Just In
- 51 min ago
ಪೊಲೊ ಹ್ಯಾಚ್ಬ್ಯಾಕ್ ಮತ್ತು ವೆಂಟೊ ಸೆಡಾನ್ ಕಾರುಗಳ ಖರೀದಿ ಮೇಲೆ ಹೊಸ ವರ್ಷದ ಆಫರ್
- 1 hr ago
ದಿಢೀರನೆ ಕೈಕೊಟ್ಟ ಬ್ರೇಕ್, 3 ಕಿ.ಮೀ ರಿವರ್ಸ್ ಗೇರಿನಲ್ಲಿ ಸಾಗಿದ ಟ್ರಕ್ ಚಾಲಕ
- 2 hrs ago
ಕೈಗೆಟುಕುವ ದರದಲ್ಲಿ ಟಿವಿಎಸ್ ಎಕ್ಸ್ಎಲ್100 ವಿನ್ನರ್ ಎಡಿಷನ್ ಬಿಡುಗಡೆ
- 3 hrs ago
ಭಾರತದಲ್ಲಿ ಅತಿದೊಡ್ಡ ಮಲ್ಟಿ ಬ್ರಾಂಡ್ ಕಾರ್ ಸರ್ವಿಸ್ ಸೆಂಟರ್ ತೆರೆದ ಬಾಷ್
Don't Miss!
- News
ಕೊವ್ಯಾಕ್ಸಿನ್ ಬಗ್ಗೆ ಎಚ್ಚರ: ಲಸಿಕೆಯು ಯಾರಿಗೆ ಸೂಕ್ತ, ಯಾರಿಗೆ ಸೂಕ್ತವಲ್ಲ?
- Finance
34,000 ರುಪಾಯಿ ತನಕ ಕಾರುಗಳ ಬೆಲೆ ಏರಿಕೆ ಮಾಡಿದ ಮಾರುತಿ ಸುಜುಕಿ
- Sports
ಭಾರತ vs ಆಸ್ಟ್ರೇಲಿಯಾ: ಧೋನಿ ದಾಖಲೆ ಮುರಿದು 1000 ಟೆಸ್ಟ್ ರನ್ ಗಳಿಸಿದ ರಿಷಭ್ ಪಂತ್
- Lifestyle
ಕೂದಲು ಬೇಗನೆ ಬೆಳ್ಳಗಾಗುವುದು: ಇದು ನಿಮ್ಮ ದೇಹದ ಕುರಿತು ಏನು ಸೂಚಿಸುತ್ತದೆ?
- Education
Indian Forest Service Recruitment 2021: 70 ಡಿಐಜಿಎಫ್/ಎಐಜಿಎಫ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ಚಿತ್ರೀಕರಣ ವೇಳೆ ಅಸ್ವಸ್ಥ: ನಟಿ ಅಲಿಯಾ ಭಟ್ ಆಸ್ಪತ್ರೆಗೆ ದಾಖಲು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಿಎಸ್-4 ವಾಹನಗಳ ನೋಂದಣಿ ವಿಚಾರವಾಗಿ ಆಟೋ ಕಂಪನಿಗಳಿಗೆ ಬಿಗ್ ರಿಲೀಫ್ ನೀಡಿದ ಸುಪ್ರೀಂ
ಹೊಸ ಎಮಿಷನ್ ನಿಯಮಕ್ಕೆ ವಿರುದ್ದವಾಗಿ ಬಿಎಸ್-4 ವಾಹನಗಳ ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದ್ದು, ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಶನ್ ಮನವಿಗೆ ಗ್ರೀನ್ ಸಿಗ್ನಲ್ ನೀಡಿದೆ.

ಬಿಎಸ್ 4 ವಾಹನಗಳ ನೋಂದಣಿ ಕುರಿತು ಅಂತಿಮ ತೀರ್ಪು ಪ್ರಕಟಿಸಿರುವ ಸುಪ್ರೀಂಕೋರ್ಟ್ ನಿಗದಿತ ಅವಧಿಯಲ್ಲಿ ಮಾರಾಟಗೊಳಿಸಲಾದ ವಾಹನಗಳ ನೋಂದಣಿಯನ್ನು ಮಾನ್ಯ ಮಾಡಿದ್ದು, ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಶನ್‌ನ (ಎಫ್‌ಎಡಿಎ) ಮನವಿಯನ್ನು ಪರಿಸ್ಥಿತಿಗೆ ಅನುಗುಣವಾಗಿ ಅಂಗೀಕರಿಸಿದೆ. ಹೊಸ ತೀರ್ಪಿನಿಂದ ಆರ್‌ಸಿ ಪಡೆದುಕೊಳ್ಳಲು ಕಾಯುತ್ತಿರುವ ಬಿಎಸ್-4 ವಾಹನಗಳಿಗೆ ಶೀಘ್ರದಲ್ಲೇ ಆರ್‌ಸಿ ವಿತರಣೆಯಾಗಲಿದ್ದು, ಸುಪ್ರೀಂಕೋರ್ಟ್ ತೀರ್ಪಿನ ಬಗೆಗೆ ಫಾಡಾ ಸಂತಸ ವ್ಯಕ್ತಪಡಿಸಿದೆ.

