ಐಷಾರಾಮಿ ಬಿಎಂಡಬ್ಲ್ಯು ಕಾರು ಖರೀದಿಸಿದ ನಟಿ ಕಾರುಣ್ಯ ರಾಮ್

ಬಿಗ್ ಬಾಸ್ ಕನ್ನಡ ಸೀಸನ್ 5 ಸ್ಪರ್ಧಿ ಹಾಗೂ ಕನ್ನಡ ಚಿತ್ರರಂಗದ ಖ್ಯಾತ ನಟಿ ಕಾರುಣ್ಯ ರಾಮ್‌ ಅವರು ಹೊಸ ಐಷಾರಾಮಿ ಬಿಎಂಡಬ್ಲ್ಯು 3-ಕಾರನ್ನು ಖರೀದಿಸಿದ್ದಾರೆ. ಇದು ಬಿಎಂಡಬ್ಲ್ಯುಯ 3-ಸೀರಿಸ್ ಗ್ರ್ಯಾನ್ ಲಿಮೊಸಿನ್ ಮಾದರಿಯಾಗಿದೆ.

ಐಷಾರಾಮಿ ಬಿಎಂಡಬ್ಲ್ಯು ಕಾರು ಖರೀದಿಸಿದ ನಟಿ ಕಾರುಣ್ಯಾ ರಾಮ್

ಇದು ನನ್ನ ಕನಸಾಗಿತ್ತು, ಆಮೇಲೆ ಗುರಿಯಾಯ್ತು. ಈಗ ಇದು ಸಾಧನೆಯಾಗಿದೆ. ಸಾಕಾರಗೊಳಿಸಲು ಕೆಲವರು ತುಂಬ ಶ್ರಮಪಡುತ್ತಾರೆ. ನನ್ನ ದೊಡ್ಡ ಕನಸುಗಳ ಪಟ್ಟಿಯಲ್ಲಿರುವ ಸಣ್ಣ ಸಾಧನೆ ಇದು ಅಂತ ಹೇಳುವೆ. ಉಳಿದವುಗಳನ್ನು ಇನ್ನು ಮುಂದೆ ಈಢೇರಿಸಿಕೊಳ್ಳಬೇಕಿದೆ. ಇದು ನನ್ನ ಮೊದಲ ಐಷಾರಾಮಿ ಕಾರು. ನನಗೆ ಸದಾ ಹಾರೈಸುತ್ತ, ಬೆಂಬಲಿಸುತ್ತ ಬಂದಿರುವವರೆಲ್ಲರಿಗೂ ಧನ್ಯವಾದಗಳ ಎಂದು ನಟಿ ಕಾರುಣ್ಯ ರಾಮ್ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದಾರೆ.

ಐಷಾರಾಮಿ ಬಿಎಂಡಬ್ಲ್ಯು ಕಾರು ಖರೀದಿಸಿದ ನಟಿ ಕಾರುಣ್ಯಾ ರಾಮ್

ಈ ಪೋಸ್ಟ್ ಕೆಳಗಡೆ ಕಾಮೆಂಟ್ ಮೂಲಕ ಅನೇಕ ಸೆಲಬ್ರಿಟಿಗಳು ಮತ್ತು ಅಭಿಮಾನಿಗಳು ಕಾರುಣ್ಯಗೆ ಶುಭ ಹಾರೈಸಿದ್ದಾರೆ. ಇನ್ನು ಅಪ್ಪ-ಅಮ್ಮ, ತಂಗಿ ಜೊತೆಗೆ ಹೋಗಿ ಕಾರುಣ್ಯ ಅವರು ಬಿಎಂಡಬ್ಲ್ಯು ಕಾರನ್ನು ಖರೀದಿಸಿದ್ದಾರೆ.

