ಬಿಡುಗಡೆಗಾಗಿ ಡೀಲರ್ಸ್ ಯಾರ್ಡ್ ತಲುಪಿದ ಬಿಎಸ್-6 ಹೋಂಡಾ ಡಬ್ಲ್ಯುಆರ್-ವಿ

ಹೋಂಡಾ ಇಂಡಿಯಾ ಕಂಪನಿಯು ಇದೇ ತಿಂಗಳಾಂತ್ಯಕ್ಕೆ ತನ್ನ ಪ್ರಮುಖ ಕಾರುಗಳ ಬಿಎಸ್-6 ಆವೃತ್ತಿಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದ್ದು, ಹೊಸ ಡಬ್ಲ್ಯುಆರ್-ವಿ ಫೇಸ್‌ಲಿಫ್ಟ್ ಕಾರನ್ನು ಈಗಾಗಲೇ ಅಧಿಕೃತ ಕಾರು ಮಾರಾಟ ಮಳಿಗೆಗಳಲ್ಲಿ ಸ್ಟಾಕ್ ಮಾಡಲಾಗುತ್ತಿದೆ.

ಬಿಡುಗಡೆಗಾಗಿ ಡೀಲರ್ಸ್ ಯಾರ್ಡ್ ತಲುಪಿದ ಬಿಎಸ್-6 ಡಬ್ಲ್ಯುಆರ್-ವಿ

ಕಂಪ್ಯಾಕ್ಟ್ ಎಸ್‌ಯುವಿ ಮಾದರಿಗಳಲ್ಲಿ ಅತ್ಯುತ್ತಮ ತಾಂತ್ರಿಕ ಅಂಶಗಳನ್ನು ಹೊಂದಿರುವ ಡಬ್ಲ್ಯುಆರ್-ವಿ ಕಾರು ಮಾದರಿಯು ಈ ಬಾರಿ ಬಿಎಸ್-6 ಎಂಜಿನ್ ಸೇರಿದಂತೆ ಹಲವು ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಗೆ ಸಜ್ಜಾಗುತ್ತಿದ್ದು, ಹೊಸ ಕಾರು ಖರೀದಿಗಾಗಿ ಈಗಾಗಲೇ ರೂ.21 ಸಾವಿರ ಮುಂಗಡದೊಂದಿಗೆ ಬುಕ್ಕಿಂಗ್ ಅನ್ನು ಸಲ್ಲಿಸಬಹುದಾಗಿದೆ. ಸಿಟಿ ಸೆಡಾನ್ ಬಿಡುಗಡೆಯ ನಂತರವಷ್ಟೇ ಡಬ್ಲ್ಯುಆರ್-ವಿ ಫೇಸ್‌ಲಿಫ್ಟ್ ಬಿಡುಗಡೆ ಮಾಡುವ ಸಾಧ್ಯತೆಗಳಿದ್ದು, ಹೊಸ ಕಾರಿನಲ್ಲಿ ಈ ಬಾರಿ ಹಲವಾರು ಬದಲಾವಣೆಗಳನ್ನು ಪರಿಚಯಿಸಲಾಗಿದೆ.

ಬಿಡುಗಡೆಗಾಗಿ ಡೀಲರ್ಸ್ ಯಾರ್ಡ್ ತಲುಪಿದ ಬಿಎಸ್-6 ಡಬ್ಲ್ಯುಆರ್-ವಿ

ಹೋಂಡಾ ಕಂಪನಿಯು ತನ್ನ ಹೊಸ ತಲೆಮಾರಿನ ಕಾರು ಮಾದರಿಗಳ ಜೊತೆ ಫೇಸ್‌ಲಿಫ್ಟ್ ಆವೃತ್ತಿಗಳ ವಿನ್ಯಾಸದಲ್ಲೂ ಕೆಲವು ಬದಲಾವಣೆಗಳನ್ನು ಪರಿಚಯಿಸಿದ್ದು, ಡಬ್ಲ್ಯುಆರ್-ವಿ ಫೇಸ್‌ಲಿಫ್ಟ್‌ನಲ್ಲೂ ಹಲವಾರು ಗುರುತರವಾದ ಪ್ರೀಮಿಯಂ ಫೀಚರ್ಸ್‌ಗಳನ್ನು ನೀಡಲಾಗಿದೆ.

