ಮಾರಾಟವಾಗದಿದ್ದರೆ ರಫ್ತಾಗಳಲಿವೆ ಬಿಎಸ್ 4 ವಾಹನಗಳು

ಏಪ್ರಿಲ್ 1ರಿಂದ ಭಾರತದಲ್ಲಿ ಬಿಎಸ್ 6 ಮಾಲಿನ್ಯ ನಿಯಮಗಳು ಜಾರಿಗೆ ಬರಲಿವೆ. ಈ ನಿಯಮಗಳು ಜಾರಿಗೆ ಬಂದ ನಂತರ ಬಿಎಸ್ 4 ವಾಹನಗಳನ್ನು ದೇಶದಲ್ಲಿ ಮಾರಾಟ ಮಾಡುವಂತಿಲ್ಲ. ಆದರೆ ಆಟೋಮೊಬೈಲ್ ಕಂಪನಿಗಳು ಇನ್ನೂ ಸಾವಿರಾರು ಕೋಟಿ ಮೌಲ್ಯದ ಬಿಎಸ್ 4 ವಾಹನಗಳನ್ನು ಹೊಂದಿವೆ.

ಮಾರಾಟವಾಗದಿದ್ದರೆ ರಫ್ತಾಗಳಲಿವೆ ಬಿಎಸ್ 4 ವಾಹನಗಳು

ಬಿಎಸ್ 4 ವಾಹನಗಳನ್ನು ಮಾರಾಟ ಮಾಡಲು ಮಾರ್ಚ್ 31ರವರೆಗೆ ಗಡುವು ನೀಡಲಾಗಿದೆ. ಈ ಗಡುವನ್ನು ವಿಸ್ತರಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಾನ್ಯ ಮಾಡಿಲ್ಲ. ಕರೋನಾ ವೈರಸ್ ಹರಡದಂತೆ ತಡೆಯಲು ದೇಶಾದ್ಯಂತ ಲಾಕ್‌ಡೌನ್ ಘೋಷಿಸಲಾಗಿರುವ ಕಾರಣಕ್ಕೆ ಸದ್ಯಕ್ಕೆ ಯಾವುದೇ ವಾಹನಗಳನ್ನು ಮಾರಾಟ ಮಾಡುತ್ತಿಲ್ಲ.

ಮಾರಾಟವಾಗದಿದ್ದರೆ ರಫ್ತಾಗಳಲಿವೆ ಬಿಎಸ್ 4 ವಾಹನಗಳು

ಸುಪ್ರೀಂ ಕೋರ್ಟ್ ನಾಳೆ ಈ ಅರ್ಜಿಯ ವಿಚಾರಣೆ ನಡೆಸಲು ತೀರ್ಮಾನಿಸಿದೆ. ಸುಪ್ರೀಂ ಕೋರ್ಟ್ ನಲ್ಲಿ ಯಾವುದೇ ಪರಿಹಾರ ಸಿಗದಿದ್ದರೆ ಆಟೋ ಮೊಬೈಲ್ ಕಂಪನಿಗಳು ತಮ್ಮಲ್ಲಿ ಮಾರಾಟವಾಗದೇ ಉಳಿದಿರುವ ಬಿಎಸ್ 4 ವಾಹನಗಳನ್ನು ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ ಹಾಗೂ ಆಫ್ರಿಕಾದ ದೇಶಗಳಿಗೆ ರಫ್ತು ಮಾಡುವ ಸಾಧ್ಯತೆಗಳಿವೆ.

