ಹೊಸ ಆಡಿ ಕ್ಯೂ2 ಎಸ್‍ಯುವಿ ಬಿಡುಗಡೆ ದಿನಾಂಕ ಬಹಿರಂಗ

ಆಡಿ ಕಂಪನಿಯು ತನ್ನ ಬಹುನಿರೀಕ್ಷಿತ ಕ್ಯೂ2 ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದೀಗ ಆಡಿ ಕಂಪನಿಯು ತನ್ನ ಹೊಸ ಆಡಿ ಕ್ಯೂ2 ಎಸ್‍ಯುವಿಯನ್ನು ಬಿಡುಗಡೆಗೊಳಿಸುವ ದಿನಾಂಕವನ್ನು ಬಹಿರಂಗಪಡಿಸಿದೆ.

ಹೊಸ ಆಡಿ ಕ್ಯೂ2 ಎಸ್‍ಯುವಿ ಬಿಡುಗಡೆ ದಿನಾಂಕ ಬಹಿರಂಗ

ಹೊಸ ಆಡಿ ಕ್ಯೂ2 ಎಸ್‍ಯುವಿಯು ಇದೇ ತಿಂಗಳ 16ರಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಹೊಸ ಆಡಿ ಕ್ಯೂ2 ಎಸ್‍ಯುವಿಯನ್ನು ಮೊದಲ ಬಾರಿಗೆ 2016ರಲ್ಲಿ ಜಿನೀವಾ ಮೋಟಾರ್ ಶೋನಲ್ಲಿ ಪ್ರದರ್ಶಿಸಲಾಗಿತ್ತು. ಇನ್ನು ಆಡಿ ಕಂಪನಿಯು ಫೇಸ್‌ಲಿಫ್ಟೆಡ್ ಕ್ಯೂ2 ಅನ್ನು ಯುರೋಪಿಯನ್ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಗೊಳಿಸಲಿದೆ. ಆಡಿ ಕಂಪನಿಯು ಫೋಕ್ಸ್‌ವ್ಯಾಗನ್ ಗ್ರೂಪ್‌ನ ಎಂಕ್ಯೂಬಿ ಪ್ಲಾಟ್‌ಫಾರ್ಮ್‌ ಅನ್ನು ಆಧರಿಸಿ ಕ್ಯೂ2 ಎಸ್‍ಯುವಿಯನ್ನು ತಯಾರಿಸಲಾಗುತ್ತದೆ.

ಹೊಸ ಆಡಿ ಕ್ಯೂ2 ಎಸ್‍ಯುವಿ ಬಿಡುಗಡೆ ದಿನಾಂಕ ಬಹಿರಂಗ

ಒಂದೆರಡು ದಿನಗಳ ಹಿಂದೆ ಆಡಿ ಕ್ಯೂ2 ಎಸ್‍ಯುವಿಗಾಗಿ ಬುಕ್ಕಿಂಗ್ ಸ್ವೀಕರಿಸಲು ಪ್ರಾರಂಭಿಸಿತು. ಆಸಕ್ತ ಗ್ರಾಹಕರು ಆಡಿ ಕ್ಯೂ2 ಎಸ್‍ಯುವಿಗಾಗಿ ಟೋಕನ್ ಮೊತ್ತ ರೂ.2 ಲಕ್ಷ ಪಾವತಿಸಿ ಅಧಿಕೃತ ವೆಬ್‌ಸೈಟ್‌ನಿಂದ ಅಥವಾ ಹತ್ತಿರದ ಆಡಿ ಇಂಡಿಯಾ ಡೀಲರುಗಳ ಬಳಿ ತೆರಳಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಹೊಸ ಆಡಿ ಕ್ಯೂ2 ಎಸ್‍ಯುವಿ ಬಿಡುಗಡೆ ದಿನಾಂಕ ಬಹಿರಂಗ

