ಫಾರ್ಚೂನರ್ ಮತ್ತು ಎಂಡೀವರ್‌ಗೆ ಟಕ್ಕರ್ ನೀಡಲು ಎಂಜಿ ಮ್ಯಾಕ್ಸಸ್ ಡಿ90 ರೆಡಿ..

ಎಂಜಿ ಮೋಟಾರ್ ಸಂಸ್ಥೆಯು ಫೆಬ್ರುವರಿ 7ರಿಂದ ಆರಂಭವಾಗಲಿರುವ 2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಬರೋಬ್ಬರಿ 14 ಹೊಸ ಕಾರು ಮಾದರಿಗಳನ್ನು ಅನಾವರಣಗೊಳಿಸಲು ಸಜ್ಜಾಗುತ್ತಿದ್ದು, ಅನಾವರಣಗೊಳ್ಳಲಿರುವ ಮ್ಯಾಕ್ಸಸ್ ಡಿ90 ಎಸ್‌ಯುವಿ ಕಾರಿನ ಟೀಸರ್ ಬಿಡುಗಡೆಗೊಳಿಸಲಾಗಿದೆ.

ಫಾರ್ಚೂನರ್ ಮತ್ತು ಎಂಡೀವರ್‌ಗೆ ಟಕ್ಕರ್ ನೀಡಲು ಎಂಜಿ ಮ್ಯಾಕ್ಸಸ್ ಡಿ90 ರೆಡಿ..

ಫುಲ್ ಸೈಜ್ ಎಸ್‌ಯುವಿ ಮಾದರಿಯಾಗಿರುವ ಮ್ಯಾಕ್ಸಸ್ ಡಿ90 ಕಾರು ಮಾದರಿಯು ಟೊಯೊಟಾ ಫಾರ್ಚೂನರ್ ಮತ್ತು ಫೋರ್ಡ್ ಎಂಡೀವರ್ ಕಾರಿಗಿಂತಲೂ ಹೆಚ್ಚು ಉದ್ದಳತೆ ಮತ್ತು ಪ್ರೀಮಿಯಂ ಫೀಚರ್ಸ್‌ಗಳನ್ನು ಹೊಂದಿದ್ದು, ಚೀನಿ ಮತ್ತು ಆಸ್ಟ್ರೇಲಿಯಾ ಮಾರುಕಟ್ಟೆಗಳಲ್ಲಿ ಈ ಈಗಾಗಲೇ ಮಾರಾಟವಾಗುತ್ತಿದೆ. ಇದೀಗ ಎಂಜಿ ಮೋಟಾರ್ ಸಂಸ್ಥೆಯು ಭಾರತದಲ್ಲಿ ಕಾರು ಮಾರಾಟವನ್ನು ವಿಸ್ತರಿಸುತ್ತಿದ್ದು, ಮ್ಯಾಕ್ಸಸ್ ಸೇರಿದಂತೆ ವಿವಿಧ ಮಾದರಿಗಳನ್ನು ಭಾರತದಲ್ಲೇ ಅಭಿವೃದ್ದಿಗೊಳಿಸಲಿದೆ.

ಫಾರ್ಚೂನರ್ ಮತ್ತು ಎಂಡೀವರ್‌ಗೆ ಟಕ್ಕರ್ ನೀಡಲು ಎಂಜಿ ಮ್ಯಾಕ್ಸಸ್ ಡಿ90 ರೆಡಿ..

ಚೀನಾದ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಯಾಗಿರುವ ಸೈಕ್ ಸಂಸ್ಥೆಯ ಅಡಿ ಬ್ರಿಟಿಷ್ ಕಾರು ಉತ್ಪಾದನಾ ಸಂಸ್ಥೆಯಾಗಿರುವ ಎಂಜಿ ಮೋಟಾರ್ ಕಾರ್ಯನಿರ್ವಹಿಸುತ್ತಿದ್ದು, ಹೊಸ ಯೋಜನೆ ಅಡಿಯಲ್ಲಿ ಮುಂದಿನ 2 ವರ್ಷಗಳ ಅವಧಿಯಲ್ಲಿ ಒಟ್ಟು 8 ಹೊಸ ಕಾರುಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆ.

ಫಾರ್ಚೂನರ್ ಮತ್ತು ಎಂಡೀವರ್‌ಗೆ ಟಕ್ಕರ್ ನೀಡಲು ಎಂಜಿ ಮ್ಯಾಕ್ಸಸ್ ಡಿ90 ರೆಡಿ..