MOST READ: ಐಷಾರಾಮಿ ಬಿಎಂಡಬ್ಲ್ಯು ಎಕ್ಸ್7 ಕಾರು ಚಾಲನೆ ವೇಳೆ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್

ಐಷಾರಾಮಿ ಬಿಎಂಡಬ್ಲ್ಯು ಕಾರು ಖರೀದಿಸಿದ ನಟಿ ಕಾರುಣ್ಯಾ ರಾಮ್

ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯವಾಗಿರುವ ಕಾರುಣ್ಯಾ ಸಿನಿಮಾಗಳ ಬಗ್ಗೆ, ಯಾವುದಾದಾರೂ ವಿಷಯದ ಬಗ್ಗೆ ಅವರ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇನ್ನು ಕಾರುಣ್ಯಾ ಅವರು 'ಮನೆ ಮಾರಾಟಕ್ಕಿದೆ' ಸಿನಿಮಾದಲ್ಲಿ ನಟಿಸಿದ್ದರು. 'ರೆಮೋ', 'ಪೆಟ್ರೋಮ್ಯಾಕ್ಸ್' ಚಿತ್ರದಲ್ಲಿಯೂ ಕಾರುಣ್ಯಾ ನಟಿಸುತ್ತಿದ್ದಾರೆ.

ಐಷಾರಾಮಿ ಬಿಎಂಡಬ್ಲ್ಯು ಕಾರು ಖರೀದಿಸಿದ ನಟಿ ಕಾರುಣ್ಯಾ ರಾಮ್

ಅವರು ಈ ಹೊಸ ಬಿಎಂಡಬ್ಲ್ಯು ಕಾರನ್ನು ಡ್ರೈವ್ ಮಾಡುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇನ್ನು ನಟಿ ಕಾರುಣ್ಯ ರಾಮ್ ಖರೀದಿಸಿರುವ ಕಾರು ಬಿಎಂಡಬ್ಲ್ಯುಯ 3-ಸೀರಿಸ್ ಗ್ರ್ಯಾನ್ ಲಿಮೊಸಿನ್ 330 ಎಲ್ಐ ಮಾದರಿಯಾಗಿರಬಹುದು. ಈ ಐಷಾರಾಮಿ ಕಾರಿನ ಆರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.51.50 ಲಕ್ಷಗಳಾಗಿದೆ.

ಐಷಾರಾಮಿ ಬಿಎಂಡಬ್ಲ್ಯು ಕಾರು ಖರೀದಿಸಿದ ನಟಿ ಕಾರುಣ್ಯಾ ರಾಮ್

ಬಿಎಂಡಬ್ಲ್ಯುಯ 3-ಸೀರಿಸ್ ಗ್ರ್ಯಾನ್ ಲಿಮೊಸಿನ್ ಕಾರಿನ ಬಗ್ಗೆ ಹೇಳುವುದಾದರೆ, ಇದರಲ್ಲಿ ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್ಇಡಿ ಡಿಆರ್‌ಎಸ್, ಟರ್ನ್ ಇಂಡಿಕೇಟರ್, ಆಕರ್ಷಕವಾದ ಫ್ರಂಟ್ ಗ್ರಿಲ್, ಸ್ಟೈಲಿಷ್ ಆಗಿರುವ ಡ್ಯುಯಲ್ ಟೋನ್ ಅಲಾಯ್ ವೀಲ್ಹ್, 3ಡಿ ಎಲ್ಇಡಿ ಲೈಟ್ಸ್ ಮತ್ತು ಪನೊರಮಿಕ್ ಸನ್‌ರೂಫ್ ಹೊಂದಿದೆ.

