ನಮ್ಮ ಬೆಂಗಳೂರಿನಲ್ಲಿ ಪ್ರದರ್ಶನಗೊಂಡ ಬೆಂಟ್ಲಿ ಹೊಸ ಕಾರುಗಳು

ಬೆಂಟ್ಲಿ ಇಂಡಿಯಾ 2021ರ ಹೊಸ ಬೆಂಟಾಯ್ಗಾ ಹಾಗೂ ಫ್ಲೈಯಿಂಗ್ ಸ್ಪರ್ ಮಾದರಿಗಳನ್ನು ಬೆಂಗಳೂರಿನಲ್ಲಿ ಪ್ರದರ್ಶಿಸಿದೆ. ಶ್ರೀಮಂತ ಗ್ರಾಹಕರನ್ನು ತಲುಪಲು ಕಂಪನಿಯು ಭಾರತದಾದ್ಯಂತ ಈ ಎರಡೂ ಮಾದರಿಗಳೊಂದಿಗೆ ಪ್ರವಾಸವನ್ನು ಹಮ್ಮಿಕೊಂಡಿದೆ.

ನಮ್ಮ ಬೆಂಗಳೂರಿನಲ್ಲಿ ಪ್ರದರ್ಶನಗೊಂಡ ಬೆಂಟ್ಲಿ ಹೊಸ ಕಾರುಗಳು

ಈ ಕಾರುಗಳನ್ನು ಖರೀದಿಸ ಬಯಸುವವರು ತಮ್ಮ ನಗರಗಳಲ್ಲಿ ಈ ಕಾರಿನಲ್ಲಿರುವ ಐಷಾರಾಮಿ ಅಂಶಗಳನ್ನು ನೋಡಿ ಆನಂದಿಸಬಹುದು. ಬೆಂಟ್ಲಿ ಕಂಪನಿಯು ಬೆಂಟಾಯ್ಗಾ ಐಷಾರಾಮಿ ಎಸ್‌ಯುವಿಯ 20,000 ಯುನಿಟ್ ಉತ್ಪಾದನೆಯ ಮೈಲಿಗಲ್ಲನ್ನು ದಾಟಿದೆ. ಬೆಂಟ್ಲಿ ಕಂಪನಿಯು ಇತ್ತೀಚೆಗಷ್ಟೇ ದೇಶಿಯ ಮಾರುಕಟ್ಟೆಯಲ್ಲಿ ಹೊಸ ಬೆಂಟಾಯ್ಗಾ ಎಸ್‌ಯುವಿಯನ್ನು ಬಿಡುಗಡೆಗೊಳಿಸಿದೆ.

ನಮ್ಮ ಬೆಂಗಳೂರಿನಲ್ಲಿ ಪ್ರದರ್ಶನಗೊಂಡ ಬೆಂಟ್ಲಿ ಹೊಸ ಕಾರುಗಳು

ಈ ಎಸ್‌ಯುವಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.4.01 ಕೋಟಿಗಳಾಗಿದೆ. ಓನಿಕ್ಸ್ ಬ್ಲ್ಯಾಕ್ ಎಂಬ ಕಪ್ಪು ಬಣ್ಣದಲ್ಲಿರುವ ಈ ಎಸ್‌ಯುವಿಯಲ್ಲಿ ಅಳವಡಿಸಲಾಗಿರುವ 4.0-ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ ಪೆಟ್ರೋಲ್ ವಿ 8 ಯುನಿಟ್ 6000 ಆರ್‌ಪಿಎಂನಲ್ಲಿ ಗರಿಷ್ಠ 542 ಬಿಹೆಚ್‌ಪಿ ಪವರ್ ಹಾಗೂ 1960 ಆರ್‌ಪಿಎಂ - 4500 ಆರ್‌ಪಿಎಂ ನಡುವೆ 770 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ನಮ್ಮ ಬೆಂಗಳೂರಿನಲ್ಲಿ ಪ್ರದರ್ಶನಗೊಂಡ ಬೆಂಟ್ಲಿ ಹೊಸ ಕಾರುಗಳು

