ಸ್ವಾತಂತ್ರ್ಯಸಂಭ್ರಮ: ಭಾರತದ ರಾಷ್ಟ್ರಪತಿಗಳ ಅಧಿಕೃತ ಕಾರಿನ ಸಂಪೂರ್ಣ ವಿವರಗಳಿವು

2017ರಲ್ಲಿ ರಾಮ್ ನಾಥ್ ಕೋವಿಂದ್ ರವರು ಪ್ರಣಬ್ ಮುಖರ್ಜಿ ರವರ ಜಾಗದಲ್ಲಿ ಭಾರತದ 14ನೇ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿಗಳು ನಮ್ಮ ದೇಶದ ಮೊದಲ ಪ್ರಜೆ. ಹಾಗೆಯೇ ಭಾರತದ ಸಶಸ್ತ್ರ ಪಡೆಗಳ ಸರ್ವೋಚ್ಚ ಕಮಾಂಡರ್ ಸಹ ಹೌದು.

ಸ್ವಾತಂತ್ರ್ಯಸಂಭ್ರಮ: ಭಾರತದ ರಾಷ್ಟ್ರಪತಿಗಳ ಅಧಿಕೃತ ಕಾರಿನ ಸಂಪೂರ್ಣ ವಿವರಗಳಿವು

ಇಂತಹ ಉನ್ನತ ಸ್ಥಾನದಲ್ಲಿರುವ ರಾಷ್ಟ್ರಪತಿಗಳು ಅನೇಕ ಅಪಾಯಗಳನ್ನು ಎದುರಿಸುವುದು ಸಹಜ. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿಗಳ ಸಂಚಾರಕ್ಕೆ ಸುರಕ್ಷಿತ ಕಾರಿನ ಅವಶ್ಯಕತೆ ಇದೆ. ಈ ಕಾರಣಕ್ಕೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ರವರು ಮರ್ಸಿಡಿಸ್ ಮೇಬ್ಯಾಕ್ ಎಸ್ 600 ಪುಲ್ಮನ್ ಕಾರ್ ಅನ್ನು ಬಳಸುತ್ತಾರೆ. ಈ ಕಾರು ಭಾರತದ ರಾಷ್ಟ್ರಪತಿಗಳ ಅಧಿಕೃತ ಕಾರು. ಈ ಕಾರನ್ನು ರಾಷ್ಟ್ರಪತಿಗಳ ಅಧಿಕೃತ ಕಾರ್ಯಕ್ರಮಗಳಲ್ಲಿ ಕಾಣಬಹುದು.

ಸ್ವಾತಂತ್ರ್ಯಸಂಭ್ರಮ: ಭಾರತದ ರಾಷ್ಟ್ರಪತಿಗಳ ಅಧಿಕೃತ ಕಾರಿನ ಸಂಪೂರ್ಣ ವಿವರಗಳಿವು

ಮರ್ಸಿಡಿಸ್ ಮೇಬ್ಯಾಕ್ ಎಸ್ 600 ಪುಲ್ಮನ್ ವಿಶ್ವದ ಅತಿ ಸುರಕ್ಷಿತ ಕಾರುಗಳಲ್ಲಿ ಒಂದಾಗಿದೆ. ರಾಷ್ಟ್ರಪತಿಗಳು ಸೇರಿದಂತೆ ದೇಶದ ಅತಿ ಗಣ್ಯ ವ್ಯಕ್ತಿಗಳು ಈ ಕಾರನ್ನು ಬಳಸುತ್ತಾರೆ. ಎಸ್ 600 ಪುಲ್ಮನ್ ಕಾರು ಅನೇಕ ಸುರಕ್ಷತಾ ಫೀಚರ್ ಹಾಗೂ ಎಕ್ವಿಪ್ ಮೆಂಟ್ ಗಳನ್ನು ಹೊಂದಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಸ್ವಾತಂತ್ರ್ಯಸಂಭ್ರಮ: ಭಾರತದ ರಾಷ್ಟ್ರಪತಿಗಳ ಅಧಿಕೃತ ಕಾರಿನ ಸಂಪೂರ್ಣ ವಿವರಗಳಿವು

ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಎಸ್ 600 ಕಾರಿನ ಸುರಕ್ಷತಾ ಫೀಚರ್ ಗಳ ಬಗ್ಗೆ ಹೇಳುವುದಾದರೆ ಈ ಕಾರು ವಿಆರ್ 10 ಮಟ್ಟದ ಬ್ಯಾಲಿಸ್ಟಿಕ್ ರಕ್ಷಣೆಯನ್ನು ಹೊಂದಿದೆ. ಇದು ಕಾರು ಹ್ಯಾಂಡ್ ಗ್ರೆನೇಡ್‌ಗಳಿಂದ ಮೆಷಿನ್ ಗನ್‌ಗಳವರೆಗಿನ ದಾಳಿಯನ್ನು ತಡೆದುಕೊಳ್ಳಬಲ್ಲದು. ಅತಿದೊಡ್ಡ ದಾಳಿಯಿಂದ ಒಳಗಿರುವವರನ್ನು ರಕ್ಷಿಸುತ್ತದೆ.

ಸ್ವಾತಂತ್ರ್ಯಸಂಭ್ರಮ: ಭಾರತದ ರಾಷ್ಟ್ರಪತಿಗಳ ಅಧಿಕೃತ ಕಾರಿನ ಸಂಪೂರ್ಣ ವಿವರಗಳಿವು

ಈ ಲಿಮೋಸಿನ್‌ ಕಾರಿನಲ್ಲಿ ಅನಿಲ ದಾಳಿಯಿಂದ ಪ್ರಯಾಣಿಕರನ್ನು ರಕ್ಷಿಸಲು ಆಕ್ಸಿಜನ್ ಟ್ಯಾಂಕ್ ನೀಡಲಾಗಿದೆ. ಇದರ ಜೊತೆಗೆ ಅಂಡರ್ ಬಾಡಿ ಆರ್ಮರ್ ಪ್ಲೇಟಿಂಗ್, ಬುಲೆಟ್ ಪ್ರೂಫ್ ಗ್ಲಾಸ್, ಅಲಾಯ್ ವ್ಹೀಲ್ ಸೇರಿದಂತೆ ಹಲವಾರು ಫೀಚರ್ ಗಳನ್ನು ನೀಡಲಾಗಿದೆ. ಈ ಸುರಕ್ಷತಾ ಫೀಚರ್ ಗಳು ಹೊರಭಾಗಕ್ಕೆ ಮಾತ್ರ ಸೀಮಿತವಾಗಿಲ್ಲ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಸ್ವಾತಂತ್ರ್ಯಸಂಭ್ರಮ: ಭಾರತದ ರಾಷ್ಟ್ರಪತಿಗಳ ಅಧಿಕೃತ ಕಾರಿನ ಸಂಪೂರ್ಣ ವಿವರಗಳಿವು

ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಎಸ್ 600 ಹೆಚ್ಚುವರಿ ಬ್ರೇಸ್ ಹಾಗೂ ಸ್ಟೀಲ್ ಸ್ಪ್ರಿಂಗ್‌ನೊಂದಿಗೆ ರೀ ಎನ್ ಫೋರ್ಸ್ ಸಸ್ಪೆಂಷನ್ ಎಕ್ವಿಪ್ ಮೆಂಟ್ ಗಳನ್ನು ಹೊಂದಿದೆ. ಈ ಕಾರು ಹೆಚ್ಚು ಆಕ್ಸಲರೇಷನ್ ಗಾಗಿ ದೊಡ್ಡ ಗಾತ್ರದ ಬ್ರೇಕ್, ರನ್-ಫ್ಲಾಟ್ ಟಯರ್‌ಗಳೊಂದಿಗೆ ವಿಶೇಷವಾದ ಇನ್ನರ್ ವ್ಹೀಲ್ ಗಳನ್ನು ಹೊಂದಿದೆ.

