ನಗರಸಭೆಗೆ ಏಸ್ ಮಿನಿ ಟ್ರಕ್ ವಾಹನಗಳನ್ನು ವಿತರಿಸಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್‌ನ ಜನಪ್ರಿಯ ವಾಹನಗಳಲ್ಲಿ ಏಸ್ ಮಿನಿ ಟ್ರಕ್‌ ಸಹ ಒಂದು. ಸರಕು ವಾಹನ ಪ್ರಿಯರು ಈ ವಾಹನವನ್ನು ಸಾಕು ಆನೆ ಎಂದು ಕರೆಯುವುದುಂಟು. ಟಾಟಾ ಮೋಟಾರ್ಸ್ ಈ ವಾಹನವನ್ನು ವಿಜಯವಾಡ ನಗರಸಭೆಗೆ ವಿತರಿಸಿರುವ ಬಗ್ಗೆ ವರದಿಯಾಗಿದೆ.

ನಗರಸಭೆಗೆ ಏಸ್ ಮಿನಿ ಟ್ರಕ್ ವಾಹನಗಳನ್ನು ವಿತರಿಸಿದ ಟಾಟಾ ಮೋಟಾರ್ಸ್

ನಿಗಮದ ತ್ಯಾಜ್ಯವನ್ನು ಸಂಗ್ರಹಿಸುವ ಉದ್ದೇಶದಿಂದ ಈ ವಾಹನಗಳನ್ನು ಒದಗಿಸಲಾಗಿದೆ. ವಿಜಯವಾಡ ನಗರಸಭೆಗೆ ಒಟ್ಟು 25 ಯೂನಿಟ್ ಏಸ್ ಮಿನಿ ಟ್ರಕ್ ಗಳನ್ನು ಮಂಜೂರು ಮಾಡಲಾಗಿದೆ. ಈ ಏಸ್ ಮಿನಿ ಟ್ರಕ್‌ನಲ್ಲಿ ಜಿಯೋ-ಪೊಸಿಷನಿಂಗ್, ಸಾರ್ವಜನಿಕ ಪ್ರಕಟಣೆಗೆ ಮೈಕ್ ಹಾಗೂ ಧ್ವನಿ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ.

ನಗರಸಭೆಗೆ ಏಸ್ ಮಿನಿ ಟ್ರಕ್ ವಾಹನಗಳನ್ನು ವಿತರಿಸಿದ ಟಾಟಾ ಮೋಟಾರ್ಸ್

ವಿಜಯವಾಡ ನಗರಸಭೆಯ ಬಿಡ್ ಪಡೆದಿದ್ದ ಟಾಟಾ ಮೋಟಾರ್ಸ್‌ ಈ ವಾಹನಗಳನ್ನು ನಿಗಮಕ್ಕೆ ವಿತರಿಸಿದೆ. ನಿಗಮದ ಅಗತ್ಯಕ್ಕೆ ಅನುಗುಣವಾಗಿ ಈ ವಾಹನದಲ್ಲಿ ವಿವಿಧ ರೀತಿಯ ಮಾರ್ಪಾಡುಗಳನ್ನು ಮಾಡಲಾಗಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ನಗರಸಭೆಗೆ ಏಸ್ ಮಿನಿ ಟ್ರಕ್ ವಾಹನಗಳನ್ನು ವಿತರಿಸಿದ ಟಾಟಾ ಮೋಟಾರ್ಸ್

ತ್ಯಾಜ್ಯ ಸಂಗ್ರಹಣೆಗೆ ಅನುಗುಣವಾಗಿ ಈ ವಾಹನಗಳ ಬಾಡಿಯನ್ನು ಮಾಡಿಫೈ ಮಾಡಲಾಗಿದೆ. ಈ ವಾಹನಗಳ ಬಾಡಿ ನಿರ್ಮಾಣವು 3 ಕ್ಯೂಬಿಕ್ ಮೀಟರ್ ಗಾತ್ರದಲ್ಲಿದೆ. ಇದನ್ನು ಮುಚ್ಚಲು ವಿಶಿಷ್ಟವಾದ ಮುಚ್ಚಳವನ್ನು ನೀಡಲಾಗಿದೆ.

