ಮೊದಲ ಬಾರಿ ಮಾಡಿಫೈಗೊಂಡು ಮಿಂಚಿದ ನ್ಯೂ ಜನರೇಷನ್ ಹ್ಯುಂಡೈ ಐ20 ಕಾರು

ಭಾರತದ ವಾಹನ ಪ್ರಿಯರು ತಮ್ಮ ವಾಹನಗಳನ್ನು ವಿಶಿಷ್ಟವಾಗಿ ಮತ್ತು ಆಕರ್ಷಕವಾಗಿ ಮಾಡಿಫೈಗೊಳಿಸಲು ಇಷ್ಟಪಡುತ್ತಾರೆ. ನಾವು ಭಾರತದ ಎಲ್ಲಾ ಕಡೆಗಳಲ್ಲಿ ಸಾಕಷ್ಟು ಕಸ್ಟಮೈಸ್ ಮಾಡಿದ ಬೈಕುಗಳು ಮತ್ತು ಕಾರುಗಳನ್ನು ಹೆಚ್ಚಾಗಿ ಕಾಣಸಿಗುತ್ತಿದೆ.

ಮೊದಲ ಬಾರಿ ಮಾಡಿಫೈಗೊಂಡು ಮಿಂಚಿದ ನ್ಯೂ ಜನರೇಷನ್ ಹ್ಯುಂಡೈ ಐ20 ಕಾರು

ಹೆಚ್ಚಿನ ಜನರು ಮಾಡಿಫೈ ವಾಹನಗಳನ್ನು ಇಷ್ಟಪಡುತ್ತಾರೆ. ಈ ಮಾಡಿಫೈ ವಾಹನಗಳನ್ನು ನೋಡಲು ಮಾತ್ರವಲ್ಲಿ ಅದನ್ನು ಡ್ರೈವ್ ಮಾಡಲು ಕೂಡ ಹೆಚ್ಚಿನ ಜನ ಇಷ್ಟಪಡುತ್ತಾರೆ. ಮಾಡಿಫೈ ವಾಹನಗಳನ್ನು ಹೆಚ್ಚಿನ ಫನ್ ಡ್ರೈವಿಂಗ್ ಅನುಭವವನ್ನು ನೀಡುತ್ತದೆ. ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಂಡ ಪ್ರೀಮಿಯಂ ಹ್ಯುಂಡೈ ಐ20 ಕಾರನ್ನು ಮೊದಲ ಬಾರಿಗೆ ಮಾಡಿಫೈಗೊಳಿಸಿದ್ದಾರೆ. ಈ ಜನಪ್ರಿಯ ಪ್ರೀಮಿಯಂ ಕಾರನ್ನು ಆಕರ್ಷಕವಾಗಿ ಮಾಡಿಫೈ ಮಾಡಿದ ಉದಾಹರಣೆಯೊಂದು ಇಲ್ಲಿದೆ.

ಮೊದಲ ಬಾರಿ ಮಾಡಿಫೈಗೊಂಡು ಮಿಂಚಿದ ನ್ಯೂ ಜನರೇಷನ್ ಹ್ಯುಂಡೈ ಐ20 ಕಾರು

ಮಾಡಿಫೈಗೊಂಡ ಹ್ಯುಂಡೈ ಐ20 ಕಾರಿಗೆ ವಿಕ್ಟರ್ ವ್ಹೀಲ್ಸ್‌ನ 17 ಇಂಚಿನ ಕಸ್ಟಮ್ ಅಲಾಯ್ ರಿಮ್‌ಗಳನ್ನು ಅಳವಡಿಸಿದೆ. ಲುಧಿಯಾನದ ಕಸ್ಟಮ್ ಕಾರ್ ಗ್ಯಾರೇಜ್ ಕೆಬಿ ಟೈರ್ಸ್ ಅವರು ನ್ಯೂ ಜನರೇಷನ್ ಹ್ಯುಂಡೈ ಐ20 ಕಾರನ್ನು ಮಾಡಿಫೈಗೊಳಿಸಿದ್ದಾರೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಮೊದಲ ಬಾರಿ ಮಾಡಿಫೈಗೊಂಡು ಮಿಂಚಿದ ನ್ಯೂ ಜನರೇಷನ್ ಹ್ಯುಂಡೈ ಐ20 ಕಾರು

ಈ ಮಲ್ಟಿ-ಸ್ಪೋಕ್ ಆಫ್ಟರ್ ಮಾರ್ಕೆಟ್ ವ್ಹೀಲ್ ಗಳು ಸಾಕಷ್ಟು ಅದ್ಭುತವಾಗಿ ಕಾಣುತ್ತವೆ, ಈ ವ್ಹೀಲ್ ಗಳು ಪ್ರೀಮಿಯಂ ಹ್ಯಾಚ್‌ಬ್ಯಾಕ್‌ಗೆ ಸ್ಪೋರ್ಟಿ ಲುಕ್ ನೀಡುತ್ತದೆ ಇದು ಬಹುಶಃ ಭಾರತದ ಮೊದಲ ಮಾರ್ಪಡಿಸಿದ ಮೂರನೇ ತಲೆಮಾರಿನ ಹ್ಯುಂಡೈ ಐ 20 ಆಗಿದೆ.

