ಹೊಸ ಈಕ್ವೇಟರ್ ಎಸ್‍ಯುವಿಯ ಟಿವಿಸಿ ಬಿಡುಗಡೆಗೊಳಿಸಿದ ಫೋರ್ಡ್

ಅಮೆರಿಕಾ ಮೂಲದ ವಾಹನ ತಯಾರಕ ಕಂಪನಿಯಾದ ಪೋರ್ಡ್ ಹಲವಾರು ಜನಪ್ರಿಯ ಎಸ್‍ಯುವಿಗಳನ್ನು ಒಳಗೊಂಡಿವೆ. ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಪೋರ್ಡ್ ಎಸ್‍ಯುವಿಗಳು ಭರ್ಜರಿ ಬೇಡಿಕೆಯೊಂದಿಗೆ ಉತ್ತಮವಾಗಿ ಮಾರಾಟವಾಗುತ್ತಿವೆ.

ಹೊಸ ಈಕ್ವೇಟರ್ ಎಸ್‍ಯುವಿಯ ಟಿವಿಸಿ ಬಿಡುಗಡೆಗೊಳಿಸಿದ ಫೋರ್ಡ್

ಜೀಪ್ ಬ್ರ್ಯಾಂಡ್ ಬಳಿಕ ಫೋರ್ಡ್ ಕೂಡ ಹಲವು ಜನಪ್ರಿಯ ಆಫ್-ರೋಡ್ ಎಸ್‍ಯುವಿಗಳನ್ನು ಹೊಂದಿವೆ. ಈ ಜಾಗತಿಕ ಮಾಟ್ಟದ ದೈತ್ಯ ಕಂಪನಿಯಾದ ಪೋರ್ಡ್ ಚೀನಾ ಮಾರುಕಟ್ಟೆಯಲ್ಲಿ ಸ್ಥಳೀಯ ಕಂಪನಿಯ ಜೊತೆ ಕೈಜೋಡಿಸಿ ತನ್ನ ಹೊಸ ಕಾರುಗಳನ್ನು ತಯಾರಿಸುತ್ತಿದೆ. ಚೀನಾದಲ್ಲಿ ಸ್ಥಳೀಯವಾಗಿ ಈ ಎರಡು ಕಂಪನಿಗಳು ಜಂಟಿಯಾಗಿ ಕಾರುಗಳ ಉತ್ಪಾದನೆಯಲ್ಲಿ ತೊಡಗಿದೆ. ಇದರ ಮೂಲಕ ಫೋರ್ಡ್ ಚೀನಾ ಮಾರುಕಟ್ಟೆಯಲ್ಲಿ ಪಾರುಪತ್ಯ ಸಾಧಿಸಲು ಸಜ್ಜಾಗುತ್ತಿದೆ.

ಹೊಸ ಈಕ್ವೇಟರ್ ಎಸ್‍ಯುವಿಯ ಟಿವಿಸಿ ಬಿಡುಗಡೆಗೊಳಿಸಿದ ಫೋರ್ಡ್

ಇತರ ಕಂಪನಿಗಳು ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಹೊರತರುವಲ್ಲಿ ಹೆಚ್ಚಿನ ಹೂಡಿಕೆ ಮಾಡುವಾಗ ಫೋರ್ಡ್ ಇತ್ತೀಚೆಗೆ ತನ್ನ ಎಸ್‍ಯುವಿ ಪೋರ್ಟ್ಫೋಲಿಯೊವನ್ನು ಬಲಪಡಿಸುತ್ತಿದೆ. ಪೋರ್ಡ್ ಚೀನಾದಲ್ಲಿ ಬ್ಲೂ ಓವಲ್ ಈಕ್ವೇಟರ್ ಎಂದು ಕರೆಯಲ್ಪಡುವ ಮೂರು-ಸಾಲಿನ 7-ಸೀಟರ್ ಎಸ್‍ಯುವಿಯನ್ನು ಇತ್ತೀಚೆಗೆ ಅನಾವರಣಗೊಳಿಸಿತು.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಹೊಸ ಈಕ್ವೇಟರ್ ಎಸ್‍ಯುವಿಯ ಟಿವಿಸಿ ಬಿಡುಗಡೆಗೊಳಿಸಿದ ಫೋರ್ಡ್