ನಗರಸಭೆಗೆ ಏಸ್ ಮಿನಿ ಟ್ರಕ್ ವಾಹನಗಳನ್ನು ವಿತರಿಸಿದ ಟಾಟಾ ಮೋಟಾರ್ಸ್

ನಗರದಲ್ಲಿರುವ ತ್ಯಾಜ್ಯವನ್ನು ವಿಲೇವಾರಿ ಮಾಡಲು ವಿಜಯವಾಡ ನಗರಸಭೆ ಈ ವಾಹನಗಳನ್ನು ಬಳಸಲಿದೆ. ಟಾಟಾ ಏಸ್ ಮಿನಿ ಟ್ರಕ್ ವಾಹನವನ್ನು ಸಿಎನ್‌ಜಿ, ಡೀಸೆಲ್ ಹಾಗೂ ಪೆಟ್ರೋಲ್ ಎಂಜಿನ್ ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ನಗರಸಭೆಗೆ ಏಸ್ ಮಿನಿ ಟ್ರಕ್ ವಾಹನಗಳನ್ನು ವಿತರಿಸಿದ ಟಾಟಾ ಮೋಟಾರ್ಸ್

ಈ ಎಲ್ಲಾ ಎಂಜಿನ್ ಗಳನ್ನು ಬಿಎಸ್ -6 ನಿಯಮಗಳಿಗೆ ತಕ್ಕಂತೆ ಅಪ್ ಡೇಟ್ ಮಾಡಲಾಗಿದೆ. ಈ ವಾಹನಗಳು 2, 2.6, 3 ಹಾಗೂ 3.3 ಕ್ಯೂಬಿಕ್ ಮೀಟರ್ ಗಾತ್ರಗಳಲ್ಲಿ ಲಭ್ಯವಿದೆ. ಇವುಗಳನ್ನು ಮುಚ್ಚಿದ ಹಾಗೂ ತೆರೆದ ಸಂರಚನೆಯಲ್ಲಿಯೂ ಮಾರಾಟ ಮಾಡಲಾಗುತ್ತದೆ.

ನಗರಸಭೆಗೆ ಏಸ್ ಮಿನಿ ಟ್ರಕ್ ವಾಹನಗಳನ್ನು ವಿತರಿಸಿದ ಟಾಟಾ ಮೋಟಾರ್ಸ್

ಈ ಫೀಚರ್ ಗಳನ್ನು ಹೊಂದಿರುವ ಕಾರಣಕ್ಕೆ ವಿಜಯವಾಡ ನಗರಸಭೆ ಈ ವಾಹನವನ್ನು ಆಯ್ಕೆ ಮಾಡಿಕೊಂಡಿದೆ. ವಿಜಯವಾಡ ನಗರಸಭೆಯು ಈ ವಾಹನಗಳ ವೆಚ್ಚದ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ನಗರಸಭೆಗೆ ಏಸ್ ಮಿನಿ ಟ್ರಕ್ ವಾಹನಗಳನ್ನು ವಿತರಿಸಿದ ಟಾಟಾ ಮೋಟಾರ್ಸ್

ವಿಜಯವಾಡ ನಗರಸಭೆಗೆ ವಿತರಿಸಲಾಗಿರುವ ಮಿನಿ ಟ್ರಕ್ ಸಿಎನ್‌ಜಿ ಗುಣಮಟ್ಟದ್ದಾಗಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಮಾತನಾಡಿರುವ ಟಾಟಾ ಮೋಟಾರ್ಸ್ ಉಪಾಧ್ಯಕ್ಷರಾದ ವಿನಯ್ ಪಾಠಕ್, ನಗರದ ಘನತ್ಯಾಜ್ಯ ವಿಲೇವಾರಿಗೆ ವಿಜಯವಾಡ ನಗರಸಭೆಯೊಂದಿಗೆ ಕೆಲಸ ಮಾಡುತ್ತಿರುವುದಕ್ಕೆ ಸಂತೋಷವಾಗಿದೆ ಎಂದು ಹೇಳಿದರು.

ನಗರಸಭೆಗೆ ಏಸ್ ಮಿನಿ ಟ್ರಕ್ ವಾಹನಗಳನ್ನು ವಿತರಿಸಿದ ಟಾಟಾ ಮೋಟಾರ್ಸ್

ಪಡಿತರ ವಸ್ತುಗಳನ್ನು ಸಾರ್ವಜನಿಕರಿಗೆ ತಲುಪಿಸಲು ಆಂಧ್ರಪ್ರದೇಶ ಸರ್ಕಾರವು ಇತ್ತೀಚೆಗೆ 6,413 ಯುನಿಟ್ ಟಾಟಾ ಏಸ್ ಗೋಲ್ಡ್ ಖರೀದಿಸಿತ್ತು. ಇದರ ಜೊತೆಗೆ ಈಗ ಟಾಟಾ ಮೋಟಾರ್ಸ್ ವಿಜಯವಾಡ ನಗರಸಭೆಗೆ 25 ಯುನಿಟ್ ಏಸ್ ಮಿನಿ ಟ್ರಕ್‌ಗಳನ್ನು ತ್ಯಾಜ್ಯ ವಿಲೇವಾರಿಗಾಗಿ ವಿತರಿಸಿದೆ.

Most Read Articles

Kannada
English summary
Tata Motors delivers Ace mini trucks to Vijayawada Corporation. Read in Kannada.
Story first published: Tuesday, November 10, 2020, 12:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X