ಅನಾವರಣವಾಯ್ತು ಹೊಸ ಬೆಂಟ್ಲಿ ಫ್ಲೈಯಿಂಗ್ ಸ್ಪರ್ ಕ್ರಿಸ್‌ಮಸ್ ಎಡಿಷನ್

ಐಷಾರಾಮಿ ವಾಹನ ತಯಾರಕ ಕಂಪನಿಯಾದ ಬೆಂಟ್ಲಿ ತನ್ನ ಫ್ಲೈಯಿಂಗ್ ಸ್ಪರ್ ಕ್ರಿಸ್‌ಮಸ್ ಥೀಮ್ ಒಳಗೊಂಡಿರುವ ರಿಇಂಡಿಯರ್ ಏಯ್ಟ್ ಮಾದರಿಯನ್ನು ಅನಾವರಣಗೊಳಿಸಿದೆ. ಹೊಸ ಬೆಂಟ್ಲಿ ಫ್ಲೈಯಿಂಗ್ ಸ್ಪರ್ ರಿಇಂಡಿಯರ್ ಏಯ್ಟ್ ಕ್ರಿಸ್‌ಮಸ್ ಎಡಿಷನ್ ಬ್ರ್ಯಾಂಡ್‌ನ ಫ್ಲೈಯಿಂಗ್ ಸ್ಪರ್ ವಿ8 ಮಾದರಿಯನ್ನು ಆಧರಿಸಿದೆ ಎಂದು ಹೇಳಲಾಗುತ್ತದೆ.

ಅನಾವರಣವಾಯ್ತು ಹೊಸ ಬೆಂಟ್ಲಿ ಫ್ಲೈಯಿಂಗ್ ಸ್ಪರ್ ಕ್ರಿಸ್‌ಮಸ್ ಎಡಿಷನ್

ಹೊಸ ಬೆಂಟ್ಲಿ ಫ್ಲೈಯಿಂಗ್ ಸ್ಪರ್ ರಿಇಂಡಿಯರ್ ಏಯ್ಟ್ ಕ್ರಿಸ್‌ಮಸ್ ಎಡಿಷನ್ ಆಕರ್ಷಕ ಲುಕ್ ಅನ್ನು ಹೊಂದಿದೆ. ಇನ್ನು ಈ ಹೊಸ ಬೆಂಟ್ಲಿ ಫ್ಲೈಯಿಂಗ್ ಸ್ಪರ್ ಕಾರಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಈ ಕಾರು ಬೆಸ್ಪೋಕ್ ಕ್ರಿಕೆಟ್ ಬಾಲ್ ಬಣ್ಣವನ್ನು ಹೊಂದಿದೆ. ವಿಶೇಷ ಆವೃತ್ತಿಯು ಬಾನೆಟ್‌ನ ಮುಂಭಾಗದಲ್ಲಿರುವ ಬೆಂಟ್ಲಿಯ ‘ಫ್ಲೈಯಿಂಗ್ ಬಿ' ಮ್ಯಾಸ್ಕಾಟ್‌ನ ಬದಲಿಗೆ ಮೂರು ಆಯಾಮದ ರಿಇಂಡಿಯರ್ ನೊಂದಿಗೆ ಬರುತ್ತದೆ. ಸಲೂನ್‌ನಲ್ಲಿ ಬದಿಗಳಲ್ಲಿರುವ ‘ವಿ8' ಬದಲಿಗೆ ‘ರಿಇಂಡಿಯರ್ ಏಯ್ಟ್' ಬ್ಯಾಡ್ಜ್‌ಗಳನ್ನು ಸಹ ಒಳಗೊಂಡಿದೆ.

ಅನಾವರಣವಾಯ್ತು ಹೊಸ ಬೆಂಟ್ಲಿ ಫ್ಲೈಯಿಂಗ್ ಸ್ಪರ್ ಕ್ರಿಸ್‌ಮಸ್ ಎಡಿಷನ್

ಸ್ಪೆಷಲ್ ಕ್ರಿಸ್‌ಮಸ್ ಥೀಮ್ ಬೆಂಟ್ಲೆ ಕಾರಿನ ಹೊರಭಾಗವು ಚಿನ್ನದ ಕೆಲವು ಅಂಶಗಳನ್ನು ಒಳಗೊಂಡಿದೆ. ಇದು ಮುಂಭಾಗ ಮತ್ತು ಹಿಂಭಾಗದ ಡಿಫ್ಯೂಸರ್, ಸೈಡ್ ಸಿಲ್ಸ್ ಮತ್ತು ಸೈಡ್ ಸ್ಕರ್ಟ್‌ಗಳನ್ನು ಒಳಗೊಂಡಿದೆ.