ಮೊದಲ ಬಾರಿ ಮಾಡಿಫೈಗೊಂಡು ಮಿಂಚಿದ ನ್ಯೂ ಜನರೇಷನ್ ಹ್ಯುಂಡೈ ಐ20 ಕಾರು

ಇನ್ನು ನ್ಯೂ ಜನರೇಷನ್ ಹ್ಯುಂಡೈ ಐ20 ಕಾರು ಹಿಂದಿನ ಮಾದರಿಗಿಂತ ಉದ್ದವಾದ ವ್ಹೀಲ್ ಬೇಸ್ ಅನ್ನು ಹೊಂದಿದೆ. ನ್ಯೂ ಜನರೇಷನ್ ಐ20 ಪವರ್ ಫುಲ್ ಹ್ಯಾಚ್‍ಬ್ಯಾಕ್ ಆಗಿದೆ. ಹೊಸ ಹ್ಯುಂಡೈ ಐ20 ಕಾರಿನ ಮುಂಭಾಗದಲ್ಲಿರು ಕ್ಯಾಸ್ಕೇಡಿಂಗ್ ಗ್ರಿಲ್ ಅನ್ನು ಹೊಂದಿದೆ.

MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಮೊದಲ ಬಾರಿ ಮಾಡಿಫೈಗೊಂಡು ಮಿಂಚಿದ ನ್ಯೂ ಜನರೇಷನ್ ಹ್ಯುಂಡೈ ಐ20 ಕಾರು

ಹಿಂದಿನ ಐ20 ಮಾದರಿಗೆ ಹೋಲಿಸಿದರೆ ಹೆಡ್ ಲ್ಯಾಂಪ್ ಮತ್ತು ಸೈಡ್ ಫ್ರೋಪೈಲ್ ವಿನ್ಯಾಸವನ್ನು ನವೀಕರಿಸಲಾಗಿದೆ ದೊಡ್ಡ ಕ್ರೀಸ್ ಲೈನ್ ಗಳನ್ನು ಒಳಗೊಂಡಿದೆ. ಹೊಸ ಹುಂಡೈ ಐ20 ಕಾರಿನ ಪಿಲ್ಲರ್‍‍ಗಳು ಬ್ಲ್ಯಾಕ್ ಬಣ್ಣವನ್ನು ಹೊಂದಿದೆ.

ಮೊದಲ ಬಾರಿ ಮಾಡಿಫೈಗೊಂಡು ಮಿಂಚಿದ ನ್ಯೂ ಜನರೇಷನ್ ಹ್ಯುಂಡೈ ಐ20 ಕಾರು

ವಿಡಬ್ಲ್ಯೂ ಟೈಗನ್‍‍‍ನಲ್ಲಿ ಇರುವಂತಹ ಕೆಂಪು ಇ‍ಲ್‍ಇಡಿ ಡಿಆರ್‍ಎಲ್ ಸ್ಟಾಪ್ ಲೈಟ್ ಹಿಂಭಾಗದಲ್ಲಿ ಇ‍ಲ್‍ಇಡಿ ಟೇಲ್‍‍ಲೈಟ್ ಹೊಂದಿದೆ. ಇನ್ನು ಹೊಸ ಹ್ಯುಂಡೈ ಕಾರಿನ ಇಂಟಿರಿಯರ್‍‍ನಲ್ಲಿ 4 ಸ್ಫೋಕ್ ಸ್ಟೀಟಿಯರಿಂಗ್ ವ್ಹೀಲ್ ಅನ್ನು ಅಳವಡಿಸಲಾಗಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಮೊದಲ ಬಾರಿ ಮಾಡಿಫೈಗೊಂಡು ಮಿಂಚಿದ ನ್ಯೂ ಜನರೇಷನ್ ಹ್ಯುಂಡೈ ಐ20 ಕಾರು

ಈ ಕಾರಿನ ಇಂಟಿರಿಯರ್‍‍ನಲ್ಲಿರುವ ಡಿಜಿಟಲ್ ಕ್ಲಸ್ಟರ್ ನಲ್ಲಿ ಆ್ಯಪಲ್ ಕಾರ್‍‍ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಮತ್ತು ಹ್ಯುಂಡೈನ ಕನೆಕ್ಟಿವಿಟಿ ಸೂಟ್ ಹೊಂದಿದೆ. ಇದರೊಂದಿಗೆ ಯುಎಸ್‌ಬಿ ಪೋರ್ಟ್‌ ಮತ್ತು ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್, ಬೋಸ್ 7 ಸ್ಪೀಕರ್ ಸಿಸ್ಟಮ್, ಎಲೆಕ್ಟ್ರಿಕ್ ಸನ್‌ರೂಫ್ ಮತ್ತು ಇತರ ಅತ್ಯಾಧುನಿಕ ಫೀಚರ್ ಗಳನ್ನು ಹೊಂದಿದೆ.

ಮೊದಲ ಬಾರಿ ಮಾಡಿಫೈಗೊಂಡು ಮಿಂಚಿದ ನ್ಯೂ ಜನರೇಷನ್ ಹ್ಯುಂಡೈ ಐ20 ಕಾರು

ಹೊಸ ಹ್ಯುಂಡೈ ಐ20 ಕಾರು ಮೂರು ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಹೊಸ ಹ್ಯುಂಡೈ ಕಾರು ಅತ್ಯಾಧುನಿಕ ಫೀಚರ್, ಆಕರ್ಷಕ ವಿನ್ಯಾಸ ಮತ್ತು ಪವರ್ ಫುಲ್ ಎಂಜಿನ್ ಅನ್ನು ಹೊಂದಿದೆ. ಹೊಸ ಹ್ಯುಂಡೈ ಐ20 ಕಾರು ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಬಲೆನೊ, ಟಾಟಾ ಆಲ್ಟ್ರೋಜ್, ಫೋಕ್ಸ್‌ವ್ಯಾಗನ್ ಪೊಲೊ ಮತ್ತು ಹೋಂಡಾ ಜಾಝ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.

Image Courtesy: KB TYRES

Most Read Articles

Kannada
English summary
India’s First Modified New-Gen Hyundai i20 Gets 17-Inch Aftermarket Alloys. Read In Kannada.
Story first published: Wednesday, November 11, 2020, 14:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X