ಹೊಸ ಆಡಿ ಕ್ಯೂ2 ಎಸ್‍ಯುವಿಯು 2,601 ಎಂಎಂ ವ್ಹೀಕ್ಲ್ ಬೇಸ್ ಹೊಂದಿದ್ದರೆ, 4,191 ಎಂಎಂ ಉದ್ದ, 1,794 ಎಂಎಂ ಅಗಲ ಮತ್ತು 1,508 ಎಂಎಂ ಎತ್ತರವನ್ನು ಹೊಂದಿರುತ್ತದೆ ಆಡಿ ಇಂಡಿಯಾ ಪರಿಚಯಾತ್ಮಕ ‘ಪೀಸ್ ಆಫ್ ಮೈಂಡ್' ಪ್ಯಾಕೇಜ್ ಅನ್ನು ಸಹ ನೀಡುತ್ತಿದೆ.

ಹೊಸ ಆಡಿ ಕ್ಯೂ2 ಎಸ್‍ಯುವಿ ಬಿಡುಗಡೆ ದಿನಾಂಕ ಬಹಿರಂಗ

ಹೊಸ ಆಡಿ ಕ್ಯೂ2 ಎಸ್‍ಯುವಿಯ ಮುಂಭಾಗದಲ್ಲಿ 2 ಸಿಂಗಲ್-ಫ್ರೇಮ್ ಗ್ರಿಲ್ ಅನ್ನು ಪಡೆಯುತ್ತದೆ, ಇನ್ನು ಡಿಫ್ಯೂಸರ್ ಇನ್ಸರ್ಟ್, ಸಿಲ್ವರ್ ಅಸೆಂಟ್ ಗಳೊಂದಿಗೆ ಮರುವಿನ್ಯಾಸಗೊಳಿಸಲಾದ ಏರ್ ಇನ್ ಟೆಕ್ ಮತ್ತು ಡಿಆರ್ಎಲ್ ಗಳೊಂದಿಗೆ ಎಲ್ಇಡಿ ಹೆಡ್ ಲ್ಯಾಂಪ್ ಗಳನ್ನು ಹೊಂದಿದೆ.

MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಹೊಸ ಆಡಿ ಕ್ಯೂ2 ಎಸ್‍ಯುವಿ ಬಿಡುಗಡೆ ದಿನಾಂಕ ಬಹಿರಂಗ

ಈ ಹೊಸ ಎಸ್‍ಯುವಿಯ ಹಿಂಭಾಗದಲ್ಲಿ ವಿಶಾಲವಾದ ಟೈಲ್ ಗೇಟ್, ಚದರ ಆಕಾರದ ಎಲ್ಇಡಿ ಟೈಲ್ ಲ್ಯಾಂಪ್ ಮತ್ತು ವಿಶಿಷ್ಟ ಆಡಿ ಲೋಗೊ ಮತ್ತು ಬ್ಯಾಡ್ಜಿಂಗ್ ಅನ್ನು ಹೊಂದಿದೆ. ಹೊಸ ಆಡಿ ಕ್ಯೂ2 ಎಸ್‍ಯುವಿಯ ಇಂಟಿರಿಯರ್ ನಲ್ಲಿ ಲೆದರ್ ಅಪ್ಹೋಲ್ಸ್ಟರಿ ಸ್ಪೋರ್ಟ್ ಸೀಟ್ ಗಳನ್ನು ಹೊಂದಿದೆ.

