ಬಿಡುಗಡೆಯಾಯ್ತು ಪೋರ್ಷೆ ಪನಾಮೆರಾ 4 10 ಇಯರ್ಸ್ ಎಡಿಷನ್

ಜರ್ಮನ್ ಸ್ಪೋರ್ಟ್ ಕಾರು ತಯಾರಕ ಕಂಪನಿಯಾದ ಪೋರ್ಷೆ ಪನಾಮೆರಾ 4 10 ಇಯರ್ಸ್ ಎಡಿಷನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಪೋರ್ಷೆ ಪನಾಮೆರಾ 4 10 ಇಯರ್ಸ್ ಎಡಿಷನ್ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.60 ಕೋಟಿಗಳಾಗಿದೆ.

ಬಿಡುಗಡೆಯಾಯ್ತು ಪೋರ್ಷೆ ಪನಾಮೆರಾ 4 10 ಇಯರ್ಸ್ ಎಡಿಷನ್

ಐಷಾರಾಮಿ ಪನಾಮೆರಾ ಕಾರಿನ ಹತ್ತನೇ ವರ್ಷದ ಉತ್ಪಾದನೆಯನ್ನು ಪ್ರಾರಂಭಿಸಿದ ಸಂಭ್ರಮದಲ್ಲಿ ಹೊಸ ವಿಶೇಷ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ. ಪನಾಮೆರಾ 4 ಆಲ್-ವ್ಹೀಲ್-ಡ್ರೈವ್ ಆವೃತ್ತಿಯನ್ನು ಆಧರಿಸಿದೆ. 10 ಇಯರ್ಸ್ ಎಡಿಷನ್ ಕಾರಿನಲ್ಲಿ 21 ಇಂಚಿನ ಅಲಾಯ್ ವ್ಹೀಲ್ ಅನ್ನು ಹೊಂದಿದೆ. ಈ ಕಾರಿನ ಮುಂಭಾಗ ವಿಶೇಷವಾದ ‘ಪನಾಮೆರಾ 10' ಬ್ಯಾಡ್ಜಿಂಗ್ ಅನ್ನು ಹೊಂದಿದೆ.

ಬಿಡುಗಡೆಯಾಯ್ತು ಪೋರ್ಷೆ ಪನಾಮೆರಾ 4 10 ಇಯರ್ಸ್ ಎಡಿಷನ್

ಕಾರಿನ ಎಲ್ಲಾ ಡೋರ್ ಸಿಲ್ಗಳು ಮತ್ತು ಪ್ರಯಾಣಿಕರ ಬದಿಯಲ್ಲಿರುವ ಡ್ಯಾಶ್‌ಬೋರ್ಡ್ ಟ್ರಿಮ್ ವಿಶೇಷ ‘ಪನಾಮೆರಾ 10' ಬ್ಯಾಡ್ಜಿಂಗ್ ಅನ್ನು ಸಹ ಒಳಗೊಂಡಿದೆ. ಈ ಕಾರಿನ ಕ್ಯಾಬಿನ್ ಒಳಗೆ ಬಿಳಿ ಚಿನ್ನದ ಕಾಂಟ್ರಾಸ್ಟ್ ಅನ್ನು ಹೊಂದಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಬಿಡುಗಡೆಯಾಯ್ತು ಪೋರ್ಷೆ ಪನಾಮೆರಾ 4 10 ಇಯರ್ಸ್ ಎಡಿಷನ್

ಈ ಹೊಸ ಪೋರ್ಷೆ ಪನಾಮೆರಾ 4 10 ಇಯರ್ಸ್ ಎಡಿಷನ್ ನಲ್ಲಿ ಅತ್ಯಾಧುನಿಕ ಫೀಚರ್ ಗಳನ್ನು ಹೊಂದಿದೆ. ಈ ಫೋರ್ಷೆ ಕಾರನ್ನು ಖರೀದಿಸುವ ಗ್ರಾಹಕರ ಬೇಡಿಕೆಯ ತಕ್ಕಂತೆ ಕಂಪನಿಯು ಕಸ್ಟಮೈಸ್ ಮಾಡಿಕೊಡಲಾಗುತ್ತದೆ.