ಈ ಎಂಜಿನ್'ನೊಂದಿಗೆ ಎಂಟು-ಸ್ಪೀಡಿನ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಜೋಡಿಸಲಾಗಿದೆ. ಈ ಗೇರ್‌ಬಾಕ್ಸ್ ಎಲ್ಲಾ ನಾಲ್ಕು ವ್ಹೀಲ್'ಗಳಿಗೆ ಪವರ್ ಕಳುಹಿಸುವ ಎಲೆಕ್ಟ್ರಾನಿಕ್ ಲಾಕಿಂಗ್ ಡಿಫರೆನ್ಷಿಯಲ್'ಗಳನ್ನು ಹೊಂದಿದೆ.

ನಮ್ಮ ಬೆಂಗಳೂರಿನಲ್ಲಿ ಪ್ರದರ್ಶನಗೊಂಡ ಬೆಂಟ್ಲಿ ಹೊಸ ಕಾರುಗಳು

ಬೆಂಟಾಯ್ಗಾದ ಹೊರಭಾಗದಲ್ಲಿ ಕ್ರೋಮ್'ನಲ್ಲಿರುವ ದೊಡ್ಡ ಗ್ರಿಲ್, ಎರಡೂ ಬದಿಗಳಲ್ಲಿ ಎಲ್ಇಡಿ ಮ್ಯಾಟ್ರಿಕ್ಸ್ ಹೆಡ್‌ಲ್ಯಾಂಪ್‌ಗಳಿವೆ. ಬೆಂಟ್ಲಿ ಲೋಗೋವನ್ನು ಗ್ರಿಲ್ ಮೇಲೆ ಇರಿಸಲಾಗಿದೆ. ಮುಂಭಾಗದಲ್ಲಿರುವ ಕ್ರೋಮ್ ಫಿನಿಶಿಂಗ್ ಬಂಪರ್ ಈ ಎಸ್‌ಯುವಿಯ ಪ್ರೀಮಿಯಂ ಲುಕ್ ಅನ್ನು ಮತ್ತಷ್ಟು ಹೆಚ್ಚಿಸುತ್ತದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ನಮ್ಮ ಬೆಂಗಳೂರಿನಲ್ಲಿ ಪ್ರದರ್ಶನಗೊಂಡ ಬೆಂಟ್ಲಿ ಹೊಸ ಕಾರುಗಳು

ಈ ಎಸ್‌ಯುವಿಯ ಹಿಂಭಾಗದಲ್ಲಿ ಕಂಪನಿಯ ಕಾಂಟಿನೆಂಟಲ್ ಜಿಟಿಯಲ್ಲಿರುವಂತಹ ಹೊಸ ಟೇಲ್‌ಲ್ಯಾಂಪ್‌ಗಳಿವೆ. ಒವೆಲ್ ಶೇಪಿನಲ್ಲಿರುವ ಎಲ್ಇಡಿ ಟೇಲ್‌ಲ್ಯಾಂಪ್‌ಗಳಿಗೆ ಬೆಂಟ್ಲಿ ಲೋಗೊ ಹೊಂದಿರುವ ಬೂಟ್ ಲಿಡ್ ಹಾಗೂ ಮಧ್ಯದಲ್ಲಿರುವ ಬ್ಯಾಡ್ಜಿಂಗ್'ಗಳು ಜೊತೆಯಾಗಿವೆ.