ಇದೀಗ ಫೋರ್ಡ್ ಕಂಪನಿಯು ಈಕ್ವೇಟರ್ ಎಸ್‍ಯುವಿಯ ಟಿವಿಸಿಯನ್ನು ಬಿಡುಗಡೆಗೊಳಿಸಿದೆ. ಈ ಆಕರ್ಷಕ ಟಿವಿಸಿಯಲ್ಲಿ ಫೋರ್ಡ್ ಈಕ್ವೇಟರ್ ಎಸ್‍ಯುವಿಯ ಬಗ್ಗೆ ವಿವರವಾಗಿ ತಿಳಿಸಿದ್ದಾರೆ. ಈ ಫೋರ್ಡ್ ಈಕ್ವೇಟರ್ ಎಸ್‍ಯುವಿಯು 4,905 ಮಿ.ಮೀ ಉದ್ದ, 1,930 ಮಿ.ಮೀ ಅಗಲ ಮತ್ತು 1,755 ಮಿ.ಮೀ ಎತ್ತರವನ್ನು ಹೊಂದಿದೆ. ಇನ್ನು ಈ ಎಸ್‍ಯುವಿ 2,865 ಮಿ.ಮೀ ಉದ್ದದ ವ್ಹೀಲ್ ಬೇಸ್ ಅನ್ನು ಹೊಂದಿದೆ.

ಹೊಸ ಈಕ್ವೇಟರ್ ಎಸ್‍ಯುವಿಯ ಟಿವಿಸಿ ಬಿಡುಗಡೆಗೊಳಿಸಿದ ಫೋರ್ಡ್

ಈ ಎಸ್‍ಯುವಿಯು ಎಂಡೀವರ್ ಮಾದರಿಗಿಂತ ದೊಡ್ಡದಾಗಿದೆ. ಆದರೆ ಎಕ್ಸ್‌ಪ್ಲೋರರ್ ಎಸ್‍ಯುವಿಗಿಂತ ಸ್ವಲ್ಪ ಚಿಕ್ಕದಾಗಿದೆ. ಈ ಮಾದರಿಯು ಚೀನಾ ಮಾರುಕಟ್ಟೆಯಲ್ಲಿ ಜೀಪ್ ಗ್ರ್ಯಾಂಡ್ ಕಮಾಂಡರ್ ಎಸ್‍ಯುವಿಗೆ ನೇರವಾಗಿ ಪೈಪೋಟಿ ನೀಡುತ್ತದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಹೊಸ ಈಕ್ವೇಟರ್ ಎಸ್‍ಯುವಿಯ ಟಿವಿಸಿ ಬಿಡುಗಡೆಗೊಳಿಸಿದ ಫೋರ್ಡ್

ಫೋರ್ಡ್ ಈಕ್ವೇಟರ್ ಎಸ್‍ಯುವಿಯ ವಿನ್ಯಾಸದ ಬಗ್ಗೆ ಹೇಳುವುದಾದರೆ, ದೊಡ್ಡ ಯು-ಆಕಾರದ ಬ್ಲ್ಯಾಕ್ ಮುಂಭಾಗದ ಗ್ರಿಲ್, ಬೂಮರಾಂಗ್ ಆಕಾರದಲ್ಲಿ ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್ ನೊಂದಿಗೆ ವಿಭಜಿತ ಎಲ್ಇಡಿ ಹೆಡ್ಲ್ಯಾಂಪ್ ಕ್ಲಸ್ಟರ್, ಬಂಪರ್ ನಲ್ಲಿ ಅಳವಡಿಸಲಾದ ಟ್ರೈ-ಬೀಮ್ ಹೆಡ್ ಲ್ಯಾಂಪ್, ಲೋ ಏರ್ ಟೆಕ್ ಒಳಗೊಂಡಿದೆ.