ನಿಷೇಧ ನಂತರವೂ ಮಾರಾಟಗೊಂಡಿದ್ದ ವಾಹನಗಳ ಆರ್‌ಸಿ ತಡೆಹಿಡಿದ್ದರಿಂದ ಹೊಸ ವಾಹನಗಳನ್ನು ಮಾರಾಟ ಮಾಡದೆ ಹಾಗೆಯೇ ಉಳಿಸಿಕೊಂಡಿರುವ ವಿವಿಧ ಆಟೋ ಕಂಪನಿಗಳು ಇದೀಗ ವಿತರಣೆ ಶುರು ಮಾಲಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಕೂಡಾ ಬಿಎಸ್-4 ವಾಹನಗಳು ಮಾನ್ಯಗೊಂಡಿವೆ.

ಇನ್ನು ಏಪ್ರಿಲ್ 1ರ ನಂತರ ಕಡ್ಡಾಯವಾಗಿ ಜಾರಿಗೆ ಬಂದ ಬಿಎಸ್-6 ಎಮಿಷನ್‌ನಿಂದಾಗಿ ಬಿಎಸ್-4 ವಾಹನಗಳ ನೋಂದಣಿಯು ಸಂಪೂರ್ಣವಾಗಿ ನಿಷೇಧಗೊಳಿಸಲಾಗಿದೆ. ಆದರೆ ಬಿಎಸ್-4 ವಾಹನಗಳ ಮಾರಾಟ ಅವಧಿ ಮುಕ್ತಾಯಕ್ಕೂ ಮುನ್ನ ಲಾಕ್‌ಡೌನ್ ಜಾರಿಯಾಗಿದ್ದರಿಂದ ಆಟೋ ಕಂಪನಿಗಳಿಗೆ ಕೆಲವು ವಿನಾಯ್ತಿಗಳನ್ನು ನೀಡಲಾಗಿತ್ತು.

ಬಿಎಸ್-6 ಜಾರಿಗೂ ಮುನ್ನ ಅಂತಿಮ ಅವಧಿಯಲ್ಲಿ ಭಾರೀ ಪ್ರಮಾಣದ ಬಿಎಸ್-4 ಸ್ಟಾಕ್ ವಾಹನಗಳನ್ನು ಮಾರಾಟಗೊಳಿಸುವ ಯೋಜನೆಯಲ್ಲಿದ್ದ ವಿವಿಧ ಆಟೋ ಉತ್ಪಾದನಾ ಕಂಪನಿಗಳಿಗೆ ಲಾಕ್‌ಡೌನ್ ಬಿಸಿತುಪ್ಪವಾಗಿ ಪರಿಣಮಿಸಿತು. ಮಾರ್ಚ್ ಮಧ್ಯಂತರದಲ್ಲಿ ಆರಂಭವಾದ ಪೂರ್ಣ ಪ್ರಮಾಣದ ಲಾಕ್‌ಡೌನ್ ಎಪ್ರಿಲ್ ಮೊದಲ ವಾರದ ತನಕ ಮುಂದುವರಿದಿತ್ತು. ಈ ಹಿನ್ನಲೆಯಲ್ಲಿ ಮೊದಲೇ ನಿಗದಿಯಾಗದಂತೆ ಬಿಎಸ್-4 ವಾಹನಗಳ ನೋಂದಣಿಯನ್ನು ಸ್ಥಗಿತಗೊಳಿಸಿದ್ದ ಸಾರಿಗೆ ಇಲಾಖೆಯು ಆಟೋ ಕಂಪನಿಗಳಿಗೆ ಶಾಕ್ ನೀಡಿತ್ತು.

ಲಾಕ್‌ಡೌನ್ ಕಾರಣಕ್ಕೆ ಆರ್ಥಿಕವಾಗಿ ಹೊರೆಯಾಗಿ ಪರಿಣಮಿಸಿದ್ದ ಬಿಎಸ್-4 ವಾಹನಗಳನ್ನು ಮಾರಾಟ ಮಾಡಲು ಅವಕಾಶ ನೀಡುವಂತೆ ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಶನ್ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು.

ಪರಿಸ್ಥಿತಿಗೆ ಅನುಗುಣವಾಗಿ ಕೆಲವು ಷರತ್ತುಗಳೊಂದಿಗೆ ನಿಷೇಧಗೊಂಡಿದ್ದ ಬಿಎಸ್-4 ವಾಹನಗಳ ಮಾರಾಟಕ್ಕೆ 10 ದಿನಗಳಲ್ಲಿ ಶೇ.10 ರಷ್ಟು ವಾಹನಗಳ ಮಾರಾಟಕ್ಕೆ ಅವಕಾಶ ನೀಡಿದ್ದ ಸುಪ್ರೀಂಕೋರ್ಟ್ ನಷ್ಟ ಸರಿದೂಗಿಸಲು ಅವಕಾಶ ನೀಡಿತ್ತು.

