ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಎಡಿಷನ್ ಬಿಡುಗಡೆ- ಬೆಲೆ ರೂ.2.02 ಕೋಟಿ

ಜರ್ಮನ್ ಕಾರು ಉತ್ಪದನಾ ಕಂಪನಿಯಾಗಿರುವ ಬಿಎಂಡಬ್ಲ್ಯು ತನ್ನ ಮೊದಲ 7 ಸೀಟರ್ ಎಸ್‌ಯುವಿ ಮಾದರಿಯಾದ ಎಕ್ಸ್7 ಆವೃತ್ತಿಯಲ್ಲಿ ವಿಶೇಷ ಸೌಲಭ್ಯಗಳನ್ನು ಒಳಗೊಂಡ ಮತ್ತು ಆಕರ್ಷಕ ಬಣ್ಣದ ಆಯ್ಕೆ ಹೊಂದಿರುವ ಎಕ್ಸ್7 ಡಾರ್ಕ್ ಶ್ಯಾಡೋ ಎಡಿಷನ್ ಬಿಡುಗಡೆ ಮಾಡಿದೆ.

ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಎಡಿಷನ್ ಬಿಡುಗಡೆ- ಬೆಲೆ ರೂ.2.02 ಕೋಟಿ

ಭಾರತದಲ್ಲಿ ಎಕ್ಸ್7 ಎಸ್‌ಯುವಿ ಮಾದರಿಯನ್ನು 2019ರಲ್ಲಿ ಪರಿಚಯಿಸಿದ ಬಿಎಂಡಬ್ಲ್ಯು ಕಂಪನಿಯು ಇದೀಗ ಸ್ಪೆಷಲ್ ಎಡಿಷನ್ ಡಾರ್ಕ್ ಶ್ಯಾಡೋ ಕಾರು ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಕಾರು ಸ್ಟ್ಯಾಂಡರ್ಡ್ ಎಕ್ಸ್7 ಕಾರಿಗಿಂತಲೂ ರೂ.90 ಲಕ್ಷದಷ್ಟು ಹೆಚ್ಚುವರಿ ಬೆಲೆ ಪಡೆದುಕೊಂಡಿದೆ.

ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಎಡಿಷನ್ ಬಿಡುಗಡೆ- ಬೆಲೆ ರೂ.2.02 ಕೋಟಿ

ಎಕ್ಸ್7 ಡಾರ್ಕ್ ಶ್ಯಾಡೋ ಎಡಿಷನ್ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 2.02 ಕೋಟಿ ಬೆಲೆ ಹೊಂದಿದ್ದು, ವಿಶ್ವಾದ್ಯಂತ ಕೇವಲ 500 ಯುನಿಟ್ ಮಾತ್ರ ಖರೀದಿಗೆ ಲಭ್ಯವಿರಲಿವೆ.

ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಎಡಿಷನ್ ಬಿಡುಗಡೆ- ಬೆಲೆ ರೂ.2.02 ಕೋಟಿ

ಹೊಸ ಆವೃತ್ತಿಯನ್ನು ಬಿಎಂಡಬ್ಲ್ಯು ಕಂಪನಿಯು ಎಕ್ಸ್7 ಎ50ಡಿ ಮಾದರಿಯನ್ನು ಆಧರಿಸಿ ಬಿಡುಗಡೆ ಮಾಡಿದ್ದು, ಎಂ ಸ್ಪೋಟ್ ಆಕ್ಸೆಸರಿಸ್ ಒಳಗೊಂಡಿರುವ ಹೊಸ ಕಾರು ಸಂಪೂರ್ಣವಾಗಿ ಕಪ್ಪು ಬಣ್ಣದೊಂದಿಗೆ ಶಾರ್ಪ್ ಸ್ಪೋರ್ಟಿ ಡಿಸೈನ್ ಹೊಂದಿದೆ.

ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಎಡಿಷನ್ ಬಿಡುಗಡೆ- ಬೆಲೆ ರೂ.2.02 ಕೋಟಿ

ಸ್ಟ್ಯಾಂಡರ್ಡ್ ಮಾದರಿಗಿಂತಲೂ ಹೆಚ್ಚಿನ ಬೆಲೆ ಹೊಂದಿರುವ ಮತ್ತೊಂದು ಪ್ರಮುಖ ಕಾರಣವೆಂದರೆ ಹೊಸ ಕಾರಿನಲ್ಲಿ ನೀಡಲಾಗಿರುವ ಆಧುನಿಕ ತಂತ್ರಜ್ಞಾನ ಪ್ರೇರಿತ ಫ್ರೊಜನ್ ಆರ್ಟಿಕ್ ಗ್ರೆ ಮೆಟಾಲಿಕ್ ಬಣ್ಣ ಆಯ್ಕೆಯೇ ಕಾರಿನ ಬೆಲೆ ಹೆಚ್ಚಳಕ್ಕೆ ಕಾರಣವಾಗಿದ್ದು, ಹೊಸ ಬಣ್ಣದ ಆಯ್ಕೆಯನ್ನು ಬಿಎಂಡಬ್ಲ್ಯು ಕಂಪನಿಯು ಮೊದಲ ಬಾರಿಗೆ ಎಕ್ಸ್7 ಕಾರಿಗಾಗಿ ಬಳಕೆ ಮಾಡಿದೆ.

ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಎಡಿಷನ್ ಬಿಡುಗಡೆ- ಬೆಲೆ ರೂ.2.02 ಕೋಟಿ

ಹೊಸ ಬಣ್ಣದ ಆಯ್ಕೆ ಹೊಂದಿರುವ ಡಾರ್ಕ್ ಶ್ಯಾಡೋ ಎಡಿಷನ್ ಮಾದರಿಯಲ್ಲಿ ಬಿ ಪಿಲ್ಲರ್ ಮತ್ತು ಸಿ ಪಿಲ್ಲರ್ ಒಳಗೊಂಡಂತೆ, ಕಿಡ್ನಿ ಗ್ರಿಲ್, ರೂಫ್ ರೈಲ್ ಮತ್ತು ಟೈಲ್‌ಪೈಪ್‌ಗಳ ಮೇಲೆ ಬ್ಲ್ಯಾಕ್ ಪೆಂಟ್‌ ನೀಡಲಾಗಿದ್ದು, 22 ಇಂಚಿನ ವಿ-ಸ್ಪೋಕ್ ಎಂ ಲೈಟ್-ಅಲಾಯ್ ವ್ಹೀಲ್ ಗಳ ಬೆಸ್ಪೋಕ್ ಸೆಟಪ್, ಎಂ ಸ್ಪೋರ್ಟ್ ಎಕ್ಸಾಸ್ಟ್ ಅನ್ನು ಹೊಂದಿದೆ.

ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಎಡಿಷನ್ ಬಿಡುಗಡೆ- ಬೆಲೆ ರೂ.2.02 ಕೋಟಿ

ಕಾರಿನ ಒಳಭಾಗವು ಸಹ ಹೊಸ ಬಣ್ಣದ ಆಯ್ಕೆಯೊಂದಿಗೆ ಆಕರ್ಷಕ ಲುಕ್ ಹೊಂದಿದ್ದು, ನೈಟ್ ಬ್ಲ್ಯೂ ಬಣ್ಣದ ಆಯ್ಕೆಯೊಂದಿಗೆ ಬ್ಲ್ಯಾಕ್ ಬಣ್ಣದಲ್ಲಿ ನೀಡಲಾದ ಕಾಂಟ್ರಾಸ್ಟ್ ಡ್ಯಾಶ್‌ಬೋರ್ಡ್, ಸೀಟುಗಳು, ಸ್ಪೆಷಲ್ ಎಡಿಷನ್ ಬ್ಲ್ಯಾಡ್ಜ್‌ಗಳು ಮತ್ತು ವ್ಯಯಕ್ತಿಕರಣಗೊಳಿಸಲಾದ ಕನೆಕ್ಟೆಡ್ ಫೀಚರ್ಸ್ ಹೊಂದಿದೆ.