ಬಿಡುಗಡೆಗಾಗಿ ಡೀಲರ್ಸ್ ಯಾರ್ಡ್ ತಲುಪಿದ ಬಿಎಸ್-6 ಡಬ್ಲ್ಯುಆರ್-ವಿ

ಹೊಸದಾಗಿ ವಿನ್ಯಾಸಗೊಳಿಸಲಾಗಿರುವ ರೆಡಿಯೇಟರ್ ಗ್ರಿಲ್, ಬಲಿಷ್ಠವಾದ ವಿಂಗ್ ಕ್ರೋಮ್‌ನಲ್ಲಿ ಎಲ್ಇಡಿ ಪ್ರೋಜೆಕ್ಟರ್, ಹಳೆಯ-ಶೈಲಿಯ ಹ್ಯಾಲೊಜೆನ್ ಹೆಡ್‌ಲ್ಯಾಂಪ್, ಸಂಯೋಜಿತ ಡಿಆರ್‌ಎ, ಪೊಸಿಷನ್ ಲ್ಯಾಂಪ್‌ ಮತ್ತು ಹಿಂಭಾಗದ ವಿನ್ಯಾಸದಲ್ಲಿ ಸಿ-ಆಕಾರದ ಹೊಸ ಎಲ್ಇಡಿ ಟೈಲ್ ಲ್ಯಾಂಪ್‌ಗಳನ್ನು ಕಾಣಬಹುದಾಗಿದೆ.

ಬಿಡುಗಡೆಗಾಗಿ ಡೀಲರ್ಸ್ ಯಾರ್ಡ್ ತಲುಪಿದ ಬಿಎಸ್-6 ಡಬ್ಲ್ಯುಆರ್-ವಿ

ಇದರೊಂದಿಗೆ ಹೊಸ ಡಬ್ಲ್ಯುಆರ್-ವಿ ಕಾರನ್ನು ಮತ್ತಷ್ಟು ಆಕರ್ಷಕವಾಗಿಸಲು ಕ್ರೂಸ್ ಕಂಟ್ರೋಲ್ ಮತ್ತು ಎಲೆಕ್ಟ್ರಿಕ್ ಸನ್‌ರೂಫ್ ಅನ್ನು ಜೋಡಿಸಲಾಗಿದ್ದು, ಕಾರಿನ ಒಳಾಂಗಣದಲ್ಲಿನ ತಾಂತ್ರಿಕ ಅಂಶಗಳು ಈ ಹಿಂದಿನ ಬಿಎಸ್-4 ಮಾದರಿಯಲ್ಲಿರುವಂತೆಯೇ ಮುಂದುವರಿಸಲಾಗಿದೆ.

ಬಿಡುಗಡೆಗಾಗಿ ಡೀಲರ್ಸ್ ಯಾರ್ಡ್ ತಲುಪಿದ ಬಿಎಸ್-6 ಡಬ್ಲ್ಯುಆರ್-ವಿ

ಹೊಸ ಕಾರಿನಲ್ಲಿ ಈ ಹಿಂದಿನ ಫೀಚರ್ಸ್‌ಗಳ ಜೊತೆಗೆ ಸ್ಮಾರ್ಟ್ ಕನೆಕ್ವಿಟಿಗಾಗಿ ಆ್ಯಂಡ್ರಾಯಿಡ್ ಆಟೋ ಆ್ಯಪಲ್ ಕಾರ್‌ಪ್ಲೇ ಜೋಡಿಸಲಾಗಿದ್ದು, ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್ಸ್, ಪುಶ್-ಬಟನ್ ಸ್ಟಾರ್ಟ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೊಲ್ ಮತ್ತು 7.0-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಬಿಡುಗಡೆಗಾಗಿ ಡೀಲರ್ಸ್ ಯಾರ್ಡ್ ತಲುಪಿದ ಬಿಎಸ್-6 ಡಬ್ಲ್ಯುಆರ್-ವಿ

ಹಾಗೆಯೇ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಹೊಸ ಡಬ್ಲ್ಯುಆರ್-ವಿ ಕಾರಿನಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್ ಜೊತೆಗೆ ಇಬಿಡಿ, ರಿಯರ್ ಪಾರ್ಕಿಂಗ್ ಸೆನ್ಸಾರ್, ರಿಯರ್ ವ್ಯೂ ಕ್ಯಾಮೆರಾ, ಕ್ರೂಸ್ ಕಂಟ್ರೋಲ್ ಫೀಚರ್ಸ್‌ಗಳನ್ನು ನೀಡಲಾಗಿದೆ.