ಹೊಸ ಈಕ್ವೇಟರ್ ಎಸ್‍ಯುವಿಯ ಟಿವಿಸಿ ಬಿಡುಗಡೆಗೊಳಿಸಿದ ಫೋರ್ಡ್

ಇನ್ನು ಈ ಈಕ್ವೇಟರ್ ಎಸ್‍ಯುವಿಯು ಸ್ಕಿಡ್ ಪ್ಲೇಟ್ ಅಪ್ ಫ್ರಂಟ್ ಮತ್ತು ರಿಯರ್, ಡ್ಯುಯಲ್ ಎಕ್ಸಾಸ್ಟ್ ಪೈಪ್‌ಗಳು, ಕ್ರೋಮ್ಡ್ ವಿಂಡೋ ಲೈನ್, ಎಲ್ಇಡಿ ಟೈಲ್ ಲ್ಯಾಂಪ್‌ಗಳು ಮತ್ತು ಇತ್ಯಾದಿ ಫೀಚರ್ ಗಳನ್ನು ಒಳಗೊಂಡಿವೆ.

ಹೊಸ ಈಕ್ವೇಟರ್ ಎಸ್‍ಯುವಿಯ ಟಿವಿಸಿ ಬಿಡುಗಡೆಗೊಳಿಸಿದ ಫೋರ್ಡ್

ಇನ್ನು ಇದರಲ್ಲಿ 12.3-ಇಂಚಿನ ಡಿಸ್ ಪೇ ಮತ್ತು ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಇನ್ನು ಇದರ ಒಳಭಾಗ ಡ್ಯುಯಲ್-ಟೋನ್ ಥೀಮ್ ನೊಂದಿಗೆ ಐಷಾರಾಮಿ ಲುಕ್ ಅನ್ನು ಹೊಂದಿದೆ.

ಈಕ್ವೇಟರ್ ನಲ್ಲಿ ಡ್ಯುಯಲ್-ಪೇನ್ ಸನ್‌ರೂಫ್, ಮಧ್ಯದ ಸಾಲಿಗೆ ವೈಯಕ್ತಿಕ ಆರ್ಮ್‌ಸ್ಟ್ರೆಸ್ಟ್, ಕ್ವಿಲ್ಟೆಡ್ ಡ್ಯಾಶ್ ಸ್ಟಿಚಿಂಗ್, ಲೆದರ್ ಸೀಟ್ ಅಪ್ಹೋಲ್ಸ್ಟರಿ ಮತ್ತು ಮಲ್ಟಿ-ಫಂಕ್ಷನಲ್ ಸ್ಟೀರಿಂಗ್ ವ್ಹೀಲ್ ಅನ್ನು ಅಳವಡಿಸಲಾಗಿದೆ.

ಹೊಸ ಈಕ್ವೇಟರ್ ಎಸ್‍ಯುವಿಯ ಟಿವಿಸಿ ಬಿಡುಗಡೆಗೊಳಿಸಿದ ಫೋರ್ಡ್

ಇನ್ನು ಈ ಹೊಸ ಫೋರ್ಡ್ ಈಕ್ವೇಟರ್ ಎಸ್‍ಯುವಿಯಲ್ಲಿ 2.0-ಲೀಟರ್ ನಾಲ್ಕು-ಪಾಟ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 221 ಬಿಹೆಚ್‍ಪಿ ಪವರ್ ಮತ್ತು 360 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೊಸ ಈಕ್ವೇಟರ್ ಎಸ್‍ಯುವಿಯ ಟಿವಿಸಿ ಬಿಡುಗಡೆಗೊಳಿಸಿದ ಫೋರ್ಡ್

ಈ ಎಂಜಿನ್ ನೊಂದಿಗೆ 6-ಸ್ಫೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಇದರಲ್ಲಿ ಆಲ್-ವ್ಹೀಲ್-ಡ್ರೈವ್ ಕಾನ್ಫಿಗರೇಶನ್ ಅನ್ನು ಆಯ್ಕೆಯಾಗಿ ಪಡೆಯಬಹುದು. ಈ ಎಸ್‍ಯುವಿಯು ಚೀನಾದಲ್ಲಿ ಯಶಸ್ವಿಗೊಂಡರೆ ಇತರ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿಯು ಬಿಡುಗಡೆಗೊಳಿಸಬಹುದು.

Most Read Articles

Kannada
Read more on ಫೋರ್ಡ್ ford
English summary
2021 Ford Equator Family Suv Detailed In Official Tvc. Read In Kananda.
Story first published: Saturday, March 27, 2021, 19:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X