400 ಕಿ.ಮೀ ಮೈಲೇಜ್ ನೀಡುತ್ತದೆ ಟೊಯೊಟಾದ ಈ ಎಲೆಕ್ಟ್ರಿಕ್ ಕಾರು

ಟೊಯೊಟಾ ಕಂಪನಿಯು ಸಿ-ಹೆಚ್‌ಆರ್ ಎಲೆಕ್ಟ್ರಿಕ್ ಕಾರನ್ನು ಚೀನಾ ದೇಶದಲ್ಲಿ ಬಿಡುಗಡೆಗೊಳಿಸಿದೆ. ಸಿ-ಹೆಚ್‌ಆರ್ ಎಲೆಕ್ಟ್ರಿಕ್ ಕಾರಿನ ಬೆಲೆಯು ರೂ.24.22 ಲಕ್ಷಗಳಾಗಿದೆ. ಈ ಟೊಯೊಟಾ ಎಲೆಕ್ಟ್ರಿಕ್ ಕಾರು ಒಂದು ಬಾರಿ ಪೂರ್ಣ ಪ್ರಮಾಣದಲ್ಲಿ ಚಾರ್ಚ್ ಮಾಡಿದರೆ 400 ಕಿ.ಮೀ ಚಲಿಸುತ್ತದೆ.

400 ಕಿ.ಮೀ ಮೈಲೇಜ್ ನೀಡುತ್ತದೆ ಟೊಯೊಟಾದ ಈ ಎಲೆಕ್ಟ್ರಿಕ್ ಕಾರು

ಚೀನಾ ಮಾರುಕಟ್ಟೆಯಲ್ಲಿ ಸಿ-ಹೆಚ್‌ಆರ್ ಎಲೆಕ್ಟ್ರಿಕ್ ಕಾರು ಶೂನ್ಯ ಮಾಲಿನ್ಯ ಉತ್ಪಾದಿಸುವ ಮೊದಲ ವಾಹನವಾಗಿದೆ. ಟೊಯೊಟಾ ಕಂಪನಿಯು ತನ್ನ ಎಲೆಕ್ಟ್ರಿಕ್ ವಾಹನಗಳನ್ನು ವಿಸ್ತರಿಸುತ್ತಿದೆ. ಟೊಯೊಟಾ ಕಂಪನಿಯು 2030ರ ವೇಳೆಗೆ ಜಾಗತಿಕವಾಗಿ 5.5 ದಶಲಕ್ಷಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡುವ ಗುರಿಯನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಕಾರಿನಲ್ಲಿ 54.3 ಕಿಲೋವ್ಯಾಟ್ ಸಾಮರ್ಥ್ಯದ ಎಲೆಕ್ಟ್ರಿಕ್ ಮೋಟರ್ ಹೊಂದಿದ್ದು, ಈ 201 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ.

400 ಕಿ.ಮೀ ಮೈಲೇಜ್ ನೀಡುತ್ತದೆ ಟೊಯೊಟಾದ ಈ ಎಲೆಕ್ಟ್ರಿಕ್ ಕಾರು

ಈ ಕಾರಿನಲ್ಲಿ ಲಿ-ಅಯಾನ್ ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಿದ್ದಾರೆ. ಸಿ-ಹೆಚ್‌ಆರ್ ಕಾರು ಒಂದು ಬಾರಿ ಪೂರ್ಣ ಪ್ರಮಾಣ ಚಾರ್ಚ್ ಮಾಡಿದರೆ ಬರೂಬ್ಬರಿ 400 ಕಿ.ಮೀ ಚಲಿಸುತ್ತದೆ. ಸಿ-ಹೆಚ್‌ಆರ್ ಎಲೆಕ್ಟ್ರಿಕ್ ಕಾರು ಕೇವಲ 50 ನಿಮಿಷಗಳಲ್ಲಿ ಶೇ.75 ರಷ್ಟು ಚಾರ್ಜ್ ಆಗುತ್ತದೆ.

