ಮತ್ತೊಂದು ಐಷಾರಾಮಿ ಕಾರು ಖರೀದಿಸಿದ ಸಿಕ್ಸರ್ ಕಿಂಗ್

ಯುವರಾಜ್ ಸಿಂಗ್ ಕ್ರಿಕೆಟ್ ಗೆ ವಿದಾಯ ಹೇಳಿರಬಹುದು. ಆದರೆ ಕಾರುಗಳ ಬಗೆಗೆ ಅವರು ಹೊಂದಿರುವ ಕ್ರೇಜ್ ಸ್ವಲ್ಪವೂ ಕಡಿಮೆಯಾಗಿಲ್ಲ. ಯುವರಾಜ್ ಸಿಂಗ್ ಅನೇಕ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.

ಮತ್ತೊಂದು ಐಷಾರಾಮಿ ಕಾರು ಖರೀದಿಸಿದ ಸಿಕ್ಸರ್ ಕಿಂಗ್

ಈಗ ಅವರು ಮತ್ತೊಂದು ಐಷಾರಾಮಿ ಕಾರನ್ನು ಖರೀದಿಸಿದ್ದಾರೆ. ಅವರು ಇತ್ತೀಚೆಗೆ ಹೊಸ ಮಿನಿ ಕಂಟ್ರಿಮನ್ ಕಾರನ್ನು ಖರೀದಿಸಿದ್ದಾರೆ. ಯುವರಾಜ್ ಸಿಂಗ್ ಹೊಸ ಕಾರಿನ ವಿತರಣೆಯನ್ನು ತೆಗೆದುಕೊಳ್ಳುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಯುವರಾಜ್ ಸಿಂಗ್ ತಮ್ಮ ಪತ್ನಿ ಹ್ಯಾಜೆಲ್ ಅವರೊಂದಿಗೆ ತೆರಳಿ ಕಾರಿನ ವಿತರಣೆಯನ್ನು ಪಡೆದಿದ್ದಾರೆ.

ಮತ್ತೊಂದು ಐಷಾರಾಮಿ ಕಾರು ಖರೀದಿಸಿದ ಸಿಕ್ಸರ್ ಕಿಂಗ್

ಮಿನಿ ಕಂಪನಿಯ ಅತಿದೊಡ್ಡ ಹ್ಯಾಚ್‌ಬ್ಯಾಕ್ ಕಾರುಗಳಲ್ಲಿ ಕಂಟ್ರಿಮನ್ ಕೂಡ ಸೇರಿದೆ. ದೇಶಿಯ ಮಾರುಕಟ್ಟೆಯಲ್ಲಿ ಈ ಕಾರನ್ನು ಪೆಟ್ರೋಲ್ ಎಂಜಿನ್ ಹೊಂದಿರುವ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಮತ್ತೊಂದು ಐಷಾರಾಮಿ ಕಾರು ಖರೀದಿಸಿದ ಸಿಕ್ಸರ್ ಕಿಂಗ್

ಯುವರಾಜ್ ಸಿಂಗ್ ಖರೀದಿಸಿದ ಕಾರು ಕೆಂಪು ಬಣ್ಣವನ್ನು ಹೊಂದಿದೆ. ಈ ಕಾರನ್ನು ಸಿಬಿಯು ರೂಪದಲ್ಲಿ ಆಮದು ಮಾಡಿಕೊಳ್ಳಲಾಗಿದೆ. ಮಿನಿ ಕಂಟ್ರಿಮನ್‌ ಕಾರಿನ ಆರಂಭಿಕ ಬೆಲೆ ರೂ.38.5 ಲಕ್ಷಗಳಾಗಿದೆ.

ಮತ್ತೊಂದು ಐಷಾರಾಮಿ ಕಾರು ಖರೀದಿಸಿದ ಸಿಕ್ಸರ್ ಕಿಂಗ್

ಆದರೆ ಯುವರಾಜ್ ಸಿಂಗ್ ರವರು ಖರೀದಿಸಿರುವ ಮಿನಿ ಕಂಟ್ರಿಮನ್ ಜೆಸಿಡಬ್ಲ್ಯೂ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.42.4 ಲಕ್ಷಗಳಾಗಿದೆ. ಈ ಮಾದರಿಯು ಕಂಟ್ರಿಮನ್‌ನ ಸ್ಟಾಂಡರ್ಡ್ ಮಾದರಿಗಿಂತ ಭಿನ್ನವಾಗಿದ್ದು, ಹೆಚ್ಚಿನ ಫೀಚರ್ ಗಳನ್ನು ಹೊಂದಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಮತ್ತೊಂದು ಐಷಾರಾಮಿ ಕಾರು ಖರೀದಿಸಿದ ಸಿಕ್ಸರ್ ಕಿಂಗ್

ಜೆಸಿಡಬ್ಲ್ಯೂ ಮಾದರಿಯು ಆಕರ್ಷಕ ವಿನ್ಯಾಸ ಹಾಗೂ ಸ್ಪೋರ್ಟಿ ಫೀಚರ್ ಗಳನ್ನು ಹೊಂದಿದೆ. ಮಿನಿ ಕಂಟ್ರಿಮನ್ ಎಸ್ ಜೆಸಿಡಬ್ಲ್ಯೂ ಕಾರಿನಲ್ಲಿ 2.0-ಲೀಟರಿನ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ.