MOST READ: ಲಾಕ್‌ಡೌನ್ ಹಿನ್ನಲೆ ವಾಹನ ದಾಖಲೆಗಳ ಮಾನ್ಯತಾ ಅವಧಿ ಕುರಿತು ಸಾರಿಗೆ ಇಲಾಖೆಯಿಂದ ಹೊಸ ಆದೇಶ

ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಎಡಿಷನ್ ಬಿಡುಗಡೆ- ಬೆಲೆ ರೂ.2.02 ಕೋಟಿ

ಹೊಸ ಕಾರಿನಲ್ಲಿ ಸ್ಟ್ಯಾಂಡರ್ಡ್ ಮಾದರಿಯಿಂದಲೂ ಪಡೆದುಕೊಳ್ಳಲಾದ ಪ್ರಮುಖ ತಾಂತ್ರಿಕ ಅಂಶಗಳೊಂದಿಗೆ ಹೆಚ್ಚುವರಿಯಾಗಿ ಹರ್ಮನ್ ಕಾರ್ಡನ್ 16 ಪ್ರೀಮಿಯಂ ಸ್ಪೀಕರ್ಸ್, 12.3 ಇಂಚಿನ ಟಚ್‌ಸ್ಕ್ರೀನ್ ಡಿಸ್‌ಪ್ಲೇ, ಫುಲ್ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಕನ್ಸೊಲ್, ಬಿಎಂಡಬ್ಲ್ಯು ಲೈವ್ ಕಾಕ್‌ಪಿಟ್ ಪ್ರೊಫೆಷನಲ್, ಹೆಡ್ಅಪ್ ಡಿಸ್‌ಪ್ಲೇ ಸೇರಿದಂತೆ ಹಲವಾರು ಹೊಸ ಫೀಚರ್ಸ್ ಜೋಡಿಸಲಾಗಿದೆ.

ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಎಡಿಷನ್ ಬಿಡುಗಡೆ- ಬೆಲೆ ರೂ.2.02 ಕೋಟಿ

ಬಿಎಂಡಬ್ಲ್ಯು ಕಂಪನಿಯು ಹೊಸ ಆವೃತ್ತಿಯಲ್ಲಿ ಮಧ್ಯಮ ಕ್ರಮಾಂಕದಲ್ಲಿನ 3.-0-ಲೀಟರ್ ಟ್ವಿನ್ ಟರ್ಬೊ ಸಿಕ್ಸ್ ಸಿಲಿಂಡರ್ ಡೀಸೆಲ್ ಎಂಜಿನ್ ಜೋಡಿಸಿದ್ದು, 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 394-ಬಿಎಕ್ಸ್‌ಪಿ ಮತ್ತು 760-ಎನ್ಎಂ ಟಾರ್ಕ್ ಹೊಂದಿದೆ.

MOST READ: ಸೆಕೆಂಡ್ ಹ್ಯಾಂಡ್ ಎಲೆಕ್ಟ್ರಿಕ್ ವಾಹನ ಖರೀದಿಸುವ ಮುನ್ನ ತಿಳಿದಿರಬೇಕಾದ ಪ್ರಮುಖ ಅಂಶಗಳಿವು

ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಎಡಿಷನ್ ಬಿಡುಗಡೆ- ಬೆಲೆ ರೂ.2.02 ಕೋಟಿ

ಎಕ್ಸ್-ಡ್ರೈವ್ ಆಲ್ ವೀಲ್ಹ್ ಡ್ರೈವ್ ಸಿಸ್ಟಂ ಹೊಂದಿರುವ ಹೊಸ ಕಾರು ಮಾದರಿಯು 2-ಆಕ್ಸೆಲ್ ಏರ್ ಸಸ್ಷೆಂಷನ್‌ನೊಂದಿಗೆ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಾಣಿಕೆ ಮಾಡಿಕೊಳ್ಳಬಹುದಾಗಿದ್ದು, ಭಾರತದಲ್ಲಿ ಹೊಸ ಕಾರು ಸುಮಾರು 50ಕ್ಕೂ ಹೆಚ್ಚು ಯುನಿಟ್ ಮಾರಾಟಗೊಳ್ಳುವ ನೀರಿಕ್ಷೆಯಿದೆ.

Most Read Articles

Kannada
English summary
BMW X7 Dark Shadow Edition Launched In India. Read n Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X