ನಮ್ಮ ಬೆಂಗಳೂರಿನಲ್ಲಿ ಪ್ರದರ್ಶನಗೊಂಡ ಬೆಂಟ್ಲಿ ಹೊಸ ಕಾರುಗಳು

ಸೈಡ್ ಪ್ರೊಫೈಲ್ ಬಗ್ಗೆ ಹೇಳುವುದಾದರೆ ಈ ಎಸ್‌ಯುವಿಯಲ್ಲಿರುವ 22 ಇಂಚಿನ ಅಲಾಯ್ ವ್ಹೀಲ್'ಗಳು ಬೆಂಟಾಯ್ಗಾ ಎಸ್‌ಯುವಿ ಅಗ್ರೇಸಿವ್ ಲುಕ್ ನೀಡುತ್ತವೆ. ಮೇಲಕ್ಕೆ ಎತ್ತುವ ಡ್ಯುಯಲ್-ಟೋನ್ ಡೋರ್-ಹ್ಯಾಂಡಲ್‌ಗಳು ಹಾಗೂ ಕ್ರೋಮ್ ಫಿನಿಷಿಂಗ್'ನಲ್ಲಿರುವ ವಿಂಡೋ ಲೈನ್'ಗಳು ಈ ಎಸ್‌ಯುವಿಯ ಪ್ರೀಮಿಯಂ ಲುಕ್ ಹೆಚ್ಚಿಸುತ್ತವೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ನಮ್ಮ ಬೆಂಗಳೂರಿನಲ್ಲಿ ಪ್ರದರ್ಶನಗೊಂಡ ಬೆಂಟ್ಲಿ ಹೊಸ ಕಾರುಗಳು

ಈ ಎಸ್‌ಯುವಿಯ ಇಂಟಿರಿಯರ್'ನಲ್ಲಿ ಕಂದು ಬಣ್ಣದ ಇಂಟಿರಿಯರ್ ಥೀಮ್‌ನೊಂದಿಗೆ ವೆನೀರ್ ಜೊತೆಗೆ ಡ್ಯಾಶ್‌ಬೋರ್ಡ್ ಹಾಗೂ ಡೋರುಗಳನ್ನು ಹೊಂದಿದೆ. ಈ ಎಸ್‌ಯುವಿಯಲ್ಲಿ 10.9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ, ಪೂರ್ಣ ಪ್ರಮಾಣದ ಡಿಜಿಟಲ್ ಎಲ್‌ಸಿ‌ಡಿ ಇನ್ಸ್'ಟ್ರೂಮೆಂಟ್ ಕ್ಲಸ್ಟರ್, ಮಲ್ಟಿಪಲ್-ಜೋನ್ ಕ್ಲೈಮೇಟ್ ಕಂಟ್ರೋಲ್, ಮೌಂಟೆಡ್ ಕಂಟ್ರೋಲ್ ಹೊಂದಿರುವ ಮಲ್ಟಿಫಂಕ್ಷನ್ ಸ್ಟೀಯರಿಂಗ್ ವ್ಹೀಲ್'ಗಳನ್ನು ನೀಡಲಾಗಿದೆ.

ನಮ್ಮ ಬೆಂಗಳೂರಿನಲ್ಲಿ ಪ್ರದರ್ಶನಗೊಂಡ ಬೆಂಟ್ಲಿ ಹೊಸ ಕಾರುಗಳು

ಪನೋರಾಮಿಕ್ ಸನ್‌ರೂಫ್ ಸೇರ್ಪಡೆಯೊಂದಿಗೆ ಈ ಎಸ್‌ಯುವಿಯು ಪ್ರೀಮಿಯಂ ಲುಕಿಂಗ್ ಕ್ಯಾಬಿನ್ ಅನ್ನು ಹೊಂದಿದೆ. ಈ ಎಸ್‌ಯುವಿಯಲ್ಲಿ ಹಿಂದಿನ ಪ್ರಯಾಣಿಕರಿಗಾಗಿ ಸಣ್ಣ ಟ್ಯಾಬ್ಲೆಟ್ ಶೈಲಿಯ ರಿಮೋಟ್ ಕಂಟ್ರೋಲ್, ರೇರ್ ಎಸಿ ವೆಂಟ್, ಯುಎಸ್‌ಬಿ ಚಾರ್ಜಿಂಗ್ ಸ್ಲಾಟ್‌, ಪ್ರೀಮಿಯಂ ಆಡಿಯೊ ಸಿಸ್ಟಂಗಳನ್ನು ಸಹ ನೀಡಲಾಗಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ನಮ್ಮ ಬೆಂಗಳೂರಿನಲ್ಲಿ ಪ್ರದರ್ಶನಗೊಂಡ ಬೆಂಟ್ಲಿ ಹೊಸ ಕಾರುಗಳು

