ಅನಾವರಣವಾಯ್ತು 2022ರ ಬಿಎಂಡಬ್ಲ್ಯು ಎಕ್ಸ್5 ಬ್ಲ್ಯಾಕ್ ವರ್ಮಿಲಿಯನ್ ಎಡಿಷನ್

ಜರ್ಮನ್ ಮೂಲದ ಐಷಾರಾಮಿ ಕಾರು ತಯಾರಕ ಕಂಪನಿಯಾದ ಬಿಎಂಡಬ್ಲ್ಯು ಯುರೋಪ್ ಮತ್ತು ಯುನೈಟೆಡ್ ಸ್ಟೇಟ್ಸ್‌ನ ಮಾರುಕಟ್ಟೆಗಳಲ್ಲಿ ಎಕ್ಸ್5 ಎಸ್‍ಯುವಿಯ ಹೊಸ ಸ್ಪೆಷಲ್ ಎಡಿಷನ್ ಅನ್ನು ಪರಿಚಯಿಯಿಸಿದೆ. 2022ರ ಬಿಎಂಡಬ್ಲ್ಯು ಎಕ್ಸ್5 ಬ್ಲ್ಯಾಕ್ ವರ್ಮಿಲಿಯನ್ ಎಂದು ಕರೆಯಲ್ಪಡುವ ಈ ಮಾದರಿಯು ಆಕರ್ಷಕ ವಿನ್ಯಾಸವನ್ನು ಹೊಂದಿದೆ.

ಅನಾವರಣವಾಯ್ತು 2022ರ ಬಿಎಂಡಬ್ಲ್ಯು ಎಕ್ಸ್5 ಬ್ಲ್ಯಾಕ್ ವರ್ಮಿಲಿಯನ್ ಎಡಿಷನ್

ಹೊಸ ಬಿಎಂಡಬ್ಲ್ಯು ಎಕ್ಸ್5 ಬ್ಲ್ಯಾಕ್ ವರ್ಮಿಲಿಯನ್ ಎಸ್‍ಯುವಿಯು ಸೆಪ್ಟೆಂಬರ್‌ ತಿಂಗಳಿನಲ್ಲಿ ಸ್ಪಾರ್ಟನ್‌ಬರ್ಗ್ ಸ್ಥಾವರದಲ್ಲಿ ಉತ್ಪಾದನೆಯಾಗಲಿದೆ. ಇನ್ನು ಈ ಸ್ಪೆಷಲ್ ಎಡಿಷನ್ ಮಾದರಿಯು ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ. ಬಿಎಂಡಬ್ಲ್ಯು ಎಕ್ಸ್5 ಸ್ಪೆಷಲ್ ಎಡಿಷನ್ 350 ಯುನಿಟ್ ಗಳು ಮಾತ್ರ ಉತ್ತರ ಅಮೆರಿಕಾದಲ್ಲಿ ಮಾರಾಟವಾಗುತ್ತವೆ.

ಅನಾವರಣವಾಯ್ತು 2022ರ ಬಿಎಂಡಬ್ಲ್ಯು ಎಕ್ಸ್5 ಬ್ಲ್ಯಾಕ್ ವರ್ಮಿಲಿಯನ್ ಎಡಿಷನ್

ಈ ಹೊಸ ಬಿಎಂಡಬ್ಲ್ಯು ಎಕ್ಸ್5 ಬ್ಲ್ಯಾಕ್ ವರ್ಮಿಲಿಯನ್ ಎಡಿಷನ್ ಸ್ಯಾಟಿನ್ ಬ್ಲ್ಯಾಕ್ ಬಣ್ಣದಲ್ಲಿ ಗ್ರಿಲ್ ಮತ್ತು ರೆಡ್ ಬ್ರೇಕ್ ಕ್ಯಾಲಿಪರ್‌ಗಳಲ್ಲಿ ಕಾಂಟ್ರಾಸ್ಟ್ ರೆಡ್ ಸ್ಲ್ಯಾಟ್‌ಗಳನ್ನು ಒಳಗೊಂಡಿದೆ. ಈ ಮಾದರಿಯಲ್ಲಿ ಡಾರ್ಕ್ ಗ್ರೇ ಬಣ್ಣದ 22 ಇಂಚಿನ ವ್ಹೀಲ್ ಗಳನ್ನು ಹೊಂದಿವೆ.