MOST READ: ಐಷಾರಾಮಿ ಬಿಎಂಡಬ್ಲ್ಯು ಎಕ್ಸ್7 ಕಾರು ಚಾಲನೆ ವೇಳೆ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್

ಅನಾವರಣವಾಯ್ತು ಹೊಸ ಬೆಂಟ್ಲಿ ಫ್ಲೈಯಿಂಗ್ ಸ್ಪರ್ ಕ್ರಿಸ್‌ಮಸ್ ಎಡಿಷನ್

ಹೊಸ ಬೆಂಟ್ಲಿ ಫ್ಲೈಯಿಂಗ್ ಸ್ಪರ್ ರಿಇಂಡಿಯರ್ ಏಯ್ಟ್ ಕ್ರಿಸ್‌ಮಸ್ ಎಡಿಷನ್ ನಲ್ಲಿ ಆಲ್-ಸೀಸನ್ ಟೈರ್‌ಗಳಲ್ಲಿ ಸುತ್ತುವ 22 ಇಂಚಿನ ಗೋಲ್ಡನ್ ರಿಮ್‌ಗಳ ಬೆಸ್‌ಪೋಕ್ ಸೆಟ್ ಸಹ ಹೊಂದಿದೆ.ಸಲೂನ್‌ನ ಬದಿಗಳಲ್ಲಿ ಸ್ನೋ ಮತ್ತು ವಿಂಟರ್ ಥೀಮ್‌ ಅನ್ನು ಹೊಂದಿದೆ.

ಅನಾವರಣವಾಯ್ತು ಹೊಸ ಬೆಂಟ್ಲಿ ಫ್ಲೈಯಿಂಗ್ ಸ್ಪರ್ ಕ್ರಿಸ್‌ಮಸ್ ಎಡಿಷನ್

ಇನ್ನು ಹೊಸ ಬೆಂಟ್ಲಿ ಫ್ಲೈಯಿಂಗ್ ಸ್ಪರ್ ರಿಇಂಡಿಯರ್ ಏಯ್ಟ್ ಕ್ರಿಸ್‌ಮಸ್ ಎಡಿಷನ್ ಒಳಭಾಗದಲ್ಲಿ ಕಿಕ್ರೇಟ್ ಬಾಲ್ ಬಣ್ಣದ ಥೀಮ್ ಅನ್ನು ಒಳಗೊಂಡಿದೆ. ಇದು ಕಾಂಟ್ರಾಸ್ಟ್ ಗೋಲ್ಡ್ ಸ್ಟಿಚಿಂಗ್ ಅನ್ನು ಹೊಂದಿದೆ, ಸಾಂಟಾ ಕ್ಲಾಸ್ ಹೆಸರನ್ನು ಡ್ರೈವರ್ ಸೀಟಿನಲ್ಲಿ ಬರೆಯಲಾಗಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಅನಾವರಣವಾಯ್ತು ಹೊಸ ಬೆಂಟ್ಲಿ ಫ್ಲೈಯಿಂಗ್ ಸ್ಪರ್ ಕ್ರಿಸ್‌ಮಸ್ ಎಡಿಷನ್

ಈ ಫ್ಲೈಯಿಂಗ್ ಸ್ಪರ್ ರಿಇಂಡಿಯರ್ ಏಯ್ಟ್ ಕ್ರಿಸ್‌ಮಸ್ ಎಡಿಷನ್ ಇಂಟಿರಿಯರ್ ನಲ್ಲಿ 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ ಪ್ಲೇಯನ್ನು ಅಳವಡಿಸಲಾಗಿದೆ. ಡ್ಯಾಶ್ ಬೋರ್ಡ್ ಪಕ್ಕದಲ್ಲಿ ಆಕರ್ಷಕ ಗ್ರಾಫಿಕ್ಸ್ ನಿಂದ ಕೂಡಿದೆ.