ಇನ್ನು ಫ್ಲೈಯಿಂಗ್ ಸ್ಪರ್ ಐಷಾರಾಮಿ ಸೆಡಾನ್‌ ಬಗ್ಗೆ ಹೇಳುವುದಾದರೆ, ಗ್ಲೇಸಿಯರ್ ವೈಟ್ ಬಣ್ಣದಲ್ಲಿರುವ ಈ ಕಾರು ಡಬ್ಲ್ಯು 12 ಎಂಜಿನ್ ಹೊಂದಿದೆ. ಫ್ಲೈಯಿಂಗ್ ಸ್ಪರ್ ಬೆಂಟ್ಲಿ ಕಂಪನಿಯ ಪ್ರಮುಖ ನಾಲ್ಕು-ಡೋರಿನ ಐಷಾರಾಮಿ ಸೆಡಾನ್ ಕಾರ್ ಆಗಿದೆ.

ನಮ್ಮ ಬೆಂಗಳೂರಿನಲ್ಲಿ ಪ್ರದರ್ಶನಗೊಂಡ ಬೆಂಟ್ಲಿ ಹೊಸ ಕಾರುಗಳು

6.0-ಲೀಟರಿನ ಈ ಡಬ್ಲ್ಯು 12 ಎಂಜಿನ್ 5000 ಆರ್‌ಪಿ‌ಎಂನಿಂದ 6000 ಆರ್‌ಪಿ‌ಎಂ ನಡುವೆ ಗರಿಷ್ಠ 626 ಬಿ‌ಹೆಚ್‌ಪಿ ಪವರ್ ಹಾಗೂ 1350 ಆರ್‌ಪಿ‌ಎಂನಿಂದ 4500 ಆರ್‌ಪಿ‌ಎಂ ನಡುವೆ 900 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ನಮ್ಮ ಬೆಂಗಳೂರಿನಲ್ಲಿ ಪ್ರದರ್ಶನಗೊಂಡ ಬೆಂಟ್ಲಿ ಹೊಸ ಕಾರುಗಳು

ಈ ಎಂಜಿನ್'ನೊಂದಿಗೆ ಎಂಟು-ಸ್ಪೀಡಿನ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಜೋಡಿಸಲಾಗಿದೆ. ಈ ಗೇರ್‌ಬಾಕ್ಸ್‌ ಎಲ್ಲಾ ನಾಲ್ಕು ವ್ಹೀಲ್'ಗಳಿಗೆ ಪವರ್ ಕಳುಹಿಸುತ್ತದೆ. ಬೆಂಟ್ಲಿ ಫ್ಲೈಯಿಂಗ್ ಸ್ಪರ್ ಹಾಟ್ಸ್‌ಪುರ್ ಎಂಬ ಕೆಂಪು ಅಪ್ ಹೊಲೆಸ್ಟರಿಯನ್ನು ಹೊಂದಿದೆ.

ನಮ್ಮ ಬೆಂಗಳೂರಿನಲ್ಲಿ ಪ್ರದರ್ಶನಗೊಂಡ ಬೆಂಟ್ಲಿ ಹೊಸ ಕಾರುಗಳು

ಈ ಕಾರಿನಲ್ಲಿರುವ ಇಂಟಿರಿಯರ್ ಬಣ್ಣವು ಬಿಳಿ ಎಕ್ಸ್'ಟಿರಿಯರ್ ಬಣ್ಣಕ್ಕೆ ಪೂರಕವಾಗಿದೆ. ಈ ಐಷಾರಾಮಿ ಸೆಡಾನ್ ಕ್ಯಾಬಿನ್ ಅನ್ನು ಸಾಫ್ಟ್ ಲೆದರ್,ವೆನಿರ್ ಹಾಗೂ ಅಲ್ಕಾಂಟರಾಗಳಲ್ಲಿ ಸುತ್ತಿ ಆರಾಮವಾಗಿರಿಸಲಾಗಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ನಮ್ಮ ಬೆಂಗಳೂರಿನಲ್ಲಿ ಪ್ರದರ್ಶನಗೊಂಡ ಬೆಂಟ್ಲಿ ಹೊಸ ಕಾರುಗಳು