ಬಿಡುಗಡೆಯಾಗಲಿರುವ ಕಾರುಗಳಲ್ಲಿ ಎಂಪಿವಿ, ಸೆಡಾನ್, ಹ್ಯಾಚ್‌ಬ್ಯಾಕ್, ಎಲೆಕ್ಟ್ರಿಕ್ ಕಾರುಗಳ ಸಹ ಸೇರಿದ್ದು, ಫಾರ್ಚೂನರ್ ಮತ್ತು ಫೋರ್ಡ್ ಎಂಡೀವರ್ ಕಾರುಗಳಿಗೆ ಪೈಪೋಟಿ ನೀಡಲಿರುವ ಮ್ಯಾಕ್ಸಸ್ ಡಿ90 ಕಾರು ಹೆಚ್ಚು ಆಕರ್ಷಿಸುತ್ತಿದೆ.

ಫಾರ್ಚೂನರ್ ಮತ್ತು ಎಂಡೀವರ್‌ಗೆ ಟಕ್ಕರ್ ನೀಡಲು ಎಂಜಿ ಮ್ಯಾಕ್ಸಸ್ ಡಿ90 ರೆಡಿ..

5,005-ಎಂಎಂ ಉದ್ದ, 1,932-ಎಂಎಂ ಅಗಲ, 1,875-ಎಂಎಂ ಎತ್ತರ ಮತ್ತು 2,950-ಎಂಎಂ ವೀಲ್ಹ್‌ಬೆಸ್ ಹೊಂದಿರುವ ಮ್ಯಾಕ್ಸಸ್ ಡಿ90 ಕಾರು 224-ಬಿಎಚ್‌ಪಿ ಪ್ರೇರಿತ 2.0-ಲೀಟರ್ ಟರ್ಬೋ ಪೆಟ್ರೋಲ್ ಮತ್ತು 218-ಬಿಎಚ್‌ಪಿ ಪ್ರೇರಿತ 2.0-ಲೀಟರ್ ಟ್ವಿನ್ ಟರ್ಬೋ ಡೀಸೆಲ್ ಎಂಜಿನ್ ಪಡೆದುಕೊಳ್ಳುವ ಸಾಧ್ಯತೆಗಳಿದ್ದು, 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಹೊಂದಿರಲಿದೆ.

ಫಾರ್ಚೂನರ್ ಮತ್ತು ಎಂಡೀವರ್‌ಗೆ ಟಕ್ಕರ್ ನೀಡಲು ಎಂಜಿ ಮ್ಯಾಕ್ಸಸ್ ಡಿ90 ರೆಡಿ..

ಹೊಸ ಮ್ಯಾಕ್ಸಸ್ ಡಿ90 ಕಾರಿನಲ್ಲಿ ಫಿಯೆಟ್ ಕ್ಲೈಸರ್ ಸಂಸ್ಥೆಯ ಎಂಜಿನ್ ಬಳಕೆ ಮಾಡಲಾಗಿದ್ದು, ಹೊಸ ಕಾರಿನಲ್ಲಿ 7 ಆಸನ ಸೌಲಭ್ಯದೊಂದಿಗೆ ಹಲವಾರು ಪ್ರೀಮಿಯಂ ಫೀಚರ್ಸ್‌ಗಳ ಮೂಲಕ ಎಸ್‌ಯುವಿ ಪ್ರಿಯರನ್ನು ಸೆಳೆಯಲಿದೆ.

ಫಾರ್ಚೂನರ್ ಮತ್ತು ಎಂಡೀವರ್‌ಗೆ ಟಕ್ಕರ್ ನೀಡಲು ಎಂಜಿ ಮ್ಯಾಕ್ಸಸ್ ಡಿ90 ರೆಡಿ..

ಹೊಸ ಕಾರಿನಲ್ಲಿ ಎಲ್ಇಡಿ ಅಡಾಪ್ಟಿವ್ ಹೆಡ್‌ಲೈಟ್ಸ್, ಎಲ್ಇಡಿ ಡಿಆರ್‌ಎಸ್, ಪನೊರಮಿಕ್ ಸನ್‌ರೂಫ್, ಹಿಟೆಡ್ ರಿಯರ್ ವ್ಯೂವ್ ಮಿರರ್, ಸಂಜ್ಞೆ ಮೂಲಕ ನಿಯಂತ್ರಿಸಬಹುದಾದ ಟೈಲ್‌ಗೇಟ್, ಆ್ಯಂಬಿಯೆಂಟ್ ಲೈಟಿಂಗ್ಸ್, ತ್ರಿ ಜೋನ್ ಕ್ಲೈಮೆಟ್ ಕಂಟ್ರೋಲ್, 8-ಇಂಚಿನ ಮಲ್ಟಿ ಇನ್ಪೋ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, 12.3-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ವೆಂಟಿಲೆಟೆಡ್ ಲೆದರ್ ಸೀಟ್‌ಗಳು ಸೇರಿದಂತೆ ಹಲವಾರು ಪ್ರೀಮಿಯಂ ಫೀಚರ್ಸ್‌ಗಳಿವೆ.