ಬಿಡುಗಡೆಯಾಯ್ತು ಪೋರ್ಷೆ ಪನಾಮೆರಾ 4 10 ಇಯರ್ಸ್ ಎಡಿಷನ್

ಪನಾಮೆರಾ 4 10 ಇಯರ್ಸ್ ಎಡಿಷನ್ ನಲ್ಲಿ ಮ್ಯಾಟ್ರಿಕ್ಸ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳ ಜೊತೆಗೆ ಬ್ರಾಂಡ್‌ನ ಪೋರ್ಷೆ ಡೈನಾಮಿಕ್ ಲೈಟ್ ಸಿಸ್ಟಂ ಪ್ಲಸ್ ಸಿಸ್ಟಂ, ಲೇನ್ ಚೇಂಜ್ ಅಸಿಸ್ಟ್ ಸಿಸ್ಟಂ, ರಿಯರ್-ವ್ಯೂ ಕ್ಯಾಮೆರಾ, ಪನೋರಮಿಕ್ ಸನ್‌ರೂಫ್, ಸಾಫ್ಟ್ ಕ್ಲೋಸ್ ಡೋರ್ಸ್ ಮತ್ತು ಬೋಸ್ ಸರೌಂಡ್ ಸೌಂಡ್ ಸಿಸ್ಟಮ್ ಅನ್ನು ಒಳಗೊಂಡಿರುವ ಪಾರ್ಕ್ ಅಸಿಸ್ಟ್ ಅನ್ನು ಹೊಂದಿದೆ.

MOST READ: ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಬಿಡುಗಡೆಯಾಯ್ತು ಪೋರ್ಷೆ ಪನಾಮೆರಾ 4 10 ಇಯರ್ಸ್ ಎಡಿಷನ್

ಈ ಹೊಸ ಐಷಾರಾಮಿ ಕಾರಿನಲ್ಲಿ ಅಡಾಪ್ಟಿವ್ ಏರ್ ಸಂಸ್ಪೆಕ್ಷನ್ ಮತ್ತು ಕಂಪನಿಯ ಪೋರ್ಷೆ ಆಕ್ಟಿವ್ ಸಂಸ್ಪೆಕ್ಷನ್ ಮ್ಯಾನೇಜ್ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಈ ಹೊಸ ಪನಾಮೆರಾ 4 10 ಇಯರ್ಸ್ ಎಡಿಷನ್ ನಲ್ಲಿ 2.8-ಲೀಟರ್, ವಿ6 ಎಂಜಿನ್ ಅನ್ನು ಹೊಂದಿದೆ.

ಬಿಡುಗಡೆಯಾಯ್ತು ಪೋರ್ಷೆ ಪನಾಮೆರಾ 4 10 ಇಯರ್ಸ್ ಎಡಿಷನ್

ಈ ಎಂಜಿನ್ 226 ಬಿಹೆಚ್‍ಪಿ ಪವರ್ 450 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 8-ಸ್ಫೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ.

MOST READ: ಕರೋನಾ ಭೀತಿಯಿಂದ ಪಾತಾಳಕ್ಕೆ ಕುಸಿತ ಮಾರುತಿ ಸುಜುಕಿ ಕಾರುಗಳ ಮಾರಾಟ

ಬಿಡುಗಡೆಯಾಯ್ತು ಪೋರ್ಷೆ ಪನಾಮೆರಾ 4 10 ಇಯರ್ಸ್ ಎಡಿಷನ್

ಪನಾಮೆರಾ 4 10 ಇಯರ್ಸ್ ಎಡಿಷನ್ ನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ 10 ಏರ್‌ಬ್ಯಾಗ್, ಡ್ಯುಯಲ್-ಸ್ಟೇಜ್ ಏರ್‌ಬ್ಯಾಗ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ, ಎಬಿಎಸ್ ವಿಥ್ ಇಬಿಡಿ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ಟ್ರ್ಯಾಕ್ಷನ್ ಕಂಟ್ರೋಲ್ ಸಿಸ್ಟಂ ಮತ್ತು ಹಿಲ್ ಹೋಲ್ಡ್ ಅಸಿಸ್ಟ್ ಅನ್ನು ಹೊಂದಿದೆ.

ಬಿಡುಗಡೆಯಾಯ್ತು ಪೋರ್ಷೆ ಪನಾಮೆರಾ 4 10 ಇಯರ್ಸ್ ಎಡಿಷನ್

ಪನಾಮೆರಾ 4 10 ಇಯರ್ಸ್ ಎಡಿಷನ್ ಏಳು ರೂಪಾಂತರಗಳು ಮತ್ತು 12 ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಪೋರ್ಷೆ ಪನಾಮೆರಾ 4 10 ಇಯರ್ಸ್ ಎಡಿಷನ್ ಕಾರು ಪನಾಮೆರಾ 4 ಮಾದರಿಯ ಮೇಲಿನ ಸ್ಥಾನದಲ್ಲಿರುತ್ತದೆ.

Most Read Articles

Kannada
English summary
Porsche Panamera 4 10 Years Edition Model Launched. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X