ಹೊಸ ಆಡಿ ಕ್ಯೂ2 ಎಸ್‍ಯುವಿ ಬಿಡುಗಡೆ ದಿನಾಂಕ ಬಹಿರಂಗ

ಇಂಟಿರಿಯರ್ ನಲ್ಲಿ 10 ಬಣ್ಣ ಆಯ್ಕೆಗಳೊಂದಿಗೆ ಎಲ್ಇಡಿ ಇಂಟಿರಿಯರ್ ಲೈಟಿಂಗ್ ಪ್ಯಾಕೇಜ್, ಮಲ್ಟಿ-ಫಂಕ್ಷನ್ ಸ್ಟೀರಿಂಗ್ ವೀಲ್, 60:40 ಸ್ಪ್ಲಿಟ್ ಹೊಂದಿರುವ ಹಿಂಭಾಗದ ಸೀಟುಗಳು 8.3 ಇಂಚಿನ ಇನ್ಫೋಟೈನ್ಮೆಂಟ್ ಮತ್ತು ಆಪಲ್ ಕಾರ್ ಪ್ಲೇ ನೊಂದಿಗೆ ಎಂಎಂಐ ಕಂಟ್ರೋಲರ್ ಗಳನ್ನು ಹೊಂದಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಹೊಸ ಆಡಿ ಕ್ಯೂ2 ಎಸ್‍ಯುವಿ ಬಿಡುಗಡೆ ದಿನಾಂಕ ಬಹಿರಂಗ

ಹೊಸ ಆಡಿ ಕ್ಯೂ2 ಎಸ್‍ಯುವಿಯ ಫ್ರಂಟ್-ವ್ಹೀಲ್-ಡ್ರೈವ್ ವೆರಿಯೆಂಟ್ 405 ಲೀಟರ್ ಬೂಟ್ ಸ್ಪೇಸ್ ಅನ್ನು ಹೊಂದಿದೆ. ಇನ್ನು ಆಲ್-ವ್ಹೀಲ್-ಡ್ರೈವ್ ವೆರಿಯೆಂಟ್ 355 ಲೀಟರ್ ಬೂಟ್ ಸ್ಪೇಸ್ ಅನ್ನು ಹೊಂದಿದೆ. ಈ ಹೊಸ ಎಸ್‍ಯುವಿಯಲ್ಲಿ 12.3-ಇಂಚಿನ ವರ್ಚುವಲ್ ಕಾಕ್‌ಪಿಟ್ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಮತ್ತು ಪನೋರಮಿಕ್ ಸನ್‌ರೂಫ್ ಅನ್ನು ಒಳಗೊಂಡಿದೆ.

ಹೊಸ ಆಡಿ ಕ್ಯೂ2 ಎಸ್‍ಯುವಿ ಬಿಡುಗಡೆ ದಿನಾಂಕ ಬಹಿರಂಗ

ಹೊಸ ಆಡಿ ಕ್ಯೂ2 ಎಸ್‍ಯುವಿಯಲ್ಲಿ 2.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 188 ಬಿಹೆಚ್‌ಪಿ ಪವರ್ ಮತ್ತು 320 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಕ್ವಾಟ್ರೋ ಆಲ್-ವ್ಹೀಲ್-ಡ್ರೈವ್ ಸಿಸ್ಟಮ್‌ನೊಂದಿಗೆ 7-ಸ್ಪೀಡ್ ಡ್ಯುಯಲ್-ಕ್ಲಚ್ ಟ್ರಾನ್ಸ್‌ಮಿಷನ್ ಜೋಡಿಸಲಾಗಿದೆ.

ಹೊಸ ಆಡಿ ಕ್ಯೂ2 ಎಸ್‍ಯುವಿ ಬಿಡುಗಡೆ ದಿನಾಂಕ ಬಹಿರಂಗ

ಹೊಸ ಆಡಿ ಕ್ಯೂ2 ಭಾರತೀಯ ಮಾರುಕಟ್ಟೆಯಲ್ಲಿ ಎಕ್ಸ್1, ವೋಲ್ವೋ ಎಕ್ಸ್‌ಸಿ 40 ಮತ್ತು ಬಿಡುಗಡೆಯಾಗಲಿರುವ ಮರ್ಸಿಡಿಸ್ ಬೆಂಜ್ ಜಿಎಲ್‌ಎ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
Read more on ಆಡಿ audi
English summary
Audi Q2 India Launch Date Revealed. Read In Kannada.
Story first published: Thursday, October 8, 2020, 19:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X