ಮತ್ತೊಂದು ಐಷಾರಾಮಿ ಕಾರು ಖರೀದಿಸಿದ ಸಿಕ್ಸರ್ ಕಿಂಗ್

ಈ ಎಂಜಿನ್ 192 ಬಿಹೆಚ್‌ಪಿ ಪವರ್ ಹಾಗೂ 280 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಮಿನಿ ಕಂಟ್ರಿಮನ್ ಕಾರು ಕೇವಲ ಏಳು ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ ಎಂದು ಕಂಪನಿಯು ಹೇಳಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಮತ್ತೊಂದು ಐಷಾರಾಮಿ ಕಾರು ಖರೀದಿಸಿದ ಸಿಕ್ಸರ್ ಕಿಂಗ್

ಈಗ ಹಲವಾರು ಐಷಾರಾಮಿ ಕಾರುಗಳನ್ನು ಹೊಂದಿರುವ ಯುವರಾಜ್ ಸಿಂಗ್ ಮೊದಲು ಹೋಂಡಾ ಸಿಟಿಯಂತಹ ಸಾಮಾನ್ಯ ಕಾರನ್ನು ಹೊಂದಿದ್ದರು. ಈ ಕಾರನ್ನು ಅವರು ಇನ್ನೂ ತಮ್ಮ ಗ್ಯಾರೇಜ್‌ನಲ್ಲಿ ಇಟ್ಟುಕೊಂಡಿದ್ದಾರೆ.

ಮತ್ತೊಂದು ಐಷಾರಾಮಿ ಕಾರು ಖರೀದಿಸಿದ ಸಿಕ್ಸರ್ ಕಿಂಗ್

ಯುವರಾಜ್ ಸಿಂಗ್ ಬಿಎಂಡಬ್ಲ್ಯು ಎಂ 5, ಬಿಎಂಡಬ್ಲ್ಯು ಎಂ 3, ಆಡಿ ಕ್ಯೂ 7, ಲ್ಯಾಂಬೊರ್ಗಿನಿ ಗಲ್ಲಾರ್ಡೊ ಸೇರಿದಂತೆ ಹಲವಾರು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಮತ್ತೊಂದು ಐಷಾರಾಮಿ ಕಾರು ಖರೀದಿಸಿದ ಸಿಕ್ಸರ್ ಕಿಂಗ್

ಯುವರಾಜ್ ಸಿಂಗ್ ಅವರ ಬಳಿಯಿರುವ ಬಿಎಂಡಬ್ಲ್ಯು ಎಂ 5 ಕಾರಿನಲ್ಲಿ 4395 ಸಿಸಿಯ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 592 ಬಿಹೆಚ್‌ಪಿ ಪವರ್ ಹಾಗೂ 795 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಕಾರಿನ ಬೆಲೆ ಸುಮಾರು ರೂ.1.68 ಕೋಟಿಗಳಾಗಿದೆ.

ಮತ್ತೊಂದು ಐಷಾರಾಮಿ ಕಾರು ಖರೀದಿಸಿದ ಸಿಕ್ಸರ್ ಕಿಂಗ್

ಇನ್ನು ಬಿಎಂಡಬ್ಲ್ಯು ಎಂ 3 ಕಾರಿನಲ್ಲಿರುವ 2979 ಸಿಸಿಯ ಎಂಜಿನ್ 431 ಬಿಹೆಚ್‌ಪಿ ಪವರ್ ಹಾಗೂ 550 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಐಷಾರಾಮಿ ಕಾರಿನ ಬೆಲೆ ಸುಮಾರು ರೂ.1.50 ಕೋಟಿಗಳಾಗಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಮತ್ತೊಂದು ಐಷಾರಾಮಿ ಕಾರು ಖರೀದಿಸಿದ ಸಿಕ್ಸರ್ ಕಿಂಗ್

ಯುವರಾಜ್ ಸಿಂಗ್ ಅವರು ಲ್ಯಾಂಬೊರ್ಗಿನಿ ಗಲ್ಲಾರ್ಡೊ ಸೂಪರ್ ಸ್ಪೋರ್ಟ್ಸ್ ಕಾರ್ ಅನ್ನು ಸಹ ಹೊಂದಿದ್ದಾರೆ. ಈ ಕಾರಿನಲ್ಲಿರುವ 5204 ಸಿಸಿಯ ಎಂಜಿನ್ 570 ಬಿಎಚ್‌ಪಿ ಪವರ್ ಉತ್ಪಾದಿಸುತ್ತದೆ. ಈ ಸ್ಪೋರ್ಟ್ಸ್ ಕಾರಿನ ಬೆಲೆ ಸುಮಾರು ರೂ.3 ಕೋಟಿಗಳಾಗಿದೆ.

ಮತ್ತೊಂದು ಐಷಾರಾಮಿ ಕಾರು ಖರೀದಿಸಿದ ಸಿಕ್ಸರ್ ಕಿಂಗ್

ಟಿ 20 ವಿಶ್ವಕಪ್‌ ಟೂರ್ನಿಯಲ್ಲಿ ಆರು ಸಿಕ್ಸರ್‌ಗಳನ್ನು ಹೊಡೆದಿದ್ದಕ್ಕಾಗಿ ಐಪಿಎಲ್ ಮಾಜಿ ಆಯುಕ್ತರಾದ ಲಲಿತ್ ಮೋದಿ, ಯುವರಾಜ್ ಸಿಂಗ್ ರವರಿಗೆ ಪೋರ್ಷೆ 911 ಐಷಾರಾಮಿ ಕಾರನ್ನು ಉಡುಗೊರೆಯಾಗಿ ನೀಡಿದ್ದರು.

Most Read Articles

Kannada
English summary
Sixer king Yuvraj Singh takes delivery of new Mini Countryman. Read in Kannada.
Story first published: Thursday, December 31, 2020, 18:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X