MOST READ: ಯಾರೀಸ್ ಕ್ರಾಸ್ ಕಾಂಪ್ಯಾಕ್ಟ್ ಎಸ್‍ಯುವಿಯ ವೀಡಿಯೋ ಬಿಡುಗಡೆಗೊಳಿಸಿದ ಟೊಯೊಟಾ

400 ಕಿ.ಮೀ ಮೈಲೇಜ್ ನೀಡುತ್ತದೆ ಟೊಯೊಟಾದ ಈ ಎಲೆಕ್ಟ್ರಿಕ್ ಕಾರು

ಸಿ-ಹೆಚ್‌ಆರ್ ಎಲೆಕ್ಟ್ರಿಕ್ ಕಾರು ಟೆಸ್ಲಾ ಮಾಡೆಲ್ 3ಕ್ಕೆ ಪೈಪೋಟಿಯನ್ನು ನೀಡಲು ಈ ಕಾರಿಗೆ ಸ್ಪರ್ಧಾತ್ಮಕವಾಗಿ ಬೆಲೆಯನ್ನು ನಿಗದಿಪಡಿಸಲಾಗಿದೆ. ಆದರೆ ಸಿ-ಹೆಚ್‌ಆರ್ ಎಲೆಕ್ಟ್ರಿಕ್ ಕಾರು ನೇರವಾಗಿ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರಿಗೆ ಪೈಪೋಟಿಯನ್ನು ನೀಡುತ್ತದೆ. ಈ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು ಈಗಾಗಲೇ ಭಾರತದಲ್ಲಿ ಬಿಡುಗಡೆಯಾಗಿದೆ.

400 ಕಿ.ಮೀ ಮೈಲೇಜ್ ನೀಡುತ್ತದೆ ಟೊಯೊಟಾದ ಈ ಎಲೆಕ್ಟ್ರಿಕ್ ಕಾರು

ಈ ಟೊಯೊಟಾ ಸಿ-ಹೆಚ್‌ಆರ್ ಎಲೆಕ್ಟ್ರಿಕ್ ಕಾರು ಕ್ರಾಸ್ಒವರ್ ಸ್ಟೈಲಿಂಗ್ ಮತ್ತು ಸ್ಪೋರ್ಟಿ ಲುಕ್ ಅನ್ನು ಹೊಂದಿದೆ. ಈ ಕಾರಿನಲ್ಲಿ ಇವಿ ಬ್ಯಾಡ್ಜ್ ಅನ್ನು ಅಳವಡಿಸಿದ್ದಾರೆ. ಟೊಯೊಟಾ ಸಿ-ಹೆಚ್‌ಆರ್ ಎಲೆಕ್ಟ್ರಿಕ್ ಕಾರಿನ ಒಟ್ಟಾರೆ ವಿನ್ಯಾಸವು ಆಕರ್ಷಕವಾಗಿದೆ.

MOST READ: ಬಿಡುಗಡೆಯಾಯ್ತು ಬಿಎಸ್-6 ಮಹೀಂದ್ರಾ ಅಲ್ಟುರಾಸ್ ಜಿ4 ಎಸ್‍ಯುವಿ

400 ಕಿ.ಮೀ ಮೈಲೇಜ್ ನೀಡುತ್ತದೆ ಟೊಯೊಟಾದ ಈ ಎಲೆಕ್ಟ್ರಿಕ್ ಕಾರು

ಈ ಹೊಸ ಟೊಯೊಟಾ ಸಿ-ಹೆಚ್‌ಆರ್ ಎಲೆಕ್ಟ್ರಿಕ್ ಕಾರಿನ ಇಂಟಿರಿಯರ್ ಪ್ರೀಮಿಯಂ ಲುಕ್ ಅನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಕಾರಿನ ಇಂಟಿರಿಯರ್ ನಲ್ಲಿ 12.3-ಇಂಚಿನ ಡಿಜಿಟಲ್ ಎಲ್‌ಸಿಡಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಟಚ್ ಸ್ಕ್ರೀನ್ ಇನ್ಪೋಟೇನೆಮೆಂಟ್ ಸಿಸ್ಟಂ ಅನ್ನು ಅಳವಡಿಸಿದ್ದಾರೆ.