ಫ್ಲೈಯಿಂಗ್ ಸ್ಪರ್‌ನಲ್ಲಿ 12.3 ಇಂಚಿನ ರೊಟೆಟಿಂಗ್ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ, ಪೂರ್ಣ ಪ್ರಮಾಣದ ಡಿಜಿಟಲ್ ಎಲ್‌ಸಿ‌ಡಿ ಇನ್ಸ್'ಟ್ರೂಮೆಂಟ್ ಕ್ಲಸ್ಟರ್, ಮಲ್ಟಿ ಝೋನ್ ಕ್ಲೈಮೇಟ್ ಕಂಟ್ರೋಲ್, ಮಲ್ಟಿಫಂಕ್ಷನ್ ಸ್ಟೀಯರಿಂಗ್ ವ್ಹೀಲ್, ಮೂನ್ ರೂಫ್ ಸೇರಿದಂತೆ ಹಲವಾರು ಫೀಚರ್'ಗಳನ್ನು ನೀಡಲಾಗಿದೆ.

ನಮ್ಮ ಬೆಂಗಳೂರಿನಲ್ಲಿ ಪ್ರದರ್ಶನಗೊಂಡ ಬೆಂಟ್ಲಿ ಹೊಸ ಕಾರುಗಳು

ಬೆಂಟ್ಲಿ ಫ್ಲೈಯಿಂಗ್ ಸ್ಪರ್'ನಲ್ಲಿರುವ ಎಲ್ಲಾ ಸೀಟುಗಳು ಎಲೆಕ್ಟ್ರಿಕ್ ಅಪರೇಟೆಡ್ ಆಗಿವೆ. ಈ ಕಾರಿನ ಹೊರಭಾಗದಲ್ಲಿ ಕ್ರೋಮ್ ಫಿನಿಷಿಂಗ್ ಗ್ರಿಲ್‌, ಕ್ರಿಸ್ಟಲ್ ಲುಕ್'ನ ಎಲ್ಇಡಿ ಮ್ಯಾಟ್ರಿಕ್ಸ್ ಹೆಡ್'ಲ್ಯಾಂಪ್'ಗಳನ್ನು ನೀಡಲಾಗಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ನಮ್ಮ ಬೆಂಗಳೂರಿನಲ್ಲಿ ಪ್ರದರ್ಶನಗೊಂಡ ಬೆಂಟ್ಲಿ ಹೊಸ ಕಾರುಗಳು

ಫ್ಲೈಯಿಂಗ್ ಸ್ಪರ್ ಹಿಂಭಾಗದಲ್ಲಿ ಸ್ಕ್ವೇರ್ ಆಗಿರುವ ಎಲ್ಇಡಿ ಟೇಲ್‌ಲ್ಯಾಂಪ್‌, ಬೆಂಟ್ಲಿ ಲೋಗೊ ಹಾಗೂ ಬ್ಯಾಡ್ಜಿಂಗ್ ಹೊಂದಿರುವ ಬೂಟ್ ಲಿಡ್'ಗಳನ್ನು ನೀಡಲಾಗಿದೆ. ಈ ಕಾರು ಎರಡೂ ಬದಿಗಳಲ್ಲಿ ಕ್ರೋಮ್-ಫಿನಿಷಿಂಗ್'ನಲ್ಲಿರುವ ಎಕ್ಸಾಸ್ಟ್ ಟಿಪ್'ಗಳನ್ನು ಹೊಂದಿದೆ.