ಸ್ವಾತಂತ್ರ್ಯಸಂಭ್ರಮ: ಭಾರತದ ರಾಷ್ಟ್ರಪತಿಗಳ ಅಧಿಕೃತ ಕಾರಿನ ಸಂಪೂರ್ಣ ವಿವರಗಳಿವು

ಈ ಸುರಕ್ಷತಾ ಫೀಚರ್ ಹಾಗೂ ಎಕ್ವಿಪ್ ಮೆಂಟ್ ಗಳ ಹೊರತಾಗಿ, 21.3 ಅಡಿ ಉದ್ದದ ಈ ಲಿಮೋಸಿನ್‌ ಕಾರು ಹಲವಾರು ಐಷಾರಾಮಿ ಫೀಚರ್ ಗಳನ್ನು ಹೊಂದಿದೆ. ಅನೇಕ ಸುರಕ್ಷತಾ ಫೀಚರ್ ಗಳಿರುವ ಕಾರಣಕ್ಕೆ ಈ ಕಾರಿನ ತೂಕವು 5 ಟನ್‌ಗಳಿಗಿಂತ ಹೆಚ್ಚಾಗಿದೆ. ರಾಷ್ಟ್ರಪತಿಗಳ ಕಾರಿನಲ್ಲಿರುವ ಫೀಚರ್, ಎಕ್ವಿಪ್ ಮೆಂಟ್ ಹಾಗೂ ಸ್ಪೇಸಿಫಿಕೇಷನ್ ಬಗ್ಗೆ ರಹಸ್ಯ ಕಾಯ್ದುಕೊಳ್ಳಲಾಗಿದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಸ್ವಾತಂತ್ರ್ಯಸಂಭ್ರಮ: ಭಾರತದ ರಾಷ್ಟ್ರಪತಿಗಳ ಅಧಿಕೃತ ಕಾರಿನ ಸಂಪೂರ್ಣ ವಿವರಗಳಿವು

ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಎಸ್ 600 ಕಾರಿನಲ್ಲಿ 6.0-ಲೀಟರಿನ ಟ್ವಿನ್ ಟರ್ಬೊ ವಿ 12 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 530 ಬಿಹೆಚ್‌ಪಿ ಪವರ್ ಹಾಗೂ 830 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಭಾರತದ ರಾಷ್ಟ್ರಪತಿಗಳು ಈ ವರ್ಷ ಹೊಸ ಕಾರು ಖರೀದಿಸಬೇಕಿತ್ತು. ಆದರೆ ಕೋವಿಡ್ -19 ಕಾರಣದಿಂದ ಉದ್ಭವಿಸಿರುವ ಆರ್ಥಿಕ ಬಿಕ್ಕಟ್ಟಿನ ಕಾರಣಕ್ಕಾಗಿ ಹೊಸ ಕಾರು ಖರೀದಿ ಯೋಜನೆಯನ್ನು ಕೈಬಿಟ್ಟಿದ್ದಾರೆ.

ಸ್ವಾತಂತ್ರ್ಯಸಂಭ್ರಮ: ಭಾರತದ ರಾಷ್ಟ್ರಪತಿಗಳ ಅಧಿಕೃತ ಕಾರಿನ ಸಂಪೂರ್ಣ ವಿವರಗಳಿವು

ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಎಸ್ 600 ದೇಶದ ಮೊದಲ ಮಹಿಳಾ ರಾಷ್ಟ್ರಪತಿಗಳಾಗಿದ್ದ ಪ್ರತಿಭಾ ಪಾಟೀಲ್ ರವರ ಅಧಿಕೃತ ಕಾರು ಸಹ ಆಗಿತ್ತು.ಪ್ರತಿಭಾ ಪಾಟೀಲ್ ರವರು ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಡಬ್ಲ್ಯು 140 ಲಿಮೋಸಿನ್ ಕಾರಿನ ಬದಲಿಗೆ ಎಸ್-ಕ್ಲಾಸ್ ಎಸ್ 600 ಪುಲ್ಮನ್ ಕಾರಿನ ಬಳಕೆಯನ್ನು ಆರಂಭಿಸಿದರು.

Most Read Articles

Kannada
English summary
Official car of President of India, Mercedes maybach S 600 pullman. Read in Kannada.
Story first published: Tuesday, August 4, 2020, 10:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X