Just In
Don't Miss!
- Education
UAS Dharwad Recruitment 2021: ರಿಸರ್ಚ್ ಅಸೋಸಿಯೇಟ್ ಹುದ್ದೆಗೆ ಜ.28ಕ್ಕೆ ನೇರ ಸಂದರ್ಶನ
- News
ಒಂದೇ ವಾರದಲ್ಲಿ ಬೃಹತ್ ಕ್ವಾರೆಂಟೈನ್ ಕೇಂದ್ರ ನಿರ್ಮಿಸಿದ ಚೀನಾ
- Lifestyle
ಜನವರಿ 23 ಪರಾಕ್ರಮ ದಿವಸ್: ಸುಭಾಷ್ ಚಂದ್ರ ಬೋಸ್ ಬಗ್ಗೆ ನಿಮಗೆ ತಿಳಿದಿರದ ಸಂಗತಿಗಳು
- Movies
ಕೆಜಿಎಫ್ 2 ಕ್ಲೈಮ್ಯಾಕ್ಸ್ ದೃಶ್ಯಕ್ಕೆ ಸುರಿದಿರುವುದು ಕೆಲವು ಕೋಟಿಗಳಲ್ಲ!
- Sports
ಸಿಎಸ್ಕೆಯಿಂದ ಕೇದಾರ್ ಜಾಧವ್, ಪೀಯೂಷ್ ಚಾವ್ಲಾ, ಮುರಳಿ ವಿಜಯ್ ಹೊರಕ್ಕೆ?
- Finance
ಸೆನ್ಸೆಕ್ಸ್, ನಿಫ್ಟಿ ಹೊಸ ದಾಖಲೆ; ಟಾಟಾ ಮೋಟಾರ್ಸ್ 6%ಗೂ ಹೆಚ್ಚು ಗಳಿಕೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಸ ಬಣ್ಣದಲ್ಲಿ ಕಾಣಿಸಿಕೊಂಡ 2021ರ ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿ
ಅಮೆರಿಕ ಮೂಲದ ಜೀಪ್ ಕಂಪನಿಯು ಹೊಸ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಹೊಸ ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯು 2021ರ ಜನವರಿ 7ರಂದು ಭಾರತದಲ್ಲಿ ಅನಾವರಣವಾಗಲಿದೆ.

ಭಾರತದಲ್ಲಿ ಅನಾವರಣವಾಗುವ ಮುನ್ನ ಜೀಪ್ ಕಂಪನಿಯು ತನ್ನ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯ ಮೊದಲ ಅಧಿಕೃತ ಟೀಸರ್ ಅನ್ನು ಬ್ರ್ಯಾಂಡ್‌ನ ವೆಬ್‌ಸೈಟ್‌ನಲ್ಲಿ ಇತ್ತೀಚೆಗೆ ಬಿಡುಗಡೆ ಮಾಡಲಾಗಿತ್ತು. ಟೀಸರ್ ಚಿತ್ರದಲ್ಲಿ ಹೊಸ ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯು ಹಸಿರು ಬಣ್ಣದಿಂದ ಕೂಡಿದೆ. ಈ ಹಸಿರು ಬಣ್ಣದ ಹೊಸ ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯು ಮುಂಬೈನ ರಸ್ತೆಗಳಲ್ಲಿ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ.

ಯಾವುದೇ ಮಾರೆಮಾಚುವಿಕೆ ಇಲ್ಲದೇ ಈ ಹೊಸ ಪ್ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿ ಸ್ಪೈ ಚಿತ್ರಗಳು ಬಹಿರಂಗವಾಗಿವೆ. ಈ ಎಸ್‍ಯುವಿಯ ಬಣ್ಣವು ಪ್ರತಿಸ್ಪರ್ಧಿ ಟಾಟಾ ಹ್ಯಾರಿಯರ್ ಕ್ಯಾಮೊಗೆ ಹೋಲುತ್ತದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