ಆದರೆ ಸುಪ್ರೀಂಕೋರ್ಟ್ ಆದೇಶವನ್ನು ದುರ್ಬಳಕೆ ಮಾಡಿಕೊಂಡ ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಶನ್ ನಿಗದಿತ ಮಟ್ಟಕ್ಕಿಂತಲೂ ಹೆಚ್ಚಿನ ಮಟ್ಟದ ವಾಹನಗಳನ್ನು ವಿವಿಧ ಆಫರ್‌ಗಳ ಮೇಲೆ ಮಾರಾಟ ಮಾಡಿತ್ತು. ಕೋರ್ಟ್ ಆದೇಶ ಮೀರಿದ್ದರಿಂದ ನಿಗದಿತ ವಾಹನಗಳನ್ನು ಹೊರತುಪಡಿಸಿ ಇನ್ನುಳಿದ ವಾಹನಗಳ ನೋಂದಣಿಯನ್ನು ತಡೆಹಿಡಿಯಲಾಗಿದ್ದು, ಸುಪ್ರೀಂಕೋರ್ಟ್ ಆದೇಶ ಮೀರಿ ಬರೋಬ್ಬರಿ 1.30 ಲಕ್ಷ ವಾಹನಗಳನ್ನು ಮಾರಾಟ ಮಾಡಲಾಗಿತ್ತು.

ಫಾಡಾದಲ್ಲಿ ನೋಂದಣಿಯಾಗಿರುವ ಡೀಲರ್ಸ್‌ಗಳಿಗೆ 1.10 ಲಕ್ಷ ವಾಹನಗಳ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು. ಆದರೆ ನೋಂದಣಿಯಾದ ಡೀಲರ್ಸ್‌ಗಳು 94 ಸಾವಿರ ವಾಹನಗಳನ್ನು ಮಾರಾಟ ಮಾಡಿದ್ದಲ್ಲಿ ನೋಂದಣಿ ಮಾಡದ ಡೀಲರ್ಸ್‌ಗಳು ಬರೋಬ್ಬರಿ 1.30 ಲಕ್ಷ ಬಿಎಸ್-4 ವಾಹನಗಳನ್ನು ಮಾರಾಟ ಮಾಡಿದ್ದರು.
MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ನೋಂದಣಿಯಾಗಿರುವ ಡೀಲರ್ಸ್ ಮೂಲಕ ಮಾರಾಟವಾದ ವಾಹನಗಳು ಅಧಿಕೃತವಾಗಿ ಬಳಕೆಯಾಗುತ್ತಿದ್ದು, ಹೆಚ್ಚುವರಿಯಾಗಿ ಮಾರಾಟವಾಗಿರುವ 1.30 ಲಕ್ಷ ಬಿಎಸ್-4 ವಾಹನಗಳನ್ನು ನೋಂದಣಿಯನ್ನು ಮಾನ್ಯ ಮಾಡುವಂತೆ ಫಾಡಾ ಸಂಸ್ಥೆಯು ಸುಪ್ರೀಂಕೋರ್ಟ್ ಮೊರೆಹೋಗಿತ್ತು.

ದೀರ್ಘಾವಧಿಯ ಲಾಕ್‌ಡೌನ್ ಮತ್ತು ಕರೋನಾ ವೈರಸ್‌ನಿಂದಾದ ಆರ್ಥಿಕ ಮುಗ್ಗಟ್ಟು ವಿಚಾರಗಳನ್ನು ಮುಂದಿಟ್ಟುಕೊಂಡು ಹೆಚ್ಚುವರಿಯಾಗಿ ಮಾರಾಟವಾದ ವಾಹನಗಳ ನೋಂದಣಿಯನ್ನು ಮಾನ್ಯ ಮಾಡುವಂತೆ ಅರ್ಜಿ ಸಲ್ಲಿಸಲಾಗಿತ್ತು.
MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಶನ್ ಮನವಿಯನ್ನು ಸ್ವಿಕರಿಸಿದ್ದ ಸುಪ್ರೀಂಕೋರ್ಟ್ ಇದೀಗ ಅಂತಿಮ ತೀರ್ಪು ನೀಡಿದ್ದು, ಮೇ 4 ರಿಂದ 14ರ ವರೆಗೆ ಮಾರಾಟಗೊಳಿಸಲಾದ ಎಲ್ಲಾ ಬಿಎಸ್-6 ವಾಹನಗಳ ನೋಂದಣಿಯನ್ನು ಮಾನ್ಯ ಮಾಡಿದೆ. ಆದರೆ ಮೇ 14ರ ನಂತರ ಮಾರಾಟವಾದ ಅಥವಾ ಇನ್ನು ಸ್ಟಾಕ್ ಉಳಿದಿರುವ ಬಿಎಸ್-4 ವಾಹನಗಳ ಮಾರಾಟಕ್ಕೆ ಮತ್ತು ನೋದಣಿಗೆ ಅವಕಾಶ ನೀಡುವ ಮನವಿಯನ್ನು ತಿರಸ್ಕಾರ ಮಾಡಲಾಗಿದೆ.