ಐಷಾರಾಮಿ ಬಿಎಂಡಬ್ಲ್ಯು ಕಾರು ಖರೀದಿಸಿದ ನಟಿ ಕಾರುಣ್ಯಾ ರಾಮ್

ಈ ಹೊಸ ಕಾರಿನ ಒಳಭಾಗವು ಕೂಡಾ ಸಾಕಷ್ಟು ಆಕರ್ಷಕವಾಗಿದೆ. ಲಾಂಗ್ ವೀಲ್ಹ್‌ಬೆಸ್ ಪರಿಣಾಮ ಮುಂಭಾಗದ ಮತ್ತು ಹಿಂಭಾಗದ ಪ್ರಯಾಣಿಕರಿಗೆ ಅರಾಮದಾಯಕವಾದ ಕ್ಯಾಬಿನ್, ಪ್ರೀಮಿಯಂ ಲೆದರ್ ಆಸನಗಳು, 10.25 ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ, ಐಡ್ರೈವ್ ಟೆಕ್ನಾಲಜಿ ಪ್ರೇರಣೆಯೊಂದಿಗೆ ಆ್ಯಪಲ್ ಕಾರ್‌ಪ್ಲೇ ಮತ್ತು ಅಂಡ್ರಾಯಿಡ್ ಆಟೋವನ್ನು ಒಳಗೊಂಡಿದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಇದಲ್ಲದೆ ಈ ಹೊಸ ಕಾರಿನಲ್ಲಿ ಮಲ್ಟಿ ಜೋನ್ ಕ್ಲೈಮೆಟ್ ಕಂಟ್ರೋಲ್, ವೈರ್‌ಲೆಸ್ ಚಾರ್ಜರ್, ಆ್ಯಂಬಿಯೆಂಟ್ ಲೈಟಿಂಗ್, ಕ್ರೂಸ್ ಕಂಟ್ರೊಲ್, ಸ್ಟ್ರೀರಿಂಗ್ ಮೌಟೆಂಡ್ ಕಂಟ್ರೋಲ್ಸ್ ಸೇರಿದಂತೆ ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ನೀಡುವ ಹಲವಾರು ಫೀಚರ್ಸ್‌ಗಳನ್ನು ಹೊಂಇದ್ವೆ

ಐಷಾರಾಮಿ ಬಿಎಂಡಬ್ಲ್ಯು ಕಾರು ಖರೀದಿಸಿದ ನಟಿ ಕಾರುಣ್ಯಾ ರಾಮ್

ಬಿಎಂಡಬ್ಲ್ಯುಯ 3-ಸೀರಿಸ್ ಗ್ರ್ಯಾನ್ ಲಿಮೊಸಿನ್ ಕಾರಿನಲ್ಲಿ 2.0-ಲೀಟರ್ ಟ್ವಿನ್ ಟರ್ಬೋ ಪೆಟ್ರೋಲ್ ಎಂಜಿನ್ ಅನ್ನು ಮತ್ತು 320ಎಲ್‌ಡಿ ಲಗ್ಷುರಿ ಲೈನ್ ಮಾದರಿಯು 2.0-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ನೀಡಲಾಗಿದೆ.

ಐಷಾರಾಮಿ ಬಿಎಂಡಬ್ಲ್ಯು ಕಾರು ಖರೀದಿಸಿದ ನಟಿ ಕಾರುಣ್ಯಾ ರಾಮ್

ಇದರಲ್ಲಿ2.0-ಲೀಟರ್ ಟ್ವಿನ್ ಟರ್ಬೋ ಪೆಟ್ರೋಲ್ ಎಂಜಿನ್ 258-ಬಿಎಚ್‌ಪಿ ಪವರ್ ಮತ್ತು 400-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು 2.0-ಲೀಟರ್ ಡೀಸೆಲ್ ಎಂಜಿನ್ 188-ಬಿಎಚ್‌ಪಿ ಪವರ್ ಮತ್ತು 400-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಐಷಾರಾಮಿ ಬಿಎಂಡಬ್ಲ್ಯು ಕಾರು ಖರೀದಿಸಿದ ನಟಿ ಕಾರುಣ್ಯಾ ರಾಮ್

ಈ ಐಷರಾಮಿ ಬಿಎಂಡಬ್ಲ್ಯುಯ 3-ಸೀರಿಸ್ ಗ್ರ್ಯಾನ್ ಲಿಮೊಸಿನ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಮರ್ಸಿಡಿಸ್ ಬೆಂಝ್ ಸಿ ಕ್ಲಾಸ್ ಮತ್ತು ವೊಲ್ವೊ ಎಸ್60 ಕಾರುಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Actress Karunyaram Buys New Bmw Car. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X