ಅನಾವರಣವಾಯ್ತು 2022ರ ಬಿಎಂಡಬ್ಲ್ಯು ಎಕ್ಸ್5 ಬ್ಲ್ಯಾಕ್ ವರ್ಮಿಲಿಯನ್ ಎಡಿಷನ್

ಇನ್ನು ಈ ಎಡಿಷನ್ ಸ್ಪೋರ್ಟಿ ಬ್ಲ್ಯಾಕ್ ಲುಕ್ ಅನ್ನು ಹೊಂದಿರುತ್ತದೆ. ಈ ಸ್ಪೆಷಲ್ ಎಡಿಷನ್ ಎಂ ಸ್ಪೋರ್ಟ್ ಪ್ಯಾಕೇಜ್‌ನೊಂದಿಗೆ ಬರುತ್ತದೆ, ಇದರಲ್ಲಿ ಎಂ ಸ್ಪೋರ್ಟ್ ಬಂಪರ್‌ಗಳು ಮತ್ತು ಸೈಡ್ ಸ್ಕರ್ಟ್‌ಗಳು, ಎಂ ಸ್ಪೋರ್ಟ್ ಎಕ್ಸಾಸ್ಟ್ ಮತ್ತು ಕೆಂಪು ಫಿನಿಶ್ ಬ್ರೇಕ್ ಕ್ಯಾಲಿಪರ್‌ಗಳೊಂದಿಗೆ ಅಡಾಪ್ಟಿವ್ ಎಂ ಸಸ್ಪೆಂಕ್ಷನ್ ಇರುತ್ತದೆ.

ಅನಾವರಣವಾಯ್ತು 2022ರ ಬಿಎಂಡಬ್ಲ್ಯು ಎಕ್ಸ್5 ಬ್ಲ್ಯಾಕ್ ವರ್ಮಿಲಿಯನ್ ಎಡಿಷನ್

ಹೊಸ ಎಕ್ಸ್5 ಬ್ಲ್ಯಾಕ್ ವರ್ಮಿಲಿಯನ್ ಎಡಿಷನ್ ಲೇಸರ್ ತಂತ್ರಜ್ಞಾನದೊಂದಿಗೆ ಪೂರ್ಣ ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು ಸಹ ಪಡೆಯುತ್ತದೆ. ಇನ್ನು ಈ ಎಸ್‍ಯುವಿಯಲ್ಲಿ ಬ್ಲ್ಯಾಕ್ ಥೀಮ್ ಕ್ಯಾಬಿನ್ ಒಳಗೆ ಮುಂದುವರಿಯುತ್ತದೆ.

ಅನಾವರಣವಾಯ್ತು 2022ರ ಬಿಎಂಡಬ್ಲ್ಯು ಎಕ್ಸ್5 ಬ್ಲ್ಯಾಕ್ ವರ್ಮಿಲಿಯನ್ ಎಡಿಷನ್

ಈ ಸ್ಪೆಷಲ್ ಎಡಿಷನ್ ರೆಡ್ ಪೈಪಿಂಗ್ ಮತ್ತು ಹೊಲಿಗೆಯೊಂದಿಗೆ ಬ್ಲ್ಯಾಕ್ ಲೆದರ್ ಅಂಶಗಳನ್ನು ಒಳಗೊಂಡಿದೆ. ಡ್ಯಾಶ್‌ಬೋರ್ಡ್ ಕಾರ್ಬನ್ ಫೈಬರ್ ಟ್ರಿಮ್ ಹೊಂದಿದ್ದರೆ, ಐಡ್ರೈವ್ ಕಂಟ್ರೋಲ್ ಮತ್ತು ಶಿಫ್ಟರ್ ಅಲಂಕಾರಿಕ ಗಾಜಿನ ಆವೃತ್ತಿಗಳನ್ನು ಪಡೆಯುತ್ತದೆ.

