕಾರಿನ ಒಳಭಾಗದಲ್ಲೂ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಒಳಗೊಂಡಿದೆ.

ಮೇಡ್ ಇನ್ ಇಂಡಿಯಾ ಖ್ಯಾತಿಯ ಮರ್ಸಿಡಿಸ್-ಎಎಂಜಿ ಜಿಎಲ್‌ಸಿ 43 ಕೂಪೆ ಕಾರು ಬಿಡುಗಡೆ

ಹೊಸ ಕಾರಿನಲ್ಲಿ ಎಎಂಜಿ ಸ್ಟೀರಿಂಗ್ ವೀಲ್ಹ್ ಜೊತೆ ಮೌಂಟೆಡ್ ಕಂಟ್ರೋಲ್ಸ್, ಅಲ್ಯುಮಿನಿಯಂ ಪೆಡಲ್ ಶಿಫ್ಟರ್, ಪಿಯಾನೊ ಬ್ಲ್ಯಾಕ್ ಬಣ್ಣದ ಸೆಂಟರ್ ಕನ್ಸೊಲ್, 12.3-ಇಂಚಿನ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, 10.5-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಜೊತೆಗೆ ಎಂಬಿಯುಎಕ್ಸ್ ಟೆಕ್ನಾಲಜಿ ಜೋಡಿಸಲಾಗಿದೆ.

ಮೇಡ್ ಇನ್ ಇಂಡಿಯಾ ಖ್ಯಾತಿಯ ಮರ್ಸಿಡಿಸ್-ಎಎಂಜಿ ಜಿಎಲ್‌ಸಿ 43 ಕೂಪೆ ಕಾರು ಬಿಡುಗಡೆ

ಪ್ರೀಮಿಯಂ ಫೀಚರ್ಸ್‌ಗಳ ಜೊತೆಗೆ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ತ್ರೀ ಜೋನ್ ಕ್ಲೈಮೆಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ವಿವಿಧ ಡ್ರೈವಿಂಗ್ ಮೋಡ್‌ಗಳು, ವೆಂಟಿಲೆಟೆಡ್ ಸೀಟುಗಳು, ಎಲೆಕ್ಟ್ರಿಕ್ ಅಡೆಜೆಸ್ಟ್ ಮಾಡಬಹುದಾದ ಸೀಟುಗಳ ಜೊತೆಗೆ 7 ಏರ್‌ಬ್ಯಾಗ್ ಪಡೆದುಕೊಂಡಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಮೇಡ್ ಇನ್ ಇಂಡಿಯಾ ಖ್ಯಾತಿಯ ಮರ್ಸಿಡಿಸ್-ಎಎಂಜಿ ಜಿಎಲ್‌ಸಿ 43 ಕೂಪೆ ಕಾರು ಬಿಡುಗಡೆ

ಎಂಜಿನ್ ಮತ್ತು ಪರ್ಫಾಮೆನ್ಸ್

ಮರ್ಸಿಡಿಸ್-ಎಎಂಜಿ ಜಿಎಲ್‌ಸಿ 43 ಕೂಪೆ ಕಾರಿನಲ್ಲಿ 3.0-ಲೀಟರ್ ವಿ6 ಪೆಟ್ರೋಲ್ ಎಂಜಿನ್ ಜೋಡಣೆ ಮಾಡಲಾಗಿದ್ದು, 9-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ 390-ಬಿಎಚ್‌ಪಿ ಮತ್ತು 520-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಮೇಡ್ ಇನ್ ಇಂಡಿಯಾ ಖ್ಯಾತಿಯ ಮರ್ಸಿಡಿಸ್-ಎಎಂಜಿ ಜಿಎಲ್‌ಸಿ 43 ಕೂಪೆ ಕಾರು ಬಿಡುಗಡೆ

ಹೊಸ ಕಾರಿನಲ್ಲಿ ಮರ್ಸಿಡಿಸ್ ಬೆಂಝ್ ಕಂಪನಿಯು ಫೋರ್ ವೀಲ್ಹ್ ಡ್ರೈವ್ ಸಿಸ್ಟಂ, 4 ಮ್ಯಾಟಿಕ್ ಸಿಸ್ಟಂ ಸೌಲಭ್ಯವನ್ನು ಸ್ಟ್ಯಾಂಡರ್ಡ್ ಆಗಿ ನೀಡಿದ್ದು, ಈ ಮೂಲಕ ಪರ್ಫಾಮೆನ್ಸ್ ಪ್ರಿಯರನ್ನು ಸೆಳೆಯುವ ಹೊಸ ಕಾರು ಕೇವಲ 4.9-ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗ ಪಡೆದುಕೊಂಡು ಪ್ರತಿ ಗಂಟೆಗೆ 250 ಕಿ.ಮೀ ಟಾಪ್ ಸ್ಪೀಡ್ ತಲುಪಬಲ್ಲದು.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಮೇಡ್ ಇನ್ ಇಂಡಿಯಾ ಖ್ಯಾತಿಯ ಮರ್ಸಿಡಿಸ್-ಎಎಂಜಿ ಜಿಎಲ್‌ಸಿ 43 ಕೂಪೆ ಕಾರು ಬಿಡುಗಡೆ

ಭಾರತದಲ್ಲಿ ಈಗಾಗಲೇ ಹಲವು ಕಾರು ಮಾದರಿಗಳಲ್ಲಿ ಪರ್ಫಾಮೆನ್ಸ್ ಮಾದರಿಯಾದ ಎಎಂಜಿ ಆವೃತ್ತಿಗಳನ್ನು ಪರಿಚಯಿಸಿರುವ ಮರ್ಸಿಡಿಸ್ ಬೆಂಝ್ ಇಂಡಿಯಾ ಕಂಪನಿಯು ಇದೀಗ ಮೇಡ್ ಇನ್ ಇಂಡಿಯಾ ಖ್ಯಾತಿಯ ಜಿಎಲ್‌ಸಿ 43 ಕೂಪೆ ಬಿಡುಗಡೆ ಮಾಡುವ ಉತ್ತಮ ಬೇಡಿಕೆಯ ನೀರಿಕ್ಷೆಯಲ್ಲಿದ್ದು, ಹೊಸ ಕಾರು ಪರ್ಫಾಮೆನ್ಸ್ ಮತ್ತು ಬೆಲೆ ವಿಚಾರವಾಗಿ ಇತ್ತೀಚೆಗೆ ಬಿಡುಗಡೆಯಾದ ಬಿಎಂಡಬ್ಲ್ಯು ಎಕ್ಸ್3 ಎಂ ಮಾದರಿಗೆ ಪ್ರತಿಸ್ಪರ್ಧಿಯಾಗಲಿದೆ.

Most Read Articles

Kannada
English summary
Mercedes-AMG GLC 43 Coupe Launched In India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X