400 ಕಿ.ಮೀ ಮೈಲೇಜ್ ನೀಡುತ್ತದೆ ಟೊಯೊಟಾದ ಈ ಎಲೆಕ್ಟ್ರಿಕ್ ಕಾರು

ಇದರೊಂದಿಗೆ ಪ್ರೀಮಿಯಂ ಮೆಟಾಲಿಕ್ ಎಕ್ಸೆಟ್ ಗಳು, ಬಿಳಿ ಬಣ್ಣದ ಸೀಟನ್ನು ಅಳವಡಿಸಿದ್ದಾರೆ. ಪಿಯಾನೊ ಬ್ಲ್ಯಾಕ್ ಡ್ಯಾಶ್ ಬೋರ್ಡ್ ಅನ್ನು ಹೊಂದಿದೆ ಮಲ್ಟಿ ಫಂಕ್ಷನಲ್ ಸ್ಟೀಯರಿಂಗ್ ವ್ಹೀಲ್ ಅನ್ನು ಹೊಂದಿದೆ. ಇದರೊಂದಿಗೆ ಮೌಂಟಡ್ ಕಂಟ್ರೋಲ್, ಹೊಸದಾಗಿ ವಿನ್ಯಾಸಗೊಳಿಸಲಾದ ಗೇರ್ ಸೆಲೆಕ್ಟರ್ ಅನ್ನು ಹೊಂದಿದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

400 ಕಿ.ಮೀ ಮೈಲೇಜ್ ನೀಡುತ್ತದೆ ಟೊಯೊಟಾದ ಈ ಎಲೆಕ್ಟ್ರಿಕ್ ಕಾರು

ಈ ಟೊಯೊಟಾ ಎಲೆಕ್ಟ್ರಿಕ್ ಕಾರಿನ ಬಾನೆಟ್ ನ ಕೆಳಗೆ ಎಲೆಕ್ಟ್ರಿಕ್ ಮೋಟಾರ್ ಅನ್ನು ಜೋಡಿಸಲಾಗಿದೆ. ಈ ಕಾರಿನಲ್ಲಿ ಸ್ವೀಪ್‌ಬ್ಯಾಕ್ ಹೆಡ್‌ಲ್ಯಾಂಪ್‌ಗಳು, ಹೊಸ ಲೋವರ್ ಗ್ರಿಲ್ ಮತ್ತು ಬೋಲ್ಡರ್ ಬಂಪರ್ ಮತ್ತು ಕೂಪ್ ರೂಫ್‌ಲೈನ್ ಅನ್ನು ಅಳವಡಿಸಿದೆ.

400 ಕಿ.ಮೀ ಮೈಲೇಜ್ ನೀಡುತ್ತದೆ ಟೊಯೊಟಾದ ಈ ಎಲೆಕ್ಟ್ರಿಕ್ ಕಾರು

ಈ ಎಲೆಕ್ಟ್ರಿಕ್ ಕಾರಿನ ಹಿಂಭಾಗದಲ್ಲಿ ಎಲ್ಇಡಿ ಟೇಲ್ ಲ್ಯಾಂಪ್ ಅನ್ನು ಅಳವಡಿಸಿದ್ದಾರೆ. ಸದ್ಯಕ್ಕೆ ಈ ಕಾರು ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಭಾರತದಲ್ಲಿ ಈ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗುವ ಬಗ್ಗೆ ಯಾವುದೇ ಮಾಹಿತಿಗಳಿಲ್ಲ.

Most Read Articles

Kannada
Read more on ಟೊಯೊಟಾ toyota
English summary
Toyota C-HR Electric Launched In China With 400 Km Range. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X