ಅನಾವರಣವಾಯ್ತು ಹೊಸ ಬೆಂಟ್ಲಿ ಫ್ಲೈಯಿಂಗ್ ಸ್ಪರ್ ಕ್ರಿಸ್‌ಮಸ್ ಎಡಿಷನ್

ಇನ್ನು ಕಾರಿನ ಹೃದಯ ಭಾಗ ಎಂದೇ ಹೇಳುವ ಎಂಜಿನ್ ಬಗ್ಗೆ ಹೇಳುವುದಾದರೆ, ಈ ಹೊಸ ಬೆಂಟ್ಲಿ ಫ್ಲೈಯಿಂಗ್ ಸ್ಪರ್ ರಿಇಂಡಿಯರ್ ಏಯ್ಟ್ ಕ್ರಿಸ್‌ಮಸ್ ಎಡಿಷನ್ ನಲ್ಲಿ 4.0-ಲೀಟರ್ ಟ್ವಿನ್-ಟರ್ಬೊ ವಿ8 ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಅನಾವರಣವಾಯ್ತು ಹೊಸ ಬೆಂಟ್ಲಿ ಫ್ಲೈಯಿಂಗ್ ಸ್ಪರ್ ಕ್ರಿಸ್‌ಮಸ್ ಎಡಿಷನ್

ಈ ಎಂಜಿನ್ 549 ಬಿಹೆಚ್‍ಪಿ ಪವರ್ ಮತ್ತು 770 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಈ ಎಂಜಿನ್ ನೊಂದಿಗೆ 8-ಸ್ಪೀಡ್ ಡಿಸಿಟಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಅನಾವರಣವಾಯ್ತು ಹೊಸ ಬೆಂಟ್ಲಿ ಫ್ಲೈಯಿಂಗ್ ಸ್ಪರ್ ಕ್ರಿಸ್‌ಮಸ್ ಎಡಿಷನ್

ಈ ಹೊಸ ಬೆಂಟ್ಲಿ ಫ್ಲೈಯಿಂಗ್ ಸ್ಪರ್ ರಿಇಂಡಿಯರ್ ಏಯ್ಟ್ ಕ್ರಿಸ್‌ಮಸ್ ಎಡಿಷನ್ ಕೇವಲ 4.1 ಸೆಕೆಂಡುಗಳಲ್ಲಿ 0 - 100 ಕಿಮೀ ವೇಗವನ್ನು ಕ್ರಮಿಸುತ್ತದೆ. ಇನ್ನು ಈ ಹೊಸ ಕಾರು 318 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ಅನಾವರಣವಾಯ್ತು ಹೊಸ ಬೆಂಟ್ಲಿ ಫ್ಲೈಯಿಂಗ್ ಸ್ಪರ್ ಕ್ರಿಸ್‌ಮಸ್ ಎಡಿಷನ್

ಇನ್ನು ಐಷಾರಾಮಿ ವಾಹನ ತಯಾರಕ ಕಂಪನಿಯಾದ ಬೆಂಟ್ಲಿ ತನ್ನ ಫ್ಲೈಯಿಂಗ್ ಸ್ಪರ್ ಕಾರಿನ 40,000 ಯುನಿಟ್‍‍ಗಳ ಉತ್ಪಾದನೆಯನ್ನು ಪೂರ್ಣಗೊಳಿಸಿ ಇತ್ತೀಚೆಗೆ ಹೊಸ ಮೈಲುಗಲ್ಲು ಸೃಷ್ಟಿಸಿದೆ. ಬೆಂಟ್ಲಿ ಕಂಪನಿಯು 15 ವರ್ಷಗಳಿಂದ ಫ್ಲೈಯಿಂಗ್ ಸ್ಪರ್ ಕಾರನ್ನು ಉತ್ಪಾದಿಸುತ್ತಿದೆ.

ಅನಾವರಣವಾಯ್ತು ಹೊಸ ಬೆಂಟ್ಲಿ ಫ್ಲೈಯಿಂಗ್ ಸ್ಪರ್ ಕ್ರಿಸ್‌ಮಸ್ ಎಡಿಷನ್

ಹೊಸ ಬೆಂಟ್ಲಿ ಫ್ಲೈಯಿಂಗ್ ಸ್ಪರ್ ರಿಇಂಡಿಯರ್ ಏಯ್ಟ್ ಸ್ಪೆಷಲ್ ಎಡಿಷನ್ ಆಗಿದೆ. ಕ್ರಿಸ್‌ಮಸ್ ಪ್ರಯುಕ್ತ ಬೆಂಟ್ಲಿ ಕಂಪನಿಯು ಸೀಮಿತ ಸಂಖ್ಯೆಯಲ್ಲಿ ಈ ಸ್ಪೆಷಲ್ ಎಡಿಷನ್ ಅನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪರಿಚಯಿಸುತ್ತಿದೆ.

Most Read Articles

Kannada
English summary
Bentley Flying Spur ‘Reindeer Eight’ Unveiled. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X