2021ರ ಕಂಪಾಸ್ ಫೇಸ್‌ಲಿಫ್ಟ್ ಎಸ್‌ಯುವಿಯಲ್ಲಿ ಹೊಸ ಫೀಚರ್ ಗಳನ್ನು ಅಳವಡಿಸಲಾಗಿದೆ. ಹೊಸ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯ ವಿನ್ಯಾಸದ ಬಗ್ಗೆ ಹೇಳುದಾದರೆ ಕೆಲವು ಸೂಕ್ಷ್ಮ ನವೀಕರಣಗಳನ್ನು ಪಡೆದುಕೊಂಡಿದೆ. ಈ ಹೊಸ ಎಸ್‍ಯುವಿಯಲ್ಲಿ ಏಳು-ಸ್ಲ್ಯಾಟ್ ಗ್ರಿಲ್ ಅನ್ನು ಉಳಿಸಿಕೊಂಡು ಮುಂಭಾಗದಲ್ಲಿ ಹೊಸ ಹನಿಕಾಂಬ್ ಮೆಶ್ ಅನ್ನು ಒಳಗೊಂಡಿದೆ.

ಅಲ್ಲದೇ ಹೊಸ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯು ಆಕರ್ಷಕ ಲುಕ್ ಅನ್ನು ಹೊಂದಿದೆ. ಈ ಹೊಸ ಎಸ್‍ಯುವಿಯ ಇತರ ನವೀಕರಣಗಳಲ್ಲಿ ಇಂಟಿಗ್ರೇಟೆಡ್ ಎಲ್ಇಡಿ ಡಿಆರ್‌ಎಲ್ ಗಳೊಂದಿಗೆ ಹೆಡ್ ಲ್ಯಾಂಪ್, ಫಾಗ್ ಲ್ಯಾಂಪ್ ಗಳಿಗಾಗಿ ನವೀಕರಿಸಿದ ಫ್ರಂಟ್ ಬಂಪರ್ ಮತ್ತು ಹಿಂಭಾಗದಲ್ಲಿ ಟೇಲ್ ಲೈಟ್ ಅನ್ನು ಅಳವಡಿಸಲಾಗಿದೆ.
MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಹೊಸ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯ ಒಳಭಾಗದಲ್ಲಿ ಸೂಕ್ಷ್ಮ ನವೀಕರಣಗಳು ಮತ್ತು ಬದಲಾವಣೆಗಳನ್ನು ಒಳಗೊಂಡಿದೆ. 2021 ಜೀಪ್ ಕಂಪಾಸ್‌ನ ಕ್ಯಾಬಿನ್ ಮೊದಲಿಗಿಂತ ಹೆಚ್ಚು ಪ್ರೀಮಿಯಂ ಆಗಿದೆ.ಎಸ್‍ಯುವಿಯ ಒಳಭಾಗದಲ್ಲಿ ಹಲವಾರು ಪ್ರೀಮಿಯಂ ಫೀಚರ್ ಗಳನ್ನು ಹೊಂದಿವೆ.

2021ರ ಜೀಪ್ ಕಂಪಾಸ್‌ನಲ್ಲಿ ಹೊಸ ಎಂಜಿನ್ ಆಯ್ಕೆಯನ್ನು ನೀಡಲಾಗಿದೆ. ಹೊಸದಾಗಿ 1.4 ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ 2.0 ಲೀಟರ್ ಡೀಸೆಲ್ ಎಂಜಿನ್ ಅನ್ನು ಕೂಡ ಅಳವಡಿಸಲಾಗಿದೆ.
MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಇದರಲ್ಲಿ 1.4 ಲೀಟರ್ ಟರ್ಬೊ-ಪೆಟ್ರೋಲ್ 160 ಬಿಹೆಚ್‌ಪಿ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಿದರೆ, 2.0 ಲೀಟರ್ ಡೀಸೆಲ್ ಎಂಜಿನ್ 173 ಬಿಹೆಚ್‌ಪಿ ಮತ್ತು 350 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಇನ್ನು ಈ ಹೊಸ ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಹೊಸ ವಿನ್ಯಾಸದೊಂದಿಗೆ ಆಕರ್ಷಕ ಲುಕ್ ಅನ್ನು ಹೊಂದಿದೆ. ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಮಾದರಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಫೋಕ್ಸ್‌ವ್ಯಾಗನ್ ಟಿ-ರೋಕ್, ಸ್ಕೋಡಾ ಕರೋಕ್, ನಿಸ್ಸಾನ್ ಕಿಕ್ಸ್, ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.