ನಮ್ಮ ಬೆಂಗಳೂರಿನಲ್ಲಿ ಪ್ರದರ್ಶನಗೊಂಡ ಬೆಂಟ್ಲಿ ಹೊಸ ಕಾರುಗಳು

ಫ್ಲೈಯಿಂಗ್ ಸ್ಪರ್ ಸೆಡಾನ್ ಕಾರಿನಲ್ಲಿ 21 ಇಂಚಿನ ಅಲಾಯ್ ವ್ಹೀಲ್'ಗಳನ್ನು ನೀಡಲಾಗಿದೆ. ಭಾರತದಲ್ಲಿ ಬೆಂಟ್ಲಿ ಕಂಪನಿಯ ರಿಟೇಲ್ ಕಾರ್ಯಾಚರಣೆಯನ್ನು ಎಕ್ಸ್'ಕ್ಲೂಸಿವ್ ಮೋಟಾರ್ಸ್ ನಿರ್ವಹಿಸುತ್ತದೆ.

ನಮ್ಮ ಬೆಂಗಳೂರಿನಲ್ಲಿ ಪ್ರದರ್ಶನಗೊಂಡ ಬೆಂಟ್ಲಿ ಹೊಸ ಕಾರುಗಳು

ಈ ಕಂಪನಿಯು 2003ರಲ್ಲಿ ಭಾರತದಲ್ಲಿ ಬೆಂಟ್ಲಿ ಕಂಪನಿಯನ್ನು ಪರಿಚಯಿಸಿತು. ಎಕ್ಸ್'ಕ್ಲೂಸಿವ್ ಮೋಟಾರ್ಸ್ ಸದ್ಯಕ್ಕೆ ದೆಹಲಿ, ಮುಂಬೈ, ಹೈದರಾಬಾದ್ ಸೇರಿದಂತೆ ಪ್ರಮುಖ ನಗರಗಳಲ್ಲಿ ಮಾರಾಟ ಹಾಗೂ ಮಾರಾಟದ ನಂತರದ ಸೌಲಭ್ಯಗಳನ್ನು ನೀಡುತ್ತಿದೆ.

ನಮ್ಮ ಬೆಂಗಳೂರಿನಲ್ಲಿ ಪ್ರದರ್ಶನಗೊಂಡ ಬೆಂಟ್ಲಿ ಹೊಸ ಕಾರುಗಳು

ಬೆಂಗಳೂರಿನಲ್ಲಿ ಬೆಂಟಾಯ್ಗಾ ಹಾಗೂ ಫ್ಲೈಯಿಂಗ್ ಸ್ಪರ್ ಎರಡೂ ಕಾರುಗಳನ್ನು ಎಕ್ಸ್‌ಕ್ಲೂಸಿವ್ ಮೋಟಾರ್ಸ್ ಹೈದರಾಬಾದ್ ಪ್ರದರ್ಶಿಸಿತು ಎಂಬುದು ಗಮನಾರ್ಹ.

ನಮ್ಮ ಬೆಂಗಳೂರಿನಲ್ಲಿ ಪ್ರದರ್ಶನಗೊಂಡ ಬೆಂಟ್ಲಿ ಹೊಸ ಕಾರುಗಳು

ಡ್ರೈವ್'ಸ್ಪಾರ್ಕ್ ಅಭಿಪ್ರಾಯ

ದೇಶಿಯ ಮಾರುಕಟ್ಟೆಯಲ್ಲಿ ಬೆಂಟ್ಲಿ ಬೆಂಟಾಯ್ಗಾ ಹಾಗೂ ಹೊಸ ಫ್ಲೈಯಿಂಗ್ ಸ್ಪರ್ ಆಯಾ ಸೆಗ್'ಮೆಂಟಿನಲ್ಲಿರುವ ಐಷಾರಾಮಿ ಕೊಡುಗೆಗಳಾಗಿವೆ. ಬೆಂಟ್ಲಿ ಕಂಪನಿಯು ಭಾರತದಲ್ಲಿ ಪ್ರವಾಸದ ಮೂಲಕ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿ ಕೊಳ್ಳಲು ಹಾಗೂ ಹೆಚ್ಚಿನ ಖರೀದಿದಾರರನ್ನು ಆಕರ್ಷಿಸುವ ಉದ್ದೇಶವನ್ನು ಹೊಂದಿದೆ.

Most Read Articles

Kannada
English summary
Bentley showcases Bentayga and Flying Spur cars in Bengaluru. Read in Kannada.
Story first published: Saturday, April 3, 2021, 20:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X