ಬಿಡುಗಡೆಗಾಗಿ ಡೀಲರ್ಸ್ ಯಾರ್ಡ್ ತಲುಪಿದ ಬಿಎಸ್-6 ಡಬ್ಲ್ಯುಆರ್-ವಿ

ಎಂಜಿನ್ ಸಾಮರ್ಥ್ಯ

2020ರ ಹೋಂಡಾ ಡಬ್ಲ್ಯುಆರ್-ವಿ ಕಾರು ಮಾದರಿಯು ಎಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿಗೆ ಬಂದಿರುವ ಬಿಎಸ್-6 ಎಂಜಿನ್ ಆಯ್ಕೆಯನ್ನು ಪಡೆದುಕೊಂಡಿದ್ದು, ಪೆಟ್ರೋಲ್ ಮಾದರಿಯು 1.2-ಲೀಟರ್ ಐ-ವಿಟಿಇಸಿ ಎಂಜಿನ್ ಮತ್ತು ಡೀಸೆಲ್ ಮಾದರಿಯು 1.5-ಲೀಟರ್ ಐ-ಡಿಟಿಇಸಿ ನಾಲ್ಕು ಸಿಲಿಂಡರ್ ಎಂಜಿನ್ ಹೊಂದಿದೆ.

MOST READ: ಲಾಕ್‌ಡೌನ್ ಸಂಕಷ್ಟ: ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಉದ್ಯಮ ಆರಂಭಿಸಿದ ಫೋಕ್ಸ್‌ವ್ಯಾಗನ್

ಬಿಡುಗಡೆಗಾಗಿ ಡೀಲರ್ಸ್ ಯಾರ್ಡ್ ತಲುಪಿದ ಬಿಎಸ್-6 ಡಬ್ಲ್ಯುಆರ್-ವಿ

ಪೆಟ್ರೋಲ್ ಮತ್ತು ಡೀಸೆಲ್ ಎರಡು ಆವೃತ್ತಿಗಳಲ್ಲೂ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದ್ದು, ಪೆಟ್ರೋಲ್ ಮಾದರಿಯು 90-ಬಿಎಚ್‌ಪಿ, ಡೀಸೆಲ್ ಮಾದರಿಯು 100-ಬಿಎಚ್‌ಪಿ ಉತ್ಪಾದನೆಯೊಂದಿಗೆ ಅತ್ಯುತ್ತಮ ಇಂಧನ ದಕ್ಷತೆ ಹೊಂದಿದೆ.

ಬಿಡುಗಡೆಗಾಗಿ ಡೀಲರ್ಸ್ ಯಾರ್ಡ್ ತಲುಪಿದ ಬಿಎಸ್-6 ಡಬ್ಲ್ಯುಆರ್-ವಿ

1.2-ಲೀಟರ್ ಪೆಟ್ರೋಲ್ ಎಂಜಿನ್ ಪ್ರತಿ ಲೀಟರ್‌ಗೆ 16.5 ಕಿ.ಮೀ ಮೈಲೇಜ್ ಅನ್ನು ನೀಡಿದ್ದಲ್ಲಿ, 1.5-ಲೀಟರ್ ಡೀಸೆಲ್ ಎಂಜಿನ್ ಮಾದರಿಯು ಪ್ರತಿ ಲೀಟರ್‌ಗೆ 23.7 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ಬಿಡುಗಡೆಗಾಗಿ ಡೀಲರ್ಸ್ ಯಾರ್ಡ್ ತಲುಪಿದ ಬಿಎಸ್-6 ಡಬ್ಲ್ಯುಆರ್-ವಿ

ಈ ಮೂಲಕ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳಿಗೆ ಉತ್ತಮ ಪೈಪೋಟಿ ನೀಡಬಲ್ಲ ನೀರಿಕ್ಷೆಯಲ್ಲಿರುವ ಡಬ್ಲ್ಯುಆರ್-ವಿ ಫೇಸ್‌ಲಿಫ್ಟ್ ಆವೃತ್ತಿಯು ಹೊಸ ಎಂಜಿನ್ ಆಯ್ಕೆಯೊಂದಿಗೆ ಬೆಲೆಯಲ್ಲೂ ತುಸು ದುಬಾರಿಯಾಗಲಿದ್ದು, ಹೊಸ ಕಾರಿನ ಬೆಲೆಯು ಪ್ರಸ್ತುತ ಮಾರುಕಟ್ಟೆಯಲ್ಲಿನ ಬೆಲೆಗಿಂತ ಪೆಟ್ರೋಲ್ ಆವೃತ್ತಿಯು ರೂ.20 ಸಾವಿರದಿಂದ ರೂ.40 ಸಾವಿರ ಮತ್ತು ಡೀಸೆಲ್ ಮಾದರಿಯು ರೂ. 50 ಸಾವಿರದಿಂದ ರೂ.70 ಸಾವಿರದಷ್ಟು ಹೆಚ್ಚುವರಿ ಬೆಲೆ ಪಡೆದುಕೊಳ್ಳಲಿದೆ.

Source: Zigwheels

Most Read Articles

Kannada
Read more on ಹೋಂಡಾ honda
English summary
New Honda WR-V BS6 SUV Starts Arriving At Dealerships. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X