ಫಾರ್ಚೂನರ್ ಮತ್ತು ಎಂಡೀವರ್‌ಗೆ ಟಕ್ಕರ್ ನೀಡಲು ಎಂಜಿ ಮ್ಯಾಕ್ಸಸ್ ಡಿ90 ರೆಡಿ..

ಜೊತೆಗೆ ಪ್ರಯಾಣಿಕ ಸುರಕ್ಷತೆಗೂ ಹೊಸ ಕಾರಿನಲ್ಲಿ ಹೆಚ್ಚು ಒತ್ತು ನೀಡಲಾಗಿದ್ದು, 6 ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಟ್ರಾಕ್ಷನ್ ಕಂಟ್ರೋಲ್, ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಫುಲ್ ಟೈಮ್ ಆಲ್ ವೀಲ್ಹ್ ಡ್ರೈವ್ ಟೆಕ್ನಾಲಜಿ, ಸ್ಟ್ಯಾಬಿಲಿಟಿ ಕಂಟ್ರೋಲ್, ಹಿಲ್ ಅಸಿಸ್ಟ್, 360 ಡಿಗ್ರಿ ವ್ಯೂವ್ ಕ್ಯಾಮೆರಾ, ಫ್ರಂಟ್ ಆ್ಯಂಡ್ ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಸೇರಿದಂತೆ ಹಲವಾರು ಸೆಫ್ಟಿ ಫೀಚರ್ಸ್‌ಗಳಿವೆ.

ಫಾರ್ಚೂನರ್ ಮತ್ತು ಎಂಡೀವರ್‌ಗೆ ಟಕ್ಕರ್ ನೀಡಲು ಎಂಜಿ ಮ್ಯಾಕ್ಸಸ್ ಡಿ90 ರೆಡಿ..

ಈ ಮೂಲಕ ಎಸ್‌ಯುವಿ ಕಾರುಗಳಲ್ಲೇ ವಿಶೇಷ ಎನ್ನಿಸಲಿರುವ ಮ್ಯಾಕ್ಸಸ್ ಡಿ90 ಮಾದರಿಯು ಟೊಯೊಟಾ ಫಾರ್ಚೂನರ್, ಫೋರ್ಡ್ ಎಂಡೀವರ್ ಮತ್ತು ಮಹೀಂದ್ರಾ ಅಲ್ಟುರಾಸ್ ಜಿ4 ಕಾರುಗಳಿಗೆ ಪ್ರಬಲ ಪೈಪೋಟಿಯಾಗಲಿದ್ದು, ಕಾರಿನ ಬೆಲೆಯು ತುಸು ದುಬಾರಿ ಎನ್ನಿಸಲಿದೆ.

ಫಾರ್ಚೂನರ್ ಮತ್ತು ಎಂಡೀವರ್‌ಗೆ ಟಕ್ಕರ್ ನೀಡಲು ಎಂಜಿ ಮ್ಯಾಕ್ಸಸ್ ಡಿ90 ರೆಡಿ..

ಮಾಹಿತಿಗಳ ಪ್ರಕಾರ ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.28 ಲಕ್ಷದಿಂದ ರೂ.33 ಲಕ್ಷ ಇರಬಹುದೆಂದು ಅಂದಾಜಿಸಲಾಗಿದ್ದು, ಆಟೋ ಎಕ್ಸ್‌ಪೋದಲ್ಲಿ ಭಾಗಿಯಾದ ನಂತರ ಮೇ ಅಥವಾ ಜೂನ್ ಅವಧಿಯಲ್ಲಿ ಹೊಸ ಕಾರು ಅಧಿಕೃತವಾಗಿ ಬಿಡುಗಡೆಗೊಳ್ಳಲಿದೆ.

Most Read Articles

Kannada
English summary
MG Motor Maxus D90 teaser to be showcased at Auto Expo. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X