ಅನಾವರಣವಾಯ್ತು 2022ರ ಬಿಎಂಡಬ್ಲ್ಯು ಎಕ್ಸ್5 ಬ್ಲ್ಯಾಕ್ ವರ್ಮಿಲಿಯನ್ ಎಡಿಷನ್

ಕಪ್ ಹೋಲ್ಡರ್ ಕವರ್ ಲೋಗೊವನ್ನು ಹೊಂದಿದೆ. ಎಂ-ಬ್ರಾಂಡೆಡ್ ಅಲ್ಕಾಂಟರಾ ಹೆಡ್‌ಲೈನರ್ ಅದರ ಪ್ರೀಮಿಯಂ ಲುಕ್ ಅನ್ನು ಹೆಚ್ಚಿಸುತ್ತದೆ. ಹೊಸ ಎಕ್ಸ್ 5 ಬ್ಲ್ಯಾಕ್ ವರ್ಮಿಲಿಯನ್ ಸ್ಪೆಷಲ್ ಎಡಿಷನ್ ಹೆಡ್-ಅಪ್ ಡಿಸ್ ಪ್ಲೇ, ಹೀಟೆಟ್ ಸ್ಟೀಯರಿಂಗ್ ವ್ಹೀಲ್, ಹರ್ಮನ್ ಕಾರ್ಡನ್ ಆಡಿಯೊ ಸಿಸ್ಟಂ ಮತ್ತು ರಿಮೋಟ್ ಎಂಜಿನ್ ಸ್ಟಾರ್ಟ್ ಸೇರಿದಂತೆ ಸ್ಟ್ಯಾಂಡರ್ಡ್ ಫಿಟ್‌ಮೆಂಟ್‌ಗಳಾಗಿ ಹೆಚ್ಚಿನ ಫೀಚರ್ಸ್ ಗಳನ್ನು ಒಳಗೊಂಡಿದೆ.

ಅನಾವರಣವಾಯ್ತು 2022ರ ಬಿಎಂಡಬ್ಲ್ಯು ಎಕ್ಸ್5 ಬ್ಲ್ಯಾಕ್ ವರ್ಮಿಲಿಯನ್ ಎಡಿಷನ್

2022ರ ಎಕ್ಸ್5 ಬ್ಲ್ಯಾಕ್ ವರ್ಮಿಲಿಯನ್ ಎಡಿಷನ್ ಎಕ್ಸ್‌ಡ್ರೈವ್40ಐ ಟ್ರಿಮ್ ಅನ್ನು ಆಧರಿಸಿದೆ, ಇದರಲ್ಲಿ 3.0 ಎಲ್, 6-ಸಿಲಿಂಡರ್ ಇನ್-ಲೈನ್ ಎಂಜಿನ್ ಅನ್ನು ಹೊಂದಿದೆ. ಇದರೊಂದಿಗೆ ಎಕ್ಸ್‌ಡ್ರೈವ್ ಎಡಬ್ಲ್ಯೂಡಿ (ಆಲ್-ವ್ಹೀಲ್ ಡ್ರೈವ್) ಸಿಸ್ಟಂ ಅನ್ನು ಹೊಂದಿದೆ.

ಅನಾವರಣವಾಯ್ತು 2022ರ ಬಿಎಂಡಬ್ಲ್ಯು ಎಕ್ಸ್5 ಬ್ಲ್ಯಾಕ್ ವರ್ಮಿಲಿಯನ್ ಎಡಿಷನ್

ಈ ಎಂಜಿನ್ 265 ಬಿಹೆಚ್‍ಪಿ ಪವರ್ ಮತ್ತು 620 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

Most Read Articles

Kannada
English summary
2022 BMW X5 Black Vermilion Edition Revealed. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X