ಮಾರಾಟವಾಗದಿದ್ದರೆ ರಫ್ತಾಗಳಲಿವೆ ಬಿಎಸ್ 4 ವಾಹನಗಳು

ಭಾರತವು ವಿಶ್ವದಲ್ಲೇ ಅತಿ ಹೆಚ್ಚಿನ ಪ್ರಮಾಣದಲ್ಲಿ ದ್ವಿಚಕ್ರ ವಾಹನಗಳನ್ನು ರಫ್ತು ಮಾಡುವ ದೇಶವಾಗಿದೆ. ಈ ಕಾರಣಕ್ಕೆ ಮಾರಾಟವಾಗದೇ ಉಳಿದಿರುವ ವಾಹನಗಳನ್ನು ನೆರೆಯ ದೇಶಗಳಿಗೆ ರಫ್ತು ಮಾಡುವುದು ಅಷ್ಟು ದೊಡ್ಡ ವಿಷಯವಲ್ಲ. ಆದರೆ ಪ್ರಯಾಣಿಕ ಕಾರು ಹಾಗೂ ವಾಣಿಜ್ಯ ವಾಹನಗಳನ್ನು ರಫ್ತು ಮಾಡುವುದು ಸವಾಲಿನ ಕೆಲಸವಾಗಿದೆ.

ಮಾರಾಟವಾಗದಿದ್ದರೆ ರಫ್ತಾಗಳಲಿವೆ ಬಿಎಸ್ 4 ವಾಹನಗಳು

2017ರಲ್ಲಿ ಭಾರತದಲ್ಲಿ ಬಿಎಸ್ 3 ನಿಂದ ಬಿಎಸ್ 4 ನಿಯಮಗಳನ್ನು ಜಾರಿಗೆ ತಂದಾಗ ಮಾರಾಟವಾಗದಿದ್ದ ವಾಹನಗಳನ್ನು ನೇಪಾಳ, ಬಾಂಗ್ಲಾದೇಶ ಹಾಗೂ ಶ್ರೀಲಂಕಾಗಳಿಗೆ ರಫ್ತು ಮಾಡಲಾಗಿತ್ತು. ಆ ದೇಶಗಳಲ್ಲಿ ಮಾರಾಟವಾಗುವ ವಾಹನಗಳು, ಭಾರತದಲ್ಲಿರುವ ವಾಹನಗಳು ಬಹುತೇಕ ಒಂದೇ ಆಗಿವೆ.

ಮಾರಾಟವಾಗದಿದ್ದರೆ ರಫ್ತಾಗಳಲಿವೆ ಬಿಎಸ್ 4 ವಾಹನಗಳು

ಆ ದೇಶಗಳ ಮಾಲಿನ್ಯ ನಿಯಮಗಳು ಹಾಗೂ ಸುರಕ್ಷತಾ ಮಾನದಂಡಗಳು ಸಹ ಹೆಚ್ಚಿನ ವ್ಯತ್ಯಾಸವನ್ನು ಹೊಂದಿಲ್ಲ. ಲಾಕ್‌ಡೌನ್ ಮುಗಿದ ನಂತರ ವಾಹನ ತಯಾರಕ ಕಂಪನಿಗಳು ಈ ಬಗ್ಗೆ ನಿರ್ಧಾರ ಕೈಗೊಳ್ಳಬಹುದು. ಸುಪ್ರೀಂ ಕೋರ್ಟ್ ನೀಡುವ ತೀರ್ಪಿನ ನಂತರ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು.

ಮಾರಾಟವಾಗದಿದ್ದರೆ ರಫ್ತಾಗಳಲಿವೆ ಬಿಎಸ್ 4 ವಾಹನಗಳು

ಭಾರತದಲ್ಲಿ ಇನ್ನೂ 7 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು, 15,000ಕ್ಕೂ ಹೆಚ್ಚು ಪ್ರಯಾಣಿಕ ವಾಹನಗಳು ಹಾಗೂ 12,000ಕ್ಕೂ ಹೆಚ್ಕು ವಾಣಿಜ್ಯ ವಾಹನಗಳು ಮಾರಾಟವಾಗದೇ ಉಳಿದಿವೆ. ಹೆಚ್ಚಿನ ವಾಹನಗಳಿರುವುದರಿಂದ ರಫ್ತು ಮಾಡುವ ಸವಾಲು ಕೂಡ ಎದುರಾಗಲಿದೆ ಎಂದು ಕೈಗಾರಿಕಾ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

Most Read Articles

Kannada
English summary
Unsold BS4 vehicles might be exported if deadline not extended. Read in Kannada.
Story first published: Friday, March 27, 2020, 14:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X