ಹೊಸ ತಲೆಮಾರಿನ ಘೋಸ್ಟ್ ಸೆಡಾನ್ ಕಾರನ್ನು ಅನಾವರಣಗೊಳಿಸಿದ ರೋಲ್ಸ್ ರಾಯ್ಸ್

ರೋಲ್ಸ್ ರಾಯ್ಸ್ ಕಂಪನಿಯು ಎರಡನೇ ತಲೆಮಾರಿನ ಘೋಸ್ಟ್ ಸೆಡಾನ್ ಕಾರ್ ಅನ್ನು ಅನಾವರಣಗೊಳಿಸಿದೆ. ಈ ಕಾರು ಭಾರತದಲ್ಲಿ 2021ರಿಂದ ಮಾರಾಟವಾಗುವ ಸಾಧ್ಯತೆಗಳಿವೆ. ಎರಡನೇ ತಲೆಮಾರಿನ ರೋಲ್ಸ್ ರಾಯ್ಸ್ ಘೋಸ್ಟ್ ಕಾರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.6.95 ಕೋಟಿಗಳಾಗಿರಲಿದೆ.

ಹೊಸ ತಲೆಮಾರಿನ ಘೋಸ್ಟ್ ಸೆಡಾನ್ ಕಾರನ್ನು ಅನಾವರಣಗೊಳಿಸಿದ ರೋಲ್ಸ್ ರಾಯ್ಸ್

ಈ ಕಾರು ತಾಂತ್ರಿಕವಾಗಿ ಅತ್ಯಾಧುನಿಕ ರೋಲ್ಸ್ ರಾಯ್ಸ್ ಸೆಡಾನ್ ಕಾರು ಎಂದು ಕಂಪನಿ ಹೇಳಿಕೊಂಡಿದೆ. ಎರಡನೇ ತಲೆಮಾರಿನ ರೋಲ್ಸ್ ರಾಯ್ಸ್ ಘೋಸ್ಟ್‌ ಕಾರಿನ ಫೀಚರ್ ಹಾಗೂ ವಿನ್ಯಾಸವನ್ನು ಅಪ್ ಡೇಟ್ ಮಾಡಲಾಗಿದೆ. ಈ ಕಾರಿನಲ್ಲಿ ಹೊಸ ಪ್ಲ್ಯಾನರ್ ಸಸ್ಪೆಂಷನ್ ಸಿಸ್ಟಂ ಅಳವಡಿಸಲಾಗಿದೆ. ಈ ಸಿಸ್ಟಂ ಕಾರಿಗೆ ಉತ್ತಮವಾದ ಸಸ್ಪೆಂಷನ್ ಹಾಗೂ ಬ್ಯಾಲೆನ್ಸ್ ನೀಡುತ್ತದೆ.

ಹೊಸ ತಲೆಮಾರಿನ ಘೋಸ್ಟ್ ಸೆಡಾನ್ ಕಾರನ್ನು ಅನಾವರಣಗೊಳಿಸಿದ ರೋಲ್ಸ್ ರಾಯ್ಸ್

ಈ ಕಾರಿನಲ್ಲಿ ಅಳವಡಿಸಲಾಗಿರುವ ಎಲ್‌ಇಡಿ ಲೇಸರ್ ಹೆಡ್‌ಲೈಟ್‌ಗಳು 500 ಮೀಟರ್‌ವರೆಗೆ ಬೆಳಕನ್ನು ನೀಡುತ್ತವೆ. ಈ ಕಾರಿನ ಹಿಂಭಾಗದಲ್ಲಿರುವ ಐದು-ಲಿಂಕ್ ನ ರೇರ್ ಆಕ್ಸಲ್, ಏರ್ ಸಸ್ಪೆನ್ಷನ್ ಟೆಕ್ನಾಲಜಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಸುಧಾರಿತ ಟೆಕ್ನಾಲಜಿಯು ಕಾರಿಗೆ ಅತ್ಯುತ್ತಮವಾದ ಬ್ಯಾಲೆನ್ಸ್ ನೀಡುತ್ತದೆ.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಹೊಸ ತಲೆಮಾರಿನ ಘೋಸ್ಟ್ ಸೆಡಾನ್ ಕಾರನ್ನು ಅನಾವರಣಗೊಳಿಸಿದ ರೋಲ್ಸ್ ರಾಯ್ಸ್

ಈ ಕಾರನ್ನು ಕಂಪನಿಯ ಅಲ್ಯೂಮಿನಿಯಂ ಸ್ಪೇಸ್‌ಫ್ರೇಮ್ ಆರ್ಕಿಟೆಕ್ಚರ್ ನಿಂದ ವಿನ್ಯಾಸಗೊಳಿಸಲಾಗಿದೆ. ಕಲಿನನ್ ಹಾಗೂ ಫ್ಯಾಂಟಮ್ ಕಾರುಗಳನ್ನು ಸಹ ಈ ಆರ್ಕಿಟೆಕ್ಚರ್ ಮೇಲೆ ನಿರ್ಮಿಸಲಾಗಿದೆ.

