ವಿಶ್ವದಲ್ಲಿಯೇ ಅತಿ ದೊಡ್ಡ ಗಾತ್ರದ ವ್ಹೀಲ್ ಹೊಂದಲಿದೆ ಬೆಂಟಾಯ್ಗಾ ಎಸ್‌ಯುವಿ

ಬೆಂಟ್ಲಿ ವಿಶ್ವದ ಪ್ರಮುಖ ಐಷಾರಾಮಿ ಕಾರು ತಯಾರಕ ಕಂಪನಿಗಳಲ್ಲಿ ಒಂದಾಗಿದೆ. ಕಂಪನಿಯು ಬೆಂಟಾಯ್ಗಾ ಎಸ್‌ಯುವಿಯನ್ನು ವಿಶ್ವದ ವಿವಿಧ ದೇಶಗಳಲ್ಲಿ ಮಾರಾಟ ಮಾಡುತ್ತದೆ. ಈ ಎಸ್‌ಯುವಿಯನ್ನು ಶ್ರೀಮಂತರು ಹಾಗೂ ಉದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಳಸುತ್ತಾರೆ.

ವಿಶ್ವದಲ್ಲಿಯೇ ಅತಿ ದೊಡ್ಡ ಗಾತ್ರದ ವ್ಹೀಲ್ ಹೊಂದಲಿದೆ ಬೆಂಟಾಯ್ಗಾ ಎಸ್‌ಯುವಿ

ಬೆಂಟ್ಲಿ ಕಂಪನಿಯು ತನ್ನ ಬೆಂಟಾಯ್ಗಾ ಎಸ್‌ಯುವಿಯಲ್ಲಿ ವಿಶ್ವದ ಅತಿ ದೊಡ್ಡ ಕಾರ್ಬನ್ ವ್ಹೀಲ್ ಅಳವಡಿಸುವುದಾಗಿ ತಿಳಿಸಿದೆ. ಈ ಎಸ್‌ಯುವಿಯಲ್ಲಿ 22 ಇಂಚಿನ ಕಾರ್ಬನ್ ವ್ಹೀಲ್ ಅನ್ನು ಬಳಸುವುದಾಗಿ ಕಂಪನಿ ಹೇಳಿಕೊಂಡಿದೆ. ಇದುವರೆಗೂ ಯಾವುದೇ ಕಂಪನಿಯು ತನ್ನ ಉತ್ಪಾದನಾ ಕಾರುಗಳಲ್ಲಿ ಇಷ್ಟು ದೊಡ್ಡ ಗಾತ್ರದ ವ್ಹೀಲ್ ಅನ್ನು ಬಳಸಿಲ್ಲ ಎಂಬುದು ಗಮನಾರ್ಹ.

ವಿಶ್ವದಲ್ಲಿಯೇ ಅತಿ ದೊಡ್ಡ ಗಾತ್ರದ ವ್ಹೀಲ್ ಹೊಂದಲಿದೆ ಬೆಂಟಾಯ್ಗಾ ಎಸ್‌ಯುವಿ

ಬೆಂಟ್ಲಿ ಬೆಂಟಾಯ್ಗಾ ಸೂಪರ್ ಫಾಸ್ಟ್ ಎಸ್‌ಯುವಿಯಾಗಿದೆ. ಇಂತಹ ಎಸ್‌ಯುವಿಯಲ್ಲಿ ವಿಶ್ವದ ಅತಿ ದೊಡ್ಡ ವ್ಹೀಲ್ ಹೊಂದಿಸಲು ಬೆಂಟ್ಲಿ ಸಜ್ಜಾಗಿದೆ. ಬೆಂಟಾಯ್ಗಾ ಎಸ್‌ಯುವಿಯಲ್ಲಿ ಬೆಂಟ್ಲಿ ಕಂಪನಿಯು 4.0 ಲೀಟರ್, ಟ್ವಿನ್ ಟರ್ಬೋಚಾರ್ಜ್ಡ್ ವಿ 8 ಪೆಟ್ರೋಲ್ ಎಂಜಿನ್ ಅಳವಡಿಸಿದೆ.

ವಿಶ್ವದಲ್ಲಿಯೇ ಅತಿ ದೊಡ್ಡ ಗಾತ್ರದ ವ್ಹೀಲ್ ಹೊಂದಲಿದೆ ಬೆಂಟಾಯ್ಗಾ ಎಸ್‌ಯುವಿ

ಈ ಎಂಜಿನ್'ನೊಂದಿಗೆ 8 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಜೋಡಿಸಲಾಗಿದೆ. ಈ ಎಂಜಿನ್ ಗರಿಷ್ಠ 542 ಬಿಹೆಚ್‌ಪಿ ಪವರ್ ಹಾಗೂ 770 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಸ್‌ಯುವಿಯ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 290 ಕಿ.ಮೀಗಳಾಗಿದೆ.