ಹೊಸ ತಲೆಮಾರಿನ ಘೋಸ್ಟ್ ಸೆಡಾನ್ ಕಾರನ್ನು ಅನಾವರಣಗೊಳಿಸಿದ ರೋಲ್ಸ್ ರಾಯ್ಸ್

ಹೊಸ ರೋಲ್ಸ್ ರಾಯ್ಸ್ ಘೋಸ್ಟ್ ಕಾರು ವಿಷನ್ ಅಸಿಸ್ಟ್, ಡೇ-ನೈಟ್ ವಾರ್ನಿಂಗ್, ಪೆಡೆಸ್ಟ್ರಿಯನ್ ವಾರ್ನಿಂಗ್, ನಾಲ್ಕು ಕ್ಯಾಮೆರಾ, ವೈ-ಫೈ ಹಾಟ್ ಸ್ಪಾಟ್, ಸೆಲ್ಫ್ ಪಾರ್ಕ್ ಸೇರಿದಂತೆ ಹಲವು ಪ್ರಮುಖ ಫೀಚರ್ ಗಳನ್ನು ಹೊಂದಿದೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಹೊಸ ತಲೆಮಾರಿನ ಘೋಸ್ಟ್ ಸೆಡಾನ್ ಕಾರನ್ನು ಅನಾವರಣಗೊಳಿಸಿದ ರೋಲ್ಸ್ ರಾಯ್ಸ್

ಹೊಸ ರೋಲ್ಸ್ ರಾಯ್ಸ್ ಘೋಸ್ಟ್ ಕಾರಿನಲ್ಲಿ 6.75-ಲೀಟರಿನ ಟ್ವಿನ್-ಟರ್ಬೋಚಾರ್ಜ್ಡ್ ವಿ 12 ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 570 ಬಿಹೆಚ್‌ಪಿ ಪವರ್ ಹಾಗೂ 850 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಹೊಸ ತಲೆಮಾರಿನ ಘೋಸ್ಟ್ ಸೆಡಾನ್ ಕಾರನ್ನು ಅನಾವರಣಗೊಳಿಸಿದ ರೋಲ್ಸ್ ರಾಯ್ಸ್

ಈ ಕಾರು 4 ವ್ಹೀಲ್ ಡ್ರೈವ್ ಹೊಂದಿದ್ದು, ಎಲ್ಲಾ ವ್ಹೀಲ್ ಗಳು ಸ್ಟೀಯರಿಂಗ್ ಅನ್ನು ಹೊಂದಿವೆ. ಲಾಕ್ ಡೌನ್ ಕಾರಣದಿಂದಾಗಿ ಕಾರಿನ ಬಿಡುಗಡೆ ವಿಳಂಬವಾಗುತ್ತಿದೆ ಎಂದು ಕಂಪನಿ ಹೇಳಿದೆ. ಲಾಕ್ ಡೌನ್ ಅವಧಿಯಲ್ಲಿ ರೋಲ್ಸ್ ರಾಯ್ಸ್ ಕಂಪನಿಯು ಹಲವಾರು ಬಾರಿ ಈ ಕಾರನ್ನು ಪರೀಕ್ಷಿಸಿದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಹೊಸ ತಲೆಮಾರಿನ ಘೋಸ್ಟ್ ಸೆಡಾನ್ ಕಾರನ್ನು ಅನಾವರಣಗೊಳಿಸಿದ ರೋಲ್ಸ್ ರಾಯ್ಸ್

ಸದ್ಯ ಮಾರಾಟವಾಗುತ್ತಿರುವ ಘೋಸ್ಟ್ ಕಾರು, ರೋಲ್ಸ್ ರಾಯ್ಸ್ ಕಂಪನಿಯ 116 ವರ್ಷಗಳ ಇತಿಹಾಸದಲ್ಲಿ ಅತ್ಯಂತ ಯಶಸ್ವಿಯಾದ ಕಾರ್ ಆಗಿದೆ. ಈ ಕಾರು 2009ರಲ್ಲಿ ಬಿಡುಗಡೆಯಾದ ರೋಲ್ಸ್ ರಾಯ್ಸ್ ಘೋಸ್ಟ್ ಜಿ ಕಾರಿನ ಬದಲಿಗೆ ಬಿಡುಗಡೆಯಾಗಲಿದೆ.

Most Read Articles

Kannada
English summary
Rolls Royce unveils second generation ghost sedan car. Read in Kannada.
Story first published: Wednesday, September 2, 2020, 15:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X