ವಿಶ್ವದಲ್ಲಿಯೇ ಅತಿ ದೊಡ್ಡ ಗಾತ್ರದ ವ್ಹೀಲ್ ಹೊಂದಲಿದೆ ಬೆಂಟಾಯ್ಗಾ ಎಸ್‌ಯುವಿ

ಈ ಎಸ್‌ಯುವಿಯು ಕೇವಲ 4.5 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ. ಕಾರ್ಬನ್ ವ್ಹೀಲ್ ಅಳವಡಿಸುವ ಮುನ್ನ ಬೆಂಟ್ಲಿ ಕಂಪನಿಯು ಬೆಂಟಾಯ್ಗಾ ಎಸ್‌ಯುವಿಯನ್ನು ಕೂಲಂಕುಷವಾಗಿ ಪರೀಕ್ಷಿಸುತ್ತಿದೆ.

ವಿಶ್ವದಲ್ಲಿಯೇ ಅತಿ ದೊಡ್ಡ ಗಾತ್ರದ ವ್ಹೀಲ್ ಹೊಂದಲಿದೆ ಬೆಂಟಾಯ್ಗಾ ಎಸ್‌ಯುವಿ

ಈ ಹೊಸ ಕಾರ್ಬನ್ ವ್ಹೀಲ್ ಬೆಂಟಾಯ್ಗಾ ಎಸ್‌ಯುವಿಯ ವೇಗ ಹಾಗೂ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಪರೀಕ್ಷೆಯು ಯಶಸ್ಸಿನ ಹಾದಿಯಲ್ಲಿದ್ದು, ಶೀಘ್ರದಲ್ಲಿಯೇ ಬೆಂಟಾಯ್ಗಾ 22 ಇಂಚಿನ ಕಾರ್ಬನ್ ವ್ಹೀಲ್'ಗಳೊಂದಿಗೆ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ.

ವಿಶ್ವದಲ್ಲಿಯೇ ಅತಿ ದೊಡ್ಡ ಗಾತ್ರದ ವ್ಹೀಲ್ ಹೊಂದಲಿದೆ ಬೆಂಟಾಯ್ಗಾ ಎಸ್‌ಯುವಿ

ಈ ಎಸ್‌ಯುವಿಯನ್ನು ಹೆಚ್ಚು ವೇಗ, ಒರಟು ರಸ್ತೆ, ಗುಂಡಿ ಇರುವ ರಸ್ತೆಗಳಲ್ಲಿ ಹಲವು ರೀತಿಯ ಪರೀಕ್ಷೆಗಳಿಗೆ ಒಳಪಡಿಸಲಾಗಿದೆ. ಉತ್ತಮ ಚಾಲನಾ ಅನುಭವ ಹಾಗೂ ಸ್ಟೀಯರಿಂಗ್ ವ್ಹೀಲ್ ಅನ್ನು ಒದಗಿಸಲು ಬೆಂಟ್ಲಿ ಕಂಪನಿಯು ಈ ಎಸ್‌ಯುವಿಯಲ್ಲಿ ಕಾರ್ಬನ್ ವ್ಹೀಲ್ ಅಳವಡಿಸುತ್ತಿದೆ.

ವಿಶ್ವದಲ್ಲಿಯೇ ಅತಿ ದೊಡ್ಡ ಗಾತ್ರದ ವ್ಹೀಲ್ ಹೊಂದಲಿದೆ ಬೆಂಟಾಯ್ಗಾ ಎಸ್‌ಯುವಿ

ತನ್ನ ಗ್ರಾಹಕರಿಗೆ ಉತ್ತಮ ಸವಾರಿ ಅನುಭವವನ್ನು ನೀಡಲು ಬೆಂಟ್ಲಿ ಕಂಪನಿಯು ಈ ಎಸ್‌ಯುವಿಯಲ್ಲಿ ದೊಡ್ಡ ಗಾತ್ರದ ವ್ಹೀಲ್ ಅಳವಡಿಸುತ್ತಿದೆ. ಬೆಂಟ್ಲಿ ಬೆಂಟಾಯ್ಗಾ ಐಷಾರಾಮಿ ಎಸ್‌ಯುವಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 4.10 ಕೋಟಿಗಳಾಗಿದೆ.

ವಿಶ್ವದಲ್ಲಿಯೇ ಅತಿ ದೊಡ್ಡ ಗಾತ್ರದ ವ್ಹೀಲ್ ಹೊಂದಲಿದೆ ಬೆಂಟಾಯ್ಗಾ ಎಸ್‌ಯುವಿ

ಈ ಎಸ್‌ಯುವಿಯಲ್ಲಿ ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ ಸೇರಿದಂತೆ ಹಲವು ಫೀಚರ್'ಗಳನ್ನು ನೀಡಲಾಗಿದೆ. ಇದರ ಜೊತೆಗೆ ಈ ಎಸ್‌ಯುವಿಯು ಸಾಕಷ್ಟು ಐಷಾರಾಮಿ ಫೀಚರ್'ಗಳನ್ನು ಸಹ ಹೊಂದಿದೆ ಎಂಬುದು ಗಮನಿಸಬೇಕಾದ ಸಂಗತಿ.

Most Read Articles

Kannada
English summary
Bentley to add world's largest carbon wheel in Bentayga SUV. Read in Kannada.
Story first published: Wednesday, July 28, 2021, 12:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X